ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು, ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಸಂಕಲ್ಪವನ್ನು ಪೂರ್ಣಗೊಳಿಸುವುದರೊಂದಿಗೆ 5 ಶತಮಾನಗಳ ಕಾಯುವಿಕೆ ಮತ್ತು ಭರವಸೆ ಇಂದು ಈಡೇರಿದೆ ಎಂದು ಹೇಳಿದರು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಸಂಕಲ್ಪ ಈಡೇರಿದೆ ಮತ್ತು ಇದಕ್ಕಾಗಿ ಅವರಿಗೆ ನನ್ನ ಹೃದಯದಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ.

ಕೋಟಿ ಕೋಟಿ ರಾಮನ ಭಕ್ತರಿಗೆ ಇಂದು ಮರೆಯಲಾಗದ ದಿನ

ಶ್ರೀರಾಮ ಮಂದಿರವು ಯುಗಯುಗಾಂತರಗಳಿಂದಲೂ ಸನಾತನ ಸಂಸ್ಕೃತಿಯ ಪ್ರತೀಕವಾಗಿ ಉಳಿಯುತ್ತದೆ

ರಾಮನ ಅಸಂಖ್ಯಾತ ಪರಿಚಿತ ಮತ್ತು ಅಪರಿಚಿತ ಭಕ್ತರ ಹೋರಾಟ ಇಂದು ಯಶಸ್ವಿಯಾಗಿದೆ

ಇಂದು ಸನಾತನ ಸಂಸ್ಕೃತಿಯ ಹೊಸ ಯುಗ ಆರಂಭವಾಗಿದೆ

Posted On: 22 JAN 2024 4:35PM by PIB Bengaluru

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ಸಂಕಲ್ಪವು ಪೂರ್ಣಗೊಂಡಿದ್ದು, 5 ಶತಮಾನಗಳ ಕಾಯುವಿಕೆ ಮತ್ತು ಭರವಸೆ ಇಂದು ಈಡೇರಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ  ತಮ್ಮ ಪೋಸ್ಟ್‌ನಲ್ಲಿ ಶ್ರೀ ಅಮಿತ್ ಶಾ ಸಂದೇಶ ಹಂಚಿಕೊಂಡಿದ್ದಾರೆ. 5 ಶತಮಾನಗಳ ಕಾಯುವಿಕೆ ಮತ್ತು ಭರವಸೆ ಇಂದು ಈಡೇರಿದೆ. ಪ್ರಭು ಶ್ರೀರಾಮನ ಕೋಟಿ ಕೋಟಿ ಭಕ್ತರಿಗೆ ಇಂದು ಮರೆಯಲಾಗದ ದಿನ. ಇಂದು ಪ್ರಭು ಶ್ರೀರಾಮನ ಅಸಂಖ್ಯಾತ ಭಕ್ತರಂತೆ ನಮ್ಮ ರಾಮಲಲ್ಲಾ ಭವ್ಯ ಮಂದಿರದಲ್ಲಿರುವಾಗ ನಾನೂ ಭಾವೋದ್ವೇಗಕ್ಕೆ ಒಳಗಾಗಿದ್ದೇನೆ. ಈ ಭಾವನೆಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಶ್ರೀ ಅಮಿತ್‌ ಶಾ ಹೇಳಿದರು. ನಮ್ಮ ತಲೆಮಾರುಗಳ ಅನೇಕರು ಈ ಕ್ಷಣಕ್ಕಾಗಿ ತುಂಬಾ ತ್ಯಾಗ ಮಾಡಿದರು, ಆದರೆ ಯಾವುದೇ ಭಯ ಮತ್ತು ಆತಂಕವು ರಾಮಜನ್ಮಭೂಮಿಯಲ್ಲಿ ಮತ್ತೆ ಮಂದಿರವನ್ನು ನಿರ್ಮಿಸುವ ಸಂಕಲ್ಪ ಮತ್ತು ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಸಂಕಲ್ಪ ಈಡೇರಿದೆ ಮತ್ತು ಇದಕ್ಕಾಗಿ ಅವರಿಗೆ ನನ್ನ ಹೃದಯದಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ರೀ ಅಮಿತ್‌ ಶಾ ಹೇಳಿದರು.

ಶತಶತಮಾನಗಳ ಕಾಲ ಈ ಹೋರಾಟ ಮತ್ತು ಸಂಕಲ್ಪವನ್ನು ಜೀವಂತವಾಗಿಟ್ಟುಕೊಂಡು, ಅನೇಕ ಅವಮಾನಗಳನ್ನು ಮತ್ತು ಹಿಂಸೆಗಳನ್ನು ಸಹಿಸಿ, ಆದರೆ ಧರ್ಮದ ಹಾದಿಯನ್ನು ತೊರೆಯದ ಎಲ್ಲ ಮಹಾಪುರುಷರಿಗೆ ಈ ಶುಭ ದಿನದಂದು ನಾನು ನನ್ನ ನಮನಗಳನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ವಿಶ್ವ ಹಿಂದೂ ಪರಿಷತ್, ಸಾವಿರಾರು ಮಹಾನ್ ಸಂತರು ಮತ್ತು ಅಸಂಖ್ಯಾತ ಪರಿಚಿತ ಮತ್ತು ಅಪರಿಚಿತ ಜನರ ಹೋರಾಟವು ಇಂದು ಆಹ್ಲಾದಕರ ಮತ್ತು ಯಶಸ್ವಿ ಫಲಿತಾಂಶವನ್ನು ನೀಡಿದೆ ಎಂದು ಅವರು ಹೇಳಿದರು. ಈ ಬೃಹತ್ ಶ್ರೀ ರಾಮ ಜನ್ಮಭೂಮಿ ದೇವಸ್ಥಾನವು ಯುಗಯುಗಾಂತರಗಳಿಂದಲೂ ಶಾಶ್ವತ ಮತ್ತು ಸನಾತನ ಸಂಸ್ಕೃತಿಯ ವಿಶಿಷ್ಟ ