ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತದಲ್ಲಿ ನಿರ್ಮಾಣಕಾರರು/ರಚನಕಾರರು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ತಮ್ಮ ಉತ್ಪನ್ನಗಳನ್ನು ನೋಂದಾಯಿಸಬೇಕು ಎಂದು 'ಅನಿಮೇಷನ್ ಚಲನಚಿತ್ರಗಳ ಮೂಲಕ ಬೌದ್ಧಿಕ ಆಸ್ತಿಗಳನ್ನು ನಿರ್ಮಿಸುವುದು' ಕುರಿತ ಎಂಐಎಫ್ಎಫ್ ಪ್ಯಾನಲ್ ಚರ್ಚೆಯಲ್ಲಿ ತಜ್ಞರ ಸಲಹೆ
ಪ್ರಸಾರಕರು ದೇಶೀಯ/ಭಾರತೀಕರಣದ ವಿಷಯ ಸಾಮಗಿಯನ್ನು ಹುಡುಕುತ್ತಿದ್ದರು ಮತ್ತು ಆಗ ಛೋಟಾ ಭೀಮ್ ಬಂದಿತು : ಗ್ರೀನ್ ಗೋಲ್ಡ್ ಅನಿಮೇಷನ್ ಪ್ರೈವೇಟ್ ಲಿಮಿಟೆಡ್ ಸಿಇಒ ರಾಜೀವ್ ಚಿಲಾಕಾ
ತಮಿಳು ಅನಿಮೇಷನ್ ಚಿತ್ರ 'ಅಯಲಾನ್' ಹಿಂದಿ ಮತ್ತು ಇತರ ಭಾಷೆಗಳಲ್ಲಿ ಬರಲಿದೆ : ಚಿತ್ರದ ವಿಎಫ್ಎಕ್ಸ್ ಮೇಲ್ವಿಚಾರಕ ಬಿಜೋಯ್ ಅರ್ಪುತರಾಜ್
ಭಾರತೀಯ ಅನಿಮೇಷನ್ ಪಾತ್ರಗಳು ಭಾರತದ ಶ್ರೀಮಂತ ಇತಿಹಾಸದಿಂದ ರೂಪುಗೊಳ್ಳಬೇಕು ಎಂದು ಖ್ಯಾತ ಚಲನಚಿತ್ರ ವಿಮರ್ಶಕ ನಮನ್ ರಾಮಚಂದ್ರನ್
Posted On:
16 JUN 2024 6:02PM by PIB Bengaluru
ಭಾರತದಲ್ಲಿ, ನಿರ್ಮಾಣಕಾರರು/ರಚನಕಾರರು ತಮ್ಮ ಸೃಜನಶೀಲ ಉತ್ಪನ್ನಗಳನ್ನು ನೋಂದಾಯಿಸುವ ಮತ್ತು ಅದರ ಮೇಲೆ ಹಕ್ಕನ್ನು ಗಳಿಸುವ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಸೃಜನಶೀಲ ಉತ್ಪನ್ನದ ಮಾಲೀಕ ಅಥವಾ ಲೇಖಕರಾಗುವ ಮೂಲಕ, ವ್ಯಕ್ತಿಯು ನಕಲು ಅಥವಾ ಕಾನೂನು ಉಲ್ಲಂಘನೆಯ ವಿರುದ್ಧ ಕಾನೂನು ರಕ್ಷಣೆಯನ್ನು ಹೊಂದಬಹುದು ಎಂದು ಮನರಂಜನಾ ಕ್ಷೇತ್ರದ ಕಾನೂನು ತಜ್ಞ ಅನಾಮಿಕಾ ಝಾ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತದ ಅತ್ಯಂತ ಜನಪ್ರಿಯ ಅನಿಮೇಷನ್ ಪಾತ್ರಗಳ ಸೃಷ್ಟಿಕರ್ತ ರಾಜೀವ್ ಚಿಲಾಕಾ ಅವರು- ಛೋಟಾ ಭೀಮ್ ಕಡಿಮೆಯದನ್ನು ಒಪ್ಪುವುದು ಸಾಧ್ಯವಿಲ್ಲ! ಎಂದರೆ, ತಮಿಳು ಭಾಷೆಯ ವೈಜ್ಞಾನಿಕ ಚಲನಚಿತ್ರ 'ಅಯಲಾನ್' ನ ವಿಎಫ್ಎಕ್ಸ್ ಮೇಲ್ವಿಚಾರಕರಾಗಿದ್ದ ಬಿಜೋಯ್ ಅರ್ಪುತರಾಜ್, ಕಲ್ಪನೆಯ ಉಗಮದ ದಿನದಿಂದ ಸೃಷ್ಟಿಕರ್ತರು ತಮ್ಮ ಉತ್ಪನ್ನಗಳನ್ನು ನೋಂದಾಯಿಸಬೇಕು ಎಂದು ಆಗ್ರಹಿಸಿದರು. ಮುಂಬೈನಲ್ಲಿ ಇಂದು ನಡೆದ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ - 2024 ರ ಸಂದರ್ಭದಲ್ಲಿ 'ಅನಿಮೇಷನ್ ಫ್ರಾಂಟಿಯರ್ ಅನಾವರಣ: ಅನಿಮೇಷನ್ ಚಲನಚಿತ್ರಗಳ ಮೂಲಕ ಬೌದ್ಧಿಕ ಆಸ್ತಿಗಳನ್ನು ನಿರ್ಮಿಸುವುದು - ಕೇಸ್ ಸ್ಟಡಿ: ಅಯಲಾನ್ ಮತ್ತು ಛೋಟಾ ಭೀಮ್' ಕುರಿತ ಪ್ಯಾನಲ್ ಚರ್ಚೆಯ ಸಂದರ್ಭಗಳು ಈ ಸಂಭಾಷಣೆಗಳಿಗೆ ಸಾಕ್ಷಿಯಾದವು. ಎಫ್ಐಸಿಸಿಐಯಲ್ಲಿ ಎವಿಜಿಸಿ ವೇದಿಕೆಯ ಅಧ್ಯಕ್ಷರಾಗಿರುವ ಆಶಿಶ್ ಕುಲಕರ್ಣಿ ಈ ಮಹತ್ವದ ಚರ್ಚೆಗಳನ್ನು ನಡೆಸಿಕೊಟ್ಟರು. ಯು.ಕೆ. ಮೂಲದ ಚಲನಚಿತ್ರ ವಿಮರ್ಶಕ ನಮನ್ ರಾಮಚಂದ್ರನ್ ಅವರೂ ಈ ಪ್ಯಾನೆಲ್ ನಲ್ಲಿದ್ದು, ಭಾರತ ಮತ್ತು ಇತರೆಡೆಗಳಲ್ಲಿರುವ ಅನಿಮೇಷನ್ ಮಾರುಕಟ್ಟೆಯ ಬಗ್ಗೆ ಅವಲೋಕಿಸಿದರು.
ಗ್ರೀನ್ ಗೋಲ್ಡ್ ಅನಿಮೇಷನ್ ಪ್ರೈವೇಟ್ ಲಿಮಿಟೆಡ್ ನ ಸ್ಟುಡಿಯೋದಿಂದ ಪ್ರಾರಂಭವಾದ ಛೋಟಾ ಭೀಮ್, ಈ ವರ್ಷದ ಏಪ್ರಿಲ್ ತಿಂಗಳಲ್ಲಿ 16 ವರ್ಷಗಳನ್ನು ಪೂರೈಸಿದೆ ಎಂದ ರಾಜೀವ್ ಚಿಲಾಕಾ, ಈಗಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಮಕ್ಕಳ ಪಾತ್ರದ ವಿಕಾಸದ ಪ್ರಯಾಣದ ಬಗ್ಗೆ ಪ್ರೇಕ್ಷಕರಿಗೆ ವಿವರಿಸಿದರು. ಪಾತ್ರದ ಆರು ಸ್ಪಿನ್-ಆಫ್ ಗಳು ನಡೆದಿವೆ ಮತ್ತು ಛೋಟಾ ಭೀಮ್ ಸರಕುಗಳು ದೇಶಾದ್ಯಂತ ಉತ್ತಮವಾಗಿ ಮಾರಾಟವಾಗುತ್ತಿವೆ ಎಂದೂ ರಾಜೀವ್ ಚಿಲಾಕಾ ಹೇಳಿದರು. "ನಾನು ಆರಂಭದಲ್ಲಿಯೇ ಪಾತ್ರದ ಹಕ್ಕುಗಳನ್ನು ನೋಂದಾಯಿಸಿದ್ದೆ" ಎಂದು ಅವರು ಮಾಹಿತಿ ನೀಡಿದರು. ಛೋಟಾ ಭೀಮ್ ನ ಎಲ್ಲಾ ಆವೃತ್ತಿಗಳನ್ನು ಅಮೆಜಾನ್ ಖರೀದಿಸಿದ ನಂತರ, ತಮ್ಮ ಕಂಪನಿಯು ನೆಟ್ ಫ್ಲಿಕ್ಸ್ ಗಾಗಿ ಮೈಟಿ ಲಿಟಲ್ ಭೀಮ್ ಅನ್ನು ನಿರ್ಮಾಣ ಮಾಡಿತು ಎಂದು ಅವರು ಬಹಿರಂಗಪಡಿಸಿದರು, ಅಲ್ಲಿ ಸರಣಿಯು ನಾಲ್ಕು ಸೀಸನ್ ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದರು.
