ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

‘ಭಾರತ್’ ಅಕ್ಕಿ ಮಾರಾಟ ಆರಂಭಿಸಿದ ಕೇಂದ್ರ ಸರ್ಕಾರ: 29 ರೂಪಾಯಿಗೆ ಕೆ.ಜಿ. ಅಕ್ಕಿ, 5 ಮತ್ತು 10 ಕೆ.ಜಿ. ಚೀಲಗಳಲ್ಲಿ ಲಭ್ಯ


ಭೌತಿಕವಾಗಿ, ಸಂಚಾರಿ ವಾಹನ ಮಳಿಗೆಗಳು,  ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ [ನಫೆಡ್] ಮತ್ತು ಭಾರತೀಯ ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟ [ಎನ್.ಸಿ.ಸಿ.ಎಫ್] ದಡಿ ಅಕ್ಕಿ ಮಾರಾಟ

‘ಭಾರತ್’ ಬ್ರಾಂಡ್ ನ ಅಕ್ಕಿ ಮಾರಾಟಕ್ಕಾಗಿ 100 ಸಂಚಾರಿ ವಾಹನಗಳಿಗೆ ಕೇಂದ್ರ ಸಚಿವ ಶ್ರೀ ಪಿಯೂಶ್ ಗೋಯಲ್ ಚಾಲನೆ

ಗ್ರಾಹಕರ ಕಲ್ಯಾಣ ಭಾರತ ಸರ್ಕಾರದ ಬದ್ಧತೆ: ಶ್ರೀ ಪಿಯೂಶ್ ಗೋಯಲ್

ಎಲ್ಲಾ ವರ್ಗದ ಜನರ ಬಗ್ಗೆ ಪ್ರಧಾನಮಂತ್ರಿಯವರು ಸೂಕ್ಷ್ಮತೆ ಹೊಂದಿದ್ದಾರೆ: ಅಗತ್ಯ ಆಹಾರ ವಸ್ತುಗಳ ಬೆಲೆ ನಿಯಂತ್ರಣದ ಬಗ್ಗೆ ನಿಗಾ : ಶ್ರೀ ಪಿಯೂಶ್ ಗೋಯಲ್

ಸರ್ಕಾರ ಮಧ್ಯಪ್ರವೇಶಿಸಿ ರೈತರಿಂದ ಅಗತ್ಯ ಆಹಾರ ವಸ್ತುಗಳನ್ನು ಖರೀದಿಸಲಿದೆ ಮತ್ತು ಅಗತ್ಯ ಕಂಡು ಬಂದಾಗ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಪೂರೈಸಲಿದೆ ; ಶ್ರೀ ಗೋಯಲ್

ಕೇಂದ್ರ ಸರ್ಕಾರದಿಂದ ಭಾರತ್ ಅಕ್ಕಿ, ಭಾರತ್ ಗೋಧಿ, ಭಾರತ್ ಬೇಳೆ, ಟೊಮೆಟೋ, ಈರುಳ್ಳಿ, ಸಕ್ಕರೆ ಮತ್ತು ಎಣ್ಣೆಯನ್ನು ಕೈಗೆಟುವ ಬೆಲೆಯಲ್ಲಿ ಪೂರೈಕೆ

Posted On: 06 FEB 2024 5:47PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ, ಜವಳಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಶ್ ಗೋಯಲ್ ಅವರು ಇಂದು ‘ಭಾರತ್’ ಬ್ರಾಂಡ್ ನ ಅಕ್ಕಿ ಮಾರಾಟ ಮಾಡುವ 100 ಸಂಚಾರಿ ವಾಹನಗಳಿಗೆ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪಿಯೂಶ್ ಗೋಯಲ್, ಎಲ್ಲಾ ವರ್ಗದ ಜನರ ಬಗ್ಗೆ ಪ್ರಧಾನಮಂತ್ರಿಯವರು ಸೂಕ್ಷ್ಮತೆ ಹೊಂದಿದ್ದು, ಅಗತ್ಯ ಆಹಾರ ವಸ್ತುಗಳ ಬೆಲೆ ನಿಯಂತ್ರಣದ ಬಗ್ಗೆ ಸರ್ಕಾರ ನಿಗಾ ವಹಿಸಿದೆ ಎಂದರು.

ಕೇಂದ್ರ ಸರ್ಕಾರ ರೈತರಷ್ಟೇ ಅಲ್ಲದೇ ಜನ ಕಲ್ಯಾಣದ ಬಗ್ಗೆ ಬದ್ಧತೆ ಹೊಂದಿದೆ. ಸರ್ಕಾರ ಮಧ್ಯಪ್ರವೇಶಿಸಿ ರೈತರಿಂದ ಅಗತ್ಯ ಆಹಾರ ವಸ್ತುಗಳ ಖರೀದಿ ಮಾಡಲಿದೆ ಮತ್ತು ಅಗತ್ಯ ಕಂಡು ಬಂದಾಗ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಪೂರೈಕೆ ಮಾಡಲಿದೆ ಎಂದು ಕೇಂದ್ರ ಸಚಿವರು ಹೇಳಿದರು.

