ಉಪರಾಷ್ಟ್ರಪತಿಗಳ ಕಾರ್ಯಾಲಯ

ʻಎಫ್ಐಸಿಸಿಐʼ ಮಹಿಳಾ ವಿಭಾಗದ(ಎಫ್‌ಎಲ್‌ಒ) ಚೆನ್ನೈ ಘಟಕದ ಸದಸ್ಯರನ್ನು ಉದ್ದೇಶಿಸಿ ಉಪರಾಷ್ಟ್ರಪತಿಗಳ ಭಾಷಣದ ಪಠ್ಯ

Posted On: 11 JUL 2024 2:48PM by PIB Bengaluru

ಇಷ್ಟೆಲ್ಲಾ ಅರ್ಹತೆ ಮತ್ತು ಬದ್ಧತೆಯ ಹೊಂದಿರುವ ಮಹಿಳೆಯರ ನಡುವೆ ಇರುವುದು ಹೆಮ್ಮೆಯ ಕ್ಷಣವಾಗಿದೆ. 2047ರ ವೇಳೆಗೆ ಭಾರತವು ಶ್ರೀಮಂತವಾಗಲಿದೆ ಮತ್ತು ವೇಗವಾಗಿ ಬೆಳೆಯುತ್ತದೆ ಎಂಬ ಖಾತರಿ ನನಗಿದೆ. ಏಕೆಂದರೆ ನೀವು ಭವಿಷ್ಯವನ್ನು ಪ್ರತಿನಿಧಿಸುತ್ತೀರಿ. ನೀವು ಪಾಲುದಾರರು ಮತ್ತು ಪ್ರಧಾನ ಪಾಲುದಾರರು.

ಇಂದು ಬೆಳಗ್ಗೆ, ನನಗೆ ಅಚ್ಚರಿಯ ಜೊತೆ ಜೊತೆಗೇ ಸಂತೋಷವೂ ಉಂಟಾಯಿತು. ಅದೆಂಥಾ ಕಾಕತಾಳೀಯತೆ. ನಾನು ಮೂರು ವರ್ಷಗಳ ಕಾಲ ರಾಜ್ಯಪಾಲರಾಗಿದ್ದ ಪಶ್ಚಿಮ ಬಂಗಾಳದಿಂದ ಪ್ರಕಟವಾದ ಹೇಳಿಕೆಯೊಂದರಲ್ಲಿ, ʻಎಫ್ಎಲ್ಒʼ ಅಧ್ಯಕ್ಷರಾದ ಜೋಶಿ ದಾಸ್ ವರ್ಮಾ ಅವರ ದೊಡ್ಡ ಸಂದರ್ಶನವಿತ್ತು. ಬಹಳ ವಿವರವಾದ ಸಂದರ್ಶನ, ತುಂಬಾ ವ್ಯಾಪಕವಾಗಿಯೂ ಇತ್ತು. ಅದನ್ನು ನೋಡಿದಾಗ ನನಗೆ ಏನೋ ಹಿತಕರವಾದ ಭಾವನೆ ಮೂಡಿತು. ಮತ್ತು ಈ ಹಿನ್ನೆಲೆಯೊಂದಿಗೆ ಈ ಸಂದರ್ಭದಲ್ಲಿ ನಿಮ್ಮನ್ನು ಇಲ್ಲಿ ಭೇಟಿಯಾಗುತ್ತಿರುವುದು ಮಹತ್ವ ಪಡೆದಿದೆ.

ಅಭಿನಂದನೆಗಳು, ನೀವೆಲ್ಲಾ 40 ವರ್ಷಕ್ಕಿಂತ ಮೇಲ್ಪಟ್ಟವರು. ನಾನು ಹೇಳಿದ್ದು ಸರಿಯೇ? ಏಕೆಂದರೆ, ಇದು 1983ರಲ್ಲಿ ಪ್ರಾರಂಭವಾಯಿತು. ಜಗತ್ತು ನಿಮ್ಮಿಂದ ಅಂದರೆ, ಮಹಿಳೆಯರಿಂದ ಹೆಚ್ಚು ಪ್ರಾಬಲ್ಯ ಸಾಧಿಸುತ್ತಿದೆ. ʻಭಾರತದ ನಾರಿ ಶಕ್ತಿʼಯನ್ನು ಬೆಳೆಸಲಾಗಿದೆ ಮತ್ತು ಅದು ಈಗ ನಮ್ಮ ಪ್ರಜಾಪ್ರಭುತ್ವವನ್ನು ಬೆಳೆಸುತ್ತಿದೆ. ಸೆಪ್ಟೆಂಬರ್ 2023ರಲ್ಲಿ, ಸಂಸತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದಾಗ, ನಿಜಕ್ಕೂ ಅದೊಂದು ಐತಿಹಾಸಿಕ ಸಂದರ್ಭವಾಗಿತ್ತು. ಆ ಮಸೂದೆಯು ಮೂರು ದಶಕಗಳಿಂದ ಮೇಜಿನ ಮೇಲಿತ್ತು. ಒಂದಲ್ಲ ಒಂದು ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅದು ನೆರವೇರಿತು. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ದೊರೆಯಿತು. ಮತ್ತು ಆ ಮೀಸಲಾತಿಯು ವ್ಯಾಪ್ತಿಯಲಿಲ ವಿಸ್ತೃತವಾಗಿದ್ದು, ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ ಪ್ರಾತಿನಿಧ್ಯವನ್ನು ಹೊಂದಿರುತ್ತದೆ. ಎಂತಹ ಸಾಧನೆ!

