ಜಲ ಶಕ್ತಿ ಸಚಿವಾಲಯ
azadi ka amrit mahotsav

​​​​​​​ಜಲಶಕ್ತಿ ಸಚಿವಾಲಯದಿಂದ 6 ನದಿಗಳ ಜಲಾನಯನ ನಿರ್ವಹಣೆಗಾಗಿ 12 ತಾಂತ್ರಿಕ ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ  


ಆರು ದೊಡ್ಡ ನದಿಗಳು ಗಂಗಾ ನದಿಯ ರೀತಿಯಲ್ಲಿ  ಅಭಿವೃದ್ಧಿಯಾಗುತ್ತದೆ 

Posted On: 28 FEB 2024 8:00PM by PIB Bengaluru

ಇಂದು ದೇಶವನ್ನು ಜಲಸಂಪನ್ಮೂಲದಿಂದ ಶ್ರೀಮಂತಗೊಳಿಸುವ ದಿಕ್ಕಿನಲ್ಲಿ ಮಹತ್ವದ ಕೆಲಸ ಪ್ರಾರಂಭವಾಗಿದೆ. ಮುಂದೆ ಸವಾಲುಗಳಿವೆ, ಆದರೆ ದೇಶದಲ್ಲಿ ಜಲಾನಯನ ಪ್ರದೇಶಗಳ ನಿರ್ವಹಣೆಯ ಕೆಲಸಗಳು ಇದೇ ವೇಗ ಮತ್ತು ಪ್ರಗತಿಯೊಂದಿಗೆ ಮುಂದುವರಿದರೆ, ಜಲಸಂಪನ್ಮೂಲದಿಂದ ಸಮೃದ್ಧವಾಗಿರುವ ಭಾರತದ ಕನಸು ಶೀಘ್ರದಲ್ಲೇ ನನಸಾಗುತ್ತದೆ. ಇಷ್ಟಲ್ಲದೆ, ನದಿ ಜಲಾನಯನ ಪ್ರದೇಶಗಳ ನಿರ್ವಹಣೆಯ ಬಗ್ಗೆ ಭಾರತದ ಮಾರ್ಗದರ್ಶನವನ್ನು ವಿಶ್ವದ ಇತರ ದೇಶಗಳು ಎದುರು ನೋಡುತ್ತವೆ. 6 ನದಿಗಳ ಜಲಾನಯನ ನಿರ್ವಹಣೆಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗಕ್ಕಾಗಿ 12 ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಮಾತನ್ನು ಹೇಳಿದರು. ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಯಡಿ ಜಲಶಕ್ತಿ ಸಚಿವಾಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ, ಮಹಾನದಿ, ಗೋದಾವರಿ, ಕೃಷ್ಣಾ, ಕಾವೇರಿ, ನರ್ಮದಾ ಮತ್ತು ಪೆರಿಯಾರ್ ನದಿಗಳ ಜಲಾನಯನ ಪ್ರದೇಶಗಳ ನಿರ್ವಹಣೆಯಲ್ಲಿ ಪರಿಸ್ಥಿತಿಯ ಮೌಲ್ಯಮಾಪನ ಮತ್ತು ನಿರ್ವಹಣೆ ಯೋಜನೆಗೆ ಅಗತ್ಯವಿರುವ ಸಂಶೋಧನೆ, ಮೇಲ್ವಿಚಾರಣೆ ಮತ್ತು ತಾಂತ್ರಿಕ ಜ್ಞಾನವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು 12 ಸಂಸ್ಥೆಗಳಿಗೆ (ವಿವಿಧ ಐಐಟಿ, ಎನ್ಐಟಿ ಮತ್ತು ಎನ್ಇಇಆರ್ಐ ಗಳು) ನೀಡಲಾಗಿದೆ.

