ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ʻರೈಟ್ ಟು ರಿಪೇರ್‌ ಪೋರ್ಟಲ್ ಇಂಡಿಯಾʼಗೆ ಸೇರ್ಪಡೆಗೊಳ್ಳುವ ಸಂಬಂಧ ಆಟೋಮೊಬೈಲ್ ಸಂಘಗಳು ಮತ್ತು ಪಾಲುದಾರ ಕಂಪನಿಗಳನ್ನು ಭೇಟಿ ಮಾಡಿದ ಗ್ರಾಹಕ ವ್ಯವಹಾರಗಳ ಇಲಾಖೆ


ದುರಸ್ತಿ ಕೈಪಿಡಿಗಳು / ವೀಡಿಯೊಗಳನ್ನು ಪ್ರಜಾಸತಾತ್ಮಕಗೊಳಿಸಿ, ಅವು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳನ್ನು ಹೆಚ್ಚಿಸಬೇಕಾಗಿದೆ ಜೊತೆಗೆ, ಥರ್ಡ್‌ ಪಾರ್ಟಿ ದುರಸ್ತಿ ಸೇವೆಗಳಿಗೆ ಸದೃಢ ಪರಿಸರ ವ್ಯವಸ್ಥೆಯನ್ನು ರೂಪಿಸಬೇಕಿದೆ ಮತ್ತು ಅವುಗಳಿಗೆ ಮಾನದಂಡಗಳನ್ನು ನಿಗದಿಪಡಿಸಬೇಕಿದೆ: ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ

Posted On: 06 JUL 2024 1:17PM by PIB Bengaluru

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಸರಬರಾಜು ಸಚಿವಾಲಯದ ಅಡಿಯಲ್ಲಿ ಬರುವ ಗ್ರಾಹಕ ವ್ಯವಹಾರಗಳ ಇಲಾಖೆಯು(ಡಿಒಸಿಎ) ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ದುರಸ್ತಿ ಮಾಡಲು ಮತ್ತು ಅದನ್ನು ಮರುಬಳಕೆ ಮಾಡಲು ಮಾಹಿತಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ರೈಟ್ ಟು ರಿಪೇರ್ ಪೋರ್ಟಲ್ ಇಂಡಿಯಾ (https://righttorepairindia.gov.in/) ಅನ್ನು ಪ್ರಾರಂಭಿಸಿದೆ.

ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ತೊಂದರೆ ಮುಕ್ತ ಉತ್ಪನ್ನ ದುರಸ್ತಿಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಕಳವಳಗಳಿಗೆ ಸ್ಪಂದಿಸುವ ಪ್ರಯತ್ನದ ಭಾಗವಾಗಿ, ಗ್ರಾಹಕ ವ್ಯವಹಾರಗಳ ಇಲಾಖೆಯ (ಡಿಒಸಿಎ) ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅವರ ಅಧ್ಯಕ್ಷತೆಯಲ್ಲಿ ಆಟೋಮೊಬೈಲ್ ಸಂಘಗಳು ಮತ್ತು ಆಟೋಮೊಬೈಲ್ ಕ್ಷೇತ್ರದ ಪಾಲುದಾರ ಕಂಪನಿಗಳೊಂದಿಗೆ ಸಭೆ ನಡೆಸಲಾಯಿತು. ಕಂಪನಿಗಳನ್ನು ʻರೈಟ್ ಟು ರಿಪೇರ್‌ ಪೋರ್ಟಲ್ ಇಂಡಿಯಾʼಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು.

