ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಎಂಐಎಫ್ಎಫ್)-2024ರಲ್ಲಿ ಪ್ರಥಮ ಪ್ರದರ್ಶನ ಕಂಡ ಸಾಕ್ಷ್ಯಚಿತ್ರ "ಮೈ ಮರ್ಕ್ಯುರಿ"; ಈ ಚಲನಚಿತ್ರವು ಮರ್ಕ್ಯುರಿ  ದ್ವೀಪದ ಸಂರಕ್ಷಣೆಯನ್ನು ಅನ್ವೇಷಿಸುತ್ತದೆ


"ಚಿತ್ರದಲ್ಲಿ ಸಂಭವಿಸಿರುವ ಎಲ್ಲವೂ ನೈಜ ಘಟನೆಗಳಾಗಿವೆ" - ನಿರ್ದೇಶಕ ಜೋಯೆಲ್ ಚೆಸ್ಸೆಲೆಟ್

Posted On: 17 JUN 2024 9:04AM by PIB Bengaluru

ಸಾಕ್ಷ್ಯಚಿತ್ರ, ಸಣ್ಣ ಕಥೆ, ಕಾದಂಬರಿ ಮತ್ತು ಆನಿಮೇಷನ್ ಚಿತ್ರಗಳ ಪ್ರದರ್ಶನ ನೀಡುವ  18ನೇ ಆವೃತ್ತಿಯ ಮುಂಬೈ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌(ಎಂಐಎಫ್‌ಎಫ್) ನಲ್ಲಿಂದು "ಮೈ ಮರ್ಕ್ಯುರಿ" ಸಾಕ್ಷ್ಯಚಿತ್ರವು ಬೆಳ್ಳಿ ತೆರೆಯ ಮೇಲೆ ಅಂತಾರಾಷ್ಟ್ರೀಯ ಚೊಚ್ಚಲ ಪ್ರದರ್ಶನ ಕಂಡಿತು. ಜೋಯೆಲ್ ಚೆಸ್ಸೆಲೆಟ್ ನಿರ್ದೇಶಿಸಿದ, ಈ ಚಲನಚಿತ್ರವು ದಕ್ಷಿಣ ಆಫ್ರಿಕಾದ ನಮೀಬಿಯಾ ಕರಾವಳಿಯಲ್ಲಿರುವ ಮರ್ಕ್ಯುರಿ ದ್ವೀಪ(ಬಂಡೆಗಳಿಂದ ಆವೃತವಾಗಿರುವ ದ್ವೀಪ ಪ್ರದೇಶ)ದಲ್ಲಿ ಒಬ್ಬಂಟಿ ಪರಿಸರ ಸಂರಕ್ಷಣಾದಿನ ನಿರ್ದೇಶಕಿ ಯೆವ್ಸ್ ಚೆಸ್ಸೆಲೆಟ್ ಅವರ ಸಹೋದರನ ಜೀವನದಲ್ಲಿ ನಡೆದ ಆಳವಾದ ವೈಯಕ್ತಿಕ ಮತ್ತು ಸವಾಲಿನ ಪ್ರಯಾಣ ಅನುಭವದ ಕಥಾನಕವನ್ನು ಸಾರುತ್ತದೆ.