‘ಭಾರತ್’ ಅಕ್ಕಿಯನ್ನು ಚಿಲ್ಲರೆ ಮಾರಾಟ ಕೇಂದ್ರದಲ್ಲಿ ಮಾರಾಟ ಮಾಡುತ್ತಿದ್ದು, ಕೈಗೆಟುವ ದರದಲ್ಲಿ ಮಾರಾಟ ಮಾಡುವ ಮಾರುಕಟ್ಟೆ ಸರಪಳಿಯನ್ನು ವಿಸ್ತರಿಸಲಾಗುವುದು. ಈ ಪ್ರಮುಖ ಆಹಾರ ವಸ್ತುವಿನ ಬೆಲೆಗಳಿಂದಾಗಿ ನಿರಂತರ ಮಿತವ್ಯಯಕ್ಕೆ ಸಹಕಾರಿಯಾಗಲಿದೆ. ಗ್ರಾಹಕರ ಕಲ್ಯಾಣದ ದೃಷ್ಟಿಯಿಂದ ಭಾರತ ಸರ್ಕಾರ ಸರಣಿ ರೂಪದಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಭೌತಿಕವಾಗಿ ಮತ್ತು ಸಂಚಾರಿ ವಾಹನ ಮಳಿಗೆಗಳು,  ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ [ನಫೆಡ್] ಮತ್ತು ಭಾರತೀಯ ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟ [ಎನ್.ಸಿ.ಸಿ.ಎಫ್]ದಲ್ಲಿ ಇಂದಿನಿಂದ ಅಕ್ಕಿ ದೊರೆಯುತ್ತಿದೆ. ಇದನ್ನು ಇತರೆ ಚಿಲ್ಲರೆ ಮಾರುಕಟ್ಟೆ ಮಳಿಗೆಗಳು ಮತ್ತು ಇ ವಾಣಿಜ್ಯ ವೇದಿಕೆಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ‘ಭಾರತ್’ ಅಕ್ಕಿಯನ್ನು ಕುಟುಂಬ ಸ್ನೇಹಿಯಾಗಿ ಮಾರಾಟ ಮಾಡುತ್ತಿದ್ದು, ಅಕ್ಕಿ ಚಿಲ್ಲರೆ ದರ ಕೆ.ಜಿಗೆ 29 ರೂಪಾಯಿಯಂತೆ [ಎಂ.ಆರ್.ಪಿ] 5 ಮತ್ತು 10 ಕೆ.ಜಿ. ಚೀಲಗಳಲ್ಲಿ ಲಭ್ಯವಿದೆ.

ಭಾರತ್ ಗೋಧಿಯನ್ನು ಈಗಾಗಲೇ ಈ ಮೇಲ್ಕಂಡ ಮೂರು ಸಂಸ್ಥೆಗಳ ಮೂಲಕ ಮಾರಾಟ ಮಾಡುತ್ತಿದ್ದು, 27.50 ರೂಪಾಯಿಯಂತೆ 5 ಮತ್ತು 10 ಕೆ.ಜಿ ಪ್ಯಾಕ್ ಗಳಲ್ಲಿ ಭೌತಿಕವಾಗಿ ಇವು ದೊರೆಯುತ್ತಿವೆ. ಸಂಚಾರಿ ಮಳಿಗೆಗಳಲ್ಲದೇ ಇತರೆ ಚಿಲ್ಲರೆ ಮಾರುಕಟ್ಟೆ ಸಂಪರ್ಕ ಜಾಲ ಮತ್ತು ಇ ವಾಣಿಜ್ಯ ವೇದಿಕೆಗಳು, ಇದೇ ರೀತಿ ಭಾರತ್ ಬೇಳೆ ಮೇಲಿನ ಮೂರು ಸಂಸ್ಥೆಗಳ ಮೂಲಕ ಪ್ರತಿ ಕೆಜಿಗೆ 60 ರೂಪಾಯಿಯಂತೆ ಹಾಗೂ 55 ಕೆ.ಜಿಯಂತೆ 30 ಕೆ.ಜಿ. ಚೀಲಗಳ ಮೂಲಕ ಪ್ರತಿ ಕೆ.ಜಿ. ಈರುಳ್ಳಿಯನ್ನು 25 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಭಾರತ್ ಬೇಳೆಯನ್ನು ಈ ಮೂರು ಸಂಸ್ಥೆಗಳಲ್ಲಿ ಮಾರಾಟ ಮಾಡುತ್ತಿದ್ದು, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್ ನ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಭಾರತ್ ಅಕ್ಕಿ ಜೊತೆಗೆ ಗ್ರಾಹಕರಿಗೆ ಗೋಧಿ, ಈರುಳ್ಳಿಯನ್ನು ಚಿಲ್ಲರೆ ನ್ಯಾಯಬೆಲೆ ಅಂಗಡಿಗಳಲ್ಲಿ ಕೈಗೆಟುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಪಿಎಂಜಿಕೆಎವೈ [ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ] ವೇದಿಕೆಯಡಿ ರೈತರು, ಸಾಮಾನ್ಯ ಗ್ರಾಹಕರು ಒಳಗೊಂಡಂತೆ 80 ಕೋಟಿ ಫಲಾನುಭವಿಗಳಿಗೆ ನಿಗದಿತ ಗುರಿ ಹೊಂದಿರುವ ಸಾರ್ವಜನಿಕ ಪೂರೈಕೆ ವ್ಯವಸ್ಥೆಯಡಿ ಹಾಗೂ ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳು, ಹದಿಹರೆಯದ ಬಾಲಕಿಯರು, ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಮೂಲಕ ಪೂರೈಕೆ ಮಾಡಲಾಗುತ್ತಿದೆ. ವಿವಿಧ ರೀತಿಯಲ್ಲಿ ಆಹಾರ ಧಾನ್ಯಗಳನ್ನು ನಿರ್ದಿಷ್ಟ ಫಲಾನುಭವಿಗಳಿಗೆ ಪೂರೈಸಲಾಗುತ್ತಿದೆ.