2023ರಲ್ಲಿ, ʻಚಂದ್ರಯಾನ-3ʼ ನೌಕೆಯು ಚಂದ್ರನ ಮೇಲೆ ಇಳಿಯಿತು ಮತ್ತು ಇದಕ್ಕೆ ʻರಾಕೆಟ್ ಮಹಿಳೆʼ ನೀಡಿದ ಕೊಡುಗೆ ಅಪಾರವಾಗಿತ್ತು. ʻಇಸ್ರೋʼಗೆ ಹೋಗಿ ಅವರೊಂದಿಗೆ ಮುಖಾಮುಖಿ ಸಂವಾದ ನಡೆಸುವ ಸಂದರ್ಭ ನಮಗೆ ಒಮ್ಮೆ ಒದಗಿಬಂದಿತು. ಅಲ್ಲಿದ್ದವರೆಲ್ಲಾ ಮಹಿಳೆಯರೇ. ಎಂತಹ ಸಾಧನೆ. ಈ ವರ್ಷ, ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯೂ ಒಂದು ಉತ್ತಮ ಸಂದರ್ಭ. ಅಲ್ಲಿ ಪುರುಷರು ಬಹುತೇಕ ಕಾಣೆಯಾಗಿದ್ದರು. ಮಹಿಳೆಯರದ್ದೇ 100% ಪ್ರಾಬಲ್ಯ. ನೀವು ಎಂದಾದರೂ ಊಹಿಸಿದ್ದಿರಾ? ನಾವು ಮಹಿಳಾ ಯುದ್ಧ ಪೈಲಟ್‌ಗಳನ್ನೂ ಹೊಂದಿದ್ದೇವೆ.

ನಾನು ಚಿತ್ತೋರ್‌ಗಢದ ಸೈನಿಕ್ ಶಾಲೆಯಿಂದ ಬಂದವನು. ಸೈನಿಕ್ ಶಾಲೆಗಳಲ್ಲೂ ಸಹ-ಶಿಕ್ಷಣ ದೊರೆಯಲಿದೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ. ಆದರೆ ಈಗ ಅಲ್ಲಿ ಅದು ಸಾಧ್ಯವಾಗಿದೆ. ಈಗ ಬಾಲಕಿಯರಿಗೂ ಸೈನಿಕ ಶಾಲೆಗಳಿಗೆ ಪ್ರವೇಶ ನೀಡಲಾಗುತ್ತಿದೆ. ಆದರೆ, ಅದಕ್ಕಿಂತ ಮಹತ್ವಪೂರ್ಣವಾದುದು ಯಾವುದು ಗೊತ್ತೇ? ಮಥುರಾದಲ್ಲಿರುವ ಸಂಪೂರ್ಣ ಬಾಲಕಿಯರ ಸೈನಿಕ ಶಾಲೆ. ಸಂಪೂರ್ಣ ಬಾಲಕಿಯರಿಗೆ ಮೀಸಲಾದ ಶಾಲೆ. ಅದು ಹೇಮಾ ಮಾಲಿನಿ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರ. ʻಕನಸಿನ ಹುಡುಗಿʼ ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ ಭಾರತದ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ. ನನಗೆ ಆಶ್ಚರ್ಯದ ಜೊತೆಗೆ ತೃಪ್ತಯೂ ಆಯಿತು. ಪ್ರೇರಣೆಯೂ ಆಯಿತು.

ನಿಮ್ಮ ಸಬಲೀಕರಣಕ್ಕೆ ನಿಮ್ಮ ಸಂಕಲ್ಪವೇ ಶಕ್ತಿ. ಇದನ್ನು ಯುಗ ಯುಗಗಳಿಂದಲೂ ಎಲ್ಲೆಡೆ ಹೇಳಲಾಗಿದೆ. ಒಬ್ಬ ಹುಡುಗನಿಗೆ ಶಿಕ್ಷಣ ನೀಡುವುದು ಮತ್ತು ಒಬ್ಬ ಹುಡುಗಿಗೆ ಶಿಕ್ಷಣ ನೀಡುವುದು ವಿಭಿನ್ನವಾಗಿತ್ತು. ನೀವು ಹುಡುಗನಿಗೆ ಶಿಕ್ಷಣ ನೀಡಿದಾಗ, ನೀವು ಒಬ್ಬ ವ್ಯಕ್ತಿಗೆ ಮಾತ್ರ ಶಿಕ್ಷಣ ನೀಡುತ್ತೀರಿ. ಅದೇ ನೀವು ಹುಡುಗಿಗೆ ಶಿಕ್ಷಣ ನೀಡಿದಾಗ, ನೀವು ಇಡೀ ಕುಟುಂಬಕ್ಕೆ ಶಿಕ್ಷಣ ನೀಡುತ್ತೀರಿ. ಅದೇ ದೊಡ್ಡ ವ್ಯತ್ಯಾಸ.

ನೀವು ಯಾವ ರೀತಿಯ ವಿಶಾಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ನಾನು ನೋಡಿದ್ದೇನೆ. ನಿಮ್ಮ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ನೋಡಿ. ನಾನು ಚಾರ್ಟರ್ ಅಕೌಂಟೆಂಟ್ ಎಂದು ಯಾರಾದರೂ ಹೇಳಿದಾಗ, ಅದು ತುಂಬಾ ಸರಳವಾದ ಮಾತು ಎನಿಸುತ್ತದೆ.

ನೀವೆಲ್ಲರೂ, ಈಗಾಗಲೇ ನನಗೆ ನೀಡಲಾದ ನಿಮ್ಮ ಪ್ರೊಫೈಲ್‌ನಿಂದ ನಾನು ಅರಿತಿರುವಂತೆ, ನೀವು ಆ ಸ್ಥಳಕ್ಕೆ ತಲುಪಿದ್ದೀರಿ. ನೀವು ತರ್ಕಬದ್ಧವಾಗಿ, ನ್ಯಾಯಸಮ್ಮತವಾಗಿ ಸಾರ್ವಜನಿಕ ಸ್ಥಳವನ್ನು ಆಕ್ರಮಿಸಿಕೊಂಡಿದ್ದೀರಿ. ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ. ಆದರೆ ನಾನೊಂದು ಮನವಿ ಮಾಡುತ್ತೇನೆ. ನಿಮ್ಮ ಸ್ಥಾನದ ಕಾರಣದಿಂದಾಗಿ, ನೀವು ಕಾರ್ಪೊರೇಟ್‌ಗಳ ಮಹತ್ವದ ಭಾಗವಾಗಿದ್ದೀರಿ.

