ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜನವರಿ 28-29, 2024 ರಂದು ಮಹಾರಾಷ್ಟ್ರ, ಪುದುಚೇರಿ ಮತ್ತು ತಮಿಳುನಾಡಿಗೆ ಭೇಟಿ ನೀಡಲಿರುವ ಉಪರಾಷ್ಟ್ರಪತಿ 


ಮುಂಬೈನಲ್ಲಿ ನಡೆಯಲಿರುವ ಶಾಸಕಾಂಗ ಮಂಡಳಿಗಳ ಅಧ್ಯಕ್ಷರ 84ನೇ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಉಪರಾಷ್ಟ್ರಪತಿಯವರು ಭಾಷಣ ಮಾಡಲಿದ್ದಾರೆ

ಪಾಂಡಿಚೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ “ವಿಕಸಿತ ಭಾರತ @2047” ವಿಷಯದ ಕುರಿತು ಉಪರಾಷ್ಟ್ರಪತಿಯವರು ಸಂವಾದ ನಡೆಸಲಿದ್ದಾರೆ

ಪ್ರಕಟಣಾ ದಿನಾಂಕ: 27 JAN 2024 2:04PM by PIB Bengaluru

ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷರಾದ ಶ್ರೀ ಜಗದೀಪ್ ಧನಕರ್ ಅವರು ಜನವರಿ 28-29, 2024 ರಂದು ಮುಂಬೈ (ಮಹಾರಾಷ್ಟ್ರ), ಪುದುಚೇರಿ ಮತ್ತು ಕಡಲೂರು (ತಮಿಳುನಾಡು) ಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಮೊದಲ ದಿನ, ಮುಂಬೈಯ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆಯಲಿರುವ ಭಾರತದ ಶಾಸಕಾಂಗ ಸಂಸ್ಥೆಗಳ ಅಧ್ಯಕ್ಷರ 84 ನೇ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಉಪರಾಷ್ಟ್ರಪತಿಯವರು ಭಾಷಣ ಮಾಡಲಿದ್ದಾರೆ.

ನಂತರ ಅದೇ ದಿನದಂದು, ಉಪರಾಷ್ಟ್ರಪತಿಯವರು, ಪಾಂಡಿಚೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ “ವಿಕಸಿತ ಭಾರತ @2047'' ವಿಷಯದ ಕುರಿತು  ಸಂವಾದ ನಡೆಸಲಿದ್ದಾರೆ.

ತಮ್ಮ ಪ್ರವಾಸದ ಎರಡನೇ ದಿನದಂದು ಉಪರಾಷ್ಟ್ರಪತಿಯವರು, ತಮಿಳುನಾಡಿನ ಕಡಲೂರು ಜಿಲ್ಲೆಯ ಶ್ರೀ ತಿಲ್ಲೈ ನಟರಾಜರ್ ದೇವಸ್ಥಾನ, ಶ್ರೀ ಬಾಬಾಜಿ ದೇವಸ್ಥಾನ ಮತ್ತು ಶ್ರೀ ಎಲ್ಲೈ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಮತ್ತು ದೇವರ ದರ್ಶನವನ್ನು ಪಡೆಯಲಿದ್ದಾರೆ.


 ***


(ಪ್ರಕಟಣೆ ಐ.ಡಿ.: 2000081) ವಿಸಿಟರ್ ಕೌಂಟರ್ : 163
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Tamil