ದುರಸ್ತಿ ಮಾಡಲಾಗದ ಅಥವಾ  ಸೀಮಿತ ಜೀವಿತಾವಧಿಯೊಂದಿಗೆ ವಿನ್ಯಾಸಗೊಳಿಸಲಾದ ಉತ್ಪನ್ನಗಳು  ಇ-ತ್ಯಾಜ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ, ದುರಸ್ತಿ ಆಯ್ಕೆಗಳ ಕೊರತೆ ಅಥವಾ ಮರುಬಳಕೆಗಾಗಿ ರಿಪೇರಿಯು ಅತ್ಯಂತ ದುಬಾರಿ ಆಗಿರುವ ಸಂದರ್ಭಗಳು ಹೊಸ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರನ್ನು ಒತ್ತಾಯಿಸುತ್ತವೆ ಎಂದು ಸಭೆಯಲ್ಲಿ ಒತ್ತಿಹೇಳಲಾಯಿತು. ಆದ್ದರಿಂದ, ರಿಪೇರಿ ಪರಿಕರಗಳಿಗೆ ಪ್ರವೇಶ ನಿರ್ಬಂಧ ಅಥವಾ ದುರಸ್ತಿ ಮಾಹಿತಿ ಕೊರತೆಯಂತಹ ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ಆ ಮೂಲಕ ಗ್ರಾಹಕರು ತಾವು ಖರೀದಿಸುವ ಉತ್ಪನ್ನಗಳ ಸಂಪೂರ್ಣ ಮಾಲೀಕತ್ವವನ್ನು ಹೊಂದುವುದನ್ನು ಎಂದು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ.

ಸೇವೆಗಳ ಪೂರೈಕೆಯಲ್ಲಿ ಗಮನಾರ್ಹ ವಿಳಂಬ ಹಾಗೂ ವಾಹನಗಳಿಗೆ ದುರಸ್ತಿ ದಾಖಲೆಗಳ ಅನುಪಸ್ಥಿತಿಯಿಂದಾಗಿ ದುರಸ್ತಿ ಸೇವೆಗಳು ಹೆಚ್ಚು ನಿರ್ಬಂಧಿತವಾಗಿರುವುದನ್ನು ಕಾಲಾನುಗತವಾಗಿ ಗಮನಿಸಲಾಗಿದೆ. ಅಲ್ಲದೆ, ಉತ್ಪನ್ನಗಳನ್ನು ಕೆಲವೊಮ್ಮೆ ದುರಸ್ತಿ ವೆಚ್ಚವು ಅತಿಯಾಗಿರುತ್ತದೆ, ಇದರಿಂದಾಗಿ ಗ್ರಾಹಕರು ದುರಸ್ತಿ ಸೇವೆಗಳ ಬಗ್ಗೆ ಅತೃಪ್ತಿ ಹೊಂದಿರುತ್ತಾರೆ. ಇದರಿಂದ ಸೀಮಿತ ದುರಸ್ತಿ ಆಯ್ಕೆಗಳಿಂದಾಗಿ, ಅಗತ್ಯವಿದ್ದರೂ ಸಹ ದುರಸ್ತಿ  ವಿಳಂಬವಾಗುತ್ತದೆ. ಕೈಗೆಟುಕುವ ಬೆಲೆಯಲ್ಲಿ ನೈಜ ಬಿಡಿಭಾಗಗಳ ಲಭ್ಯತೆಯು ಈ ನಿಟ್ಟಿನಲ್ಲಿ ಪ್ರಮುಖ ಅಡಚಣೆಯಾಗಿದೆ. ಆಗಾಗ್ಗೆ ಕೈಗೆಟುಕುವ ಬೆಲೆಯಲ್ಲಿ ಅವುಗಳ ಅಲಭ್ಯತೆಯು ಗ್ರಾಹಕರನ್ನು ಬೂದು ಮಾರುಕಟ್ಟೆಗಳಿಂದ ನಕಲಿ ಬಿಡಿಭಾಗಗಳನ್ನು ಖರೀದಿಸದಂತೆ ತಡೆಯುತ್ತದೆ. ಒತ್ತಾಯಿಸುತ್ತದೆ. ಇದಲ್ಲದೆ, ಸಣ್ಣ ರಿಪೇರಿ ಅಥವಾ ʻನೀವೇ ಮಾಡಿʼ ಮಾಹಿತಿ ಕೈಪಿಡಿಯ ಬಗ್ಗೆ ಕೊರತೆಯು ಗ್ರಾಹಕರ ಸಂಕಟವನ್ನು ಹೆಚ್ಚಿಸುತ್ತದೆ, ಅವರ ಆರ್ಥಿಕ ಹೊರೆ ಮತ್ತು ಒಟ್ಟಾರೆ ಅತೃಪ್ತಿಯನ್ನು ಉಲ್ಬಣಗೊಳಿಸುತ್ತದೆ.