ಮಹಿಳೆಯರಿಗೆ ಎರಡು ವಿಷಯಗಳಲ್ಲಿ ಸಹಾಯ ಹಸ್ತ ಚಾಚಬೇಕಾದ ಅಗತ್ಯವಿದೆ. ಒಂದು, ಅವರ ಶಿಕ್ಷಣ. ಎರಡನೆಯದಾಗಿ, ಅವರ ಕೌಶಲ್ಯ ಅಭಿವೃದ್ಧಿ. ನೀವು ಮಹಿಳೆಯರನ್ನು ಸಬಲೀಕರಣಗೊಳಿಸಿದರೆ, ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನೀವು ಊಹಿಸಲು ಸಾಧ್ಯವಿಲ್ಲ. ಅದೊಂದು ಅದ್ಭುತ. ಅದು ಸಮಾಜದ ಅಗಾಧ, ವಿಸ್ತೃತ ಬೆಳವಣಿಗೆಗೆ ಕಾರಣವಾಗುತ್ತದೆ.

ಮಹಿಳೆಯು ಕುಟುಂಬದ ಜೇಬನ್ನು ನಿಯಂತ್ರಿಸಿದಾಗ, ಕುಟುಂಬದ ಆರ್ಥಿಕತೆ ಮತ್ತು ಕುಟುಂಬದ ಬೆಳವಣಿಗೆ ಖಾತರಿಯಾಗುತ್ತದೆ. ಕಳೆದ 10 ವರ್ಷಗಳಲ್ಲಿ ಇದನ್ನು ದೊಟ್ಟ ಮಟ್ಟದಲ್ಲಿ ಮಾಡಲಾಗಿದೆ. ಎಷ್ಟೆಲ್ಲಾ ಪ್ರಗತಿ ಸಾಧನೆಯಾಗಿದೆ ಎಂದು ನೀವೇ ಊಹಿಸಿ.

ಪ್ರತಿ ಮನೆಯಲ್ಲೂ ಶೌಚಾಲಯಗಳು ಇರಬೇಕು ಎಂದು ನಾವು ಯೋಚಿಸಿದರೆ, ಅದು ಮೂಲತಃ ಮಹಿಳೆಯರಿಗೆ ಒದಗಿಸುವ ನಿರಾಳತೆಯಾಗಿದೆ. ಅದು ನಿಮ್ಮ ಘನತೆಯಗೆ ಸಂಬಂಧಿಸಿದ್ದು. ಮನೆ ಮನೆಗೂ ನಲ್ಲಿ ಅಥವಾ ಮನೆ ಮನೆಗೂ ನೀರು – ಇದರ ಪರಿಕಲ್ಪನೆಯೂ ಮಹಿಳೆಯರಿಗೆ ನ್ಯಾಯ ಒದಗಿಸುವುದೇ ಆಗಿದೆ.

ನಾನು ರಾಜಸ್ಥಾನದವನು. ನಿಮ್ಮಲ್ಲಿ ಹತ್ತಾರು ಮಂದಿ ರಾಜಸ್ಥಾನದವರು. ಅಲ್ಲಿ ಮನೆಗೆ ನೀರು ತರಲು ತಲೆಯ ಮೇಲೆ ಪಾತ್ರೆ ಹಿಡಿದು ಮೈಲುಗಟ್ಟಲೆ ನಡೆಯೇಕಾಗಿತ್ತು. ಅದೀಗ ಮುಗಿದ ಕೆಲಸ. ಅನಿಲ ಸಂಪರ್ಕದೊಂದಿಗೆ ಕುಟುಂಬಗಳನ್ನು ಸಬಲೀಕರಣಗೊಳಿಸುವುದನ್ನು ನೀವು ಊಹಿಸಬಲ್ಲಿರಾ? ಇದು ಮತ್ತೇನೂ ಅಲ್ಲ, ಮಹಿಳೆಯರಿಗೆ ಬಾಕಿ ಉಳಿದಿದ್ದ ನ್ಯಾಯವನ್ನು ಒದಗಿಸಿಕೊಟ್ಟಿರುವುದಷ್ಟೇ.

कितनी तकलीफ़ होती थी माँ को बहन को दादी को (ತಾಯಿ, ಸಹೋದರಿ ಮತ್ತು ಅಜ್ಜಿಗೆ ಇದು ಎಷ್ಟು ತೊಂದರೆಯಾಗುತ್ತಿತ್ತು) ಆ ಕಷ್ಟದ ಸಂದರ್ಭಗಳಲ್ಲೂ ಅವರು ಅಡುಗೆಮನೆಯನ್ನು ನಿರ್ವಹಿಸುತ್ತಿದ್ದರು. ಇಂದು ಲಕ್ಷಾಂತರ ಮಹಿಳೆಯರ ಕಣ್ಣುಗಳಲ್ಲಿನ ಸಂತೋಷವನ್ನು ನೋಡಿ. ಅವರು ಕೈಗೆಟುಕುವ ವಸತಿಯನ್ನು ಹೊಂದಿದ್ದಾರೆ. ಈಗಿನ ಸರ್ಕಾರವು ಕಾರ್ಯವಿಧಾನ ಹಾಗಿದೆ.

ಮಹಿಳೆಯರಿಗೆ ಈಗ ಮಾಲೀಕತ್ವದ ಭಾವ ಮೂಡಿದೆ. ಅದು ನಿಜಕ್ಕೂ ನಂಬಲಾಗದ ಬೆಳವಣಿಗೆ. ಏನನ್ನಾದರೂ ಸಾಧನೆ ಮಾಡಲು ಮಹಿಳೆಯರು ಬಯಸಿದ್ದಾದರೆ, ಅಂಥವರಿಗಾಗಿ ʻಮುದ್ರಾʼ ಸಾಲಗಳು ತುಂಬಾ ಸುಲಭವಾಗಿ ಲಭ್ಯವಿವೆ.

