ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಚಿತ್ರಮಂದಿರಗಳಲ್ಲಿ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನಗಳಿಗೆ ತಲುಪಬಲ್ಲ (ಅಕ್ಸೆಸಿಬಲ್) ಮಾನದಂಡ ಮಾರ್ಗಸೂಚಿಗಳನ್ನು ಕುರಿತು ಅಧಿಸೂಚನೆ ಹೊರಡಿಸಿದ ಸರ್ಕಾರ

ಶ್ರವಣ ಮತ್ತು ದೃಷ್ಟಿ ದೋಷ ಇರುವ ವ್ಯಕ್ತಿಗಳಿಗೆ ಚಲನಚಿತ್ರಗಳು ತಲುಪುವುದನ್ನು ಖಾತ್ರಿಪಡಿಸುತ್ತದೆ

ವಾಣಿಜ್ಯ ಉದ್ದೇಶಗಳ ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕಾಗಿ ಇರುವ ಚಲನಚಿತ್ರಗಳು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು

ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಮಾಣೀಕರಿಸಬೇಕಾದ ಚಲನಚಿತ್ರಗಳು 6 ತಿಂಗಳೊಳಗೆ ಮತ್ತು ಇತರ ಚಲನಚಿತ್ರಗಳು 2 ವರ್ಷಗಳಲ್ಲಿ ಮಾರ್ಗಸೂಚಿಗಳನ್ನು ಪಾಲಿಸಬೇಕು

ಶ್ರವಣ ಮತ್ತು ದೃಷ್ಟಿ ದೋಷವಿರುವವರಿಗೆ  ಕನಿಷ್ಠ ಒಂದು ಪ್ರವೇಶಿಸುವಿಕೆ ವೈಶಿಷ್ಟ್ಯ ಅಂದರೆ. ಕ್ಲೋಸ್ಡ್ ಕ್ಯಾಪ್ಸನ್  ಮತ್ತು ಆಡಿಯೋ ವಿವರಣೆ ಇರಬೇಕು

Posted On: 15 MAR 2024 8:22PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯ ಶ್ರವಣ ಮತ್ತು ದೃಷ್ಟಿದೋಷವುಳ್ಳ ವ್ಯಕ್ತಿಗಳಿಗಾಗಿ ಸಿನಿಮಾ ಮಂದಿರಗಳಲ್ಲಿ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನದಳಿಗೆ ತಲುಪಬಲ್ಲ (ಅಕ್ಸೆಸಿಬಲ್) ಮಾನದಂಡಗಳ ಮಾರ್ಗಸೂಚಿಗಳನ್ನು ಹೊರಡಿಸಿದೆ.

"ಇಂದು ದಿವ್ಯಾಂಗರಿಗೆ ಅವಕಾಶ ಮತ್ತು ಪ್ರವೇಶಕ್ಕೆ ವಿಶೇಷ ಗಮನವನ್ನು ನೀಡಲಾಗುತ್ತಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ಸಶಕ್ತಗೊಳಿಸುವುದು, ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸುತ್ತದೆ, ಸಮಾನತೆ ಮತ್ತು ಸಹಕಾರದ ಮನೋಭಾವವು ಸಮಾಜದಲ್ಲಿ ಸಾಮರಸ್ಯವನ್ನು ಹೆಚ್ಚಿಸುತ್ತದೆ ಮತ್ತು ಎಲ್ಲರೂ ಒಂದಾಗಿ ಮುನ್ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ.” ಎಂಬುದು ಗೌರವಾನ್ವಿತ ಪ್ರಧಾನ ಮಂತ್ರಿಗಳ ದೃಷಿಕೋನವಾಗಿದೆ.

ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರು ಈ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ, ಸನ್ಮಾನ್ಯ ಪ್ರಧಾನಮಂತ್ರಿ ಅವರು ಚಲನಚಿತ್ರಗಳಿಗೆ ಪ್ರವೇಶದ ಮಾನದಂಡಗಳನ್ನು ಹೊಂದಿರುವುದರ ಅಗತ್ಯತೆಯನ್ನು ಗುರುತಿಸಿದ್ದಾರೆ, ಇದರಿಂದಾಗಿ ದಿವ್ಯಾಂಗಜನರು ಸಿನಿಮೀಯ ಪ್ರಯಾಣದಲ್ಲಿ ಭಾಗವಹಿಸಬಹುದು, ಸಿನಿಮೀಯ ಅನುಭವವದಿಂದ  ಹೊರಗುಳಿದಿದ್ದ ಜನಸಂಖ್ಯೆಯ ಒಂದು ಭಾಗಕ್ಕೆ ಇದು ತೆರೆದುಕೊಳ್ಳುತ್ತದೆ.

ವಿಕಲಚೇತನರ ಹಕ್ಕುಗಳ ಗುಂಪುಗಳು, ಸಿನಿಮಾ ಪ್ರದರ್ಶಕರು, ಸಂಶೋಧನಾ ವಿದ್ವಾಂಸರು ಮತ್ತು ಚಲನಚಿತ್ರ ನಿರ್ಮಾಪಕರೊಂದಿಗೆ ಆಳವಾದ ಸಮಾಲೋಚನೆಗಳ ನಂತರ ರೂಪಿಸಲಾದ ಈ ಪ್ರವೇಶಿಸುವಿಕೆ ಮಾನದಂಡಗಳು, ಒಳಗೊಳ್ಳುವಿಕೆಯ ಕಡೆಗೆ ಗಮನಾರ್ಹವಾದ ಪ್ರಗತಿಯಾಗಿವೆ. ಈ ಹೊಸ ಮಾರ್ಗಸೂಚಿಗಳು ಶ್ರವಣ ಮತ್ತು ದೃಷ್ಟಿಹೀನತೆ ಹೊಂದಿರುವ ವ್ಯಕ್ತಿಗಳಿಗೆ ಸಿನಿಮಾವನ್ನು ಸಂಪೂರ್ಣವಾಗಿ ಅನುಭವಿಸಲು ದಾರಿ ಮಾಡಿಕೊಟ್ಟು ಮುಖ್ಯವಾಹಿನಿ ಸಮಾಜದಲ್ಲಿ ಅವರ ಸೇರ್ಪಡೆಯನ್ನು ಉತ್ತೇಜಿಸುತ್ತವೆ.

ಈ ಮಾರ್ಗಸೂಚಿಗಳ ಉದ್ದೇಶವು ಈ ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಶ್ರವಣ ಮತ್ತು ದೃಷ್ಟಿಹೀನತೆ ಹೊಂದಿರುವ ವ್ಯಕ್ತಿಗಳಿಗೆ ಚಲನಚಿತ್ರಗಳ ಪ್ರವೇಶದ ಸಂಸ್ಕೃತಿ ಮತ್ತು ಅಭ್ಯಾಸವನ್ನು ಅಭಿವೃದ್ಧಿಪಡಿಸಲು ಚೌಕಟ್ಟನ್ನು ಒದಗಿಸುವುದಾಗಿದೆ:

•    ಚಲನಚಿತ್ರಗಳ ಪ್ರವೇಶಕ್ಕಾಗಿ ಸಾಮಾನ್ಯ ತತ್ವಗಳನ್ನು ವ್ಯಾಖ್ಯಾನಿಸುವುದು;

•    ಅಡೆತಡೆಗಳನ್ನು ಪರಿಹರಿಸಲು ಸಂಬಂಧಿತ ನಿಯಮಗಳು, ಅವಶ್ಯಕತೆಗಳು, ಮಾನದಂಡಗಳು ಮತ್ತು ಧನಸಹಾಯ ಕಾರ್ಯವಿಧಾನಗಳನ್ನು ನಿರ್ಧರಿಸುವ ಮೂಲಕ ಸಂಪೂರ್ಣವಾಗಿ ಪ್ರವೇಶಿಸಬಹುದಾದ ಚಲನಚಿತ್ರಗಳಿಗೆ ಅಡೆತಡೆಗಳನ್ನು ಗುರುತಿಸುವುದು;