"ದ್ವೀಪದಲ್ಲಿ ವಾಸಿಸಲು, ನಿಮಗೆ ಒಂದು ನಿರ್ದಿಷ್ಟ ರೀತಿಯ ವ್ಯಕ್ತಿತ್ವ ಬೇಕೆ ಬೇಕು" ಎಂದು ಚೆಸ್ಸೆಲೆಟ್ ಹೇಳುತ್ತಾರೆ, ಜಗತ್ತಿನ ಶಬ್ದ ಮತ್ತು ವಿಪರೀತದಿಂದ ತಪ್ಪಿಸಿಕೊಳ್ಳುವ ತನ್ನ ಸಹೋದರನ ಬಯಕೆಯನ್ನು ಚಲನಚಿತ್ರ ಎತ್ತಿ ತೋರಿಸುತ್ತದೆ. 104 ನಿಮಿಷಗಳ ಈ ಸಾಕ್ಷ್ಯಚಿತ್ರವು ವೈವ್ಸ್ ಚೆಸ್ಸೆಲೆಟ್‌ನ ಅಸಾಧಾರಣ ಕಲ್ಪನೆಯ ಜಗತ್ತಿನಲ್ಲಿ ಹೆಜ್ಜೆ ಹಾಕುತ್ತದೆ. ಮರ್ಕ್ಯುರಿ ದ್ವೀಪ ಸಂರಕ್ಷಣೆಯ ಅವರ ಅಸಾಧಾರಾಣ ಪ್ರಯತ್ನಗಳು ಸಮುದ್ರ ಪಕ್ಷಿಗಳು ಮತ್ತು ನೀರು ನಾಯಿ(ಸೀಲುಗಳು) ಅವನ ಏಕೈಕ ಸಹಚರರಾಗುತ್ತವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ದ್ವೀಪವನ್ನು ಮರುಪಡೆಯಲು ಅವರ ಧೈರ್ಯಶಾಲಿ ಕಾರ್ಯಾಚರಣೆಯ ತ್ಯಾಗ, ವಿಜಯ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಆಳವಾದ ಬಂಧಗಳ ಸೆರೆಯಾಳುಗಳ ಕಥೆಯಾಗಿ ತೆರೆದುಕೊಳ್ಳುತ್ತದೆ. ಚಲನಚಿತ್ರವು ಅಳಿವಿನಂಚಿನಲ್ಲಿರುವ ಕಡಲ ಪಕ್ಷಿಗಳು ಮತ್ತು ಇತರ ವನ್ಯಜೀವಿಗಳು ನೀರು ನಾಯಿಗಳಿಂದ ಅಸ್ತಿತ್ವವಾದದ ಬೆದರಿಕೆಗಳನ್ನು ಎದುರಿಸುತ್ತಿವೆ.
 


18ನೇ ಆವೃತ್ತಿಯ ಎಂಐಎಫ್‌ಎಫ್‌ ಚಲನಚಿತ್ರೋತ್ಸವವು ಜೂನ್ 15ರಿಂದ ಆರಂಭವಾಗಿದ್ದು, 2024 ಜೂನ್ 21ರ ವರೆಗೆ ಮುಂಬೈನ ಪೆಡ್ಡರ್ ರಸ್ತೆಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಚಲನಚಿತ್ರ ವಿಭಾಗದ ಆವರಣದಲ್ಲಿ ನಡೆಯಲಿದೆ.