ಭಾರತ ಸರ್ಕಾರ ರೈತರಿಗೆ ಎಂ.ಎಸ್.ಪಿ ನಿಗದಿ [ಕನಿಷ್ಠ ಬೆಂಬಲ ಬೆಲೆ] ಮಾಡಿದ್ದು, ಅದರಂತೆ ಆಹಾರ ಧಾನ್ಯಗಳು, ಬೇಳೆ ಕಾಳುಗಳಲ್ಲದೇ ಒರಟು ಧಾನ್ಯಗಳು ಮತ್ತು ಸಿರಿ ಧಾನ್ಯಗಳನ್ನು ಖರೀದಿಸಲಾಗುತ್ತಿದೆ. ರಾಷ್ಟ್ರೀಯ ಖರೀದಿ ಕಾರ್ಯಾಚರಣೆಯು ಪಿಎಸ್ಎಸ್ [ಬೆಲೆ ಬೆಂಬಲ ಯೋಜನೆ]ಯಿಂದ ರೈತರಿಗೆ ಎಂ.ಎಸ್.ಪಿಯನ್ನು ಖಾತರಿಪಡಿಸಲಾಗುತ್ತಿದೆ. ಆರ್.ಎಂ.ಎಸ್ ನಲ್ಲಿ 23-24 262 ಎಲ್.ಎಂ.ಟಿ ಗೋಧಿಯನ್ನು 21.29 ಲಕ್ಷ ರೈತರಿಂದ ಖರೀದಿ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್ ಎಂ.ಎಸ್.ಪಿಯನ್ನು 2125 ರೂನಂತೆ ನಿಗದಿ ಮಾಡಲಾಗಿದೆ. ಒಟ್ಟು 55679.73 ಕೋಟಿ ರೂಪಾಯಿ ಮೊತ್ತದ ಗೋಧಿ ಖರೀದಿಸಲಾಗಿದೆ. ಕೆಎಂಎಸ್ ನಲ್ಲಿ 22-23, 569 ಎಲ್.ಎಂ.ಟಿ ಮೂಲಕ 124.97 ಲಕ್ಷ ರೈತರಿಂದ ಘೋಷಿತ ಎಂ.ಎಸ್.ಪಿ ದರ 2060 ರೂ ನಂತೆ ಗ್ರೇಡ್ ‘ಎ’ ಗೋಧಿಯನ್ನು ಖರೀದಿಸಲಾಗಿದೆ. ಒಟ್ಟು ಗೋಧಿ ಖರೀದಿ ಮೌಲ್ಯ 1,74,368.70 ಕೋಟಿ ರೂಪಾಯಿ. ಕೆ.ಎಂ.ಎಸ್ 23-24, 414 ರಂತೆ 04.02.2024 ರ ವರೆಗೆ 77.93 ಲಕ್ಷ ರೈತರಿಂದ ಘೋಷಿತ ಎಂ.ಎಸ್.ಪಿ 2203 ರೂಪಾಯಿಯಂತೆ ‘ಎ’ ದರ್ಜೆ ಅಕ್ಕಿಯನ್ನು 1,36,034 ಕೋಟಿ ರೂಪಾಯಿ ಮೊತ್ತದಲ್ಲಿ ಖರೀದಿಸಲಾಗಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ [ಪಿಎಂಜಿಕೆಎವೈ]ಯಡಿ 80.7 ಕೋಟಿ ಪಿಡಿಎಸ್ ಫಲಾನುಭವಿಗಳಿಗೆ ದೇಶದ 5.38 ಲಕ್ಷ ಎಫ್.ಪಿ.ಎಸ್ ಸಂಪರ್ಕ ಜಾಲದ ಮೂಲಕ ಸರಬರಾಜು ಮಾಡಲಾಗಿದೆ.  ಪಿಎಂಜಿಕೆಎವೈ ಯೋಜನೆಯನ್ನು 31.12.2028 ರ ವರೆಗೆ ಮತ್ತೆ ಐದು ವರ್ಷಗಳ ಕಾಲ ವಿಸ್ತರಣೆ ಮಾಡುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದು ಜಗತ್ತಿನ ಅತಿದೊಡ್ಡ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಾಗಿದೆ. ಮುಂದುವರೆದು 7.37 ಲಕ್ಷ ಎಲ್.ಎಂ.ಟಿ ಒರಟು ಧಾನ್ಯಗಳು/ಸಿರಿಧಾನ್ಯಗಳನ್ನು ಎಂ.ಎಸ್.ಪಿ ಅಡಿ ಖರೀದಿಸಲಾಗಿದೆ ಮತ್ತು 22-23 ರ ಟಿಪಿಡಿಎಸ್/ಕಲ್ಯಾಣ ಕಾರ್ಯಕ್ರಮದಡಿ ಪೂರೈಕೆ ಮಾಡಲಾಗಿದೆ. ಪ್ರಸಕ್ತ ವರ್ಷ 6.37 ಎಲ್.ಎಂ.ಟಿ ಒರಟುಧಾನ್ಯಗಳು/ಸಿರಿಧಾನ್ಯಗಳನ್ನು ಖರೀದಿಸಲಾಗಿದೆ ಮತ್ತು ಖರೀದಿ ಪ್ರಕ್ರಿಯೆ ಈಗಲೂ ಮುಂದುವರೆದಿದೆ.

ಟಿಪಿಡಿಎಸ್ ವ್ಯಾಪ್ತಿಗೆ ಒಳಪಡದ ಗ್ರಾಹಕರಿಗೆ ಲಾಭ ದೊರಕಿಸಿಕೊಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ‘ಭಾರತ್ ಗೋಧಿ’, ‘ಭಾರತ್ ಬೇಳೆ’, ‘ಭಾರತ್ ಅಕ್ಕಿ’, ಟೊಮೆಟೋ ಮತ್ತು ಈರುಳ್ಳಿಯನ್ನು ಕೈಗೆಟುವ ದರದಲ್ಲಿ ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈವರೆಗೆ 2,75,936 ಮೆಟ್ರಿಕ್ ಟನ್ ಭಾರತ್ ಗೋಧಿ, 2,96,802 ಮೆಟ್ರಿಕ್ ಟನ್ ಚೆನಾ ಬೇಳೆ, 3,04,40,547 ಕೆ.ಜಿ ಈರುಳ್ಳಿಯನ್ನು ಮಾರಾಟ ಮಾಡಲಾಗಿದ್ದು, ಇದರಿಂದ ಸಾಮಾನ್ಯ ಗ್ರಾಹಕರಿಗೆ ಲಾಭವಾಗಿದೆ.