•    ಶ್ರವಣ ಮತ್ತು ದೃಷ್ಟಿದೋಷ ಹೊಂದಿರುವ ವ್ಯಕ್ತಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಪ್ರದರ್ಶಿಸಲಾದ ಚಲನಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಸಾರ್ವಜನಿಕ ಪ್ರದರ್ಶನಕ್ಕೆ ಇತರರರಂತೆಯೇ ಸಮಾನ ಪ್ರವೇಶ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವುದು;

•    ಪಾರದರ್ಶಕ ಮೇಲ್ವಿಚಾರಣೆ ಮತ್ತು ನಿಷ್ಪಕ್ಷಪಾತ ವಿವಾದ ಪರಿಹಾರ ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳಲು ಸಾಂಸ್ಥಿಕ ಚೌಕಟ್ಟನ್ನು ವ್ಯಾಖ್ಯಾನಿಸುವುದು.

ಪ್ರವೇಶಿಸುವಿಕೆ ಮಾನದಂಡಗಳ ಪ್ರಮುಖ ಲಕ್ಷಣಗಳಲ್ಲಿ ಇವುಗಳು ಸೇರಿವೆ:

•    ಶ್ರವಣ ಮತ್ತು ದೃಷ್ಟಿದೋಷವಿರುವ ವ್ಯಕ್ತಿಗಳಿಗೆ ಚಲನಚಿತ್ರಗಳ ಪ್ರವೇಶವನ್ನು ಖಾತ್ರಿಪಡಿಸುತ್ತದೆ.

•    ವಾಣಿಜ್ಯ ಉದ್ದೇಶಗಳಿಗಾಗಿ ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕಾಗಿ ಇರುವ ಚಲನಚಿತ್ರಗಳಿಗೆ ಅನ್ವಯಿಸುತ್ತದೆ.

•    ಪ್ರವೇಶಿಸುವಿಕೆ ಮಾನದಂಡಗಳನ್ನು ಕೇವಲ ಚಲನಚಿತ್ರ ವಿಷಯಕ್ಕಾಗಿ ವ್ಯಾಖ್ಯಾನಿಸಲಾಗಿಲ್ಲ, ಸಹಾಯಕ ಸಾಧನಗಳು ಮತ್ತು ಚಿತ್ರಮಂದಿರ ಮೂಲಸೌಕರ್ಯ, ಶ್ರವಣ ಮತ್ತು ದೃಷ್ಟಿದೋಷದ ವ್ಯಕ್ತಿಗಳು ಸಿನಿಮಾ ಮಂದಿರಗಳಲ್ಲಿ ಚಲನಚಿತ್ರಗಳನ್ನು ಆನಂದಿಸಲು ಅಗತ್ಯವಿರುವ ಜಾಗತಿಕ ಉತ್ತಮ ಅಭ್ಯಾಸಗಳನ್ನು ಸಂಯೋಜಿಸಲಾಗಿದೆ.

•    ಕಡ್ಡಾಯ ಪ್ರವೇಶಿಸುವಿಕೆ ವೈಶಿಷ್ಟ್ಯಗಳು: ಶ್ರವಣದೋಷವುಳ್ಳ ಮತ್ತು ದೃಷ್ಟಿಹೀನರಿಗೆ, ಅಂದರೆ AD & CC/OC ಪ್ರತಿಯೊಂದೂ ಕನಿಷ್ಠ ಒಂದು ಪ್ರವೇಶ ವೈಶಿಷ್ಟ್ಯ ಇರಬೇಕು

