ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಮಾಲ್ಡೀವ್ಸ್ ಅಧ್ಯಕ್ಷ
Posted On:
10 JUN 2024 6:16PM by PIB Bengaluru
ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರಾದ ಡಾ. ಮೊಹಮ್ಮದ್ ಮುಯಿಝು ಅವರು ಇಂದು (ಜೂನ್ 10, 2024ರಂದು) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.
ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ಡಾ. ಮುಯಿಝು ಅವರನ್ನು ಸ್ವಾಗತಿಸಿದ ರಾಷ್ಟ್ರಪತಿಯವರು, ಹೊಸದಾಗಿ ರಚನೆಯಾದ ಸರ್ಕಾರಕ್ಕೆ ಮತ್ತು ಮಾಲ್ಡೀವ್ಸ್ ಜನತೆಗೆ ಶುಭಾಶಯಗಳನ್ನು ಕೋರಿದರು. ಅಧ್ಯಕ್ಷ ಡಾ. ಮುಯಿಝು ಅವರ ನಾಯಕತ್ವದಲ್ಲಿ ಮಾಲ್ಡೀವ್ಸ್ ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಭಯ ನಾಯಕರು ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಮತ್ತು ಬಹುಮುಖಿ ಸಂಬಂಧಗಳನ್ನು ಚರ್ಚಿಸಿ, ಜನರ ನಡುವಿನ ಸಂಪರ್ಕ, ಸಾಮರ್ಥ್ಯ ವರ್ಧನೆಗೆ ಸಹಕಾರ, ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು ಮತ್ತು ಅಭಿವೃದ್ಧಿ ಸಹಕಾರ ಸೇರಿದಂತೆ ತಮ್ಮ ವ್ಯಾಪಕ ಶ್ರೇಣಿಯ ದ್ವಿಪಕ್ಷೀಯ ಸಹಕಾರದ ಪ್ರಮುಖ ಮಜಲುಗಳ ಬಗ್ಗೆ ಚರ್ಚಿಸಿದರು.
ಮುಂಬರುವ ವರ್ಷಗಳಲ್ಲಿ ಭಾರತ ಹಾಗೂ ಮಾಲ್ಡೀವ್ಸ್ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ ಎಂಬ ಭರವಸೆಯನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವ್ಯಕ್ತಪಡಿಸಿದರು.
*****
(Release ID: 2023871)
Visitor Counter : 48