ಫ್ಯಾಂಟಮ್ ಎಫ್ಎಕ್ಸ್ ನಿರ್ದೇಶಕ ಬಿಜೋಯ್ ಅರ್ಪುತರಾಜ್, "ನಾವು ಅಯಲಾನ್ ಪಾತ್ರದ ಐಪಿಯನ್ನು ಹೊಂದುವುದನ್ನು ಬಯಸಲು ಒಂದು ದೊಡ್ಡ ಕಾರಣವೆಂದರೆ ಅದು ಮಾರಾಟವಾಗಬಲ್ಲದು ಮತ್ತು ಅದು ಹಣ ಗಳಿಸುತ್ತದೆ ಎಂಬ ನಮ್ಮ ವಿಶ್ವಾಸದ ಭಾವನೆ " ಎಂದು ಬಹಿರಂಗಪಡಿಸಿದರು. ಅದರ ಕೆಲಸವನ್ನು ಪ್ರಾರಂಭಿಸುವ ಮೊದಲು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅವರು ಪಡೆದರು. 'ಅಯಲಾನ್' ತೆಲುಗು ಆವೃತ್ತಿ ಈಗಾಗಲೇ ಹೊರಬಂದಿದ್ದು, ತಯಾರಕರು ಅದನ್ನು ಹಿಂದಿ ಮತ್ತು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಚಲನಚಿತ್ರವನ್ನು ಯೋಜಿಸುವಾಗ, ಅದು ಯಶಸ್ಸು ತರುತ್ತದೆಯೇ ಎಂಬುದು ನಿರ್ಮಾಪಕರಿಗೆ ಖಚಿತವಿರುವುದಿಲ್ಲ ಎಂದೂ ಶ್ರೀ ಅರ್ಪುತರಾಜ್ ವಿವರಿಸಿದರು. ಆದರೆ ಶ್ರೀ ಅರ್ಪುತರಾಜ್ ಮತ್ತು ಅವರ ತಂಡವು ಇದನ್ನು ಕಾರ್ಯರೂಪಕ್ಕೆ ತರಲು ಉತ್ಸುಕವಾಗಿತ್ತು ಏಕೆಂದರೆ ಇದು ಭಾರತೀಯ ಅನಿಮೇಷನ್ ಸೃಷ್ಟಿ ಮಾರುಕಟ್ಟೆಯ ಅನೇಕ ಮಿಥ್ಯೆಗಳನ್ನು ಮುರಿಯುತ್ತದೆ ಎಂಬ ವಿಶ್ವಾಸ ಅವರಿಗಿತ್ತು. ಮತ್ತು ಭಾರತೀಯ ವಿಎಫ್ಎಕ್ಸ್ ಮತ್ತು ಅನಿಮೇಷನ್ ಕಲಾವಿದರಿಗೆ ಇದು ಉದಾಹರಣೆಯಾಗಿ ನಿಂತಿದೆ. "ನಾವು ಈಗ ಅಯಲಾನ್ ಬಗ್ಗೆ ವ್ಯಂಗ್ಯಚಿತ್ರ ಸರಣಿಯನ್ನು ಮಾಡಲು ಯೋಜಿಸುತ್ತಿದ್ದೇವೆ ಮತ್ತು ಮುಂದಿನ ಸರಣಿಗಳಲ್ಲಿ ಜನರನ್ನು ಅಯಲಾನ್ ಅಥವಾ ಅನ್ಯಗ್ರಹಕ್ಕೆ ಕರೆದೊಯ್ಯುವ ಆಲೋಚನೆಯ ಬಗ್ಗೆಯೂ ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.