ಆದರೆ ಇನ್ನೂ, ಕ್ರಮಿಸಬೇಕಾದ ದೂರ ಇನ್ನೂ ಬಹಳ ಇದೆ. ಒಂದು ವರ್ಗದ ಮಹಿಳೆಯರಿಗೆ ಇನ್ನೂ ಬಹಳ ಅನಾನುಕೂಲತೆ ಇದೆ. ನಿನ್ನೆಯಷ್ಟೇ ನೀವು ಸುಪ್ರೀಂ ಕೋರ್ಟ್‌ನ ಮಹಾನ್ ತೀರ್ಪನ್ನು ನೋಡಿರಬೇಕು. ಇದು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಯಾಗುತ್ತಿದೆ. ನೆರವು ವ್ಯಕ್ತಿಯ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನವಾಗಿರಬೇಕು, ಏಕರೂಪವಾಗಿರಬೇಕು. ನಿಜಕ್ಕೂ ಅದೊಂದು ದೊಡ್ಡ ಹೆಜ್ಜೆ.

ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಮಹಿಳೆಯರ ಹೆಜ್ಜೆಗುರುತುಗಳು ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ನಾನು ನಿಮ್ಮೊಂದಿಗೆ ನ್ಯಾಯವಾಗಿ, ಪ್ರಾಮಾಣಿಕವಾಗಿ ಒಂದು ವಿಷಯ ಹೇಳಲು ಬಯಸುತ್ತೇನೆ, ಅದೆಂದರೆ, ನೀವು ಗಣ್ಯ ವರ್ಗಕ್ಕೆ ಸೇರಿದವರು. ನೀವು ಹೆಚ್ಚು ಶಕ್ತಶಾಲಿ ವರ್ಗದವರು. ನೀವು ಸಮಾಜದ ಸವಲತ್ತು ಪಡೆದವರ ವರ್ಗದಲ್ಲಿ ಇದ್ದೀರಿ. ಕೊರತೆ, ನಿರ್ಗತಿಕತೆ, ಸವಾಲುಗಳ ಜಗತ್ತು ನಿಮಗೆ ಕಾಣಿಸುತ್ತಿಲ್ಲ.

ನಿಮಗೆ ಏನಾದರೂ ಬೇಕೆನಿಸಿದರೆ, ಅದಕ್ಕೆ ಹಣಕಾಸು ಅಡ್ಡಿಯಾಗುವುದಿಲ್ಲ. ಆದರೆ ಇನ್ನೂ ಅನೇಕ ಪ್ರತಿಭಾನ್ವಿತರು, ಮಹಾನ್ ಸಾಮರ್ಥ್ಯವಂತರು ಇದ್ದಾರೆ. ಅವರಿಗೆ ಬಹಳ ಕಷ್ಟವಿದೆ. ಅವರು ಹೆಣಗಾಡಬೇಕು. ನೀವು ಮಾಡುತ್ತಿರುವುದು ತುಂಬಾ ಶ್ಲಾಘನೀಯ. ನಾನು ವಿಶೇಷವಾಗಿ ಸಂದರ್ಶನದಲ್ಲಿ, ʻಧ್ಯೇಯವಾಕ್ಯʼ ಏನು ಎಂಬುದನ್ನು ನೋಡಿದ್ದೇನೆ.

ಆದರೆ ದಯವಿಟ್ಟು ಹೀಗೆ ಮಾಡಿ, ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಧ್ಯವಾದಷ್ಟು ಮಂದಿಯ ಕೈ ಹಿಡಿಯಿರಿ. ನೀವು 100 ಹುಡುಗಿಯರನ್ನು ಕೈಯಲ್ಲಿ ಹಿಡಿಯಲು ನಿರ್ಧರಿಸಿದರೆ, ಅದರ ಪರಿಣಾಮವು ತುಂಬಾ ದೊಡ್ಡ ಮಟ್ಟದಲ್ಲಿರುತ್ತದೆ. ಅದು ನಂಬಲಸಾಧ್ಯ ಮಟ್ಟದಲ್ಲಿರುತ್ತದೆ. ಉತ್ತಮ ಶಿಕ್ಷಣವನ್ನು ಬಯಸುವ ಆದರೆ, ಅದನ್ನು ಪಡೆಯಲು ಸಾಧ್ಯವಾಗದ ಹುಡುಗಿಗೆ ಸಹಾಯ ಮಾಡುವ ಮೂಲಕ ದೊರೆಯುವ ತೃಪ್ತಿ ಮತ್ತು ಸಂತೋಷಕ್ಕಿಂತಲೂ ಜೀವನದಲ್ಲಿ ಮುಖ್ಯವಾದುದು ಮತ್ತೊಂದು ಇರುವುದಿಲ್ಲ. ಯಾರು ಅಸುರಕ್ಷಿತರು? ನೀವು ಚಾರಿತ್ರೆ ಪುಟಗಳತ್ತ ತಿರುಗಿ ನೋಡಿದರೆ ಹೋದರೆ, ನರ್ಸಿಂಗ್, ಯಾರು ಉತ್ತುಂಗದಲ್ಲಿದ್ದರು? ಶತಮಾನಗಳ ಹಿಂದೆ, ಫ್ಲಾರೆನ್ಸ್ ನೈಟಿಂಗೇಲ್.