ನಿರ್ದೇಶಕರಾದ ಚೆಸ್ಸೆಲೆಟ್ ಅವರು "ಮೈ ಮರ್ಕ್ಯುರಿ"ಯನ್ನು ಪರಿಸರ-ಮಾನಸಿಕ ಪ್ರಜ್ಞೆಯ ಚಲನಚಿತ್ರ ಎಂದು ಬಣ್ಣಿಸಿದ್ದಾರೆ. ಅದು ಮಾನವರ ಸಂಕೀರ್ಣ ಮನಸ್ಸು ಮತ್ತು ಪ್ರಕೃತಿಯೊಂದಿಗೆ ನಮ್ಮ ಉಲ್ಲಾಸಕರ ಸಂಬಂಧವನ್ನು ಪರಿಶೋಧಿಸುತ್ತದೆ. "ಒಂದು ದ್ವೀಪವು ಸೀಮಿತ ಮತ್ತು ಸವಾಲಿನ ಸ್ಥಳವಾಗಿದೆ," ಅಂತಹ ವಾತಾವರಣವು ಮಾನಸಿಕ ಒತ್ತಡ ಮತ್ತು ಸಂಕಷ್ಟವನ್ನು ಉಂಟುಮಾಡುತ್ತದೆ ಎಂದು ಅವರು ಸೂಚಿಸಿದ್ದಾರೆ. "ಚಲನಚಿತ್ರದಲ್ಲಿ ಸಂಭವಿಸಿದ ಎಲ್ಲವೂ ನೈಜ ಘಟನೆಗಳೇ ಆಗಿವೆ," ಎಂದು ಚೆಸ್ಸೆಲೆಟ್ ಪ್ರತಿಪಾದಿಸಿದ್ದಾರೆ. ಕಾಣೆಯಾದ ತುಣುಕಿನ ಸ್ಥಳದಲ್ಲಿ ಕೆಲವು ಪುನರ್ರ್  ನಿರ್ಮಾಣಗಳನ್ನು ಮಾಡಲಾಗಿದೆ. ಚಿತ್ರದ ಕೇಂದ್ರ ಬಿಂದುವಾದ ಮರ್ಕ್ಯುರಿ ದ್ವೀಪವನ್ನು ನಾಯಕನಿಗೆ "ಆತ್ಮ ಸ್ಥಳ" ಎಂದು ಚಿತ್ರಿಸಲಾಗಿದೆ, ಅವನ ಸತತ ಪ್ರಯತ್ನಗಳ ಮೂಲಕ ಅದನ್ನು ಸ್ವರ್ಗವಾಗಿ ಮಾರ್ಪಡಿಸಲಾಗಿದೆ. ಚಿತ್ರದ ಶೀರ್ಷಿಕೆ, ಮೈ ಮರ್ಕ್ಯುರಿ, ದ್ವೀಪದೊಂದಿಗಿನ ಈ ನಿಕಟ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ.

 
ಪರಿಸರ ಸಮತೋಲನದಲ್ಲಿ ಮಾನವ ಮತ್ತು ಮಾನವೇತರ ಜೀವಿಗಳ ನಡುವಿನ ಸಂಕೀರ್ಣವಾದ ಪರಸ್ಪರ ಕ್ರಿಯೆಗೆ ಚೆಸ್ಸೆಲೆಟ್ ಒತ್ತು ನೀಡಿದ್ದಾರೆ. "ಮರ್ಕ್ಯುರಿ  ದ್ವೀಪದಿಂದ ಮಾನವನನ್ನು ಹೊರಹಾಕುವ ಪ್ರಕ್ರಿಯೆಯಿಂದ ನೀರು ನಾಯಿಗಳ ಸಂಖ್ಯೆ ಹೆಚ್ಚಾಗತೊಡಗಿತು, ಇದರ ಪರಿಣಾಮ, ಕಡಲ ಹಕ್ಕಿಗಳ ಸಂಖ್ಯೆ ಕಡಿಮೆಯಾಗತೊಡಗಿತು" ಎಂದು ಅವರು ವಿವರಿಸಿದ್ದಾರೆ. ಅತಿಯಾದ ಮೀನುಗಾರಿಕೆ ಕೂಡ ಸಮಸ್ಯೆಗೆ ಕೊಡುಗೆ ನೀಡುತ್ತದೆ. ಪರಿಸರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಜತೆಗೆ, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದು ಚಲನಚಿತ್ರ ಕರೆ ನೀಡುತ್ತದೆ, ಜನರು ಬಾಹ್ಯ ರಾಜಕೀಯ ಕಾಳಜಿಗಳನ್ನು ಮೀರಿ ಮುಂದಾಗಬೇಕು ಎಂದು ಅದು ಒತ್ತಾಯಿಸುತ್ತದೆ. "ನೈಸರ್ಗಿಕ ಜಗತ್ತನ್ನು ವಿವರಿಸುವಲ್ಲಿ ಭಾವನಾತ್ಮಕತೆ ರಚನಾತ್ಮಕವಾಗಿರಬೇಕಿಲ್ಲ. ಸೂಕ್ಷ್ಮ ಮತ್ತು ಸ್ಥೂಲ ಇಂದ್ರಿಯಗಳೆರಡರಲ್ಲೂ ಅರಿವು ಮುಖ್ಯವಾಗಿದೆ" ಎಂದು ನಿರ್ದೇಶಕರು ಹೇಳಿದ್ದಾರೆ.

