ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕರ್ನಾಟಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುಮೋದನೆ

Posted On: 16 MAR 2024 2:58PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿಯವರ 'ವಿಕಸಿತ ಭಾರತ ಸಮೃದ್ಧ್ ಭಾರತ್' ದೃಷ್ಟಿಕೋನದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕರ್ನಾಟಕದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿದ್ದು, ರೂ. 127.23 ಕೋಟಿ ರೂ. ವೆಚ್ಚದಲ್ಲಿ 12 ಸಂಸ್ಥೆಗಳಲ್ಲಿ ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. 4200 ವಿದ್ಯಾರ್ಥಿಗಳಿಗೆ ಅವಕಾಶ ಒದಗಲಿದ್ದು, ಇದರಲ್ಲಿ 3150 ಅಲ್ಪಸಂಖ್ಯಾತ ವಿದ್ಯಾರ್ಥಿಗಳಾಗಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಅನುಮೋದಿಸಲಾದ ಈ ಸೌಲಭ್ಯಗಳು ಶಿಕ್ಷಣವನ್ನು ಉತ್ತೇಜಿಸುವ ಮತ್ತು ವಿದ್ಯಾರ್ಥಿಗಳ ಬೌದ್ಧಿಕ ಪ್ರಚೋದನೆಗೆ ಸಹಾಯ ಮಾಡುವ ಅನುಕೂಲಕರ ವಾತಾವರಣವನ್ನು ಒದಗಿಸುವುದಕ್ಕಾಗಿ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒದಗಿಸುವ ಒಂದು ಹೆಜ್ಜೆಯಾಗಿದೆ.

ಅಂತರ್ಗತ ಮತ್ತು ಸಮಗ್ರ ಮೂಲಸೌಕರ್ಯದ ಪ್ರಾಮುಖ್ಯತೆಯನ್ನು ಅಂಗೀಕರಿಸಿ, ಶೈಕ್ಷಣಿಕ ಮೂಲಸೌಕರ್ಯವನ್ನು ಸಮುದಾಯದ ಸ್ವತ್ತುಗಳಾಗಿ ರಾಷ್ಟ್ರೀಯ ಅಭಿವೃದ್ಧಿಗೆ ಸಹಾಯ ಮಾಡಲು ಮತ್ತು NEP 2020 ಗೆ ಬೆಂಬಲವಾಗಿ ಇದನ್ನು ಅನುಮೋದಿಸಲಾಗಿದೆ. ಇದು ವಿಕಸಿತ್ ಭಾರತ್‌ಗಾಗಿ ವಿಷನ್ 2047 ಗೆ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯದ ಬದ್ಧತೆಯನ್ನು ಸೂಚಿಸುತ್ತದೆ.

*****


(Release ID: 2015304) Visitor Counter : 87


Read this release in: English , Urdu , Hindi , Tamil