ಹಣಕಾಸು ಸಚಿವಾಲಯ
azadi ka amrit mahotsav

ಮುಂಬರುವ ಕೇಂದ್ರ ಬಜೆಟ್ 2024-25ರ ಬಜೆಟ್ ಪೂರ್ವ ಸಮಾಲೋಚನಾ ಸಭೆಗಳು ನವದೆಹಲಿಯಲ್ಲಿ ಸಂಪನ್ನಗೊಂಡಿವೆ

Posted On: 07 JUL 2024 11:18AM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಸಚಿವಾಲಯದಲ್ಲಿ 2024ರ ಜೂನ್ 19 ರಿಂದ ಪ್ರಾರಂಭವಾದ ಕೇಂದ್ರ ಬಜೆಟ್ 2024-25ರ ಬಜೆಟ್ ಪೂರ್ವ ಸಮಾಲೋಚನೆಗಳು
2024ರ ಜುಲೈ 5 ರಂದು ಮುಕ್ತಾಯಗೊಂಡವು.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2024-25ರ ಜೂನ್ 25ರಂದು ನವದೆಹಲಿಯಲ್ಲಿ ಮುಂಬರುವ 2024-25ರ ಸಾಮಾನ್ಯ ಬಜೆಟ್‌ಗಾಗಿ ವ್ಯಾಪಾರ ಮತ್ತು ಸೇವೆಗಳ ಪ್ರತಿನಿಧಿಗಳೊಂದಿಗೆ ಏಳನೇ ಬಜೆಟ್ ಪೂರ್ವ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದ್ದರು.

 

ವೈಯಕ್ತಿಕ ಸಮಾಲೋಚನೆಯ ಸಮಯದಲ್ಲಿ, 10 ಪಾಲುದಾರ ಗುಂಪುಗಳ  120ಕ್ಕೂ ಹೆಚ್ಚು ಆಹ್ವಾನಿತರು ಸಭೆಯಲ್ಲಿ ಪಾಲ್ಗೊಂಡರು. ಈ ಪಾಲುದಾರರಲ್ಲಿ ತಜ್ಞರು ಮತ್ತು ರೈತ ಸಂಘಗಳ ಪ್ರತಿನಿಧಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರು; ಕಾರ್ಮಿಕ ಸಂಘಗಳು; ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ; ಉದ್ಯೋಗ ಮತ್ತು ಕೌಶಲ್ಯ; ಎಂಎಸ್‌ಎಂಇ; ವ್ಯಾಪಾರ ಮತ್ತು ಸೇವೆಗಳು; ಕೈಗಾರಿಕೆ; ಅರ್ಥಶಾಸ್ತ್ರಜ್ಞರು; ಹಣಕಾಸು ವಲಯ ಮತ್ತು ಬಂಡವಾಳ ಮಾರುಕಟ್ಟೆಗಳು; ಜೊತೆಗೆ, ಮೂಲಸೌಕರ್ಯ, ಇಂಧನ ಮತ್ತು ನಗರ ವಲಯದ ಪ್ರತಿನಿಧಿಗಳು ಸೇರಿದ್ದಾರೆ.

ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಶ್ರೀ ಪಂಕಜ್ ಚೌಧರಿ; ಹಣಕಾಸು ಕಾರ್ಯದರ್ಶಿ ಮತ್ತು ವೆಚ್ಚ ಕಾರ್ಯದರ್ಶಿ ಡಾ.ಟಿ.ವಿ. ಸೋಮನಾಥನ್‌; ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀ ಅಜಯ್ ಸೇಠ್; ಡಿಐಪಿಎಎಂ ಕಾರ್ಯದರ್ಶಿ ಶ್ರೀ ತುಹಿನ್ ಕೆ. ಪಾಂಡೆ; ಹಣಕಾಸು ಸೇವೆಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಜೋಶಿ; ಕಂದಾಯ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಮಲ್ಹೋತ್ರಾ; ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಗೋವಿಲ್, ಸಂಬಂಧಪಟ್ಟ ಸಚಿವಾಲಯಗಳ ಕಾರ್ಯದರ್ಶಿಗಳು, ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ. ಅನಂತ ನಾಗೇಶ್ವರನ್ ಮತ್ತು ಹಣಕಾಸು ಸಚಿವಾಲಯ ಮತ್ತು ಸಂಬಂಧಪಟ್ಟ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಂಬಂಧಿತ ಸಭೆಗಳಲ್ಲಿ ಉಪಸ್ಥಿತರಿದ್ದರು.

ಸಮಾಲೋಚನೆಯ ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್ ಅವರು ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಪಾಲುದಾರರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು 2024-25ರ ಕೇಂದ್ರ ಬಜೆಟ್ ಸಿದ್ಧಪಡಿಸುವಾಗ ಅವರ ಸಲಹೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುವುದು ಮತ್ತು ಪರಿಗಣಿಸಲಾಗುವುದು ಎಂದು ತಜ್ಞರು ಮತ್ತು ಪ್ರತಿನಿಧಿಗಳಿಗೆ ಭರವಸೆ ನೀಡಿದರು.

 

****


(Release ID: 2031458) Visitor Counter : 53