ಸಂಪುಟ

ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣಾ ಕ್ರಮಗಳ ಕ್ಷೇತ್ರದಲ್ಲಿ ಸಹಕಾರಕ್ಕೆ ಭಾರತ ಮತ್ತು ಭೂತಾನ್ ನಡುವೆ ತಿಳುವಳಿಕೆ ಒಪ್ಪಂದ ಪತ್ರಕ್ಕೆ(MoU) ಸಹಿ ಹಾಕಲು ಸಚಿವ ಸಂಪುಟ ಅನುಮೋದನೆ 

Posted On: 13 MAR 2024 3:30PM by PIB Bengaluru

 ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣಾ ಕ್ರಮಗಳ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಭಾರತ ಮತ್ತು ಭೂತಾನ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು. 

ಇಂಧನ ದಕ್ಷತೆ ವಿಭಾಗ, ಇಂಧನ ಸಚಿವಾಲಯ, ಭಾರತ ಸರ್ಕಾರ ಮತ್ತು ಇಂಧನ ಇಲಾಖೆ, ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯ, ಭೂತಾನ್ ರಾಯಲ್ ಸರ್ಕಾರಗಳ ನಡುವೆ ಈ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ತಿಳುವಳಿಕೆ ಒಪ್ಪಂದದ ಭಾಗವಾಗಿ, ಇಂಧನ ದಕ್ಷತೆ ವಿಭಾಗ ಅಭಿವೃದ್ಧಿಪಡಿಸಿದ ಸ್ಟಾರ್ ಲೇಬಲಿಂಗ್ ಕಾರ್ಯಕ್ರಮವನ್ನು ಉತ್ತೇಜಿಸುವ ಮೂಲಕ ಗೃಹ ವಲಯದಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಭೂತಾನ್‌ಗೆ ಸಹಾಯ ಮಾಡುವ ಗುರಿಯನ್ನು ಭಾರತ ಹೊಂದಿದೆ. ಭೂತಾನ್‌ನ ಹವಾಮಾನ ಪರಿಸ್ಥಿತಿಗೆ ಸರಿಹೊಂದುವಂತೆ ಸಂಕೇತಗಳನ್ನು ನಿರ್ಮಿಸಲು ಭಾರತದ ಅನುಭವಗಳ ಆಧಾರದ ಮೇಲೆ ರಚನೆಯನ್ನು ಸುಗಮಗೊಳಿಸಲಾಗುತ್ತದೆ. ಇಂಧನ ವಲಯದ ಲೆಕ್ಕ ಪರಿಶೋಧಕರ ತರಬೇತಿಯನ್ನು ಸಾಂಸ್ಥಿಕಗೊಳಿಸುವ ಮೂಲಕ ಭೂತಾನ್‌ನಲ್ಲಿ ಇಂಧನ ವಲಯ ವೃತ್ತಿಪರರ ಒಂದು ಗುಂಪನ್ನು ರಚಿಸಲಾಗುತ್ತದೆ. 

ಚಿಲ್ಲರೆ ವ್ಯಾಪಾರಿಗಳ ತರಬೇತಿಯು ಸ್ಟಾರ್ ಅಂಕ ಆಧಾರಿತ ಉಪಕರಣಗಳಿಂದ ಉಳಿತಾಯದ ಬಗ್ಗೆ ಗ್ರಾಹಕರೊಂದಿಗೆ ಇಂಧನ ದಕ್ಷ ಉತ್ಪನ್ನಗಳ ಪ್ರಸಾರಕ್ಕೆ ಸಹಾಯ ಮಾಡುತ್ತದೆ. ಸ್ಟ್ಯಾಂಡರ್ಡ್ಸ್ ಮತ್ತು ಲೇಬಲಿಂಗ್ ಯೋಜನೆಯನ್ನು ಅಭಿವೃದ್ಧಿಪಡಿಸುವ ಮತ್ತು ಅನುಷ್ಠಾನಗೊಳಿಸುವ ತನ್ನ ಪ್ರಯತ್ನದಲ್ಲಿ ಭೂತಾನ್ ನ್ನು ಬೆಂಬಲಿಸುವ ಗುರಿಯನ್ನು ಭಾರತ ಹೊಂದಿದೆ.