ಕಾರ್ಯದರ್ಶಿ ಶ್ರೀಮತಿ ಖರೆ ಅವರು ಮಾತನಾಡಿ, ಎಲ್ಲರಿಗೂ ಲಭ್ಯವಿರುವ ದುರಸ್ತಿ ಕೈಪಿಡಿಗಳು / ವೀಡಿಯೊಗಳನ್ನು ಪ್ರಜಾಸತಾತ್ಮಗೊಳಿಸುವ, ʻಥರ್ಡ್‌ ಪಾರ್ಟಿʼ ದುರಸ್ತಿ ಸೇವೆಗಳಿಗೆ ದೃಢವಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಹಾಗೂ ಅವುಗಳಿಗೆ ಮಾನದಂಡಗಳನ್ನು ನಿಗದಿಪಡಿಸುವ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ಗ್ರಾಹಕರಿಗೆ ವಿಶೇಷವಾಗಿ ಹೆದ್ದಾರಿಗಳಲ್ಲಿ ರಸ್ತೆ ಬದಿಯ ನೆರವು (ರೋಡ್‌ ಸೈಡ್‌ ಅಸಿಸ್ಟೆನ್ಸ್‌) ನೀಡಲು, ಮತ್ತು ಉತ್ಪನ್ನದ ಜೀವನ, ಸುಲಭ ದುರಸ್ತಿ ಪರಿಸರ ವ್ಯವಸ್ಥೆ, ಬಿಡಿಭಾಗಗಳ ಲಭ್ಯತೆ, ಸ್ವಯಂ ದುರಸ್ತಿಯ ವಿವರವಾದ ಕೈಪಿಡಿ, ವಿವಿಧ ಭಾಗಗಳ ವಾರಂಟಿ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಆಟೋಮೋಟಿವ್ ದುರಸ್ತಿ ಸೂಚ್ಯಂಕವನ್ನು ಪರಿಚಯಿಸಬೇಕೆಂದು ಅವರು ಒತ್ತಿ ಹೇಳಿದರು. ಈ ಕ್ರಮಗಳು ಗ್ರಾಹಕರಿಗೆ ತಮ್ಮ ಉತ್ಪನ್ನಗಳ ʻಮಾರಾಟದ ನಂತರದ ಸೇವೆʼಗೆ (ಆಫ್ಟರ್‌ ಸೇಲ್ಸ್‌ ಸರ್ವೀಸ್‌) ಸಂಬಂಧಿಸಿದಂತೆ ತಿಳುವಳಿಕೆಯುಳ್ಳ ಆಯ್ಕೆಗಗಳನ್ನು ಒದಗಿಸುವ ಮತ್ತು ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ, ಜೊತೆಗೆ ಗ್ರಾಹಕರು ತಮ್ಮ ಉತ್ಪನ್ನಗಳನ್ನು ಸಂಪೂರ್ಣವಾಗಿ ಆನಂದಿಸಲು ಅನುವು ಮಾಡಿಕೊಡುತ್ತವೆ. ʻರೈಟ್ ಟು ರಿಪೇರರ್‌ ಪೋರ್ಟಲ್ʼ ಅನ್ನು ಅಳವಡಿಸಿಕೊಳ್ಳುವ ಮತ್ತು ಗ್ರಾಹಕರಿಗೆ ಸದೃಢ ʻಮಾರಾಟದ ನಂತರದ ಸೇವೆʼಗಳನ್ನು ಒದಗಿಸುವಲ್ಲಿ ಹೆಚ್ಚಿನ ಸಹಯೋಗದ ವಿಧಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಒಮ್ಮತದೊಂದಿಗೆ ಸಭೆ ಮುಕ್ತಾಯಗೊಂಡಿತು.

