ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸಂಗಮ್‌ ಕುರಿತ ಎರಡನೇ ಔಟ್‌ರೀಚ್ ಕಾರ್ಯಕ್ರಮ: ಐಐಐಟಿ ಬೆಂಗಳೂರಿನಲ್ಲಿ  ದೂರಸಂಪರ್ಕ ಇಲಾಖೆಯಿಂದ ಡಿಜಿಟಲ್ ಟ್ವಿನ್ ಉಪಕ್ರಮದ ಆಯೋಜನೆ


ಸಂಗಮ್ ಸಂವಾದ: ವಿಷನ್ 2047 - ವಿಕಸಿತ ಭಾರತ್ ಸಾಧಿಸಲು ತಂತ್ರಜ್ಞಾನದ ಪಾತ್ರ ಕುರಿತು ಚರ್ಚೆ,  ಡಿಜಿಟಲ್ ಟ್ವಿನ್ ನಂತಹ ಪರಿಕಲ್ಪನೆಗಳ ಸಾಮರ್ಥ್ಯವನ್ನು ಒತ್ತಿಹೇಳಿದ ನೀತಿ ಆಯೋಗದ ಸಿಇಒ

ಈ ಉಪಕ್ರಮದ ಮಹತ್ವಾಕಾಂಕ್ಷೆಯ ಸ್ವರೂಪ ಮತ್ತು 2047 ರ ವೇಳೆಗೆ ಭಾರತವನ್ನು ಅತ್ಯಂತ ಅಭಿವೃದ್ಧಿ ಹೊಂದಿದ ದೇಶವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಪ್ರತಿಪಾದಿಸಿದ ದೂರಸಂಪರ್ಕ ಕಾರ್ಯದರ್ಶಿ

Posted On: 09 MAR 2024 8:00PM by PIB Bengaluru

ಸಂಗಮ್‌ ಎರಡನೇ ಔಟ್‌ರೀಚ್ ಕಾರ್ಯಕ್ರಮ: ಬೆಂಗಳೂರಿನಲ್ಲಿ ಆಯೋಜಿಸಲಾದ ಡಿಜಿಟಲ್ ಟ್ವಿನ್ ಉಪಕ್ರಮವು ಉದ್ಯಮ, ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟ್‌ಅಪ್‌ ಗಳು ಮತ್ತು ಎಂ ಎಸ್‌ ಎಂ ಇ ಗಳ ನಾಯಕರು, ಚಿಂತಕರು ಮತ್ತು ಆವಿಷ್ಕಾರಿಗಳ ಅಗಾಧ ಭಾಗವಹಿಸುವಿಕೆ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಯಿತು. ನೀತಿ ಆಯೋಗದ ಸಿಇಒ, ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಮತ್ತು ಐಐಐಟಿ ಬೆಂಗಳೂರು ನಿರ್ದೇಶಕರು ‘ಸಂಗಮ್ ಸಂವಾದ’ದ ಫಲಪ್ರದ ಅಧಿವೇಶನದಲ್ಲಿ ಭಾಗವಹಿಸಿದರು ಮತ್ತು ವಿಷನ್ 2047 - ವಿಕಸಿತ ಭಾರತವನ್ನು ಸಾಧಿಸಲು ತಂತ್ರಜ್ಞಾನದ ಪಾತ್ರವನ್ನು ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ, ನೀತಿ ಆಯೋಗದ ಸಿಇಒ, ಶ್ರೀ ಬಿವಿಆರ್ ಸುಬ್ರಹ್ಮಣ್ಯಂ ಅವರು ಡಿಜಿಟಲ್ ಟ್ವಿನ್‌ ನ ಪರಿವರ್ತಕ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದರು. ನಾವೀನ್ಯತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ವಲಯಗಳಾದ್ಯಂತ ಸಹಯೋಗದ ಅಗತ್ಯವಿದೆ ಎಂದು ಅವರು ಹೇಳಿದರು. ಭವಿಷ್ಯವನ್ನು ರೂಪಿಸುವಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪಾತ್ರವನ್ನು ಅವರು ಚರ್ಚಿಸಿದರು ಮತ್ತು ತಾಂತ್ರಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಭಾರತದ ಸ್ಥಾನದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದರು.