ಆದ್ದರಿಂದ ಎಲ್ಲಾ ಹಂತಗಳಲ್ಲಿ, ವಿಶೇಷವಾಗಿ ಹಳ್ಳಿಗಳಲ್ಲಿ, ಕೆಲಸ ಮಾಡಲು, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹುಡುಗಿಯರಲ್ಲಿ ತುಂಬಾ ಉತ್ಸುಕತೆ ಇದೆ. ಏಕೆಂದರೆ ನಿಮಗೆ ಆರ್ಥಿಕ ಶಕ್ತಿ ಇಲ್ಲದಿದ್ದರೆ, ನೀವು ಸ್ವತಂತ್ರವಾಗಿರಲು ಸಾಧ್ಯವಿಲ್ಲ.

2024-25ನೇ ಸಾಲಿನ ನಿಮ್ಮ ಥೀಮ್ ಬಹಳ ಶ್ಲಾಘನೀಯ. ಇದು 1.4 ಶತಕೋಟಿ ಜನರ ಆಕಾಂಕ್ಷೆಗಳಿಗೆ ಉದಾಹರಣೆಯಾಗಿದೆ. ಸಾಮೂಹಿಕ ದೃಷ್ಟಿ, ಸಹಯೋಗದ ಕ್ರಿಯೆ ಎಂಬುದು ನಿಮ್ಮ ಥೀಮ್‌. ಇದು ಸ್ವಲ್ಪ ಹೆಚ್ಚು ಕಡಿಮೆ ಪ್ರಧಾನ ಮಂತ್ರಿಯವರ सबका साथ, सबका विकास, सबका विश्वास, सबका प्रयास| (ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌ ಸಬ್‌ ಕಾ ಪ್ರಯಾಸ್‌) ಆಶಯವನ್ನು ಪ್ರತಿಬಿಂಬಿಸುತ್ತದೆ.

ನಿಮ್ಮನ್ನು ಹುರಿದುಂಬಿಸುವ ಕೆಲವು ಅಂಕಿಅಂಶಗಳನ್ನು ನಾನು ನಿಮ್ಮ ಮುಂದಿಡುತ್ತೇನೆ. ಮಹಿಳಾ ಸಬಲೀಕರಣವು ಮೂಲತಃ ಆರ್ಥಿಕ ಸಬಲೀಕರಣವಲ್ಲದೆ ಬೇರೇನೂ ಅಲ್ಲ. ಮಹಿಳೆಯರು ಪ್ರತಿಭಾವಂತರಾಗಿರುವುದರಿಂದ, ಅವರು ಕಠಿಣ ಪರಿಶ್ರಮಿಗಳು. ʻಮುದ್ರಾʼ ಯೋಜನೆಯಡಿ ಸಾಲ ಪಡೆದ 48 ಕೋಟಿ ಮಂದಿಯಲ್ಲಿ ಶೇ.69ರಷ್ಟು ಮಹಿಳೆಯರು. ಶೇಕಡಾ 69ರಷ್ಟು ಅಂದರೆ ಸುಮಾರು 28 ಕೋಟಿ ಮಹಿಳೆಯರು.

ಊಹಿಸಿಕೊಳ್ಳಿ. ನಾನು ಸ್ವಲ್ಪ ವಿಷಯಾಂತರ ಮಾಡುವುದಾರೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾನು ಎನ್‌ಸಿಸಿ ಶಿಬಿರಕ್ಕೆ ಹೋಗಿದ್ದಾಗ, ಎನ್‌ಸಿಸಿಯ ಶೇ.40ಕ್ಕಿಂತಲೂ ಹೆಚ್ಚು ಭಾಗವು ಈಗ ಹುಡುಗಿಯರ ಘಟಕವಾಗಿರುವುದನ್ನು ಗಮನಿಸಿದೆ. ವಾಸ್ತವವಾಗಿ ಇದು 50ರ ಸಮೀಪದಲ್ಲಿದೆ. ಆದ್ದರಿಂದ ಇದು ʻಮುದ್ರಾʼ ಬಗ್ಗೆ. ʻಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣʼ ಅಡಿಯಲ್ಲಿ ಶೇ.70ರಷ್ಟು ಮನೆಗಳಿಗೆ ಮಹಿಳೆಯರು ಏಕಮಾತ್ರ ಅಥವಾ ಜಂಟಿ ಮಾಲೀಕರಾಗಿದ್ದಾರೆ. ಶೇಕಡಾ 70ರಷ್ಟು. ಮತ್ತು ನಿಮಗೆ ನೆನಪಿರಲಿ, ಕೈಗೆಟುಕುವ ವಸತಿ ಯೋಜನೆಯ ಮಹಿಳಾ ಫಲಾನುಭವಿಗಳ ಸಂಖ್ಯೆ ಈಗಾಗಲೇ 40 ದಶಲಕ್ಷ ದಾಟಿದೆ. ಸರ್ಕಾರ ತೋರಿಸಿದ ರಿಯಾಯಿತಿಯನ್ನು ನೋಡಿ.

ಒಂದು ಆಸ್ತಿಯನ್ನು ಹುಡುಗಿ ಅಥವಾ ಮಹಿಳೆಯ ಹೆಸರಿನಲ್ಲಿ ನೋಂದಾಯಿಸಬೇಕಾದರೆ, ಸರ್ಕಾರವು ಬಹಳ ಜಾಣ್ಮೆಯಿಂದ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ʻಸ್ಟ್ಯಾಂಪ್ ಡ್ಯೂಟಿʼಯನ್ನು ಕಡಿಮೆ ಮಾಡಿದೆ. ಆದ್ದರಿಂದ ಮಹಿಳೆಯರಿಗೆ ತಮ್ಮ ಸಮಾನ ಉಪಸ್ಥಿತಿಯ ಭಾವ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಸಕಾರಾತ್ಮಕ ಆಡಳಿತ ನೀತಿಗಳಿವೆ, ಅಂದಹಾಗೆ ಅವರಿಗೆ ಸಮಾನ ಪಾಲು ಇದೆ.