•    "ಆಡಿಯೋ ವಿವರಣೆ" ಎನ್ನುವುದು ದೃಷ್ಟಿದೋಷ ವ್ಯಕ್ತಿಗಳಿಗೆ ಚಲನಚಿತ್ರ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಚಲನಚಿತ್ರದಲ್ಲಿನ ದೃಶ್ಯ ನಿರೂಪಣೆಗಳ ಶ್ರವಣೇಂದ್ರಿಯ ನಿರೂಪಣೆಯಾಗಿದೆ. ಸಂಭಾಷಣೆಯಲ್ಲಿನ ಅಂತರದ ಸಮಯದಲ್ಲಿ, ಇದು ದೃಶ್ಯಗಳು, ಸೆಟ್ಟಿಂಗ್ ಗಳು, ಕ್ರಿಯೆಗಳು ಮತ್ತು ವೇಷಭೂಷಣಗಳಂತಹ ದೃಶ್ಯ ಅಂಶಗಳನ್ನು ವಿವರಿಸುತ್ತದೆ.

•    "ಕ್ಲೋಸ್ಡ್ ಕ್ಯಾಪ್ಸನ್" ಎನ್ನುವುದು ಆಡಿಯೋ ವಿಷಯದೊಂದಿಗೆ ಸಿಂಕ್ರೊನೈಸ್ ಮಾಡಲಾದ ಆನ್-ಸ್ಕ್ರೀನ್ ಪಠ್ಯದ ಮೂಲಕ ಬಳಕೆದಾರ ಬೇಡಿಕೆಯ ಮೇರೆಗೆ ಚಲನಚಿತ್ರದ ಆಡಿಯೊ ಸಂಭಾಷಣೆ ಮತ್ತು ಧ್ವನಿ ನಿರೂಪಣೆಗಳನ್ನು ಗೋಚರಿಸುವಂತೆ ಮಾಡುವ ಸಾಧನವಾಗಿದೆ.

•    ಹೆಚ್ಚುವರಿ ಪ್ರವೇಶಿಸುವಿಕೆ ವೈಶಿಷ್ಟ್ಯಗಳು:

•    “ಭಾರತೀಯ ಸಂಕೇತ ಭಾಷೆ” ಇಂಟರ್ ಪ್ರಿಟರ್ ಗಳಿಂದ ಭಾರತೀಯ ಸಂಕೇತ ಭಾಷೆಯ ವ್ಯಾಖ್ಯಾನವನ್ನು ಚಿತ್ರದಲ್ಲಿ-ಚಿತ್ರದ ಮೋಡ್ ನಲ್ಲಿ ಒದಗಿಸಬೇಕು ಮತ್ತು ಅದು ನಿಖರವಾಗಿರಬೇಕು, ಸಿಂಕ್ರೊನೈಸ್ ಆಗಿರಬೇಕು ಮತ್ತು ಶ್ರವಣದೋಷವುಳ್ಳವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಬೇಕು.

•    ಚಲನಚಿತ್ರ ನಿರ್ಮಾಪಕರು ಪ್ರವೇಶದ ವೈಶಿಷ್ಟ್ಯಗಳ ಕಡತಗಳ ಜೊತೆಗೆ ಸಿ ಬಿ ಎಫ್ ಸಿ ಗೆ ಪ್ರಮಾಣೀಕರಣಕ್ಕಾಗಿ ಚಲನಚಿತ್ರವನ್ನು ಸಲ್ಲಿಸಬೇಕು.
ಅನುಷ್ಠಾನ ವೇಳಾಪಟ್ಟಿ 

•    ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಮಾಣೀಕರಿಸಬೇಕಾದ ಎಲ್ಲಾ ಚಲನಚಿತ್ರಗಳು 6 ತಿಂಗಳೊಳಗೆ ಮತ್ತು  ಇತರ ಚಲನಚಿತ್ರಗಳು 2 ವರ್ಷಗಳಲ್ಲಿ ಮಾರ್ಗಸೂಚಿಗಳನ್ನು ಪಾಲಿಸಬೇಕು.