ದೂರಸಂಪರ್ಕ ಕಾರ್ಯದರ್ಶಿ ಡಾ. ನೀರಜ್ ಮಿತ್ತಲ್ ಅವರು ಸರ್ಕಾರದ ಪ್ರಮುಖ ಆದ್ಯತೆಯ ಉಪಕ್ರಮವಾಗಿ ಫಾರ್ವರ್ಡ್ ಪ್ಲಾನಿಂಗ್ ಮತ್ತು ಸಂಗಮ್ ಅಗತ್ಯವನ್ನು ಎತ್ತಿ ತೋರಿಸಿದರು. ಭವಿಷ್ಯದ ಮೂಲಸೌಕರ್ಯಕ್ಕಾಗಿ ಪ್ರಧಾನಿಯವರು ನೀಡಿದ ಕರೆಯಿಂದ ಈ ಉಪಕ್ರಮವು ಹೊರಹೊಮ್ಮಿದೆ, ಸಚಿವಾಲಯಗಳಾದ್ಯಂತ ಯೋಜನೆಯಲ್ಲಿ ಇರುವ ಅಡೆತಡೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಡೇಟಾ, ಕಂಪ್ಯೂಟಿಂಗ್ ಪ್ರಗತಿಗಳು ಮತ್ತು ಐಒಟಿ ಸಾಮರ್ಥ್ಯಗಳ ಪರಿವರ್ತಕ ಶಕ್ತಿಯನ್ನು ಪ್ರಸ್ತಾಪಿಸಿದ ಅವರು, ಉಪಕ್ರಮದ ಮಹತ್ವಾಕಾಂಕ್ಷೆಯ ಸ್ವರೂಪ ಮತ್ತು 2047 ರ ವೇಳೆಗೆ ಭಾರತವನ್ನು ಅತ್ಯಂತ ಅಭಿವೃದ್ಧಿ ಹೊಂದಿದ ದೇಶವಾಗಿ ಮುನ್ನಡೆಸುವ ಸಾಮರ್ಥ್ಯವನ್ನು ಒತ್ತಿ ಹೇಳಿದರು.

ಟೆಲಿಕಮ್ಯುನಿಕೇಶನ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ (ಟಿಸಿಒಇ) ಸಹಯೋಗದೊಂದಿಗೆ ದೂರಸಂಪರ್ಕ ಇಲಾಖೆ (ಡಿಒಟಿ) ಐಐಐಟಿ ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತು. ಅಂತಹ ಪರಿವರ್ತಕ ಉಪಕ್ರಮಕ್ಕಾಗಿ ಮಾರ್ಗವನ್ನು ರೂಪಿಸುವಾಗ, ಸಹಯೋಗದ ಅವಕಾಶಗಳ ಜೊತೆಗೆ ಸ್ಪಷ್ಟವಾದ ಪರಿಹಾರಗಳನ್ನು ಹೊಂದಲು, ಆಲೋಚಿಸಲು ಮತ್ತು ಅನ್ವೇಷಿಸಲು ಈ ಕಾರ್ಯಕ್ರಮವು ಎಲ್ಲಾ ಭಾಗೀದಾರರಿಗೆ ಹಂಚಿಕೆಯ ವೇದಿಕೆಯಾಗಿ ಕಾರ್ಯನಿರ್ವಹಿಸಿತು.

"ಐಐಐಟಿ ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಂಗಮ್ ಡಿಜಿಟಲ್ ಟ್ವಿನ್ ಕಾರ್ಯಕ್ರಮವನ್ನು ಆಯೋಜಿಸಲು ನಾವು ಸಂತೋಷಪಡುತ್ತೇವೆ. 6ಜಿ ಮತ್ತು ಮುಂದುವರಿದ ದೂರಸಂಪರ್ಕ, ಐಒಟಿ, ಡಿಜಿಟಲ್ ಟ್ವಿನ್, AI, ML ಮತ್ತು ಇತರ ವಿವಿಧ ಅತ್ಯಾಧುನಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನಮ್ಮ ಸಂಶೋಧನೆಯೊಂದಿಗೆ ವಿಷಯವು ಆಳವಾಗಿ ಪ್ರತಿಧ್ವನಿಸುತ್ತದೆ" ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ದೇಬಬ್ರತ ದಾಸ್ ಹೇಳಿದರು.

ಭಾರತದ ಸಂಗಮ್ ಡಿಜಿಟಲ್ ಟ್ವಿನ್ ಉಪಕ್ರಮವು ವಿಭಿನ್ನವಾಗಿದೆ ಮತ್ತು ಡಿಜಿಟಲ್ ಸಬಲೀಕರಣ ಮತ್ತು ತಾಂತ್ರಿಕ ಪ್ರಗತಿಯ ಹೊಸ ಯುಗವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ನವೀನ ಮೂಲಸೌಕರ್ಯ ಯೋಜನೆ ಪರಿಹಾರಗಳನ್ನು ಕಾರ್ಯಗತಗೊಳಿಸುವ ನೈಜ-ಪ್ರಪಂಚದ ಪರಿಣಾಮಗಳನ್ನು ನಿರೀಕ್ಷಿಸಲು ಈ ಉಪಕ್ರಮವು ಏಕೀಕೃತ ಡೇಟಾ ಮತ್ತು ಸಾಮೂಹಿಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುತ್ತದೆ. ಮೂಲಸೌಕರ್ಯ ಯೋಜನೆಗಳ ಸುಸ್ಥಿರ ಮತ್ತು ವರ್ಧಿತ ಅಭಿವೃದ್ಧಿಗಾಗಿ ಭವಿಷ್ಯದ ಮಾರ್ಗಸೂಚಿಯನ್ನು ರೂಪಿಸಲು ಇದು ಸಹಾಯ ಮಾಡುತ್ತದೆ.

