ಉಪರಾಷ್ಟ್ರಪತಿಗಳ ಕಾರ್ಯಾಲಯ

ದಂಡು ಪ್ರದೇಶಗಳು ಇತರ ಪುರಸಭೆಗಳಿಗೆ ಮಾದರಿಯಾಗರಿಬೇಕು- ಉಪರಾಷ್ಟ್ರಪತಿ


ಗಿಡಮೂಲಿಕೆ ತೋಟಗಳು ಮತ್ತು ತೋಟಗಾರಿಕೆಯನ್ನು ಉತ್ತೇಜಿಸುವ ಮೂಲಕ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಸಸ್ಯವರ್ಗವನ್ನು ಪೋಷಿಸಿ - ಉಪರಾಷ್ಟ್ರಪತಿ

"ರಕ್ಷಣೆಯ ಅತ್ಯುತ್ತಮ ಮಾರ್ಗವೆಂದರೆ ಯುದ್ಧಕ್ಕೆ ಸಿದ್ಧವಾಗಿರುವುದು"

ರಕ್ಷಣಾ ಭೂಮಿಗಳ ನಿರ್ವಹಣೆಗೆ ತಂತ್ರಜ್ಞಾನವನ್ನು ಬಳಸಬೇಕು: ಉಪ ರಾಷ್ಟ್ರಪತಿ

ಉಪರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಭಾರತೀಯ ಡಿಫೆನ್ಸ್ ಎಸ್ಟೇಟ್ ಸೇವೆಯ ತರಬೇತಿದಾರ ಅಧಿಕಾರಿಗಳು 

Posted On: 08 JUL 2024 6:09PM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಪರಿಸರದ ಬಗ್ಗೆ ಕಾಳಜಿ ವಹಿಸುವ ಮತ್ತು ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಸಸ್ಯವರ್ಗವನ್ನು ಪೋಷಿಸುವ ಅಗತ್ಯತೆಯ ಬಗ್ಗೆ ಹೇಳಿದರು. ಸಮಾಜದ ಹೆಚ್ಚಿನ ಪ್ರಯೋಜನಕ್ಕಾಗಿ ರಚನಾತ್ಮಕ ರೀತಿಯಲ್ಲಿ ರಕ್ಷಣಾ ಎಸ್ಟೇಟ್ ಭೂಮಿಯಲ್ಲಿ ಗಿಡಮೂಲಿಕೆ ತೋಟಗಳು ಮತ್ತು ತೋಟಗಾರಿಕೆಯನ್ನು ಉತ್ತೇಜಿಸುವ ಮೂಲಕ ಇದನ್ನು ಸಾಧಿಸಬಹುದು ಎಂದು ಅವರು ಸಲಹೆ ನೀಡಿದರು.

 

ಇಂದು ಉಪರಾಷ್ಟ್ರಪತಿಗಳ ಎನ್‌ಕ್ಲೇವ್‌ನಲ್ಲಿ ಭಾರತೀಯ ಡಿಫೆನ್ಸ್ ಎಸ್ಟೇಟ್ ಸೇವೆಯ 2023 ರ ಬ್ಯಾಚ್‌ನ ತರಬೇತಿದಾರ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಶ್ರೀ ಧನಕರ್‌, ಕಂಟೋನ್ಮೆಂಟ್ ಪ್ರದೇಶಗಳು ಸ್ವಚ್ಛತೆ, ಹಸಿರು ಮತ್ತು ನಾಗರಿಕ ಸೌಕರ್ಯಗಳಲ್ಲಿ ಇತರ ಸಂಸ್ಥೆಗಳಿಗೆ (ಪುರಸಭೆಗಳು) ಮಾದರಿಯಾಗಬೇಕು ಎಂದು ಹೇಳಿದರು.

ವಿಕಸನಗೊಳ್ಳುತ್ತಿರುವ ತಾಂತ್ರಿಕ ಮತ್ತು ಭೌಗೋಳಿಕ ರಾಜಕೀಯ ಭೂದೃಶ್ಯವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, ವೇಗವಾಗಿ ಬದಲಾಗುತ್ತಿರುವ ಸನ್ನಿವೇಶಕ್ಕೆ ನಿರಂತರವಾಗಿ ಹೊಂದಿಕೊಳ್ಳುವಂತೆ ಯುವ ಅಧಿಕಾರಿಗಳಿಗೆ ಸಲಹೆ ನೀಡಿದರು. ರಾಷ್ಟ್ರವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿಡಲು ಎಲ್ಲರೂ ಮುಂದಾಗಬೇಕು. ರಕ್ಷಣೆಯ ಅತ್ಯುತ್ತಮ ಮಾರ್ಗವೆಂದರೆ ಯುದ್ಧಕ್ಕೆ ಸಿದ್ಧವಾಗಿರುವುದು" ಎಂದು ಒತ್ತಿ ಹೇಳಿದರು.