 

ಚಲನಚಿತ್ರದ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸಿರುವ ಚೆಸ್ಸೆಲೆಟ್ ಅವರು,  ಎಲ್ಲವನ್ನೂ ಸಂವೇದನೆಗೊಳಿಸುವ ಮತ್ತು ಒತ್ತಾಯಿಸುವ ಉದ್ಯಮದ ಪ್ರವೃತ್ತಿಯನ್ನು ಚಲನಚಿತ್ರ ಒಪ್ಪಿಕೊಳ್ಳುತ್ತದೆ. "ಇದು ಸ್ಪರ್ಶದ ವಿಷಯವಾಗಿರುವುದರಿಂದ ಮತ್ತು ನಾಯಕ ನನ್ನ ಸ್ವಂತ ಸಹೋದರನಾಗಿರುವುದರಿಂದ, ನಾನು ಎಚ್ಚರಿಕೆಯಿಂದ ಹಾದಿ ತುಳಿಯಬೇಕಾಗಿದೆ" ಎಂದು ಅವರು ಹೇಳಿದರು.

ಮೈ ಮರ್ಕ್ಯುರಿಯ ಛಾಯಾಗ್ರಹಣ ನಿರ್ದೇಶಕ ಲಾಯ್ಡ್ ರಾಸ್, ನೀರು ನಾಯಿಗಳೊಂದಿಗೆ ವ್ಯವಹರಿಸುವ ನಾಯಕನ ಕಾರ್ಯ ವಿಧಾನಗಳಿಂದಾಗಿ ಚಿತ್ರವು ವಿವಾದಾತ್ಮಕ ಸ್ವರೂಪ ಪ್ರತಿಧ್ವನಿಸಿದೆ. ಇದರ ಹೊರತಾಗಿಯೂ ಪ್ರಕೃತಿ ಸಂರಕ್ಷಣಾ ಸಮುದಾಯವು ಚಿತ್ರಕ್ಕೆ ಬಲವಾದ ಬೆಂಬಲ ತೋರಿಸಿದೆ. ರಾಸ್ ದ್ವೀಪದಲ್ಲಿ ಚಿತ್ರೀಕರಣಕ್ಕೆ ಎದುರಿಸಿದ ಸಾಗಣೆ ಮತ್ತು ವ್ಯವಸ್ಥಾಪನಾ ಸವಾಲುಗಳನ್ನು ಅವರು ವಿವರಿಸಿದರು, "ಸಾಗರ ದಡದಲ್ಲಿ ಅಂದ ಚೆಂದ ಕಡಲತೀರಗಳಿಗೆ ಬದಲಾಗಿ, ಬಂಡೆಗಳೇ ಆವೃತವಾಗಿದ್ದರಿಂದ ದ್ವೀಪ ಪ್ರದೇಶಕ್ಕೆ  ಪ್ರವೇಶಿಸುವುದು ತುಂಬಾ ಒತ್ತಡ ಮತ್ತು ಕಷ್ಟಕರವಾಗಿತ್ತು" ಎಂದು ಅವರು ಹೇಳಿದ್ದಾರೆ.


 
 

ಮೈ ಮರ್ಕ್ಯುರಿ ಚಲನಚಿತ್ರವು ಚಿಂತನ-ಪ್ರಚೋದಕ ಸಾಕ್ಷ್ಯಚಿತ್ರವಾಗಿದ್ದು, ಅದು ನಿರ್ಣಾಯಕ ಪರಿಸರ ಸಂರಕ್ಷಣೆಯ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ ಮಾತ್ರವಲ್ಲದೆ, ಪ್ರಕೃತಿಯೊಂದಿಗೆ ಮಾನವ ಹೊಂದಿರುವ ಆಳವಾದ ಅಥವಾ ನಿಕಟ  ಸಂಪರ್ಕವನ್ನು ಪರಿಶೀಲಿಸುತ್ತದೆ.
 


*****



(Release ID: 2025913) Visitor Counter : 22