•    ಜನವರಿ 1, 2025 ರಿಂದ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಸಲ್ಲಿಸಲಾದ ಚಲನಚಿತ್ರಗಳು ಸಹ ಇವುಗಳನ್ನು ಅನುಸರಿಸಬೇಕಾಗುತ್ತದೆ.

•    ಪ್ರವೇಶಿಸಬಹುದಾದ ವೈಶಿಷ್ಟ್ಯಗಳನ್ನು ಈ ಕೆಳಗಿನ ಯಾವುದೇ ವಿಧಾನದಿಂದ ಸಿನಿಮಾ ಥಿಯೇಟರ್ ನಿಯೋಜಿಸಬಹುದು:

•    ಮಿರರ್ ಕ್ಯಾಪ್ಷನ್ ಗಳು, ಕ್ಲೋಸ್ಡ್ ಕ್ಯಾಪ್ಷನ್ ಗಳ ಸ್ಮಾರ್ಟ್ ಗ್ಲಾಸ್ ಗಳು, ಕ್ಲೋಸ್ಡ್ ಕ್ಯಾಪ್ಷನ್ ಸ್ಟ್ಯಾಂಡ್ ಗಳು, ಪರದೆಯ ಕೆಳಗೆ ಕ್ಲೋಸ್ಡ್ ಕ್ಯಾಪ್ಷನ್ ಪ್ರದರ್ಶನ ಅಥವಾ ಆಡಿಯೊ ವಿವರಣೆಗಾಗಿ ಹೆಡ್ ಪೋನ್ ಗ ಳು/ಇಯರ್
ಫೋನ್ ಗಳು (AD) ಮುಂತಾದ ಥಿಯೇಟರ್ ಗಳಲ್ಲಿ (ಸಾಮಾನ್ಯ ಪ್ರದರ್ಶನದ ಸಮಯದಲ್ಲಿ) ಕೆಳಗಿನ ಪ್ರತ್ಯೇಕ ಸಾಧನಗಳನ್ನು ಬಳಸುವುದು.

•    ಮೊಬೈಲ್ ಅಪ್ಲಿಕೇಶನ್ ಗಳನ್ನು ಬಳಸುವುದು (ಸಾಮಾನ್ಯ ಪ್ರದರ್ಶನದ ಸಮಯದಲ್ಲಿ) -ಚಿತ್ರ ನಿರ್ಮಾಪಕರು ಯಾವುದೇ ಸೂಕ್ತವಾದ ಸಾಫ್ಟ್ವೇರ್ ಅಪ್ಲಿಕೇಶನ್ ನಲ್ಲಿ ಚಲನಚಿತ್ರಗಳಿಗಾಗಿ CC/OC ಮತ್ತು AD ಅನ್ನು ಸಂಯೋಜಿಸಲು ಚಿತ್ರಮಂದಿರಗಳಲ್ಲಿ ಚಲನಚಿತ್ರದ ಯಾವುದೇ ಸಾಮಾನ್ಯ ಪ್ರದರ್ಶನದಲ್ಲಿ ಪ್ರವೇಶಿಸುವಿಕೆ ವೈಶಿಷ್ಟ್ಯವನ್ನು ಬಳಕೆದಾರರ ವೈಯಕ್ತಿಕ ಸಾಧನದ ಮೂಲಕ ವಿಸ್ತರಿಸಲು ಅದನ್ನು ಬಳಸಬಹುದು. 

•    ಇತರ ತಂತ್ರಜ್ಞಾನಗಳನ್ನು ಬಳಸುವುದು: ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಂಬಲ/ಸಹಾಯಕ ಸಾಧನಗಳು ಮತ್ತು ಸಾಫ್ಟ್ ವೇರ್ ಅಪ್ಲಿಕೇಶನ್ ಗಳಾಗಿ ಯಾವುದೇ ಇತರ ತಾಂತ್ರಿಕ ಸಾಧನಗಳನ್ನು ಬಳಸುವುದು.

