ಕಲ್ಲಿದ್ದಲು ಸಚಿವಾಲಯ
ಎಂಟು ಪ್ರಮುಖ ಕೈಗಾರಿಕೆಗಳಲ್ಲಿ ಕಲ್ಲಿದ್ದಲು ವಲಯದಲ್ಲಿ ಫೆಬ್ರವರಿ 2024 ರಲ್ಲಿ ಶೇಕಡಾ 11.6ರಷ್ಟು ಅತ್ಯಧಿಕ ಬೆಳವಣಿಗೆ
Posted On:
01 APR 2024 1:35PM by PIB Bengaluru
ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯ ಬಿಡುಗಡೆ ಮಾಡಿದ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕ (ICI) (ಮೂಲ ವರ್ಷ 2011-12) ಪ್ರಕಾರ ಫೆಬ್ರವರಿ 2024 ರಲ್ಲಿ ಎಂಟು ಪ್ರಮುಖ ಕೈಗಾರಿಕೆಗಳಲ್ಲಿ ಕಲ್ಲಿದ್ದಲು ವಲಯವು ಶೇಕಡಾ 11.6ರಷ್ಟು (ತಾತ್ಕಾಲಿಕ) ಅತ್ಯಧಿಕ ಬೆಳವಣಿಗೆಯನ್ನು ಕಂಡಿದೆ. ಕಲ್ಲಿದ್ದಲು ಕೈಗಾರಿಕೆಗಳ ಸೂಚ್ಯಂಕವು ಕಳೆದ ವರ್ಷದ ಇದೇ ಅವಧಿಯಲ್ಲಿ 190.1 ಅಂಕಗಳ ಪ್ರಗತಿ ಕಂಡಿದ್ದು, ಅದಕ್ಕೆ ಹೋಲಿಸಿದರೆ ಫೆಬ್ರವರಿ 2024ರ ಅವಧಿಯಲ್ಲಿ 212.1 ಅಂಕಗಳನ್ನು ತಲುಪಿದೆ ಮತ್ತು ಅದರ ಸಂಚಿತ ಸೂಚ್ಯಂಕವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 2023-24 ರ ಏಪ್ರಿಲ್‌ನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇಕಡಾ 12.1 ರಷ್ಟು ಏರಿಕೆಯಾಗಿದೆ.
ಕೈಗಾರಿಕೆಗಳ ಸೂಚ್ಯಂಕ (ICI), ಎಂಟು ಪ್ರಮುಖ ಕೈಗಾರಿಕೆಗಳ ಸಂಯೋಜಿತ ಮತ್ತು ವೈಯಕ್ತಿಕ ಉತ್ಪಾದನಾ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಅವುಗಳೆಂದರೆ ಸಿಮೆಂಟ್, ಕಲ್ಲಿದ್ದಲು, ಕಚ್ಚಾ ತೈಲ, ವಿದ್ಯುತ್, ರಸಗೊಬ್ಬರಗಳು, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು ಮತ್ತು ಉಕ್ಕು ಆಗಿವೆ.
ಎಂಟು ಪ್ರಮುಖ ಕೈಗಾರಿಕೆಗಳ ಸಂಯೋಜಿತ ಸೂಚ್ಯಂಕವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಫೆಬ್ರವರಿ 2024 ರಲ್ಲಿ ಶೇಕಡಾ 6.7ರಷ್ಟು ಹೆಚ್ಚಳ ಕಂಡುಬಂದಿದೆ.
ಕಲ್ಲಿದ್ದಲು ಉದ್ಯಮವು ಕಳೆದ ಎಂಟು ತಿಂಗಳುಗಳಲ್ಲಿ ನಿರಂತರವಾದ ಎರಡಂಕಿಯ ಬೆಳವಣಿಗೆಯನ್ನು ಪ್ರದರ್ಶಿಸುವ ಮೂಲಕ ಸತತವಾಗಿ ಮೇಲುಗೈ ಸಾಧಿಸಿದೆ ಮತ್ತು ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಒಟ್ಟಾರೆ ಬೆಳವಣಿಗೆಗಿಂತ ಗಣನೀಯವಾಗಿ ಹೆಚ್ಚಿನ ಬೆಳವಣಿಗೆಯನ್ನು ಹೊಂದಿದೆ.
ಈ ಗಮನಾರ್ಹ ಬೆಳವಣಿಗೆಯ ಹಿಂದಿನ ಪ್ರೇರಕ ಶಕ್ತಿಯು ಫೆಬ್ರವರಿ 2024 ರಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆಯೇ ಕಾರಣವಾಗಿದ್ದು, ಉತ್ಪಾದನೆಯು 96.60 ಮಿಲಿಯನ್ ಟನ್‌ಗಳನ್ನು ತಲುಪಿದೆ, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 11.83ರಷ್ಟು ಹೆಚ್ಚಳವಾಗಿದೆ.
*****
(Release ID: 2016892)
Visitor Counter : 105