45 ಲಕ್ಷ ಬಾಲಕಿಯರು ಮತ್ತು ಮಹಿಳೆಯರಿಗೆ ವಿದ್ಯಾರ್ಥಿವೇತನ ನೀಡಲಾಗಿದೆ ಮತ್ತು 3 ಕೋಟಿಗೂ ಹೆಚ್ಚು ʻಸುಕನ್ಯಾ ಸಮೃದ್ಧಿ ಖಾತೆʼಗಳನ್ನು ತೆರೆಯಲಾಗಿದೆ. ಕೊಂಚ ಊಹಿಸಿ, ನೀವು ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗದ ದಿನಗಳೂ ಇದ್ದವು. ಈಗ ಬ್ಯಾಂಕ್ ಖಾತೆಗಳ ಸಂಖ್ಯೆ 3 ಕೋಟಿಗಿಂತ ಹೆಚ್ಚಾಗಿದೆ. ಮತ್ತು ಆ ಖಾತೆಗಳಲ್ಲಿ ಜಮಾ ಮಾಡಿದ ಮೊತ್ತವು 80,000 ಕೋಟಿ ಎಂದು ತಿಳಿದರೆ ನಿಮಗೆ ಸಂತೋಷವಾಗಬಹುದು.

ಇದು ಪ್ರಸ್ಥಭೂಮಿ ರೀತಿಯ ಅಭಿವೃದ್ಧಿ, ಮಹಿಳಾ ಸಬಲೀಕರಣ ಆದಾಗ ನಮ್ಮ ಭಾರತವು ನಿಜವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಮಹಿಳಾ ಶಕ್ತಿ ಅನಾವರಣಗೊಳ್ಳುತ್ತದೆ. ಅವರು ತಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು, ಅವರ ಪ್ರತಿಭೆಯನ್ನು ಅನ್ವೇಷಿಸಲು ಮತ್ತು ಅವರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಬಲಪಡಿಸಲು ಸಾಧ್ಯವಾಗಲಿದೆ.

ನೀವೆಲ್ಲರೂ ಬಹಳ ವಿದ್ಯಾವಂತರು. ನೀವೆಲ್ಲರೂ ಲಾಭದಾಯಕವಾಗಿ ಕೆಲಸ ಮಾಡುತ್ತಿದ್ದೀರಿ. ಸಾಮಾನ್ಯ ಹುಡುಗಿಯರು ಮತ್ತು ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಸವಾಲುಗಳನ್ನು ನೀವು ಎಂದಿಗೂ ಎದುರಿಸಿರುವುದಿಲ್ಲ.

ಆದ್ದರಿಂದ ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು, ಒಳನೋಟವುಳ್ಳವರಾಗಿರಬೇಕು, ಅವರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಉತ್ತಮ ಗುಣಮಟ್ಟದ ಶಿಕ್ಷಣ, ಉತ್ತಮ ಜೀವನ, ಭರವಸೆಯ ಜೀವನ ಪಡೆದಿರುವ ಹಾಗೂ ಆಹಾರ, ವಸತಿ, ಬಟ್ಟೆಯ ಸಮಸ್ಯೆಯಿಲ್ಲದೆ ಪ್ರತಿಭಾನ್ವಿತರಾದ ನಾವು ಏನೆಲ್ಲಾ ನೀಡಬಹುದು ಎಂದು ಯೋಚಿಸಬೇಕು. ಹಣ ಇಲ್ಲದೆ ಶಾಲೆಗಳು, ಕಾಲೇಜುಗಳಿಂದ ಹೊರಗುಳಿಯಬೇಕಾದಾಗ ಯುವ ಪ್ರತಿಭಾವಂತ ಹುಡುಗಿಯರು ಯಾವ ರೀತಿಯ ಸಂಕಟವನ್ನು ಎದುರಿಸುತ್ತಾರೆ ಎಂಬುದನ್ನು ನೋಡಿ. ಅಧಿಕ ವಿದ್ಯಾರ್ಥಿವೇತನವು ನನಗೆ ಪ್ರೌಢಶಾಲೆಗೆ ಹೋಗಲು ಅನುವು ಮಾಡಿಕೊಟ್ಟಿತ್ತು.

ಆದರೆ ಆ ವಿದ್ಯಾರ್ಥಿವೇತನವೇ ಇಲ್ಲದಿದ್ದರೆ, ನನಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿರಲಿಲ್ಲ. ಆದ್ದರಿಂದ ದಯವಿಟ್ಟು, ಶಿಕ್ಷಣದ ಬಗ್ಗೆ ಗಮನ ಹರಿಸಿ. ಒಬ್ಬ ಹುಡುಗಿ ಅಥವಾ ಮಹಿಳೆಯನ್ನು ಹಣಕಾಸಿನ ಗುರಿಗಳಿಂದ ಶಕ್ತಗೊಳಿಸುವ ಬದಲು, ಅವರನ್ನು ಅವರನ್ನು ಸ್ವಯಂ-ಶಕ್ತರನ್ನಾಗಿ ಮಾಡಿ, ಇದರಿಂದ ಅವರು ಇತರರ ಕೈಯಲ್ಲಿ ಹಿಡಿಯುವಷ್ಟು ಸಮರ್ಥರಾಗುತ್ತಾರೆ.

ನಾಗರಿಕ ವಿಮಾನಯಾನದಲ್ಲಿ ಮಹಿಳಾ ಪೈಲಟ್‌ಗಳ ವಿಷಯಕ್ಕೆ ಬಂದಾಗ ಭಾರತವು ಹೆಮ್ಮೆಯ ಸ್ಥಾನವನ್ನು ಹೊಂದಿರುತ್ತದೆ ಎಂದು ನೀವು ಎಂದಾದರೂ ಊಹಿಸಿದ್ದೀರಾ? ಅವರು ಇತರರಿಗಿಂತ ಮುಂದಿದ್ದಾರೆ. ನಾವು ಅದನ್ನು ಮತ್ತಷ್ಟು ಹೆಚ್ಚಿಸಬಹುದು.