ತಿಳುವಳಿಕೆ ಒಪ್ಪಂದಕ್ಕೆ ಎನ್ ಆರ್ ಸಿಡಿ ಪರವಾಗಿ ಯೋಜನಾ ನಿರ್ದೇಶಕರಾದ ಶ್ರೀ ಜಿ. ಅಶೋಕ್ ಕುಮಾರ್ ಹಾಗು ಒಕ್ಕೂಟ ಸಂಸ್ಥೆಗಳು ಮತ್ತು ಐಐಟಿ ಕಾನ್ಪುರದ ನಿರ್ದೇಶಕರು ಸಹಿ ಹಾಕಿದ್ದಾರೆ. ನವದೆಹಲಿಯ ಡಾ. ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಈ ಯೋಜನೆಯಲ್ಲಿ ಭಾಗವಹಿಸುವ ಎಲ್ಲಾ ಸಂಸ್ಥೆಗಳ ನಿರ್ದೇಶಕರು ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಮತ್ತು ಜಲ ಶಕ್ತಿ ಸಚಿವಾಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಐಐಟಿ ಕಾನ್ಪುರದ ನೇತೃತ್ವದಲ್ಲಿ ನಡೆಯುತ್ತಿರುವ ಸಿ ಗಂಗಾ (ಗಂಗಾ ಜಲಾನಯನ ಪ್ರದೇಶ ನಿರ್ವಹಣೆ ಮತ್ತು ಅಧ್ಯಯನ ಕೇಂದ್ರ) ಸಂಸ್ಥೆಯ ಕಾರ್ಯವನ್ನು ಶ್ಲಾಘಿಸುತ್ತಾ, ಕಾರ್ಯಕ್ರಮದ ಮುಖ್ಯ ಅತಿಥಿಯಾದ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಉಪನಿಷತ್ತಿನ ಸೂತ್ರ 'ಏಕೋಹಂ ಬಹುಸಾಂ' ಅನ್ನು ಉಲ್ಲೇಖಿಸಿದರು. ಒಂದನ್ನು ಹಲವರಿಗೆ ವಿಸ್ತರಿಸುವ ಅದೇ ತತ್ವವನ್ನು ಅನುಸರಿಸಿ 6 ನದಿಗಳ ಜಲಾನಯನ ಪ್ರದೇಶಗಳ ನಿರ್ವಹಣೆಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಜೋಡಿಸಿ ಹೊಸ ಕೇಂದ್ರಗಳನ್ನು ಮಾಡಲು ಸಿ.ಗಂಗಾ ಪ್ರಯತ್ನಿಸಿದೆ ಎಂದು ಹೇಳಿದರು. ಗಂಗಾ ನದಿಯ ಜಲಾನಯನ ಪ್ರದೇಶದ ನಿರ್ವಹಣೆಯ ತಾಂತ್ರಿಕ ಭಾಗವನ್ನು ಬಲಪಡಿಸಲು ಸಿ ಗಂಗಾ ಕೊಡುಗೆ ನೀಡಿದಂತೆಯೇ, ಈ ಶೈಕ್ಷಣಿಕ ಸಂಸ್ಥೆಗಳು ಪೂರ್ವ, ಪಶ್ಚಿಮ, ಮಧ್ಯ ಮತ್ತು ದಕ್ಷಿಣದಲ್ಲಿ ನದಿಗಳ ಜಲಾನಯನ ಪ್ರದೇಶಗಳ ನಿರ್ವಹಣೆಯ ತಾಂತ್ರಿಕ ಭಾಗವನ್ನು ಬಲಪಡಿಸುತ್ತದೆ ಎಂದು ಉದ್ದೇಶಿಸಲಾಗಿದೆ.

ತಮ್ಮ ಭಾಷಣದಲ್ಲಿ ಅವರು ಗಂಗಾ ನದಿಯನ್ನು ಶುದ್ಧೀಕರಿಸಲು ಈ ಹಿಂದೆ ಅನೇಕ ಪ್ರಯತ್ನಗಳನ್ನು ಮಾಡಲಾಗಿತ್ತು, ಆದರೆ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅದಕ್ಕೆ ಮಿಷನ್ ರೂಪವನ್ನು ನೀಡಿದಾಗ ಮತ್ತು ಶೈಕ್ಷಣಿಕ ಜ್ಞಾನವನ್ನು ಆಡಳಿತಾತ್ಮಕ ವಿಧಾನಗಳೊಂದಿಗೆ ಸಂಯೋಜಿಸಿದಾಗ ಉತ್ತಮ ಫಲಿತಾಂಶಗಳನ್ನು ಪಡೆದುಕೊಂಡೆವು. ಉತ್ತಮ ಯೋಜನೆ ಮತ್ತು ಸರಿಯಾದ ಅನುಷ್ಠಾನದಿಂದಾಗಿ, ಇಂದು ಯುನೆಸ್ಕೋ ನಮಾಮಿ ಗಂಗೆ ಮಿಷನ್ ಅನ್ನು ವಿಶ್ವದ ಹತ್ತು ಅತ್ಯುತ್ತಮ ಸಂರಕ್ಷಣೆ ಮತ್ತು ಪುನರುಜ್ಜೀವನ ಅಭಿಯಾನಗಳಲ್ಲಿ ಸೇರಿಸಿದೆ. ಗಂಗಾನದಿಯ ಶುದ್ಧತೆ ಮತ್ತು ನಿರಂತರ ಹರಿವನ್ನು ಕಾಪಾಡುವ ಉದ್ದೇಶದಿಂದ ನದಿ ಸಂರಕ್ಷಣೆಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅದನ್ನು ಜೀವನೋಪಾಯಕ್ಕೆ ಜೋಡಿಸಿದರು ಮತ್ತು ಅರ್ಥ ಗಂಗಾ ತತ್ವವನ್ನು ನೀಡಿದರು ಮತ್ತು ಅವರ ಉಪಕ್ರಮದಲ್ಲಿ ನದಿ ಸಂರಕ್ಷಣೆ ಮತ್ತು ಪುನರುಜ್ಜೀವನ ಯೋಜನೆಗಳು ಜ್ಞಾನವನ್ನು ಆಧರಿಸಿದೆ. ಈ ರೀತಿಯಾಗಿ, ನದಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ವೈಜ್ಞಾನಿಕ ದಾಖಲೀಕರಣವು ದೇಶದಲ್ಲಿ ಉತ್ತೇಜನವನ್ನು ಪಡೆದುಕೊಂಡಿತು ಮತ್ತು ಜ್ಞಾನಗಂಗಾ ರೂಪದಲ್ಲಿ ಮತ್ತೊಂದು ಸ್ತಂಭವು ಈ ಅಭಿಯಾನಕ್ಕೆ ಸೇರಿಕೊಂಡಿತು.

