ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಸಮಾನತೆಯ ವಿಷಯದಲ್ಲಿ ಭಾರತಕ್ಕೆ ಜಗತ್ತಿನ ಯಾರಿಂದಲೂ ಯಾವುದೇ ಧರ್ಮೋಪದೇಶದ ಅಗತ್ಯವಿಲ್ಲ - ಉಪರಾಷ್ಟ್ರಪತಿ


ಕೆಲವು ದೇಶಗಳು ಇನ್ನೂ ಮಹಿಳಾ ಅಧ್ಯಕ್ಷರನ್ನು ಹೊಂದಿಲ್ಲ, ಆದರೆ ನಾವು ಬಹಳ ಹಿಂದೆಯೇ ಒಬ್ಬ ಮಹಿಳೆಯನ್ನು ಪ್ರಧಾನಿಯನ್ನಾಗಿ ಮಾಡಿದ್ದೇವೆ- ವಿಪಿ

ಸಿಎಎ ತಾರತಮ್ಯವೆಸಗುವುದಿಲ್ಲ ಬದಲಾಗಿ ಇದು ನಮ್ಮ ನೆರೆಹೊರೆ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಸಾಂತ್ವನ ನೀಡುತ್ತದೆ - ವಿಪಿ

ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಯಲ್ಲಿ ನಮ್ಮ ನೌಕಾಪಡೆಯ ಸಾಧನೆಯ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಇದೆ- ವಿಪಿ

ದೇಶದ ಸಿವಿಲ್ ಸರ್ವೆನ್ಟ್ಸ್ ಗಳಿಗೆ ಸೇವಾಭಾವ ಮತ್ತು ಸಹಾನುಭೂತಿಯೊಂದಿಗೆ ಕೆಲಸ ಮಾಡುವಂತೆ ಉಪರಾಷ್ಟ್ರಪತಿಗಳು ಕರೆ ಕೊಟ್ಟರು

2023 ರ ಬ್ಯಾಚ್ IAS ಟ್ರೈನಿ ಅಧಿಕಾರಿಗಳ ಮೊದಲ ಹಂತದ ವೃತ್ತಿಪರ ಕೋರ್ಸ್‌ನ ಹಂತ-I ರ ಮುಕ್ತಾಯ ಸಮಾರಂಭದಲ್ಲಿ ಉಪರಾಷ್ಟ್ರಪತಿಗಳು ಮಾತನಾಡಿದರು

Posted On: 05 APR 2024 4:03PM by PIB Bengaluru

ಸಮಾನತೆಯ ವಿಷಯದಲ್ಲಿ ಭಾರತಕ್ಕೆ ಈ ಜಗತ್ತಿನ ಯಾರಿಂದಲೂ ಯಾವುದೇ ಧರ್ಮೋಪದೇಶದ ಅಗತ್ಯವಿಲ್ಲ. ಏಕೆಂದರೆ ನಾವು ಯಾವಾಗಲೂ ಸಮಾನತೆಯ ಬಗ್ಗೆ ನಂಬಿಕೆಯುಳ್ಳವರಾಗಿದ್ದೇವೆ ಎಂದು ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಇಂದು ಪ್ರತಿಪಾದಿಸಿದರು. ಬೇರೆ ದೇಶಗಳಿಗೆ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಹೇಳಿದ ಅವರು, “ಜಗತ್ತಿನ ಕೆಲವು ದೇಶಗಳು ಇನ್ನೂ ಮಹಿಳಾ ಅಧ್ಯಕ್ಷರನ್ನು ಹೊಂದಿಲ್ಲ, ಆದರೆ  ನಾವು ಯುಕೆಗಿಂತ ಮೊದಲೇ ಒಬ್ಬ ಮಹಿಳೆಯನ್ನು ಪ್ರಧಾನ ಮಂತ್ರಿ ಮಾಡಿದ್ದೇವೆ. ಕೆಲವು ದೇಶಗಳ ಸರ್ವೋಚ್ಚ ನ್ಯಾಯಾಲಯಾಗಳು ಮಹಿಳಾ ನ್ಯಾಯಾಧೀಶರಿಲ್ಲದೆ 200 ವರ್ಷಗಳನ್ನು ಪೂರೈಸಿವೆ. ಆದರೆ ಭಾರತ ಹಾಗಲ್ಲ. ನಮ್ಮಲ್ಲಿ  ಹಲವಾರು ಮಹಿಳೆಯರು ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದಾರೆ.