ಭಾರತವು ಮಹಿಳಾ ನೇತೃತ್ವದ ಸಬಲೀಕರಣವನ್ನು ವ್ಯಾಖ್ಯಾನಿಸುತ್ತಿದೆ. ಹಿಂದುಳಿದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಈ ದೇಶದ ಮೊದಲ ರಾಷ್ಟ್ರಪತಿಯಾಗುವುದನ್ನು ನೋಡುವುದು ಎಷ್ಟು ಸಂತೋಷಕರ ವಿಚಾರ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರ ವಿಚಾರ ಹೇಳಿದೆ, ಇದು ಇಡೀ ಜಗತ್ತಿಗೆ ಒಂದು ಸಂದೇಶ.

ನನ್ನದೇ ಆದ ರೀತಿಯಲ್ಲಿ, ಸಂಸತ್ತಿನಲ್ಲಿ ಮಹಿಳಾ ಸಬಲೀಕರಣಕ್ಕೆ ನಾನು ಬದ್ಧನಾಗಿದ್ದೇನೆ. ಇದೇ ಮೊದಲ ಬಾರಿಗೆ ಅಧ್ಯಕ್ಷರ ಸಮಿತಿಯಲ್ಲಿ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರು ಇದ್ದಾರೆ. ರಾಜೇಶ್ವರ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಗಣಿಸಿ ಅಂಗೀಕರಿಸಿದಾಗ, ಆ ದಿನ 17 ಮಹಿಳಾ ಸಂಸದರು ನನ್ನ ಕುರ್ಚಿಯಲ್ಲಿ ಕುಳಿತಿದ್ದರು. ಸಾಂವಿಧಾನಿಕ ಸ್ಥಾನಗಳನ್ನು ಹೊಂದಿರುವ ನಾನು ಮತ್ತು ಗೌರವಾನ್ವಿತ ಉಪಸಭಾಪತಿಯನ್ನು ಹೊರತುಪಡಿಸಿ ಎಲ್ಲರೂ ಮಹಿಳೆಯರಾಗಿದ್ದರು.

ನೀವು ಸಂಸತ್ತಿನ ಕಾರ್ಯಕಲಾಪಗಳನ್ನು ನೋಡಿ, ಮೇಜನ್ನು ನೋಡಿ, ಆ ಮೇಜು ಮೊದಲು ಸಂಪೂರ್ಣ ಪುರುಷರನ್ನು ಹೊಂದಿತ್ತು, ಈಗ ಅದು ಶೇಕಡಾ 50ಕ್ಕಿಂತ ಹೆಚ್ಚು ಮಹಿಳೆಯರನ್ನು ಹೊಂದಿದೆ. ಅದನ್ನು ಸಾಧಿಸಲಾಗಿದೆ. ಯಾರು ಹೊರಗೆ ಹೋಗಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ ಎಂಬ ವಿಚಾರದಲ್ಲಿ ನಾನು ನಿರ್ಧಾರ ಕೈಗೊಳ್ಳುವಂತಿದ್ದರೆ, ನಾನು ಮಹಿಳೆಯರಿಗೆ ಆದ್ಯತೆ ನೀಡುತ್ತೇನೆ.

ಅವರ ಕಾರ್ಯಕ್ಷಮತೆಯು ಕೇವಲ ನನ್ನ ನಿರೀಕ್ಷೆ ಮಾತ್ರವಲ್ಲ ಎಲ್ಲರ ನಿರೀಕ್ಷೆಗಳನ್ನೂ ಮೀರಿದೆ ಎಂದು ನಿಮಗೆ ಹೇಳಲು ನನಗೆ ಸಂತೋಷವಾಗಿದೆ, ಏಕೆಂದರೆ ಅವರು ಪ್ರದರ್ಶನ ನೀಡುತ್ತಾರೆ ಎಂದು ನನಗೆ ಗೊತ್ತಿತ್ತು. ಅವರು ನಿಜವಾಗಿಯೂ ಪ್ರದರ್ಶನ ತೋರಿದರು. ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ಅವರು ಹೊಸ ಶಕ್ತಿಯನ್ನು ಪಡೆಯುತ್ತಿದ್ದಾರೆ.

ನಿಮ್ಮ ಕುಟುಂಬಗಳಲ್ಲಿ, ನೀವು ಕೆಲಸ ಮಾಡುವ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ, ನಿಮಗೆ ತಿಳಿದಿರುವ ಜನರು ಮತ್ತು ನಿಮ್ಮ ಸಂಗಾತಿಗಳ ಮೇಲೆ ರಚನಾತ್ಮಕ ರೀತಿಯಲ್ಲಿ ಪ್ರಭಾವ ಬೀರಿ, ಅವರು ʻಸಿಎಸ್ಆರ್ʼ ಅನ್ನು ನಿರ್ದಿಷ್ಟವಾಗಿ ಮತ್ತು ಪ್ರಧಾನವಾಗಿ ಹುಡುಗಿಯರ ಸಬಲೀಕರಣಕ್ಕಾಗಿ ಬಳಸುವಂತೆ ಒತ್ತಾಯಿಸಿ ಎಂದು ನಾನು ಹೇಳಲು ಬಯಸುತ್ತೇನೆ. ನಿಮಗೆ ಆಪ್ತರಾಗಿರುವ ಮಹಿಳೆಗೆ ಸಹಾಯ ಮಾಡುವುದು ಒಳ್ಳೆಯದು, ಆದರೆ ನೀವು ಸಮಾಜದ ಕಟ್ಟ ಕಡೆಯಲ್ಲಿರುವವರನ್ನು ತಲುಪಬೇಕು. ಒಮ್ಮೆ ನೀವು ಅದನ್ನು ಮಾಡಿದರೆ, ನಮ್ಮನ್ನು ಮೇಲೆತ್ತಲು ಯಾರೋ ಪ್ರಯತ್ನಿಸುತ್ತಿದ್ದಾರೆ ಎಂಬ ಭರವಸೆ ಅವರ ಮನಸ್ಸಿನಲ್ಲಿ ಮೂಡುತ್ತದೆ. ಮತ್ತು ಈಗ ನೀವು ದೇಶಾದ್ಯಂತ, 20 ವಿಭಾಗಗಳನ್ನು ಹೊಂದಿದ್ದೀರಿ. ಕೊನೆಯದು ಸಿಲಿಗುರಿ.

