ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಖ್ಯಾತ ವನ್ಯಜೀವಿ ಚಲನಚಿತ್ರಗಳ ನಿರ್ಮಾಪಕರಾದ ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರನ್ನು 18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿ ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

Posted On: 15 JUN 2024 4:19PM by PIB Bengaluru

18ನೇ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು (ಎಂಐಎಫ್‌ ಎಫ್) ಪ್ರಸಿದ್ಧ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರಿಗೆ ಬಹು ನಿರೀಕ್ಷಿತ ವಿ.ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸುತ್ತಿದೆ ಎಂದು ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಇಂದು ಘೋಷಿಸಿದರು.

"ಈ ಆವೃತ್ತಿಯ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ನಾನು ಶ್ರೀ ನಲ್ಲಮುತ್ತು ಅವರನ್ನು ಅಭಿನಂದಿಸುತ್ತೇನೆ" ಎಂದು ಸಚಿವರು ಎನ್‌ಎಫ್‌ ಡಿಸಿ ಆವರಣದಲ್ಲಿ ಮಾಧ್ಯಮದವರೊಂದಿಗಿನ ಸಂವಾದದಲ್ಲಿ ಹೇಳಿದರು. ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರು ವನ್ಯಜೀವಿ ಚಲನಚಿತ್ರ ನಿರ್ಮಾಣದ ಕ್ಷೇತ್ರಕ್ಕೆ ನೀಡಿದ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಎಂಐಎಫ್‌ ಎಫ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡುತ್ತದೆ.

ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರು ವನ್ಯಜೀವಿ ಆಧಾರಿತ ಚಲನಚಿತ್ರಗಳ ನಿರ್ಮಾಣಕ್ಕೆ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆ, ಅದರಿಂದ ಅವರು ಪ್ರಪಂಚದಾದ್ಯಂತ ಮೆಚ್ಚುಗೆಯನ್ನು ಗಳಿಸಿದ್ದಾರೆ. ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು ʼಲಿವಿಂಗ್ ಆನ್ ದಿ ಎಡ್ಜ್‌ʼ ನಲ್ಲಿನ ಅವರ ಕಾರ್ಯಕ್ಕಾಗಿ ಅವರು ಮನ್ನಣೆ ಗಳಿಸಿದರು, ಇದು ಭಾರತದ ದೀರ್ಘಾವಧಿಯ ಪಾಂಡಾ ಪ್ರಶಸ್ತಿ ವಿಜೇತ ಪರಿಸರ ಸರಣಿಯಾಗಿದೆ. ಅವರ ಪರಿಣತಿಯಿಂದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯೊಂದಿಗೆ ಹೆಚ್ಚಿನ ವೇಗದ ಕ್ಯಾಮರಾಮನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಯಲ್ ಬೆಂಗಾಲ್ ಟೈಗರ್ ಬಗ್ಗೆ ಅವರ ಆಸಕ್ತಿಯು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ ಮತ್ತು ಬಿಬಿಸಿಗಾಗಿ ಐದು ಹುಲಿ ಕೇಂದ್ರಿತ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರಗಳಾಗಿವೆ. ಅವರ ಮೇರು ಚಲನಚಿತ್ರ ನಿರ್ಮಾಣಗಳಲ್ಲಿ  ಟೈಗರ್ ಡೈನಾಸ್ಟಿ (2012-2013), ಟೈಗರ್ ಕ್ವೀನ್ (2010) ಮತ್ತು ದಿ ವರ್ಲ್ಡ್ಸ್ ಮೋಸ್ಟ್ ಫೇಮಸ್ ಟೈಗರ್ (2017) ಸೇರಿವೆ. ಅವರು ಬಿಬಿಸಿ ವರ್ಲ್ಡ್‌ಗಾಗಿ ಅರ್ಥ್ ಫೈಲ್ (2000) ಮತ್ತು ಅನಿಮಲ್ ಪ್ಲಾನೆಟ್‌ಗಾಗಿ ದಿ ವರ್ಲ್ಡ್ ಗಾನ್ ವೈಲ್ಡ್ (2001) ನಂತಹ ಪರಿಸರ ಮತ್ತು ಮಾನವ ಮತ್ತು ಪರಿಸರ ವ್ಯವಸ್ಥೆಯ ನಡುವಿನ ಪರಸ್ಪರ ಕ್ರಿಯೆಯ ಕುರಿತು ಅಸಂಖ್ಯಾತ ಸಾಕ್ಷ್ಯಚಿತ್ರಗಳನ್ನು ಮಾಡಿದ್ದಾರೆ. ವನ್ಯಜೀವಿ ಛಾಯಾಗ್ರಹಣದಲ್ಲಿನ ಅವರ ಸಾಧನೆಗಳು ಭಾರತದಲ್ಲಿ ವನ್ಯಜೀವಿ ಚಿತ್ರೀಕರಣಕ್ಕಾಗಿ 4ಕೆ ರೆಸಲ್ಯೂಶನ್ ಅನ್ನು ಬಳಸಿದ ಮೊದಲ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಯನ್ನು ಒಳಗೊಂಡಿವೆ.

ಶ್ರೀ ಸುಬ್ಬಯ್ಯ ನಲ್ಲಮುತ್ತು ಅವರು ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಜಾಕ್ಸನ್ ಹೋಲ್ ವನ್ಯಜೀವಿ ಚಲನಚಿತ್ರೋತ್ಸವದ ಖಾಯಂ ತೀರ್ಪುಗಾರರ ಸದಸ್ಯರಾಗಿದ್ದಾರೆ ಮತ್ತು ಭಾರತೀಯ ಪನೋರಮಾ ಚಲನಚಿತ್ರೋತ್ಸವದ (2021) ತೀರ್ಪುಗಾರರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಿ ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿ ಕುರಿತು :

ಪ್ರತಿಷ್ಠಿತ ಡಾ. ವಿ ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರತಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಸಾಕ್ಷ್ಯಚಿತ್ರ ಚಲನಚಿತ್ರಗಳಿಗೆ ಮತ್ತು ಭಾರತದಲ್ಲಿ ಅದರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತಿರುವ ಚಲನಚಿತ್ರ ನಿರ್ಮಾಪಕರಿಗೆ ನೀಡಲಾಗುತ್ತದೆ. ಇದು 10 ಲಕ್ಷ ರೂಪಾಯಿ ನಗದು ಪ್ರಶಸ್ತಿ, ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿದೆ. ಹಿಂದಿನ ವರ್ಷಗಳಲ್ಲಿ ಪ್ರಶಸ್ತಿಯನ್ನು ಪಡೆದ ಇತರ ಪ್ರಸಿದ್ಧ ಪುರಸ್ಕೃತರಲ್ಲಿ ಶ್ಯಾಮ್ ಬೆನಗಲ್, ವಿಜಯ ಮುಲೆ ಮತ್ತು ಇತರ ಖ್ಯಾತ ಚಲನಚಿತ್ರ ನಿರ್ಮಾಪಕರು ಸೇರಿದ್ದಾರೆ. ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ವಿ ಶಾಂತಾರಾಮ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

*****

 



(Release ID: 2025589) Visitor Counter : 24