ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಕರ್ನಾಟಕದ ಬಳ್ಳಾರಿ ಜಿಲ್ಲೆಯಿಂದ ಅನಂತಪುರ ಜಿಲ್ಲೆಯವರೆಗೆ 13.087 ಕಿಮೀ ಉದ್ದ ವ್ಯಾಪಿಸಿರುವ ರಾಷ್ಟ್ರೀಯ ಹೆದ್ದಾರಿ 150ಎ ಅಭಿವೃದ್ಧಿಗಾಗಿ ರೂ.626.01 ಕೋಟಿ ಮಂಜೂರು ಮಾಡಿದ ಶ್ರೀ ನಿತಿನ್ ಗಡ್ಕರಿ.
Posted On:
12 MAR 2024 12:46PM by PIB Bengaluru
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಕರ್ನಾಟಕದಲ್ಲಿ ಬಳ್ಳಾರಿ ಬೈಪಾಸ್ ನ 4-ಲೇನಿಂಗ್ ಪೂರ್ಣಗೊಳಿಸಲು ರೂ. 626.01 ಕೋಟಿ ಮಂಜೂರು ಮಾಡಿದ್ದಾರೆ.
ಇದು ಬಳ್ಳಾರಿಯಿಂದ ಬೈರಾಪುರದ ವರೆಗಿನ ರಾಷ್ಟ್ರೀಯ ಹೆದ್ದಾರಿ 150ಎ ಯ ವ್ಯಾಪ್ತಿಯನ್ನು ಒಳಗೊಳ್ಳುತ್ತದೆ ಹಾಗೂ ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳಾದ್ಯಂತ 13.087 ಕಿಮೀ ಉದ್ದ ವ್ಯಾಪಿಸಿದೆ.
ಬಳ್ಳಾರಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿವಾರಿಸುವ ಮತ್ತು ತರುವಾಯ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಹೇಳಿದರು. ಹೆಚ್ಚುವರಿಯಾಗಿ, ಬಳ್ಳಾರಿ ಯೋಜನೆಯ ಭಾಗವಾಗಿ ವಿಶಾಲವಾದ ಹೊಸಪೇಟೆಯಿಂದ ದಕ್ಷಿಣ ಭಾಗದಲ್ಲಿ 28ಕಿಮೀ ಬೈಪಾಸ್ ಅಭಿವೃದ್ಧಿ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ.
*****
(Release ID: 2013745)
Visitor Counter : 82