ಪಂಚಾಯತ್ ರಾಜ್ ಸಚಿವಾಲಯ
ಶ್ರೀ ರಾಜೀವ್ ರಂಜನ್ ಸಿಂಗ್ ಅವರು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಅಧಿಕಾರ ವಹಿಸಿಕೊಂಡರು
ರಾಜ್ಯ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ಮತ್ತು ಪ್ರೊ.ಎಸ್.ಪಿ. ಸಿಂಗ್ ಬಘೇಲ್ ಅವರು ಸಹ ಅಧಿಕಾರ ವಹಿಸಿಕೊಂಡರು
ಪ್ರಕಟಣಾ ದಿನಾಂಕ:
11 JUN 2024 5:24PM by PIB Bengaluru
ಶ್ರೀ ರಾಜೀವ್ ರಂಜನ್ ಸಿಂಗ್ ಅವರು ಇಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನರೇಂದ್ರ ಮೋದಿಯವರ ಸರ್ಕಾರದ ದೂರದೃಷ್ಟಿ ಮತ್ತು ನೀತಿಗಳ ಅನುಷ್ಠಾನದಲ್ಲಿ ನಿರಂತರತೆ ಇರುತ್ತದೆ ಎಂದರು. ಈ ದೃಷ್ಟಿಕೋನದ ಅನುಷ್ಠಾನದಲ್ಲಿ ಕಂಡುಬರುವ ಯಾವುದೇ ಅಡೆತಡೆಯನ್ನು ನಿವಾರಿಸುವುದರ ಮೇಲೆ ತಮ್ಮ ಗಮನವಿರುತ್ತದೆ ಎಂದು ಶ್ರೀ ಸಿಂಗ್ ಹೇಳಿದರು.

ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರಾಗಿ ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರಾಗಿ ಶ್ರೀ ಜಾರ್ಜ್ ಕುರಿಯನ್ ಅವರು ಸಹ ಅಧಿಕಾರ ವಹಿಸಿಕೊಂಡರು. ಗೌರವಾನ್ವಿತ ಸಚಿವರನ್ನು ಇಲಾಖೆಯ ಕಾರ್ಯದರ್ಶಿಗಳು ಮತ್ತು ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

*****
(ಪ್ರಕಟಣೆ ಐ.ಡಿ.: 2024784)
ವಿಸಿಟರ್ ಕೌಂಟರ್ : 78