•    ಪ್ರದರ್ಶಕರ ಕ್ರಿಯಾ ಯೋಜನೆಗಳು: ಚಿತ್ರಮಂದಿರ ಮಾಲೀಕರು ಪ್ರವೇಶಿಸುವಿಕೆಗಾಗಿ ಸ್ವಯಂ-ನಿಯಂತ್ರಕ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಾರೆ, ವಿಕಲಚೇತನ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆಗಳನ್ನು ಅನುಸರಿಸುತ್ತಾರೆ ಮತ್ತು 2 ವರ್ಷಗಳಲ್ಲಿ ಪ್ರವೇಶದ ವೈಶಿಷ್ಟ್ಯಗಳನ್ನು ಕಾರ್ಯಗತಗೊಳಿಸುತ್ತಾರೆ.

•    ಮೇಲ್ವಿಚಾರಣಾ ಸಮಿತಿ: ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ನೇಮಿಸಲ್ಪಟ್ಟ ಒಂದು ಪ್ರತ್ಯೇಕ ಸಮಿತಿಯು ಅದರ ಅರ್ಧದಷ್ಟು ಸದಸ್ಯರು ಶ್ರವಣ/ದೃಷ್ಟಿ ವಿಕಲಚೇತನ ವ್ಯಕ್ತಿಗಳು ಮತ್ತು ಚಲನಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಪ್ರವೇಶದ ಮಾನದಂಡಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ.

•    ಕುಂದುಕೊರತೆ ಪರಿಹಾರ: ಪ್ರವೇಶಿಸಬಹುದಾದ ವೈಶಿಷ್ಟ್ಯಗಳು ಲಭ್ಯವಿಲ್ಲದಿದ್ದರೆ ವೀಕ್ಷಕರು ಚಿತ್ರಮಂದಿರ ಪರವಾನಗಿದಾರರಿಗೆ ದೂರುಗಳನ್ನು ಸಲ್ಲಿಸಬಹುದು ಮತ್ತು ಸಮಿತಿಯು ಪರವಾನಗಿ ಪ್ರಾಧಿಕಾರದ ಮೂಲಕ 30 ದಿನಗಳಲ್ಲಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಈ ಉಪಕ್ರಮವು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 (RPwD ಕಾಯಿದೆ) ಗೆ ಅನುಸಾರವಾಗಿದೆ. ಇದು ಚಲನಚಿತ್ರಗಳಿಗೆ ಪ್ರವೇಶ ಸೇರಿದಂತೆ ಮಾಹಿತಿ ಮತ್ತು ಸಂವಹನದಲ್ಲಿ ಸಾರ್ವತ್ರಿಕ ಪ್ರವೇಶ ಮತ್ತು ಸೇರ್ಪಡೆಯನ್ನು ಉತ್ತೇಜಿಸಲು ಸರ್ಕಾರದ ಕ್ರಮವನ್ನು ಕಡ್ಡಾಯಗೊಳಿಸುತ್ತದೆ.

ಈ ಸಮಗ್ರ ಮಾರ್ಗಸೂಚಿಗಳು ಪ್ರವೇಶಿಸಬಹುದಾದ ಚಲನಚಿತ್ರ ಕಂಟೆಂಟ್ ಮತ್ತು ಚಿತ್ರಮಂದಿರ ಮೂಲಸೌಕರ್ಯಕ್ಕೆ ದೃಢವಾದ ಅಡಿಪಾಯವನ್ನು ಹಾಕುತ್ತವೆ, ಹೆಚ್ಚಿನ ಸೇರ್ಪಡೆಯನ್ನು ಉತ್ತೇಜಿಸುತ್ತವೆ.

******


(Release ID: 2015159) Visitor Counter : 87