ಚಲನಚಿತ್ರ ವಿಮರ್ಶಕ ನಮನ್ ರಾಮಚಂದ್ರನ್ ಮಾತನಾಡಿ, ಕೋವಿಡ್ ನಂತರದ ಜಗತ್ತಿನಲ್ಲಿ ಜನರು ಹೆಚ್ಚು ಸ್ಥಳೀಯ ಮನರಂಜನಾ ಉತ್ಪನ್ನಗಳನ್ನು ಬಯಸುತ್ತಾರೆ. ಉದಾಹರಣೆಗೆ, ಭಾರತೀಯರು ನಾರ್ಕೋಸ್ ವೀಕ್ಷಿಸಲು ಬಯಸಿದರೆ, ಮೆಕ್ಸಿಕನ್ನರು ಮಿರ್ಜಾಪುರವನ್ನು ವೀಕ್ಷಿಸಲು ಬಯಸುತ್ತಾರೆ ಎಂದು ವಿವರಿಸಿದರು. ಈ ಹಿನ್ನೆಲೆಯಲ್ಲಿ, ಭಾರತೀಯ ಅನಿಮೇಷನ್ ಪಾತ್ರಗಳು ಭಾರತದ ಶ್ರೀಮಂತ ಇತಿಹಾಸದಿಂದ ರೂಪುಗೊಳ್ಳಬೇಕು ಎಂದು ತಾವು ಭಾವಿಸುವುದಾಗಿ ಅವರು ನುಡಿದರು.
ಭಾರತವು ಒಂದು ಬೃಹತ್ ಮಾರುಕಟ್ಟೆಯಾಗಿದ್ದು, ತಯಾರಕರು/ಉತ್ಪಾದಕರು ವಿಷಯ ಸಾಮಗ್ರಿಗಾಗಿ ವಿದೇಶದತ್ತ ನೋಡಬೇಕಾಗಿಲ್ಲ ಎಂದೂ ಅವರು ಹೇಳಿದರು. ವಿಚಾರಗಳು ಸ್ಥಳೀಯವಾಗಿ ಆಳವಾಗಿ ಬೇರೂರಿದಂತಹವಾಗಿರಬೇಕು ಎಂದು ಅವರು ಹೇಳಿದರು. ಪ್ರಸಾರಕರು ಭಾರತೀಕರಣಗೊಂಡ/ದೇಶೀಯವಾದ ವಿಷಯ ಸಾಮಗ್ರಿಯನ್ನು ಹುಡುಕುತ್ತಿರುತ್ತಾರೆ ಮತ್ತು ಛೋಟಾ ಭೀಮ್ ಹುಟ್ಟಿದ್ದು ಹೀಗೆ ಎಂದು ರಾಜೀವ್ ಚಿಲಾಕಾ ಮಾಹಿತಿ ನೀಡಿದರು. 2008 ರಲ್ಲಿ ಇದು ಮೊದಲ ಬಾರಿಗೆ ಪ್ರಸಾರವಾಯಿತು ಮತ್ತು ತಕ್ಷಣವೇ ಹಿಟ್ ಆಯಿತು.
'ಅಟಾರ್ನಿ ಫಾರ್ ಕ್ರಿಯೇಟರ್ಸ್' ಎಂಬ ಹೆಸರಿನಿಂದ ಕರೆಯಲ್ಪಡುವ ಕಾನೂನು ತಜ್ಞೆ ಅನಾಮಿಕಾ ಝಾ, ಅಧಿವೇಶನದಲ್ಲಿ ಭಾಗವಹಿಸಿದ ಉದಯೋನ್ಮುಖ ರಚನಕಾರರು/ನಿರ್ಮಾಣಕಾರರನ್ನು ಉದ್ದೇಶಿಸಿ ಮಾತನಾಡುತ್ತ "ನೀವು ನಿಮ್ಮ ಹೃದಯ ಮತ್ತು ಆತ್ಮವನ್ನು ಪಾತ್ರದಲ್ಲಿ ವಿಲೀನಗೊಳಿಸಿದ್ದರೆ್, ನೀವು ಅದರ ಐಪಿ ಹಕ್ಕುಗಳನ್ನು ಹೊಂದಿರಬೇಕು" ಎಂದು ಹೇಳಿದರು.
ಭಾರತದಲ್ಲಿ ಅನೇಕ ರಚನಕಾರರು ಮತ್ತು ಕಲಾಕಾರರು ತಮ್ಮ ಸೃಜನಶೀಲ ಉತ್ಪನ್ನಗಳ ಕೃತಿಸ್ವಾಮ್ಯದ ಬಗ್ಗೆ ಜಾಗೃತರಾಗುವ ಅಗತ್ಯವಿದೆ ಎಂದು ಶ್ರೀ ಆಶಿಶ್ ಕುಲಕರ್ಣಿ ಪುನರುಚ್ಚರಿಸಿದರು.
*****
(Release ID: 2025842)
Visitor Counter : 59