ನುರಿತ ಕೆಲಸಗಾರರ ಪ್ರಮಾಣೀಕರಣದ ಜೊತೆಗೆ ಭಾಗಗಳ ಪ್ರಮಾಣೀಕರಣವನ್ನು ಜಾರಿಗೊಳಿಸುವುದು, ಖರೀದಿಯ ನಂತರದ ಸೇವೆ ಮತ್ತು ಉತ್ಪನ್ನಗಳ ಜೀವಿತಾವಧಿಯ ಹೆಚ್ಚಳಕ್ಕಾಗಿ ಗ್ರಾಹಕರಿಗೆ ಪ್ರಯೋಜನವಾಗುವಂತಹ ಕ್ಯಾಟಲಾಗ್‌ಗಳನ್ನು ಅಭಿವೃದ್ಧಿಪಡಿಸುವ ಕಂಪನಿಗಳು ಹಾಗೂ ಅನಗತ್ಯ ಪ್ಲಾಸ್ಟಿಕ್ ತ್ಯಾಜ್ಯದ ಉತ್ಪಾದನೆಗೆ ದಾರಿ ಮಾಡುವ ಮೋಟಾರು ವಿಮೆಯ ಹೆಸರಿನಲ್ಲಿ ದುರಸ್ತಿ ಕಾರ್ಯಾಗಾರಗಳಲ್ಲಿ ಮೋಸದ ಅಭ್ಯಾಸಗಳನ್ನು ತಡೆಯುವ ಕ್ರಮಗಳು ಮುಂತಾದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು.

ಈ ನಿಟ್ಟಿನಲ್ಲಿ, ದುರಸ್ತಿ ಸಂಬಂಧಿತ ಮಾಹಿತಿಯನ್ನು ಒದಗಿಸಲು ಗ್ರಾಹಕರು ಮತ್ತು ಕಂಪನಿಗಳ ನಡುವೆ ಅನುಕೂಲ ಮಾಡಿಕೊಡುವ ಹಾಗೂ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಏಕೀಕೃತ ʻರೈಟ್ ಟು ರಿಪೇರ್ ಪೋರ್ಟಲ್ ಇಂಡಿಯಾʼ ದಲ್ಲಿ ಸೇರುವಂತೆ ಎಲ್ಲಾ ಕಂಪನಿಗಳನ್ನು ಒತ್ತಾಯಿಸಲಾಯಿತು. ಈ ಮಾಹಿತಿಯು ಇವುಗಳನ್ನು ಒಳಗೊಂಡಿದೆ:

  1. ಉತ್ಪನ್ನ ಕೈಪಿಡಿಗಳು/ದುರಸ್ತಿ ವೀಡಿಯೊಗಳ ಸುಲಭ ಲಭ್ಯತೆ (ಕಂಪನಿಗಳ ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳನ್ನು ಲಿಂಕ್ ಮಾಡುವ ಮೂಲಕ);
  2. ಬಿಡಿಭಾಗಗಳ ಬೆಲೆ ಮತ್ತು ವಾರಂಟಿಯ ಬಗ್ಗೆ ಕಳವಳವನ್ನು ಪರಿಹರಿಸುವುದು;
  3. ಗ್ಯಾರಂಟಿ, ವಾರಂಟಿ ಮತ್ತು ವಿಸ್ತೃತ ವಾರಂಟಿಯ ಹೊಣೆಗಾರಿಕೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಸ್ಪಷ್ಟ ಉಲ್ಲೇಖ;
  4. ಭಾರತದಾದ್ಯಂತದ ಕಂಪನಿಗಳ ಸೇವಾ ಕೇಂದ್ರದ ವಿವರಗಳು ಮತ್ತು ಕಂಪನಿಗಳಿಂದ ಥರ್ಡ್-ಪಾರ್ಟಿ ರಿಪೇರಿ ಕೇಂದ್ರಗಳನ್ನು ಗುರುತಿಸುವುದು ಮತ್ತು
  5. ಉತ್ಪನ್ನದ ಮೂಲ ಯಾವ ದೇಶದ್ದೆಂಬ ಮಾಹಿತಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.