ಭಾರತೀಯ ಆಹಾರ ನಿಗಮ [ಎಫ್.ಸಿ.ಐ] ರಾಷ್ಟ್ರಮಟ್ಟದಲ್ಲಿ ವಾರಕ್ಕೊಮ್ಮೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ [ದೇಶೀಯವಾಗಿ[ಒಎಂಎಸ್ಎಸ್[ಡಿ]ಯಡಿ ಇ ಹರಾಜು ಪ್ರಕ್ರಿಯೆ ನಡೆಸುತ್ತಿದೆ. ಗೋಧಿ ಸಂಸ್ಕರಣಾಗಾರರು [ಗೋಧಿ ಚಕ್ಕಿ/ರೋಲರ್ ಹಿಟ್ಟಿನ ಗಿರಣಿ] ವಾರದ ಇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಎಫ್.ಸಿ.ಐ ಎಫ್.ಎ.ಕ್ಯೂ ಮತ್ತು ಯುಆರ್ ಎಸ್ ಗೋಧಿಯನ್ನು ಪ್ರತಿ ಕ್ವಿಂಟಾಲ್ ಗೆ 2150 ಮತ್ತು 2125 ರೂಪಾಯಿಯಂತೆ ಖರೀದಿಸಲು ಆಹ್ವಾನ ನೀಡಲಾಗಿದ್ದು, ಈ ದರವನ್ನು ಭಾರತ ಸರ್ಕಾರ ನಿಗದಿ ಮಾಡಿದೆ. ಮಾರಾಟಗಾರರಿಗೆ ಇ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಲ್ಲ, ಖರೀದಿಸಿದ ಗೋಧಿಯನ್ನು ನೇರವಾಗಿ ಸಂಸ್ಕರಣೆ ಮಾಡಿದ ನಂತರ ಸಾಮಾನ್ಯ ಗ್ರಾಹಕರಿಗೆ ಕೈಗೆಟುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇ ಹರಾಜಿನಲ್ಲಿ ಪ್ರತಿಯೊಬ್ಬ ಬಿಡ್ ದಾರರು 400 ಮೆಟ್ರಿಕ್ ಟನ್ ವರೆಗೆ ಖರೀದಿಸಲು ಅವಕಾಶವಿದೆ. ಎಫ್.ಸಿ.ಐ 5 ಎಲ್.ಎಂ.ಟಿ ಗೋಧಿಯನ್ನು ಒಎಂಎಸ್ಎಸ್ [ಡಿ] ಯೋಜನೆಯಡಿ ವಾರದ ಇ ಹರಾಜು ಮೂಲಕ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಸುಮಾರು 75.26 ಎಲ್.ಎಂ.ಟಿ ಗೋಧಿಯನ್ನು ಎಫ್.ಸಿ.ಐ ಮೂಲಕ ಸರ್ಕಾರದ ನಿರ್ದೇಶನದಂತೆ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಭಾರತ ಸರ್ಕಾರ ಒಎಂಎಸ್ಎಸ್ [ಡಿ] ಯೋಜನೆಯಡಿ ಗಣನೀಯವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದು, 2024 ರ ಮಾರ್ಚ್ ವರೆಗೆ 101.5 ಎಲ್.ಎಂ.ಟಿಯಷ್ಟು ಮಾರಾಟಕ್ಕೆ ಅವಕಾಶ ನೀಡಲಾಗಿದೆ. 2023 ರ ಡಿಸೆಂಬರ್ ವೇಳೆಗೆ 57 ಎಲ್.ಎಂ.ಟಿಯಷ್ಟು ಮಾರಾಟ ಮಾಡಿದೆ. ಗೋಧಿ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಮಾರಾಟ ಪ್ರಕ್ರಿಯೆ ನಡೆಸಲಾಗಿದೆ. ಅಗತ್ಯ ಕಂಡು ಬಂದಲ್ಲಿ 31.3.2024 ರವರೆಗೆ 25 ಎಲ್.ಎಂ.ಟಿ ಗೋಧಿಯನ್ನು ಕಾಪು ದಾಸ್ತಾನು ಮಾಡಲು [ಹೆಚ್ಚು ಕಡಿಮೆ 101.5 ಎಲ್.ಎಂ.ಟಿ] ಕ್ರಮ ಕೈಗೊಳ್ಳಲಾಗುತ್ತಿದೆ.  

