ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

​​​​​​​ಸ್ಕಾಲರ್‌ಶಿಪ್ ಯೋಜನೆಯಡಿ 2023-24ರಲ್ಲಿ ಖೇಲೋ ಇಂಡಿಯಾ ಅಥ್ಲೀಟ್‌ಗಳಿಗೆ ರೂ 30.83 ಕೋಟಿ ಬಿಡುಗಡೆ

Posted On: 08 FEB 2024 4:20PM by PIB Bengaluru

ಭಾರತೀಯ ಕ್ರೀಡಾ ಪ್ರಾಧಿಕಾರವು 2023-24 ರ ಆರ್ಥಿಕ ವರ್ಷದ ನಾಲ್ಕನೇ ತ್ರೈ ಮಾಸಿಕದಲ್ಲಿ 2571 ಖೇಲೋ ಇಂಡಿಯಾ ಅಥ್ಲೀಟ್‌ಗಳಿಗೆ ರೂ. 7,71,30,000 ಅನುದಾನವನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಮೊತ್ತವು ಖೇಲೋ ಇಂಡಿಯಾ ಸ್ಕಾಲರ್‌ಶಿಪ್ ಯೋಜನೆಯ ಒಂದು ಭಾಗವಾಗಿದೆ.

ಖೇಲೋ ಇಂಡಿಯಾ ಯೋಜನೆಯ ದೀರ್ಘಾವಧಿಯ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ, ಸುಮಾರು 3000 ಅಥ್ಲೀಟ್‌ಗಳನ್ನು ಖೇಲೋ ಇಂಡಿಯಾ ಅಥ್ಲೀಟ್‌ಗಳೆಂದು ಗುರುತಿಸಲಾಗಿದೆ ಮತ್ತು ಪ್ರತಿ ಅಥ್ಲೀಟ್‌ಗೆ ಪ್ರತಿ ವರ್ಷಕ್ಕೆ  1,20,000/ ರೂ ಹಾಗೂ ಇದರ ಜೊತೆಗೆ 5 ಲಕ್ಷ ರೂ.  ತರಬೇತಿ ಮತ್ತು ಸ್ಪರ್ಧೆಗಾಗಿ ನೀಡಲಾಗುತ್ತಿದೆ. 

2023-24ಕ್ಕೆ ಬಿಡುಗಡೆಯಾದ ನಾಲ್ಕನೇ ತ್ರೈ ಮಾಸಿಕದಲ್ಲಿ ಜನವರಿ - ಫೆಬ್ರುವರಿ - ಮಾರ್ಚ್ 2024 ರ ವ್ಯಾಪ್ತಿಗೆ ಒಳಪಡುತ್ತದೆ ಮತ್ತು 2023-24 ರ Q1, Q2, Q3 ಮತ್ತು Q4 ಗಾಗಿ ಕ್ರೀಡಾಪಟುಗಳಿಗೆ ಬಿಡುಗಡೆ ಮಾಡಲಾದ ಸಂಪೂರ್ಣ ಮೊತ್ತವು ₹ 30,83,30,000 ಆಗಿದೆ.

ಖೇಲೋ ಇಂಡಿಯಾ ಯೋಜನೆಯ ಭಾಗವಾಗಿ ಸುಮಾರು 3000 ಪ್ರತಿಭಾವಂತ ಕ್ರೀಡಾಪಟುಗಳಿಗೆ ಒಟ್ಟು ವಾರ್ಷಿಕ 6.28 ಲಕ್ಷ ರೂ.ಗಳನ್ನು ತರಬೇತಿ, ಆಹಾರ ಪದ್ಧತಿ, ಕಿಟ್ಟಿಂಗ್, ವೈದ್ಯಕೀಯ ವಿಮೆ, ಕಿಟ್‌ಗಳು ಮತ್ತು ಪಾಕೆಟ್ ಭತ್ಯೆಗಾಗಿ ನೀಡಲಾಗಿದೆ. 

ಖೇಲೋ ಇಂಡಿಯಾ ಅಥ್ಲೀಟ್‌ಗಳಿಗೆ (ಕೆಐಎ) 2023-24ಕ್ಕೆ ಬಿಡುಗಡೆಯಾದ ಮೊತ್ತ:

Q1- 2848 ಕೆಐಎಗಳು - ₹ 7,36,70,000

Q2- 2684 ಕೆಐಎಗಳು - ₹ 7,81,10,000

Q3- 2663 ಕೆಐಎಗಳು - ₹ 7,94,20,000

Q4- 2571 ಕೆಐಎಗಳು - ₹ 7,71,30,00

****


(Release ID: 2004324) Visitor Counter : 60