ಪ್ರಧಾನ ಮಂತ್ರಿಯವರ ಕಛೇರಿ

“ತಾಯಿಯ ಹೆಸರಲ್ಲಿ ಒಂದು ವೃಕ್ಷ” - 'Ek Ped Maa Ke Naam'  ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ


ದೆಹಲಿಯ ಬುದ್ಧ ಜಯಂತಿ ಪಾರ್ಕ್ ನಲ್ಲಿ ಪೀಪಲ್ ಟ್ರೀ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

Posted On: 05 JUN 2024 2:21PM by PIB Bengaluru

ವಿಶ್ವಪರಿಸರ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ತಾಯಿಯ ಹೆಸರಲ್ಲಿ ಒಂದು ವೃಕ್ಷ” - 'Ek Ped Maa Ke Naam' ಅಭಿಯಾನಕ್ಕೆ ಚಾಲನೆ ನೀಡಿದರು. ದೆಹಲಿಯ ಬುದ್ಧ ಜಯಂತಿ ಪಾರ್ಕ್ ನಲ್ಲಿ ಶ್ರೀ ನರೇಂದ್ರ ಮೋದಿ ಅವರು ಪೀಪಲ್ ಟ್ರೀ ಗಿಡ ನೆಟ್ಟರು. ನಮ್ಮ ಗ್ರಹವನ್ನು ಉತ್ತಮಗೊಳಿಸುವಲ್ಲಿ ಎಲ್ಲರೂ ಕೊಡುಗೆ ನೀಡುವಂತೆ ಅವರು ಒತ್ತಾಯಿಸಿದ್ದಾರೆ ಮತ್ತು ಕಳೆದ ದಶಕದಲ್ಲಿ ಭಾರತ ಹಲವಾರು ಸಾಮೂಹಿಕ ಪ್ರಯತ್ನಗಳನ್ನು ಕೈಗೊಂಡಿದೆ. ಇದು ರಾಷ್ಟ್ರದಾದ್ಯಂತ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಕಾರಣವಾಗಿದೆ. ಸುಸ್ಥಿರ ಅಭಿವೃದ್ಧಿಯತ್ತ ನಮ್ಮ ಅನ್ವೇಷಣೆಗೆ ಇದು ಉತ್ತಮ ಮಾರ್ಗವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಪೋಸ್ಟ್ ಮಾಡಿದ್ದಾರೆ.

“ಇಂದು ವಿಶ್ವಪರಿಸರ ದಿನ. ಇಂದು “ತಾಯಿಯ ಹೆಸರಲ್ಲಿ ಒಂದು ವೃಕ್ಷ” ಅಭಿಯಾನ ಆರಂಭಿಸಲು ತಮಗೆ ಸಂತಸವಾಗುತ್ತಿದೆ. ಭಾರತ ಮತ್ತು ಜಗತ್ತಿನಾದ್ಯಂತ ಪ್ರತಿಯೊಬ್ಬರು ತಮ್ಮ ತಾಯಿಗೆ ಕೊಡುಗೆ ನೀಡಬೇಕು. ಪ್ರತಿಯೊಬ್ಬರೂ ಗಿಡವೊಂದನ್ನು ನೆಡುವಂತೆ ಕರೆ ನೀಡುತ್ತಿದ್ದೇನೆ. ನಂತರ ಈ ಕುರಿತಾದ ಚಿತ್ರವೊಂದನ್ನು #Plant4Mother ಅಥವಾ #एक_पेड़_माँ_के_नाम.” ನಲ್ಲಿ ಪೋಸ್ಟ್ ಮಾಡುವಂತೆ ಸಲಹೆ ಮಾಡಿದ್ದಾರೆ.

ಇದನ್ನು ಬಳಸಿಕೊಂಡು ನೀವು ಮಾಡುತ್ತಿರುವ ಚಿತ್ರವನ್ನು ಹಂಚಿಕೊಳ್ಳಿ. “ಈ ಬೆಳಿಗ್ಗೆ, ನಾನು ತಾಯಿಯಾದ ಪ್ರಕೃತಿಯನ್ನು ರಕ್ಷಿಸುವ ಮತ್ತು ಸುಸ್ಥಿರ ಜೀವನಶೈಲಿಯ ಆಯ್ಕೆಗಳನ್ನು ಮಾಡುವ ನಮ್ಮ ಬದ್ಧತೆಗೆ ಅನುಗುಣವಾಗಿ ಗಿಡವನ್ನು ನೆಟ್ಟಿದ್ದೇನೆ. ನಮ್ಮ ಗ್ರಹವನ್ನು ಉತ್ತಮಗೊಳಿಸಲು ನಿಮ್ಮೆಲ್ಲರಿಗೂ ಕೊಡುಗೆ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ. #Plant4Mother #एक_पेड़_माँ_के_नाम”.

“ಕಳೆದ ದಶಕದಲ್ಲಿ ನಾವು ಕೈಗೊಂಡ ಹಲವಾರು ಕ್ರಮಗಳಿಂದಾಗಿ ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದು, ಇದರಿಂದ ನಿಮಗೆಲ್ಲರಿಗೂ ಸಂತಸವಾಗಿದೆ. ಸುಸ್ಥಿರ ಅಭಿವೃದ್ಧಿಯತ್ತ ಇದು ನಮ್ಮ ಪ್ರಮುಖ ಅನ್ವೇಷಣೆಯಾಗಿದೆ. ಸ್ಥಳೀಯ ಸಮುದಾಯಗಳು ಹೇಗೆ ಈ ಸಂದರ್ಭಕ್ಕೆ ತಕ್ಕಂತೆ ಕ್ರಮ ಕೈಗೊಂಡಿವೆ. ಇದರಲ್ಲಿ ಮುಂದಾಳತ್ವ ವಹಿಸಿರುವುದು ಸಹ ಶ್ಲಾಘನೀಯವಾಗಿದೆ.” ಎಂದು ಹೇಳಿದ್ದಾರೆ.

 “आज विश्व पर्यावरण दिवस पर मुझे #एक_पेड़_माँ_के_नाम अभियान शुरू कर अत्यंत प्रसन्नता हो रही है। मैं देशवासियों के साथ ही दुनियाभर के लोगों से आग्रह करता हूं कि वे अपनी माँ के साथ मिलकर या उनके नाम पर एक पेड़ जरूर लगाएं। ये आपकी तरफ से उन्हें एक अनमोल उपहार होगा। इससे जुड़ी तस्वीर आप #Plant4Mother, #एक_पेड़_माँ_के_नाम के साथ जरूर साझा करें।”

 

*****



(Release ID: 2022843) Visitor Counter : 54