ದೇಶೀಯ ಮಾರುಕಟ್ಟೆಯಲ್ಲಿ ಸೂಕ್ತ ಪ್ರಮಾಣದ ಲಭ್ಯತೆಯ ದೃಷ್ಟಿಯಿಂದ ಗೋಧಿ ರಫ್ತು ಮಾಡುವುದನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ. ಸಗಟು ಮಾರಾಟಗಾರರು/ವ್ಯಾಪಾರಿಗಳು, ಸಂಸ್ಕರಣಾಗಾರರು, ಚಿಲ್ಲರೆ ಮತ್ತು ದೊಡ್ಡ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾಳಸಂತೆ ಕೋರರನ್ನು ನಿಯಂತ್ರಿಸಲು ದಾಸ್ತಾನು ಮೇಲೆ ಸರ್ಕಾರ ಮಿತಿ ಹೇರಿದೆ. ನಿಯಮಿತವಾಗಿ ಗೋಧಿ ದಾಸ್ತಾನು ಮೇಲೆ ನಿಗಾವಹಿಸಲಾಗಿದ್ದು, ಗೋಧಿ/ಗೋಧಿ ಹಿಟ್ಟು ಉತ್ಪನ್ನಗಳನ್ನು ವ್ಯಾಪಾರಿಗಳು, ಸಂಸ್ಕರಣಾಗಾರರು ಮತ್ತು ಚಿಲ್ಲರೆ ಮಾರಾಟಗಾರರ ಮೂಲಕ ನಿಯಮಿತವಾಗಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸಂಗ್ರಹಣೆ ಅಥವಾ ಸಂಗ್ರಹಣೆ ಮಾಡದಂತೆಯೂ ಕ್ರಮ ವಹಿಸಲಾಗಿದೆ. ಗೋಧಿ ಪೂರೈಕೆಯನ್ನು ಹೆಚ್ಚಿಸುವ ಮೂಲಕ ಮಾರುಕಟ್ಟೆ ಬೆಲೆಯಲ್ಲಿ ಹೆಚ್ಚಳವನ್ನು ಪರಿಶೀಲಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಸರ್ಕಾರ ಬಾಸ್ಮತಿಯೇತರ ಅಕ್ಕಿಯ ರಫ್ತು ನಿಷೇಧಿಸಿದೆ ಮತ್ತು ಬಾಸ್ಮತಿ ಅಕ್ಕಿಗೆ ರಫ್ತು ದರವನ್ನು 950 ಡಾಲರ್ ಗೆ ನಿಗದಿ ಮಾಡಿದೆ. ಒಎಂಎಸ್ಎಸ್[ಡಿ] ಅಡಿ ಎಫ್.ಸಿ.ಐ ವಾರಕ್ಕೊಮ್ಮೆ ಇ ಹರಾಜು ಮೂಲಕ ಅಕ್ಕಿ ಮಾರಾಟ ಮಾಡಲು ಆಹ್ವಾನ ನೀಡಿದ್ದು, ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ದರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಎಫ್.ಸಿ.ಐ ಅಕ್ಕಿಯನ್ನು ಪ್ರತಿ ಕೆ.ಜಿಗೆ 29.00-29 ರಂತೆ ಸರ್ಕಾರ ನಿಗದಿ ಮಾಡಿದ ಬೆಲೆಯಂತೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.   

ಕಬ್ಬು ಬೆಳೆಗಾರರಲ್ಲದೇ ದೇಶೀಯ ಗ್ರಾಹಕರ ಕಲ್ಯಾಣಕ್ಕಾಗಿ ಸರ್ಕಾರ ಅಚಲವಾದ ಬದ್ಧತೆ ಹೊಂದಿದೆ. ಒಂದೆಡೆ ರೈತರಿಗೆ 1.13 ಲಕ್ಷ ಕೋಟಿ ರೂಪಾಯಿ ವೇತನವನ್ನು ಪಾವತಿಸಿದ್ದು, 99.5 ರಷ್ಟು ಬಾಕಿಯನ್ನು 2022-23 ನೇ ಸಕ್ಕರೆ ಹಂಗಾಮಿನಲ್ಲಿ ಪಾವತಿಸಲಾಗಿದೆ. ಇದು ಸಕ್ಕರೆ ವಲಯದ ಇತಿಹಾಸದಲ್ಲಿ ಅತಿ ಕಡಿಮೆ ಕಬ್ಬಿನ ಬಾಕಿ ಹೊಂದಿರುವುದು ವಿಶೇಷವಾಗಿದೆ. ಇದಲ್ಲದೇ ಜಗತ್ತಿನಲ್ಲಿಯೇ ಅತಿ ಕಡಿಮೆ ಬೆಲೆಗೆ ಸಕ್ಕರೆಯನ್ನು ಭಾರತೀಯ ಗ್ರಾಹಕರು ಪಡೆಯುತ್ತಿದ್ದಾರೆ. ಭಾರತದಲ್ಲಿ ಸಕ್ಕರೆ ಬೆಲೆಯು ಕಳೆದ ಹತ್ತು ವರ್ಷಗಳಲ್ಲಿ ಕೇವಲ 2% ರಷ್ಟು ದರದುಬ್ಬರದಂತೆ ಮತ್ತು ಒಂದು ವರ್ಷದಲ್ಲಿ 6% ರಷ್ಟು ದರದುಬ್ಬರವನ್ನು ಹೊಂದಿರುವುದು ಸಹ ವಿಶೇಷವಾದದ್ದು.

ಅಂತರರಾಷ್ಟ್ರೀಯ ಬೆಲೆಗಳಿಗೆ ಅನುಗುಣವಾಗಿ ಗ್ರಾಹಕರಿಗೆ ಪೂರ್ಣ ಪ್ರಮಾಣದ ಲಾಭ ಮಾಡಿಕೊಡುವ ದೃಷ್ಟಿಯಿಂದ ಭಾರತ ಸರ್ಕಾರ ಖಾದ್ಯ ತೈಲ ದರಗಳ ಮೇಲೆ ನಿಕಟವಾಗಿ ನಿಗಾ ವಹಿಸುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆ ಮತ್ತು ನಿಯಂತ್ರಣಕ್ಕಾಗಿ ಸರ್ಕಾರ  ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ.

  • ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬಿನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ 2.5% ರಿಂದ ಶೂನ್ಯಕ್ಕೆ ಮೂಲ ಸುಂಕವನ್ನು ಇಳಿಕೆ ಮಾಡಲಾಗಿದೆ. ಎಣ್ಣೆ ಮೇಲೆ ಕೃಷಿ ಸೆಸ್ ಅನ್ನು 20% ರಿಂದ 5% ಕ್ಕೆ ಇಳಿಸಲಾಗಿದೆ. 2024 ರ ಜನವರಿ 15 ರಂದು ಈ ಸುಂಕ ಚೌಕಟ್ಟನ್ನು ಬರುವ 2025 ರ ಮಾರ್ಚ್ 31 ರ ವರೆಗೆ ವಿಸ್ತರಿಸಲಾಗಿದೆ.
  • ಸಂಸ್ಕರಿಸಿದ ಸೋಯಾಬಿನ್ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕವನ್ನು 17.5% ರಿಂದ 32.5% ತಗ್ಗಿಸಲಾಗಿದೆ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಯನ್ನು 21.12.2021 ರಿಂದ 17.5% ರಿಂದ 12.5% ಇಳಿಕೆ ಮಾಡಲಾಗಿದೆ. 2025 ಮಾರ್ಚ್ 31 ರವರೆಗೆ ಸುಂಕ ಚೌಕಟ್ಟನ್ನು ವಿಸ್ತರಣೆ ಮಾಡಲಾಗಿದೆ.
  • ಖಾದ್ಯ ತೈಲ ಲಭ್ಯತೆ ದೃಷ್ಟಿಯಿಂದ ಸರ್ಕಾರ ಸಂಸ್ಕರಿಸಿದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುವುದನ್ನು ಮುಕ್ತಗೊಳಿಸಿದೆ.
  • ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮತ್ತು ಸಂಸ್ಕರಿಸಿದ ಸೋಯಾಬಿನ್ ಎಣ್ಣೆಯ ಮೂಲ ಸುಂಕವನ್ನು 15.06.2023 ರಿಂದ ಜಾರಿಗೆ ಬರುವಂತೆ 17.5% ದಿಂದ 12.5% ಇಳಿಕೆ ಮಾಡಲಾಗಿದೆ.

ಕಳೆದ ವರ್ಷದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಮುಖ ಖಾದ್ಯ ತೈಲಗಳಾದ ಕಚ್ಚಾ ಸೋಯಾಬಿನ್, ಕಚ್ಚಾ ಸೂರ್ಯಕಾಂತಿ, ಕಚ್ಚಾ ತಾಳೆ ಎಣ್ಣೆ ಮತ್ತು ಸಂಸ್ಕರಿಸಿದ ಕಚ್ಚಾ ತೈಲದ ದರಗಳಲ್ಲಿ ಇಳಿಕೆ ಕಂಡು ಬರುತ್ತಿದೆ. ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇಳಿಕೆಯಾದ ದರದ ಲಾಭವನ್ನು ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ತಲುಪುವಂತೆ ಮಾಡಲಾಗುತ್ತಿದೆ. ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ, ಸಂಸ್ಕರಿಸಿದ ಸೋಯಾಬಿನ್ ಎಣ್ಣೆ ಮತ್ತು ಆರ್.ಬಿ.ಡಿ ಪಾಮೋಲಿನ್ ಎಣ್ಣೆ 29.01.2024 ರ ವರ್ಷಕ್ಕೆ ಹೋಲಿಸಿದರೆ  ಕ್ರಮವಾಗಿ 22.67%, 16.36% ಮತ್ತು 9.69% ರಷ್ಟು ಇಳಿಕೆ ಕಂಡು ಬಂದಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯು 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾದ 550 ಬೆಲೆ ನಿಯಂತ್ರಣ ಕೇಂದ್ರಗಳಲ್ಲಿ 22 ಅಗತ್ಯ ಆಹಾರ ಪದಾರ್ಥಗಳ ದೈನಂದಿನ ಚಿಲ್ಲರೆ ಮತ್ತು ಸಗಟು ಮಾರಾಟ ದರದ ಮೇಲೆ ಕಣ್ಗಾವಲು ಹಾಕಿದೆ. ಬೆಲೆಗಳನ್ನು ನಿಯಂತ್ರಿಸಲು ಕಾಪು ದಾಸ್ತಾನು ಬಿಡುಗಡೆ ಮಾಡಲು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಲೆಗಳ ದೈನಂದಿನ ವರದಿ ಮತ್ತು ಬೆಲೆ ಸೂಚಕ ಪರಿಸ್ಥಿತಿಯನ್ನು ಸರಿಯಾಗಿ ವಿಶ್ಲೇಷಿಸಲಾಗುತ್ತಿದೆ. ಸಂಗ್ರಹಣೆಯನ್ನು ತಡೆಯಲು ದಾಸ್ತಾನಿನ ಮೇಲೆ ಮಿತಿ ಹೇರುವ, ಆಮದು ಸುಂಕದ ಮೇಲೆ ವಿಶೇಷ ಗಮನಹರಿಸುವ, ಆಮದು, ವ್ಯಾಪಾರ ನೀತಿಯಲ್ಲಿ ಬದಲಾವಣೆ, ಆಮದು ಪ್ರಮಾಣ, ಸರಕುಗಳ ರಫ್ತಿನ ಮೇಲೆ ನಿರ್ಬಂಧ ಸೇರಿ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಗ್ರಾಹಕರು ಎದುರಿಸುತ್ತಿರುವ ಸಂಕಷ್ಟಗಳನ್ನು ತಗ್ಗಿಸಲು ಕೃಷಿ, ತೋಟಗಾರಿಕಾ ಉತ್ಪನ್ನಗಳ ಬೆಲೆಗಳಲ್ಲಿನ ಏರಿಳಿತಗಳನ್ನು ಪರಿಶೀಲಿಸಲು ದರ ಸ್ಥಿರೀಕರಣ ನಿಧಿ [ಪಿಎಸ್ಎಫ್] ಯನ್ನು ಸ್ಥಾಪಿಸಲಾಗಿದೆ. ಪಿಎಸ್ಎಫ್ ನ ಉದ್ದೇಶಗಳೆಂದರೆ (i) ರೈತರು/ರೈತ ಸಂಘಟನೆಗಳಿಂದ ಹೊಲಗಳು/ಮಂಡಿಗಳಲ್ಲಿ ನೇರವಾಗಿ ಖರೀದಿ ಮಾಡುವುದನ್ನು ಪ್ರೋತ್ಸಾಹಿಸುವುದು, (ii) ಸಂಗ್ರಹಣೆ ಮತ್ತು ಲಜ್ಜೆಯಿಲ್ಲದ ಊಹಾಪೋಹಗಳನ್ನು ನಿರುತ್ಸಾಹಗೊಳಿಸಲು ಸೂಕ್ತ ಕಾರ್ಯತಂತ್ರ ಅನುಸರಣೆ ಮತ್ತು (iii) ಇಂತಹ ಉತ್ಪನ್ನಗಳನ್ನು ಸುಲಭದರದಲ್ಲಿ ಮಾಪನಾಂಕದ ನಿರ್ಣಯದಂತೆ ಪೂರೈಕೆ ಮಾಡಿ ಗ್ರಾಹಕರ ಹಿತರಕ್ಷಣೆ ಮಾಡುವ ಉದ್ದೇಶ ಹೊಂದಲಾಗಿದೆ. ಪಿಎಸ್ಎಫ್ ನಿಂದ ಗ್ರಾಹಕರು ಮತ್ತು ರೈತರು ಸೂಕ್ತ ಫಲ ಪಡೆಯಲಿದ್ದಾರೆ. 

