ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಫಾಕ್ಸ್‌ ಕಾನ್ ಇಂಡಿಯಾ ಆಪಲ್ ಐಫೋನ್ ಕೈಗಾರಿಕಾ ಘಟಕದಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶವಿಲ್ಲ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಗಮನಿಸಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ


ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸಂಪೂರ್ಣ ವರದಿ ಕೋರಲಾಗಿದೆ 

Posted On: 26 JUN 2024 6:25PM by PIB Bengaluru

ಫಾಕ್ಸ್‌ ಕಾನ್ ಇಂಡಿಯಾ ಆಪಲ್ ಐಫೋನ್ ಕೈಗಾರಿಕಾ ಘಟಕದಲ್ಲಿ  ವಿವಾಹಿತ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶವಿಲ್ಲ ಎಂಬ ವಿಷಯದ ಕುರಿತು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಗಮನಿಸಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.  ಈ ವರದಿಗಳ ಹಿನ್ನೆಲೆಯಲ್ಲಿ ಸಚಿವಾಲಯವು ತಮಿಳುನಾಡು ಸರ್ಕಾರದ ಕಾರ್ಮಿಕ ಇಲಾಖೆಯಿಂದ ಸವಿವರವಾದ ವರದಿಯನ್ನು ಕೋರಿದೆ.

ಪುರುಷ ಮತ್ತು ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಸಮಾನ ಗೌರವಧನ (ಸಂಭಾವನೆ) ಕಾಯಿದೆ, 1976 ರ ಸೆಕ್ಷನ್ 5ರಡಿಯಲ್ಲಿ ಯಾವುದೇ ತಾರತಮ್ಯವನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ.  ಈ ಕಾಯಿದೆಯ ನಿಬಂಧನೆಗಳ ಜಾರಿ ಮತ್ತು ಆಡಳಿತಕ್ಕೆ ರಾಜ್ಯ ಸರ್ಕಾರವು ಸೂಕ್ತ ಪ್ರಾಧಿಕಾರವಾಗಿರುವುದರಿಂದ ಈ ಘಟನೆ ಕುರಿತು ರಾಜ್ಯ ಸರ್ಕಾರದಿಂದ ವರದಿಯನ್ನು ಕೇಳಲಾಗಿದೆ. 

ಹಾಗೂ, ಇದೇ ಸಂದರ್ಭದಲ್ಲಿ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ವಾಸ್ತವಿಕ ವರದಿಯನ್ನು ಕೂಡಲೇ ಒದಗಿಸುವಂತೆ ತಮಿಳುನಾಡಿನ ಪ್ರಾದೇಶಿಕ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಗೆ ಸೂಚಿಸಲಾಗಿದೆ.

 

*****



(Release ID: 2028931) Visitor Counter : 15