ಇದು ಮೊದಲೇ ಆಗಬೇಕಿತ್ತು, ಆದರೆ ಈಗ ಆಗಿದೆ. ಆದರೆ ಈ ವಿಷಯಕ್ಕೆ ಗಮನ ಕೊಡಿ,  ನಿಮ್ಮ ಘಟಕಗಳು ದೇಶದ ಪ್ರತಿಯೊಂದು ರಾಜ್ಯದಲ್ಲಿ ಮತ್ತು ಪ್ರತಿ ಕೇಂದ್ರಾಡಳಿತ ಪ್ರದೇಶದಲ್ಲೂ ಇರುವಂತಾಗಬೇಕು.

ನಾನು ಏಕೆ ಹಾಗೆ ಹೇಳುತ್ತೇನೆಂದರೆ, ಮೊದಲನೆಯದಾಗಿ, ನೀವು ನಿಮ್ಮ ಮನೆಗಳಿಂದ ಹೊರಬಂದಾಗ, ನಿಮ್ಮ ಕೆಲಸದ ಸ್ಥಳದಿಂದ ಹೊರಬಂದಾಗ, ನೀವು ಒಟ್ಟಿಗೆ ಸೇರಿದಾಗ, ನೀವು ಒಂದು ಹಂತದಲ್ಲಿ ಒಟ್ಟುಗೂಡುತ್ತೀರಿ, ನಿಮ್ಮ ನಡುವೆ ಸಂಯೋಗ ಬೆಳೆಯುತ್ತದೆ, ನಂತರ ನೀವು ಒಂದು ಶಕ್ತಿಯಾಗುತ್ತೀರಿ,  ಮತ್ತು ನಂತರ ನೀವು ರಚನಾತ್ಮಕ ರೀತಿಯಲ್ಲಿ, ಉದ್ಯಮ ಸಂಘಗಳು, ವ್ಯಾಪಾರ ಸಂಘಗಳು, ಕಾರ್ಪೊರೇಟ್ ಸಂಘಗಳನ್ನು ಈ ಬಗ್ಗೆ ಗಮನ ಹರಿಸಲು ಮನವೊಲಿಸಬಹುದು. ಒಟ್ಟಾರೆಯಾಗಿ, ಒಂದು ರೀತಿಯ ಹಿಂಜರಿಕೆ ಇರುವುದನ್ನು ನಾನು ಕಾಣುತ್ತಿದ್ದೇನೆ. ಒಂದು ನಿರ್ದಿಷ್ಟ ಕೆಲಸಕ್ಕೆ ಮಹಿಳೆಯನ್ನು ಪರಿಗಣಿಸುವಾಗ, ನಾವು ಅವರಿಗೆ ಆದ್ಯತೆ ನೀಡಬೇಕು.

ನಾವು ಮಾನಸಿಕ ಅಡೆತಡೆಯನ್ನು ನಿವಾರಿಸಬೇಕು. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮನ್ನು ಪರಿಚಯಿಸಿಕೊಳ್ಳುವುದನ್ನು ನೋಡಿದ ಬಳಿಕ ಈ ವಿಷಯದಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಈ ದಿನ ನನಗೆ ಇದಕ್ಕಿಂತಲೂ ಹೆಚ್ಚು ಶಕ್ತಿ ತುಂಬುವ ವಿಚಾರ ಬೇರೊಂದಿಲ್ಲ.

ಬದಲಾವಣೆಯ ಮೂರ್ತರೂಪಗಳೊಂದಿಗೆ, ಸಕಾರಾತ್ಮಕ ಶಕ್ತಿಯ ಕೇಂದ್ರಬಿಂದುಗಳೊಂದಿಗೆ ನಾನು ಸಂವಹನ ನಡೆಸುತ್ತಿದ್ದೇನೆ. ಅವರು ಹೌದು, ನಾನು ಚೆನ್ನೈಗೆ ಬಂದಾಗಲೆಲ್ಲಾ 100 ಹುಡುಗಿಯರು ಅಲ್ಲದಿದ್ದರೂ ಕನಿಷ್ಠ ಎರಡಂಕಿಯಷ್ಟು ಹೆಣ್ಣು ಮಕ್ಕಳಿಗೆ ಹಸ್ತ ಚಾಚುವುದಾಗಿ ಇಲ್ಲಿ ಸಂಕಲ್ಪ ತೊಡುತ್ತಾರೆ.

ಮಹಿಳೆಯು ಅಲ್ಲಿದ್ದಾಗ, ಅಲ್ಲೊಂದು ಉತ್ಸಾಹವಿತ್ತು ಎಂದು ನನಗೆ ಸ್ಪಷ್ಟವಾಗಿ ನೆನಪಿದೆ. ಆದ್ದರಿಂದ ನಾನು ವರ್ತಮಾನ, ತಕ್ಷಣದ ಗತ, ಮತ್ತು ಭವಿಷ್ಯವನ್ನು ನೋಡಿದಾಗ, ಹೊಳೆಯುವ ನಕ್ಷತ್ರವು ಮತ್ತಷ್ಟು ಮತ್ತಷ್ಟು ಹೆಚ್ಚಿನದನ್ನು ಸಾಧಿಸುತ್ತದೆ ಎಂಬ ಭಾವ ಮೂಡುತ್ತಿದೆ.

ಅನಂತ ಧನ್ಯವಾದಗಳು.

 

*****



(Release ID: 2032462) Visitor Counter : 13