 

 

ದೇಶದ ಕಾನೂನನ್ನು ಪರಿಪಾಲನೆ ಮಾಡುವೆ ಬಗ್ಗೆ, ನಮ್ಮ ದೇಶದ ಕ್ರಿಯಾತ್ಮಕ ನ್ಯಾಯ ವ್ಯವಸ್ಥೆ ಬಗ್ಗೆ  ಅಥವಾ ಬಡತನವನ್ನು ಹೋಗಲಾಡಿಸುವ ಮಾರ್ಗದ ಕುರಿತು ನಮಗೆ ಯಾವುದೇ ದೇಶಗಳು ಪಾಠ ಮಾಡುವ ಅವಶ್ಯಕತೆ ಇಲ್ಲ ಎಂದು ನಾನು ಭಾವಿಸಿದ್ದೇನೆ. ಬೇರೆಯವರು ನಮ್ಮನ್ನು ಮಾಪನ ಮಾಡಲು ನಾವು ಅವಕಾಶ ಕೊಡಲಾರೆವು. ಕಾರಣ ಇಷ್ಟೇ, ಅವರಿಗೆ ಈ ದೇಶ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಅರಿಯವ ಸಾಮರ್ಥ್ಯವಾಗಲೀ ಅಥವಾ ಸಂಪನ್ನೂಲವಾಗಲಿ ಇಲ್ಲ.  ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸುಳ್ಳು ನಿರೂಪಣೆ ಮತ್ತು ತಪ್ಪು ಮಾಹಿತಿಯ  ಹರಡುತ್ತಿರುವವರ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಕರೆ ನೀಡಿದ ಶ್ರೀ ಧನಕರ್, CAA ಯಾವುದೇ ಭಾರತೀಯ ನಾಗರಿಕನ ಪೌರತ್ವವನ್ನು ಕಸಿದುಕೊಳ್ಳುವುದಾಗಲೀ  ಅಥವಾ ಯಾವುದೇ ವ್ಯಕ್ತಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವುದನ್ನು  ನಿರ್ಬಂಧಿಸುವುದಾಗಲಿ ಮಾಡುವುದಿಲ್ಲ ಎಂದು ಒತ್ತಿ ಹೇಳಿದರು. ನೆರೆಯ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವವನ್ನು ಪಡೆಯಲು ಸಿಎಎ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದ ಅವರು, "ನಮ್ಮ ನೆರೆಯ ರಾಷ್ಟ್ರಗಳಲ್ಲಿ  ಅವರ ಧರ್ಮದ ಕಾರಣದಿಂದಾಗಿ ಕಿರುಕುಳಕ್ಕೊಳಗಾದವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ಈ ಕಾನೂನು ಹೇಗೆ ತಾರತಮ್ಯ  ಮಾಡಲು ಸಾಧ್ಯ?" ಎಂದು ಅವರು ಕೇಳಿದರು. 

 

 

