ಸಂಪುಟ
azadi ka amrit mahotsav

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಒಮಾನ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ (ಎಂ.ಒ.ಯು.) ಹಾಕಿದ ಸಹಿಗೆ ಸಂಪುಟದ ಅನುಮೋದನೆ

Posted On: 24 JAN 2024 6:04PM by PIB Bengaluru

ಭಾರತ ಸರ್ಕಾರದ  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸುಲ್ತಾನೇಟ್ ಆಫ್ ಒಮಾನ್ ನ ಸಾರಿಗೆ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಡುವೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಕುರಿತು 15 ಡಿಸೆಂಬರ್ 2023 ರಂದು ಸಹಿ ಹಾಕಲಾದ ತಿಳುವಳಿಕೆ ಒಪ್ಪಂದದ (ಎಂ.ಒ.ಯು.)  ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟಕ್ಕೆ  ಮಾಹಿತಿ ತಿಳಿಸಲಾಯಿತು. 

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಂಚಿಕೆ, ಮಾಹಿತಿ ಮತ್ತು ಹೂಡಿಕೆಗಳ ಮೂಲಕ ಎರಡೂ ರಾಷ್ಟ್ರಗಳ  ನಡುವೆ ಪರಸ್ಪರ ಬೆಂಬಲ, ಸಮಗ್ರ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಎಂಒಯು  ಹೊಂದಿದೆ.

ಎರಡೂ ರಾಷ್ಟ್ರಗಳ  ನಡುವೆ ಸಹಿ ದಿನಾಂಕದಿಂದ ಎಂಒಯು ಜಾರಿಗೆ ಬರುತ್ತದೆ ಮತ್ತು 3 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಿ2ಜಿ ಮತ್ತು ಬಿ2ಬಿ ದ್ವಿಪಕ್ಷೀಯ ಸಹಕಾರವನ್ನು ಎಂಒಯು  ಮೂಲಕ ಎರಡೂ ರಾಷ್ಟ್ರಗಳ  ನಡುವೆ ಹೆಚ್ಚಿಸಲಾಗುವುದು.

ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಕಾರಣವಾಗುವ ಸುಧಾರಿತ ಸಹಯೋಗವನ್ನು ಎಂಒಯು ಕಲ್ಪಿಸುತ್ತದೆ.

ತಿಳುವಳಿಕೆ ಒಪ್ಪಂದ (ಎಂ.ಒ.ಯು.)  ಹಿನ್ನೆಲೆ:
ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಹಕಾರದ ಚೌಕಟ್ಟಿನ ಅಡಿಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐ.ಸಿ.ಟಿ) ಕ್ಷೇತ್ರದ ಉದಯೋನ್ಮುಖ ಮತ್ತು ಮುನ್ನಲೆ ವಿಷಯಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ) ಮೂಲಕ ಎಂಒಯು ಅನ್ನು ಕಡ್ಡಾಯಗೊಳಿಸಲಾಗಿದೆ. ಐ.ಸಿ.ಟಿ. ಕ್ಷೇತ್ರದಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ)  ಹಲವಾರು ದೇಶಗಳು ಮತ್ತು ಬಹುಪಕ್ಷೀಯ ಏಜೆನ್ಸಿಗಳೊಂದಿಗೆ ಸಹಯೋಗವನ್ನು ಹೊಂದಿದೆ.

ಈ ಹಿಂದೆ, ವಿವಿಧ ಅವಧಿಯಲ್ಲಿ, ಐ.ಸಿ.ಟಿ. ಕ್ಷೇತ್ರದಲ್ಲಿ ಸಹಕಾರ ಮತ್ತು ಮಾಹಿತಿಯ ವಿನಿಮಯವನ್ನು ಉತ್ತೇಜಿಸಲು ವಿವಿಧ ದೇಶಗಳ ಇಂತಹ ಇಲಾಖೆ/ಸಂಸ್ಥೆಗಳು/ಏಜೆನ್ಸಿಗಳೊಂದಿಗೆ ತಿಳುವಳಿಕೆ ಒಪ್ಪಂದ (ಎಂ.ಒ.ಯು.) ಗಳನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ) ಮಾಡಿಕೊಂಡಿದೆ. ಇದು ಭಾರತ ಸರ್ಕಾರವು ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸಲು ಕೈಗೊಂಡಿರುವ ಡಿಜಿಟಲ್ ಇಂಡಿಯಾ, ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಮುಂತಾದ ವಿವಿಧ ಉಪಕ್ರಮಗಳಿಗೆ ಅನುಗುಣವಾಗಿದೆ. ಬದಲಾಗುತ್ತಿರುವ ಇಂದಿನ ಜಾಗತಿಕ ಸನ್ನಿವೇಶದಲ್ಲಿ, ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಡಿಜಿಟಲ್ ವಲಯದಲ್ಲಿ ಹೂಡಿಕೆಯನ್ನು ಹಾಗೂ ವಿವಿಧ ದೇಶಗಳ ನಡುವೆ ಪರಸ್ಪರ ಆಕರ್ಷಿಸುವ ಅವಶ್ಯಕತೆಯಿದೆ.

****


(Release ID: 1999361) Visitor Counter : 87