ರಕ್ಷಣಾ ಭೂಮಿಗಳು ನಮ್ಮ ಭದ್ರತೆಗೆ ನಿರ್ಣಾಯಕವಾಗಿವೆ. ಅತಿಕ್ರಮಣಗಳು ಮತ್ತು ನಂತರದ ಕಾನೂನು ಜಗಳಗಳಂತಹ ರಕ್ಷಣಾ ಭೂಮಿಗಳ ನಿರ್ವಹಣೆಯಲ್ಲಿ ಎದುರಿಸುತ್ತಿರುವ ಅನೇಕ ಸವಾಲುಗಳಿವೆ ಎಂದು ತಿಳಿಸಿದರು. ಭೂ ನಿರ್ವಹಣೆಗೆ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಧಿಕಾರಿ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು. 
ಯಾವುದೇ ಆಕ್ರಮಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ದೃಢವಾದ ರೀತಿಯಲ್ಲಿ ತ್ವರಿತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇಂತಹ ವಿಷಯಗಳಲ್ಲಿ ವ್ಯಾಜ್ಯ ನಿರ್ವಹಣೆಯನ್ನು ರಚಿಸುವ ಅಗತ್ಯವನ್ನು ಎಂದು ವಕೀಲರೂ ಆದ ಉಪರಾಷ್ಟ್ರಪತಿಗಳು ತಿಳಿಸಿದರು.

ಎಂದಿಗೂ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳಬೇಡಿ. ನೈತಿಕ ನಡವಳಿಕೆಯನ್ನು ಉದಾಹರಿಸಿ ಇತರರಿಗೆ ಮಾದರಿಯಾಗಬೇಕು ಎಂದು  ತಿಳಿಸಿದರು. ನೀವು ಒತ್ತಡಗಳನ್ನು ಎದುರಿಸುವಾಗಲೂ ದೃಢವಾಗಿರಿ. ಅವರು 2047 ರ ವೇಳೆಗೆ ವಿಕಸಿತ ಭಾರತದ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದು ಉಪರಾಷ್ಟ್ರಪತಿಗಳು ಸಲಹೆ ನೀಡಿದರು.

ರಕ್ಷಣಾ ಎಸ್ಟೇಟ್ ಅಪಾರವಾದ ಐತಿಹಾಸಿಕ ಮತ್ತು ಪಾರಂಪರಿಕ ಮೌಲ್ಯವನ್ನು ಹೊಂದಿದೆ. ಅದರ ಯೋಜನೆ ಮತ್ತು ಅಭಿವೃದ್ಧಿಯಲ್ಲಿ ದೀರ್ಘಾವಧಿಯ ದೃಷ್ಟಿಕೋನಕ್ಕೆ ಕರೆ ನೀಡಿದರು.

ಡಾ. ಸುದೇಶ್ ಧನಕರ್, ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಶ್ರೀ ಗಿರಿಧರ್ ಅರಮನೆ, ಡಿಫೆನ್ಸ್ ಎಸ್ಟೇಟ್‌ಗಳ ಮಹಾನಿರ್ದೇಶಕರಾದ ಶ್ರೀ ಜಿ.ಎಸ್. ರಾಜೇಶ್ವರನ್, ರಾಷ್ಟ್ರೀಯ ರಕ್ಷಣಾ ಎಸ್ಟೇಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿರ್ದೇಶಕ ಶ್ರೀ ರಾಜೇಂದ್ರ ಪವಾರ್, ಅಧಿಕಾರಿ ಪ್ರಶಿಕ್ಷಣಾರ್ಥಿಗಳು, ಭಾರತೀಯ ಡಿಫೆನ್ಸ್ ಎಸ್ಟೇಟ್ ಸೇವೆ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

*****
 



(Release ID: 2031705) Visitor Counter : 16