ಡಿಸೆಂಬರ್ 31, 2014 ರಂದು  ಅಥವಾ ಅದಕ್ಕೂ ಮೊದಲು ಭಾರತಕ್ಕೆ ವಲಸೆ ಬಂದವರಿಗೆ ಮಾತ್ರ CAA ಅನ್ವಯಿಸುತ್ತದೆ ಎಂದು ಹೇಳಿದ ಅವರು ಇದು ಬೇರೆ ದೇಶಗಳಿಂದ ಭಾರತಕ್ಕೆ ಬರುವವರಿಗೆ ಆಹ್ವಾನವಲ್ಲ ಎಂದು ಒತ್ತಿ ಹೇಳಿದರು. “ನಾವು ಇಂತಹ ನಿರೂಪಣೆಗಳನ್ನು ತಟಸ್ಥಗೊಳಿಸಬೇಕಾಗಿದೆ. ಇವುಗಳು ಕೇವಲ ಅಜ್ಞಾನದಿಂದ  ಮಾತ್ರ ಹೊರಹೊಮ್ಮುವುದಿಲ್ಲ ನಮ್ಮ ರಾಷ್ಟ್ರವನ್ನು ನಾಶಮಾಡುವ  ಮತ್ತು ಕೀಳಾಗಿ ಬಿಂಬಿಸುವ ತಂತ್ರದ ಭಾಗವಾಗಿವೆ, ”ಎಂದು ಅವರು ಎಚ್ಚರಿಸಿದರು. 

ಇಂದು ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ 2023 ರ ಬ್ಯಾಚ್ ಐಎಎಸ್ ಟ್ರೈನಿ ಅಧಿಕಾರಿಗಳ ಮೊದಲ ಹಂತದ ವೃತ್ತಿಪರ ಕೋರ್ಸ್‌ನ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಕಳಂಕಗೊಳಿಸುವ ಇಂತಹ ವ್ಯವಸ್ಥಿತ  ಮತ್ತು ಸತ್ಯಕ್ಕೆ ದೂರವಾದ ದೇಶ ವಿರೋಧಿ ಶಕ್ತಿಗಳನ್ನು ತಿರಸ್ಕರಿಸುವಂತೆ ಯುವ ಜನತೆಗೆ ಕರೆ ನೀಡಿದರು. 

ಇತ್ತೀಚಿನ ವರ್ಷಗಳಲ್ಲಿ ಭಾರತದ ಆಡಳಿತವು ಉತ್ತಮವಾದ ತಿರುವನ್ನು ಪಡೆದುಕೊಂಡಿದೆ  ಎಂದು ಹೇಳಿದ ಉಪಾಧ್ಯಕ್ಷರು, ಇದರ ಪರಿಣಾಮವಾಗಿ ಎಲ್ಲ  ರೀತಿಯ ಸವಲತ್ತುಗಳನ್ನುಅನುಭವಯಿಸಿದ ಕೆಲವು ಕುಟುಂಬಗಳು ಈಗ ತೆರೆ ಮರೆಯಲ್ಲಿ ನಿಟ್ಟುಸಿರು ಬಿಡುತ್ತಿದ್ದಾರೆ. "ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವದ ಅಕ್ಷರಶ ಜಾರಿಯಿಂದಾಗಿ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದರಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವದ ಸಾರ ಮತ್ತು ಮೌಲ್ಯಗಳು ಇನ್ನಷ್ಟು  ಆಳವಾಗುತ್ತಿವೆ. ಈ ಮೊದಲು ಇದು ಕಾಂಟ್ರಾಕ್ಟ್ಸ್, ನೇಮಕಾತಿ ಮತ್ತು ಅವಕಾಶಗಳಿಗೆ ದಾರಿ ಒದಗಿಸುವ ಮಾರ್ಗವಾಗಿತ್ತು,”ಎಂದು ಅವರು ಹೇಳಿದರು.