ದರ ಸ್ಥಿರೀಕರಣ ನಿಧಿ [ಪಿಎಸ್ಎಫ್] ಸ್ಥಾಪನೆಯಾದ ನಂತರ 2014-15 ರಿಂದ ಈ ವರೆಗೆ ಕಾರ್ಯನಿರ್ಹಣೆಯ ಬಂಡವಾಳಕ್ಕಾಗಿ ಸರ್ಕಾರ 27,489.15 ಕೋಟಿ ರೂಪಾಯಿ ಆಯವ್ಯಯದ ಬೆಂಬಲ ಪಡೆದುಕೊಂಡಿದೆ. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಗ್ರಹಣೆ ಮತ್ತು ವಿತರಣೆಗಾಗಿ ಇತರೆ ಪ್ರಾಸಂಗಿಕ ವೆಚ್ಚಗಳು ಸಹ ಇದರಲ್ಲಿ ಸೇರಿಕೊಂಡಿವೆ.

ಪ್ರಸ್ತುತ ಪಿಎಸ್ಎಫ್ ನಡಿ ಚತುರತೆಯಿಂದ ಬೇಳೆಗಳ [ತೊಗರಿ, ಉದ್ದು, ಮೂಂಗ್, ಮಸೂರ್ ಮತ್ತು ಗ್ರಾಮ್] ಕಾಪುದಾಸ್ತಾನು ಮಾಡಲಾಗಿದೆ ಮತ್ತು ಈರುಳ್ಳಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಕಾಳುಗಳು ಮತ್ತು ಈರುಳ್ಳಿ ಬಿಡುಗಡೆಯ ಲಭ್ಯತೆಯನ್ನು ಕಾಪುದಾಸ್ತಾನು ಖಚಿತಪಡಿಸಿದೆ. ಬೇಳೆಕಾಗಳು ಮತ್ತು ಈರುಳ್ಳಿಯನ್ನು ಸುಲಭ ದರದಲ್ಲಿ ಗ್ರಾಹಕರಿಗೆ ಪೂರೈಸುವ, ಇಂತಹ ಕಾಪು ದಾಸ್ತಾನು ಮೂಲಕ ಖರೀದಿಸುವ, ಈ ಸರಕುಗಳು ರೈತರಿಗೆ ನ್ಯಾಯಯುತ ಬೆಲೆಯನ್ನು ಒದಗಿಸಲು ಸಹ ಕೊಡುಗೆ ನೀಡಿದೆ.

ಟೊಮೆಟೊ ಬೆಲೆಯಲ್ಲಿನ ಏರಿಳಿತವನ್ನು ಪರಿಶೀಲಿಸಲು ಮತ್ತು ಗ್ರಾಹಕರಿಗೆ ಕೈಗೆಟುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಸರ್ಕಾರ ಬೆಲೆ ಸ್ಥಿರೀಕರಣ ನಿಧಿಯಡಿ ಟೊಮೆಟೋ ಖರೀದಿಸಿತು ಮತ್ತು ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದರದಲ್ಲಿ ಲಭ್ಯವಾಗುವಂತೆ ಮಾಡಿತು. ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ [ನಫೆಡ್] ಮತ್ತು ಭಾರತೀಯ ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟ [ಎನ್.ಸಿ.ಸಿ.ಎಫ್] ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಂಡಿಗಳಿಂದ ಟೊಮೆಟೋ ಖರೀದಿಸಿತು ಮತ್ತು ದೆಹಲಿ – ಎನ್.ಸಿ.ಆರ್, ಬಿಹಾರ್, ರಾಜಸ್ಥಾನ ಮತ್ತಿತರೆಡೆ ಕೇಂದ್ರಗಳಲ್ಲಿ ಕೈಗೆಟುವ ದರದಲ್ಲಿ ಟೊಮೆಟೋ ಮಾರಾಟ ಮಾಡಿತು. ಸುಲಭದರದಲ್ಲಿ ಪೂರೈಕೆ ಮಾಡುವ ಕ್ರಮದಿಂದಾಗಿ ಟೊಮೆಟೋ ದರ ಆರಂಭಿಕವಾಗಿ ಕೆ.ಜಿಗೆ 90 ರೂಪಾಯಿ ಇದ್ದದ್ದು ನಂತರ ಕೆ.ಜಿಗೆ 40 ರೂಪಾಯಿಗೆ ತಗ್ಗಿತು, ಇದರಿಂದ ಗ್ರಾಹಕರಿಗೆ ಹೆಚ್ಚಿನ ರೀತಿಯಲ್ಲಿ ಲಾಭವಾಯಿತು.

ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಭಾಗವಾಗಿ ಸರ್ಕಾರ ಪಿಎಸ್ಎಫ್ ನಡಿ ಈರುಳ್ಳಿ ಕಾಪು ದಾಸ್ತಾನು ನಿರ್ವಹಣೆ ಮಾಡಿತು. 2020-21 ರಲ್ಲಿ 1.00 ಎಲ್.ಎಂ.ಟಿಯಿಂದ 2022 – 23 ರಲ್ಲಿ 2.50 ಎಲ್.ಎಂ.ಟಿಗೆ ಈರುಳ್ಳಿ ದಾಸ್ತಾನು ಹಿಗ್ಗಿತು. ಹಂಗಾಮು ಅಲ್ಲದ ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಈರುಳ್ಳಿಯನ್ನು ಕಾಪು ದಾಸ್ತಾನಿನ ಮೂಲಕ ಪ್ರಮುಖ ಕೇಂದ್ರಗಳಲ್ಲಿ ಗ್ರಾಹಕರಿಗೆ ತಲುಪಿಸಲಾಯಿತು ಮತ್ತು ನಿಗದಿತ ಗುರಿ ಹೊಂದಿದ ಕಾರ್ಯಕ್ರಮಗಳಿಂದಾಗಿ ಬೆಲೆಯಲ್ಲಿ ಇಳಿಕೆ ಕಂಡು ಬಂತು. 2023-24 ರಲ್ಲಿ ಈರುಳ್ಳಿ ಕಾಪು ದಾಸ್ತಾನು 7 ಎಲ್.ಎಂ.ಟಿಗೆ ಏರಿಕೆ ಮಾಡಲಾಯಿತು. ಪ್ರಮುಖ ಮಾರುಕಟ್ಟೆಗಳಲ್ಲಿ ದರ ಏರಿಕೆಯಾಯಿತು. 03.02.2024 ರ ವೇಳೆಗೆ ಒಟ್ಟು 6.32 ಎಲ್.ಎಂ.ಟಿ ಯಷ್ಟು ಸಂಗ್ರಹಣೆ ಮಾಡಲಾಯಿತು. 08.12.2023 ರಿಂದ ಬೆಲೆ ಏರಿಕೆ ತಡೆಯಲು ಮತ್ತು ದೇಶೀಯ ಮಾರುಕಟ್ಟೆಗೆ ಸೂಕ್ತ ರೀತಿಯಲ್ಲಿ ಪೂರೈಕೆ ಮಾಡಲು ಸರ್ಕಾರ ಈರುಳ್ಳಿ ರಫ್ತು ಮಾಡಲು ನಿರ್ಭಂಧ ಹೇರಿತು. ದೇಶೀಯ ಲಭ್ಯತೆ ಹೆಚ್ಚಿಸಲು ತೊಗರಿ, ಉದ್ದಿನ ಬೇಳೆಗಳನ್ನು 31.03.2025 ರವರೆಗೆ ಫ್ರೀ ಕ್ಯಾಟಗೆರಿ ವಲಯದಲ್ಲಿ ಇರಿಸಿದ್ದು, ಮಸೂರ್ ಮೇಲಿನ ಆಮದು ಸುಂಕವನ್ನು 31.03.2025 ರವರೆಗೆ ಶೂನ್ಯಕ್ಕೆ ಇಳಿಸಲಾಗಿದೆ. ಸುಗಮ ಮತ್ತು ತಡೆ ರಹಿತ ಆಮದುಗಳಿಗೆ ಅನಕೂಲವಾಗುವಂತೆ ತೊಗರಿ ಮೇಲೆ 10% ರಷ್ಟು ಆಮದು ಸುಂಕ ತೆಗೆದು ಹಾಕಲಾಗಿದೆ.

ಬೆಲೆ ಬೆಂಬಲ ಯೋಜನೆ [ಪಿಎಸ್ಎಸ್] ಮತ್ತು ಬೆಲೆ ಸ್ಥಿರೀಕರಣ ನಿಧಿ [ಪಿಎಸ್ಎಫ್]ಯಡಿ ಚೆನಾ ಮತ್ತು ಮೂಗ್ ದಾಲ್ ಅನ್ನು ಕಾಪುದಾಸ್ತಾನಿನಿಂದ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಚೆನಾ ಬೇಳೆಯನ್ನು ರಾಜ್ಯಗಳಿಗೆ ಪ್ರತಿ ಕೆ.ಜಿಗೆ 15 ರೂಪಾಯಿಯಿಂದ ಕಲ್ಯಾಣ ಯೋಜನೆಯಡಿ ರಿಯಾಯಿತಿ ದರದಲ್ಲಿ ಪೂರೈಸಲಾಯಿತು.

ಭಾರತ ಸರ್ಕಾರ ರೈತರ ಕಲ್ಯಾಣವನ್ನು ಖಾತರಿಪಡಿಸಲು ಬದ್ಧವಾಗಿದ್ದು, ಪಿಡಿಎಸ್ ಫಲಾನುಭವಿಗಳಲ್ಲದೇ ಸಾಮಾನ್ಯ ಗ್ರಾಹಕರಿಗೂ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ [ಗೋಧಿ, ಅಕ್ಕಿ ಮತ್ತು ಒರಟು ಧಾನ್ಯಗಳು/ಸಿರಿಧಾನ್ಯಗಳು] ಕೈಗೆಟುವ ದರದಲ್ಲಿ ದೊರೆಯುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪಿಎಂಜಿಕೆಎವೈ ನಡಿ 31.12.2028  ರವರೆಗೆ ಮುಂದಿನ ಐದು ವರ್ಷಗಳ ಕಾಲ ಮುಕ್ತ ಮತ್ತು ಕೈಗೆಟುವ ದರದಲ್ಲಿ ಗೋಧಿ, ಗೋಧಿ ಹಿಟ್ಟು, ಅಕ್ಕಿ, ಬೇಳೆ ಮತ್ತು ಈರುಳ್ಳಿ/ಟೊಮೆಟೋ ಅಲ್ಲದೇ ಸಕ್ಕರೆ, ತೈಲವನ್ನು ಸಾಮಾನ್ಯ ಗ್ರಾಹಕರಿಗೂ ಸಹ ಪೂರೈಕೆ ಮಾಡಲಾಗುತ್ತಿದೆ.

***



(Release ID: 2003404) Visitor Counter : 733