ʻಟಿವಿಎಸ್ʼನಂತಹ ಕೆಲವು ಕಂಪನಿಗಳು ಪೋರ್ಟ್ಲ್‌ಗೆ ಸೇರ್ಪಡೆ ಬಳಿಕ ತಮ್ಮ ಅನುಭವಗಳನ್ನು ಹಂಚಿಕೊಂಡಿವೆ. ಟಾಟಾ ಮೋಟಾರ್ಸ್ ಮತ್ತು ಟಿವಿಎಸ್ ಸೇರಿದಂತೆ ವಿವಿಧ ಕಂಪನಿಗಳು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಿಂದ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ, ಅವು ಪ್ರಮುಖ ದುರಸ್ತಿ ಸಮಸ್ಯೆಗಳನ್ನು ಹೇಗೆ ಗುರುತಿಸಿದವು ಮತ್ತು ಬಳಿಕ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳ ಮೂಲಕ ಗ್ರಾಹಕರಿಗೆ ಪ್ರವೇಶಿಸಬಹುದಾದ ದುರಸ್ತಿ ವೀಡಿಯೊಗಳನ್ನು ಹೇಗೆ ತಲುಪಿಸಿದರು ಎಂದು ಚರ್ಚಿಸಿವೆ. ಅಲ್ಲದೆ,  ʻಎಸಿಎಂಎʼದಂತಹ ಸಂಘಗಳು ಕ್ರಿಯಾತ್ಮಕ ಮತ್ತು ನವೀನ ಮಾರುಕಟ್ಟೆ ಕ್ಷೇತ್ರದಲ್ಲಿ ಆಟೋಮೋಟಿವ್ ಕೌಶಲ್ಯಗಳ ತರಬೇತಿಯನ್ನು ಯುವಕರಿಗೆ ನೀಡುವಲ್ಲಿ ಮತ್ತು ಬೆಂಬಲಿಸುವಲ್ಲಿ ಆಟೋಮೋಟಿವ್ ಕೌಶಲ್ಯ ಅಭಿವೃದ್ಧಿ ಮಂಡಳಿಯ ಪಾತ್ರವನ್ನು ಒತ್ತಿಹೇಳುತ್ತವೆ.

ಸಭೆಯಲ್ಲಿ ಆಟೋಮೊಬೈಲ್ ಸಂಘಗಳಾದ ʻಎಸಿಎಂಎʼ, ʻಸಿಯಾಮ್ʼ, ʻಎಟಿಎಂಎʼ, ʻಎಪಿಕ್ ಫೌಂಡೇಶನ್ʼ ಹಾಗೂ ʻಟಾಟಾ ಮೋಟಾರ್ಸ್ʼ, ʻಮಹೀಂದ್ರಾʼ, ʻಟಿವಿಎಸ್ʼ, ʻರಾಯಲ್ ಎನ್ ಫೀಲ್ಡ್ʼ, ʻರೆನಾಲ್ಡ್ಸ್ʼ ಮತ್ತು ʻಬಾಷ್ʼ, ʻಯಮಹಾ ಮೋಟಾರ್ಸ್ ಇಂಡಿಯಾʼ, ʻಹೋಂಡಾ ಕಾರ್ ಇಂಡಿಯಾʼ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

 

*****



(Release ID: 2031293) Visitor Counter : 43