ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್


ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಹುಡುಕುವ ಅವಶ್ಯಕತೆ ಇದೆ: ಶ್ರೀ ಗೋಯಲ್

ಶ್ರೀ ಗೋಯಲ್ ಅವರು ಇಲಾಖೆಗಳ ನಡುವೆ ಉತ್ತಮ ಸಮನ್ವಯತೆಯನ್ನು ಸಾಧಿಸುವ ಸಲುವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯ ಆಡಳಿತವನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸಲಹೆ ನೀಡಿದರು

ಉತ್ಪಾದಕತೆ-ಸಂಬಂಧಿತ ಪ್ರೋತ್ಸಾಹಕಗಳು ಮತ್ತು ನವೀನ ವಿದೇಶಿ ವ್ಯಾಪಾರ ಒಪ್ಪಂದಗಳಂತಹ ಹಿಂದಿನ ಉಪಕ್ರಮಗಳ ಯಶಸ್ಸನ್ನು ಅಳವಡಿಸಿಕೊಳ್ಳಬೇಕಾಗಿದೆ: ಶ್ರೀ ಗೋಯಲ್

ಭಾರತವು ಪ್ರಗತಿ ಸಾಧಿಸಲು ಗುಣಮಟ್ಟವನ್ನು ಮಂತ್ರವನ್ನಾಗಿಸಿಕೊಳ್ಳಲು ಸಚಿವಾಲಯದ ಅಧಿಕಾರಿಗಳಿಗೆ ಶ್ರೀ ಗೋಯಲ್ ಪ್ರೋತ್ಸಾಹಿಸಿದರು

Posted On: 11 JUN 2024 8:18PM by PIB Bengaluru

ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಇಂದು ನವದೆಹಲಿಯಲ್ಲಿ ಸತತವಾಗಿ ಎರಡನೇ ಬಾರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧಿಕಾರವನ್ನು ಅಧಿಕೃತವಾಗಿ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ನಂತರ, ಶ್ರೀ ಗೋಯಲ್ ಅವರು ತಕ್ಷಣವೇ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಎರಡೂ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ ಅವರೂ ಕೂಡಾ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ, ವಾಣಿಜ್ಯ ಕಾರ್ಯದರ್ಶಿ ಹಾಗೂ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಗಳ ಕಾರ್ಯದರ್ಶಿಗಳು ಸಚಿವಾಲಯದ ಪ್ರಸ್ತುತ ಪ್ರಸ್ತಾವನೆಗಳು ಮತ್ತು ಕಾರ್ಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

 

ನಿರಂತರ ಸಹಯೋಗದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಶ್ರೀ ಗೋಯಲ್ ಅವರು ಅಂತಿಮಗೊಳಿಸಬೇಕಾದ ವಿವಿಧ ನೀತಿಗಳು ಮತ್ತು ಕ್ರಿಯಾ ವಿಷಯಗಳನ್ನು ಪರಿಶೀಲಿಸಲು ಮುಂದಿನ ದಿನಗಳಲ್ಲಿ ಸರಣಿ ಸಭೆಗಳನ್ನು ಆಯೊಜಿಸುವ ನಿರ್ಧಾರದ ಬಗ್ಗೆ ವಿಮರ್ಶಿಸಿ, ನಿರ್ದೇಶಿಸಿದರು.

ಪ್ರಧಾನಿ ಮೋದಿಯವರ ಬಗ್ಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶ್ರೀ ಪಿಯೂಷ್ ಗೋಯಲ್ ಅವರು, "ಪ್ರಧಾನಿ ಮೋದಿಯವರ ಮೂರನೇ ಆಡಳಿತಾಧಿಯಲ್ಲಿ ಭಾಗವಾಗಲು ನಾನು ಸಂತೋಷಪಡುತ್ತೇನೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಉತ್ತರ ಮುಂಬೈ ಜನರಿಗೆ ಕೃತಜ್ಞನಾಗಿದ್ದೇನೆ. ಅಧಿಕಾರ ವಹಿಸಿಕೊಂಡ ಈ ಸಂದರ್ಭದಲ್ಲಿ, ನಾನು ಬಹಳಷ್ಟು ಹೊಸತನದೊಂದಿಗೆ ನಿಮ್ಮ ಬಳಿಗೆ ಮರಳಿ ಬರುತ್ತೇನೆ. ಭಾರತದ ಬಗ್ಗೆ ಮತ್ತು ನೆಲದ ಶೂನ್ಯದ ಬಗ್ಗೆ ಸಾಕಷ್ಟು ಹೊಸ ದೃಷ್ಟಿಕೋನಗಳೊಂದಿಗೆ ನಿಮ್ಮನ್ನು ಭೇಟಿಯಾಗಲಿದ್ದೇನೆ" ಎಂದು ಸಂತಸ ವ್ಯಕ್ತಪಡಿಸಿದರು.