ಎನರ್ಜಿ ಇಂಟೆನ್ಸಿವ್ ಅಪ್ಲೈಯನ್ಸ್‌ಗಳು ಮನೆ ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಹೆಚ್ಚಿನ ಬಳಕೆಯಾಗುವ ಮುಖ್ಯ ಉತ್ಪನ್ನಗಳಾಗಿವೆ. ಇಂಧನದ ತೀವ್ರ ಗ್ರಾಹಕ ಸರಕುಗಳ ತ್ವರಿತ ಬೆಳವಣಿಗೆಯ ದೃಷ್ಟಿಯಿಂದ, ವಿದ್ಯುತ್ ಶಕ್ತಿಯ ಬೇಡಿಕೆಯು ಪ್ರತಿ ವರ್ಷವೂ ಹೆಚ್ಚುತ್ತಿದೆ. ಗ್ರಾಹಕರು ಹೆಚ್ಚಿನ ದಕ್ಷತೆಯ ಉಪಕರಣಗಳನ್ನು ಬಯಸಿದಲ್ಲಿ ಈ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಬಹುದು. ಇಂಧನ ದಕ್ಷತೆಯ ವಿಭಾಗ(BEE) ದೇಶದ ಸ್ಟಾರ್-ಲೇಬಲಿಂಗ್ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದು, ಈಗ ದೈನಂದಿನ ಜೀವನದಲ್ಲಿ ಬಳಸುವ 37 ಉಪಕರಣಗಳನ್ನು ಒಳಗೊಂಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (DPIIT) ಯೊಂದಿಗೆ ಸಮಾಲೋಚಿಸಿ ವಿದ್ಯುತ್ ಸಚಿವಾಲಯವು ತಿಳುವಳಿಕೆ ಒಪ್ಪಂದ ಪತ್ರವನ್ನು ಸಿದ್ಧಪಡಿಸಿದೆ. ಭಾರತ ಮತ್ತು ಭೂತಾನ್ ನಡುವೆ ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣೆಗೆ ಸಂಬಂಧಿಸಿದ ಮಾಹಿತಿ, ದತ್ತಾಂಶ ಮತ್ತು ತಾಂತ್ರಿಕ ತಜ್ಞರ ವಿನಿಮಯವನ್ನು ಈ ತಿಳುವಳಿಕೆ ಒಪ್ಪಂದವು ಸಕ್ರಿಯಗೊಳಿಸುತ್ತದೆ. ಮಾರುಕಟ್ಟೆಯಲ್ಲಿ ಇಂಧನ ದಕ್ಷ ಉತ್ಪನ್ನಗಳ ಲಭ್ಯತೆಯನ್ನು ಖಾತ್ರಿಪಡಿಸಲು ಇದು ಭೂತಾನ್‌ಗೆ ಸಹಾಯ ಮಾಡುತ್ತದೆ. ತಿಳುವಳಿಕೆ ಒಪ್ಪಂದ ಪತ್ರವು ಇಂಧನ ದಕ್ಷತೆಯ ನೀತಿಗಳು ಮತ್ತು ಇಂಧನ ದಕ್ಷತೆಯ ಸಂಶೋಧನೆ ಮತ್ತು ತಂತ್ರಜ್ಞಾನ ನಿಯೋಜನೆ ಕ್ಷೇತ್ರದಲ್ಲಿ ಸಹಕಾರವನ್ನು ವಿಶ್ಲೇಷಿಸುತ್ತದೆ.


*****



(Release ID: 2016165) Visitor Counter : 43