ಅಧಿವೇಶನದ ಮುಖ್ಯಾಂಶಗಳು:

ಮೊದಲ ಅಧಿವೇಶನದಲ್ಲಿ ಡಿಜಿಟಲ್ ಟ್ವಿನ್ಸ್, ಜನರೇಟಿವ್ ಎಐ, ಟೆಲಿಕಾಂ ಡೇಟಾ ಮತ್ತು ವರ್ಚುವಲ್ ಪ್ಲಾಟ್‌ಫಾರ್ಮ್‌ಗಳ ಕುರಿತು ಮೆಟಾ, ಸ್ಯಾಮ್‌ಸಂಗ್ ಇಂಡಿಯಾ, Fabrikspace ಮತ್ತು AutoVRse ಸಂಸ್ಥೆಯ ಪ್ರತಿನಿಧಿಗಳಿಂದ ಪ್ರಬುದ್ಧ ಚರ್ಚೆಗಳು ನಡೆದವು.

Image

ಹೆಚ್ಚುವರಿಯಾಗಿ, ಎರಡನೇ ಅಧಿವೇಶನವು Nokia Labs ನಿಂದ ಡಿಜಿಟಲ್ ಟ್ವಿನ್‌ ರಚನೆ, ಪರಿಸರ ಡೇಟಾವನ್ನು ತುಂಬುವ ಕುರಿತು ಏರ್‌ಶೆಡ್, ಟೆಲಿಕಾಂ ಮೊಬಿಲಿಟಿ ಡೇಟಾವನ್ನು ಡಿಜಿಟಲ್ ಟ್ವಿನ್‌ ಗಳಿಗೆ ತುಂಬಲು ಏರ್‌ಟೆಲ್ ಇಂಡಿಯಾ ಚರ್ಚೆಗಳನ್ನು ಒಳಗೊಂಡಿತ್ತು.

Image

ಮೂರನೇ ಅಧಿವೇಶನವು Cloudworx, ಇಂಡಿಯಾ ಅರ್ಬನ್ ಡಾಟಾ ಎಕ್ಸ್‌ಚೇಂಜ್, Nvidia  ಮತ್ತು ಲೆಪ್ಟಾನ್‌ ನ ಪ್ರಖ್ಯಾತ ಭಾಷಣಕಾರರ ತಂಡವನ್ನು ಹೊಂದಿತ್ತು. ವೈವಿಧ್ಯಮಯ ಡಿಜಿಟಲ್ ಟ್ವಿನ್ ಬಳಕೆಯ ಪ್ರಕರಣಗಳು, ತಡೆರಹಿತ ಡೇಟಾ ಏಕೀಕರಣ, ಓಮ್ನಿವರ್ಸ್ ಮತ್ತು ಲೆಪ್ಟನ್ ಜಿಯೋಸ್ಪೇಷಿಯಲ್ ತಂತ್ರಜ್ಞಾನವನ್ನು ಪ್ರದರ್ಶಿಸಿತು.

ತರುವಾಯ, ಉದ್ಯಮದ ಪ್ರವರ್ತಕರಾದ ಜೆನೆಸಿಸ್, ಬೆಂಟ್ಲಿ, ಇಎಸ್‌ಆರ್‌ಐ ಮತ್ತು ಏರ್‌ಟೆಲ್‌ಗಳೊಂದಿಗೆ ಉದ್ಯಮ ಚರ್ಚೆಯನ್ನು ಆಯೋಜಿಸಲಾಯಿತು, ಇದು ಮೂಲಸೌಕರ್ಯ ಸವಾಲುಗಳಿಗೆ ಪರಿಹಾರಗಳನ್ನು ಅನ್ವೇಷಿಸಿತು.

ಒರಾಕಲ್, ಎರೋಸ್ ಮತ್ತು ಮೈಕ್ರೋಸಾಫ್ಟ್‌ ನ ಉದ್ಯಮದ ನಾಯಕರು ಸಂಗಮ್ ಅನ್ನು ಪರಿವರ್ತನೆಯ ಯಶಸ್ಸಿನತ್ತ ಮುನ್ನಡೆಸುವ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.

ಭಾರತೀಯ ದೂರಸಂಪರ್ಕ ಉದ್ಯಮವು ವಿಕಸನಗೊಳ್ಳುತ್ತಿರುವಂತೆ, ಸಂಗಮ್: ಡಿಜಿಟಲ್ ಟ್ವಿನ್ ಉಪಕ್ರಮವು ನಾವೀನ್ಯತೆಯ ಮುಂಚೂಣಿಯಲ್ಲಿದೆ, ಕ್ಷೇತ್ರದ ವಿಕಸನದ ಅಗತ್ಯಗಳಿಗಾಗಿ ಮುನ್ನೋಟದ ಚಿಂತನೆಯ ಪರಿಹಾರಗಳನ್ನು ನೀಡುತ್ತದೆ.

****

 


(Release ID: 2013088) Visitor Counter : 126


Read this release in: English , Urdu , Hindi