ಈ ಹಿಂದೆ ಕೆಲವು ಪ್ರಭಾವಿ ಕುಟುಂಬಗಳು ತಾವು  ಕಾನೂನು ಪ್ರಕ್ರಿಯೆಯಿಗೆ ಅತೀತರು ಮತ್ತು ಕಾನೂನಿನ ಬಾಹುಗಳು ನಮ್ಮನ್ನು ತಲುಪಲು ಸಾಧ್ಯವಿಲ್ಲ ಎಂದು ಭಾವಿಸಿದ್ದರು ಎಂದು ಹೇಳಿದ ಉಪರಾಷ್ಟ್ರಪತಿಗಳು, “ನಮ್ಮಂತಹ ಪ್ರಜಾಪ್ರಭುತ್ವ ದೇಶದಲ್ಲಿ ಯಾರಾದರೂ ಇತರರಿಗಿಂತ ಹೇಗೆ ಹೆಚ್ಚು ಸಮಾನರಾಗುತ್ತಾರೆ?” ಎಂದು ಪ್ರಶ್ನಿಸಿದರು. ಕಾನೂನಿನ ಮುಂದೆ ಎಲ್ಲರೂ ಸಮಾನರಲ್ಲ ಎಂಬ ಭಾವನೆ ಮತ್ತು ನಮ್ಮ ಆಡಳಿತದಲ್ಲಿ ಹಾಸುಹೊಕ್ಕಾಗಿದ್ದ ಭ್ರಷ್ಟಾಚಾರ ಈಗ ಮರೆತು ಹೋದ ವಿಷಯಗಳಾಗಿವೆ ಎಂದು ಅವರು ಯುವ ಅಧಿಕಾರಿಗಳಿಗೆ ಹೇಳಿದರು. ಈ ಕ್ರಾಂತಿಕಾರಿ ಬದಲಾವಣೆಯಲ್ಲಿ ದೇಶದ ಸಿವಿಲ್ ಸರ್ವನ್ಟ್ಸ್ ಗಳ ಕೊಡುಗೆಯನ್ನೂ ಅವರು ಸ್ಮರಿಸಿಕೊಂಡರು. 

ನಮ್ಮ ದೇಶದ ಪವರ್ ಕಾರಿಡಾರ್‌ಗಳು ದೇಶದ ನೀತಿ ನಿರ್ಧಾರಗಳನ್ನು ಪ್ರಭಾವಿಸುತ್ತಿದ್ದ ಭ್ರಷ್ಟರಿಂದ ಮುಕ್ತವಾಗಿವೆ ಎಂದು ಶ್ಲಾಘಿಸಿದ ಉಪಾಧ್ಯಕ್ಷರು, ಇದೀಗ ದೇಶವನ್ನು ಹತಾಶೆಯ ಕೂಪದಿಂದ ಹೊರತೆಗೆಯಲಾಗಿದೆ ಎಂದು ಹೇಳಿದರು. ಭಾರತವು ಈಗ ಭರವಸೆ ಮತ್ತು ಹೊಸ ಸಾಧ್ಯತೆಗಳ ನಾಡಾಗಿದೆ. ರಾಷ್ಟ್ರದಾದ್ಯಂತ ಲವಲವಿಕೆ  ವಾತಾವರಣ ಮೂಡಿದೆ ಎಂದು ಹೇಳಿದ ಅವರು, “ಭಾರತವು ಈಗ ನಿದ್ರಿಸುತ್ತಿರುವ ದೈತ್ಯ ರಾಷ್ಟ್ರವಾಗಿ ಉಳಿದಿಲ್ಲ ಬದಲಾಗಿ ಉನ್ನತಿಯತ್ತ ಚಲಿಸುತ್ತಿದೆ.”

 

 

ಜಗತ್ತಿನಾದ್ಯಂತ ಭಾರತದ ಕುರಿತು ಗೌರವ ವೃದ್ಧಿಯಾಗುತ್ತಲಿದೆ ಎಂದು  ಹೇಳಿದ ಶ್ರೀ ಧನಕರ್ ಅವರು ಜಾಗತಿಕ ಸರಬರಾಜು ಸರಪಳಿಯನ್ನು (SUPPLY CHAINS)  ಉಳಿಸಲು ಅಥವಾ ಕಡಲ್ಗಳ್ಳತನದ ಸಂತ್ರಸ್ತರನ್ನು ನಮ ನೌಕಾಪಡೆ ರಕ್ಷಿಸಿ ಒಂದು ವಾರವೂ ಕಳೆದಿಲ್ಲ. ಪ್ರತಿಯೊಬ್ಬ ಭಾರತೀಯನೂ ಅವರ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಾನೆ ಎಂದು ಅವರು ಹೇಳಿದರು.