ಗಂಗಾ ಜಲಾನಯನ ಪ್ರದೇಶದ ನಿರ್ವಹಣೆಯ ಸಮಯದಲ್ಲಿ ನಾವು ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದೇವೆ, ಈ ಆರು ನದಿಗಳ ಜಲಾನಯನ ಪ್ರದೇಶಗಳ ನಿರ್ವಹಣೆಯ ಯೋಜನೆಯಲ್ಲಿ ಇದನ್ನು ಬಳಸಬೇಕು. ನದಿ ಸಂಬಂಧಿತ ವಿಷಯಗಳಲ್ಲಿ ಅಂತರರಾಜ್ಯ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ದೇಬಶ್ರೀ ಮುಖರ್ಜಿ ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ನ ಮಹಾನಿರ್ದೇಶಕ ಶ್ರೀ ಜಿ ಅಶೋಕ್ ಕುಮಾರ್ ಅವರು ಮಾತನಾಡಿದರು. ಸಿ ಗಂಗಾ ಸಂಸ್ಥಾಪಕ ನಿರ್ದೇಶಕ ಡಾ.ವಿನೋದ್ ತಾರೆ ಅವರು ಆರು ನದಿಗಳ ಸ್ಥಿತಿಯ ಮೌಲ್ಯಮಾಪನ ಮತ್ತು ನಿರ್ವಹಣಾ ಯೋಜನೆಯ ವಿವರಗಳನ್ನು  ನೀಡಿದರು.

ಕೆಳಗಿನ ಸಂಸ್ಥೆಗಳಿಗೆ ನಿಯೋಜಿಸಲಾದ ಜವಾಬ್ದಾರಿಗಳು:  

ನರ್ಮದಾ ಜಲಾನಯನ ಪ್ರದೇಶ ನಿರ್ವಹಣೆ – ಐಐಟಿ  ಇಂದೋರ್ ಮತ್ತು ಐಐಟಿ   ಗಾಂಧಿನಗರ

ಗೋದಾವರಿ ಜಲಾನಯನ ಪ್ರದೇಶ ನಿರ್ವಹಣೆ — ಐಐಟಿ    ಹೈದರಾಬಾದ್ ಮತ್ತು ಎನ್ಇಇಆರ್ಐ  ನಾಗ್ಪುರ

ಮಹಾನದಿ ಜಲಾನಯನ ಪ್ರದೇಶ ನಿರ್ವಹಣೆ - ಐಐಟಿ   ರಾಯ್ ಪುರ್ ಮತ್ತು ಐಐಟಿ   ರೂರ್ಕೆಲಾ

ಕೃಷ್ಣಾ ಜಲಾನಯನ ಪ್ರದೇಶ ನಿರ್ವಹಣೆ — ಎನ್ಐಟಿ ವಾರಂಗಲ್ ಮತ್ತು ಎನ್ ಐಟಿ ಸುರತ್ಕಲ್

ಕಾವೇರಿ ಜಲಾನಯನ ಪ್ರದೇಶ ನಿರ್ವಹಣೆ — ಐಐಎಸ್ಸಿ  ಬೆಂಗಳೂರು ಮತ್ತು ಎನ್ ಐ ಟಿ ತಿರುಚ್ಚಿ

ಪೆರಿಯಾರ್ ಜಲಾನಯನ ಪ್ರದೇಶ ನಿರ್ವಹಣೆ - ಐಐಟಿ  ಪಾಲಕ್ಕಾಡ್ ಮತ್ತು ಎನ್ಐಟಿ ಕ್ಯಾಲಿಕಟ್
 

*****


(Release ID: 2010031) Visitor Counter : 81