ಇಲಾಖೆಗಳ ನಡುವೆ ಆತ್ಮಾವಲೋಕನ ಮತ್ತು ಉತ್ತಮ ಸಮನ್ವಯದ ಅಗತ್ಯವನ್ನು ಶ್ರೀ ಪಿಯೂಷ್ ಗೋಯಲ್ ಅವರು ಒತ್ತಿಹೇಳಿದರು. ಶ್ರೀ ಪಿಯೂಷ್ ಗೋಯಲ್ ಅವರು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಆಡಳಿತದ ಮಾದರಿಯನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಸಮಗ್ರತೆ, ವೇಗ, ಕೌಶಲ್ಯ ಮತ್ತು ಪ್ರಮಾಣದತ್ತ ಗಮನ ಹರಿಸುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು. ರಫ್ತು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸ್ಥಳೀಯ ಮೌಲ್ಯವರ್ಧನೆ ಮತ್ತು ರಫ್ತುಗಳ ಸಮಿತಿ ಮತ್ತು ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳನ್ನು ಅವುಗಳ ಸಂಪೂರ್ಣ ಸಾಮರ್ಥ್ಯಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಗೋಯಲ್ ತಮ್ಮ ಹಿಂದಿನ ಅವಧಿಯ ಸಾಧನೆಗಳನ್ನು ಎತ್ತಿ ತೋರಿಸುತ್ತಾ, ಭಾರತದಿಂದ ಒಟ್ಟಾರೆ ರಫ್ತುಗಳ ಉತ್ತೇಜನ, ವಿವಿಧ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವುದು, ದೇಶಕ್ಕೆ ವಿದೇಶಿ ನೇರ ಹೂಡಿಕೆಯ ಗಮನಾರ್ಹ ಒಳಹರಿವು ಇತ್ಯಾದಿಗಳನ್ನು ಉಲ್ಲೇಖಿಸಿದರು. ಭಾರತದ ಪ್ರಗತಿಯುನ್ನು ಸ್ಥಿರಗೊಳಿಸುವ ಚಾಲನೆಯ ನವೀಕೃತ ಬದ್ಧತೆಯೊಂದಿಗೆ, ಆರ್ಥಿಕ ಬೆಳವಣಿಗೆ ಮತ್ತು ಅಂತರಾಷ್ಟ್ರೀಯ ವ್ಯಾಪಾರವನ್ನು ಉತ್ತೇಜಿಸುವ ಸಲುವಾಗಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವನ್ನು ನವೀನ ಉನ್ನತಿಗೆ ಕೊಂಡೊಯ್ಯುವ ಭರವಸೆಯನ್ನು ಸಚಿವರು ವ್ಯಕ್ತಪಡಿಸಿದರು.

ಭಾರತದ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಗುಣಮಟ್ಟವನ್ನು ಮಂತ್ರವನ್ನಾಗಿ ಮಾಡಿಕೊಳ್ಳುವಂತೆ ಶ್ರೀ ಗೋಯಲ್ ಅವರು ಸಚಿವಾಲಯದ ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು. ರಫ್ತು ಮತ್ತು ಆಮದುಗಳಲ್ಲಿ ಡೇಟಾದ ಸಕಾಲಿಕ ಹಂಚಿಕೆ ಮತ್ತು ಪಾರದರ್ಶಕತೆಯು ಹೂಡಿಕೆದಾರರನ್ನು ಹೆಚ್ಚು ವಿಶ್ವಾಸದಿಂದ ಹೂಡಿಕೆ ಮಾಡಲು ಆಕರ್ಷಿಸಿ, ಅವರನ್ನು ಹೂಡಿಕೆಗೆ ಉತ್ತೇಜಿಸುತ್ತದೆ ಎಂದು ಶ್ರೀ ಗೋಯಲ್ ಉಲ್ಲೇಖಿಸಿದರು. ಭಾರತಕ್ಕೆ ಇದು ಸೂಕ್ತ ಕಾಲವಾಗಿದ್ದು, ನಮ್ಮ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಇದು ಸರಿಯಾದ ಸಮಯ ಎಂದು ಅವರು ಹೇಳಿದರು.

*****
 



(Release ID: 2024940) Visitor Counter : 26