ನಮ್ಮ ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಸದ್ಯ ದೊಡ್ಡ ಸವಾಲು ಎದುರಾಗುತ್ತಿರುವುದು ದೀರ್ಘ ಕಾಲದವರೆಗೆ ಈ ದೇಶದ ಆಡಳಿತದ  ಭಾಗವಾಗಿಯಾಗಿದ್ದವರು,  ಅಧಿಕಾರದ ಸ್ಥಾನಗಳನ್ನು ಅಲಂಕರಿಸಿದವರು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ  ಅವಕಾಶ ಹೊಂದಿದ್ದಾಗಲೂ ಏನೂ ಮಾಡದವರಿಂದ.  ಅವರು ಅಧಿಕಾರ ಕಳೆದುಕೊಂಡ ತಕ್ಷಣದಿಂದ ಭಾರತದ ಬೆಳವಣಿಗೆಯ ಬಗ್ಗೆ ನಿರಾಸಕ್ತರಾಗಿದ್ದರೆ. ದೇಶದ  ಯುವಜನರು ಅವರನ್ನು ನಿರಾಕರಿಸುವ ಅಗತ್ಯವಿದೆ. 

ತಿಳುವಳಿಕೆಯುಳ್ಳ ಜನರು ದೇಶದ ಸಾಮಾನ್ಯ ಜನರ ಅಜ್ಞಾನದ ಲಾಭ ಪಡೆಯಲು  ಸತ್ಯವನ್ನು ಮರೆಮಾಚಿ ತಪ್ಪು ಹೇಳಿಕೆ ನೀಡುವುದನ್ನು ತಡೆಯುವುದಕ್ಕಿಂತ ಹೆಚ್ಚಿನ  
ಸವಾಲು ಪ್ರಜಾಪ್ರಭುತ್ವಕ್ಕೆ ಮತ್ತೊಂದಿಲ್ಲ ಎಂದು ಎಚ್ಚರಿಸಿದ ಉಪರಾಷ್ಟ್ರಪತಿಗಳು  ಅಂತಹ ಜನರನ್ನು ದೇಶದ ಮುಂದೆ ಅನಾವರಣಗೊಳಿಸುವಂತೆ ಜನರಿಗೆ ಕರೆ ನೀಡಿದರು. 

ಜನರು ಐಎಎಸ್ ಪ್ರೊಬೇಷನರ್ಸ್ ಗಳನ್ನು ಸಾಮಾನ್ಯ ಜನರು ಮಾದರಿಯಾಗಿ ಕಾಣುತ್ತಾರೆ ಎಂದು ಉಪರಾಷ್ಟ್ರಪತಿಗಳು ಹೇಳಿದರು. "ನಿಮ್ಮ ನಡೆ ನುಡಿಗಳು ದೇಶದ ಯುವಕರಿಗೆ ಮಾದರಿ ಹಾಗೂ ಪ್ರೇರಣಾದಾಯಕವಾಗಿರಬೇಕು. ಹಿರಿಯರ ಮೆಚ್ಚುಗೆಯನ್ನು ಗಳಿಸುವಂತಿರಬೇಕು," ಎಂದು ಅವರು ಹೇಳಿದರು.

ನಮ್ಮ ನಾಗರಿಕತೆಯ ಮೌಲ್ಯಗಳು ಯುವ ಅಧಿಕಾರಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆ  ಎಂದು ವಿವರಿಸಿದ ಉಪರಾಷ್ಟ್ರಪತಿಗಳು, ಸೇವಾಭಾವ ಮತ್ತು ಸಹಾನುಭೂತಿಯೊಂದಿಗೆ ಕೆಲಸ ಮಾಡುವಂತೆ ಯುವ ಅಧಿಕಾರಿಗಳಿಗೆ ಅವರು ಕರೆ ನೀಡಿದರು. 

 


 
ಈ ಸಂದರ್ಭದಲ್ಲಿ ಉತ್ತರಾಖಂಡದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್, ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನ ನಿರ್ದೇಶಕ ಶ್ರೀ ಶ್ರೀರಾಮ್ ತರಣಿಕಾಂತಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

*****


(Release ID: 2017402) Visitor Counter : 65