ಭೂವಿಜ್ಞಾನ ಸಚಿವಾಲಯ

ಭೂ ವಿಜ್ಞಾನ ಸಚಿವಾಲಯದ [ಸ್ವಾತಂತ್ರ್ಯ ನಿರ್ವಹಣೆ] ರಾಜ್ಯ ಸಚಿವರಾಗಿ ಪದಗ್ರಹಣ ಮಾಡಿದ ಡಾ. ಜಿತೇಂದ್ರ ಸಿಂಗ್

Posted On: 11 JUN 2024 4:58PM by PIB Bengaluru

ಕೇಂದ್ರ ಭೂ ವಿಜ್ಞಾನ ಖಾತೆ [ಸ್ವತಂತ್ರ್ಯ] ರಾಜ್ಯ ಸಚಿವರಾಗಿ [ಎಂಒಇಎಸ್] ಡಾ. ಜಿತೇಂದ್ರ ಸಿಂಗ್ ಅವರು ಇಂದು ನವದೆಹಲಿಯ ಮುಖ್ಯ ಕಚೇರಿ ಪೃಥ್ವಿ ಭವನದಲ್ಲಿಂದು ಪದಗ್ರಹಣ ಮಾಡಿದರು. ನೂತನ ಸಚಿವರನ್ನು ಎಂಒಇಎಸ್ ಕಾರ್ಯದರ್ಶಿ ಡಾ. ಎಂ. ರವಿಚಂದ್ರನ್, ಹಿರಿಯ ವಿಜ್ಞಾನಿಗಳು ಹಾಗೂ ಎಂಒಇಎಸ್ ಸಿಬ್ಬಂದಿ ಸ್ವಾಗತಿಸಿದರು.

ಡಾ. ಜಿತೇಂದ್ರ ಸಿಂಗ್ ಅವರು 2014 ರಿಂದ ನಿರಂತರವಾಗಿ ಎರಡು ಅವಧಿಗೆ ಈ ಖಾತೆಯನ್ನು ನಿರ್ವಹಿಸಿದ್ದರು. ಅವರು ಉದಂಪುರ್ ಲೋಕಸಭಾ ಕ್ಷೇತ್ರದ ಸದಸ್ಯರು. ಅವರು ವಿಜ್ಞಾನ ಮತ್ತು ತಂತ್ರಜ್ಞಾನ [ಸ್ವತಂತ್ರ್ಯ ನಿರ್ವಹಣೆ] ಖಾತೆ ರಾಜ್ಯ ಸಚಿವರು, ಪ್ರಧಾನಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರು, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದರು.

ಭೂ ವಿಜ್ಞಾನ ಸಚಿವಾಲಯದ [ಸ್ವಾತಂತ್ರ್ಯ ನಿರ್ವಹಣೆ] ರಾಜ್ಯ ಸಚಿವರಾಗಿ [ಎಂಒಇಎಸ್] ಪದಗ್ರಹಣ ಮಾಡಿದ ಡಾ. ಜಿತೇಂದ್ರ ಸಿಂಗ್

ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದರು. ಅವರು ತಮ್ಮ ಮೇಲೆ ನಂಬಿಕೆ ಇಟ್ಟು ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. “ನಮ್ಮ ಭೂ ಗ್ರಹ ಸವಾಲುಗಳನ್ನು ಎದುರಿಸುತ್ತಿದೆ ಮತ್ತು ದಿಟ್ಟ ಹಾಗೂ ವೈಜ್ಞಾನಿಕ ನಾವವವೀನ್ಯತೆಯ ಕ್ರಮಗಳು ಇದೀಗ ಅಗತ್ಯವಾಗಿವೆ. ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು, ಹವಾಮಾನ ಅಪಾಯಗಳನ್ನು ತಗ್ಗಿಸಲು, ದತ್ತಾಂಶ-ಚಾಲಿತ ನೀತಿ - ನಿರ್ಧಾರಗಳನ್ನು ಮುನ್ನಡೆಸಲು, ನಮ್ಮ ಜನರನ್ನು ಅಪಾಯಗಳಿಂದ ರಕ್ಷಿಸಲು ಮತ್ತು ಭವಿಷ್ಯದ ಪೀಳಿಗೆಗೆ ಪರಿಸರದ ಉಸ್ತುವಾರಿಯನ್ನು ಹೆಚ್ಚಿಸಲು ಭೂ ವಿಜ್ಞಾನದ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ಬದ್ಧರಾಗಿರಬೇಕು."  ಎಂದರು.

ಡಾ. ಜಿತೇಂದ್ರ ಸಿಂಗ್ ಅವರನ್ನು ಡಾ. ಎಂ. ರವಿಚಂದ್ರನ್ ಸ್ವಾಗತಿಸಿದರು

ತಮ್ಮ ಸ್ವಾಗತ ಭಾಷಣದಲ್ಲಿ ಡಾ. ಎಂ. ರವಿಚಂದ್ರನ್ ಮಾತನಾಡಿ, “ಡಾ.ಜಿತೇಂದ್ರ ಸಿಂಗ್ ಜೀ ಅವರ ನಾಯಕತ್ವದಡಿ ಭೂ ವಿಜ್ಞಾನ ಸಚಿವಾಲಯ ನಮ್ಮ ಗ್ರಹದ ಸಂಪನ್ಮೂಲಗಳ ಅಪಾರ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮತ್ತು ನಮ್ಮ ನಾಗರಿಕರ ಅಗತ್ಯಗಳನ್ನು ಪೂರೈಸುವ ಸವಾಲುಗಳನ್ನು ಪರಿಹರಿಸುವ ಗುರಿ ಹೊಂದಿದೆ. ಪರಿವರ್ತನೆಯ ಉಪಕ್ರಮಗಳ ಪಥವನ್ನು ಪ್ರಾರಂಭಿಸಲು ಸಜ್ಜಾಗಿದೆ. ಜನರಿಗೆ  ಮಾಹಿತಿ ನೀಡುವ ಮತ್ತು ಸಮುದಾಯ ಪುಟಿದೇಳುವಂತೆ ಮಾಡುವುದು ನಮ್ಮ ಧ್ಯೇಯವಾಗಿದೆ” ಎಂದರು. ಎಂಒಇಸ್ ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರು, ಜಂಟಿ ಕಾರ್ಯದರ್ಶಿ ಮತ್ತು ಇತರೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*****

 



(Release ID: 2024997) Visitor Counter : 20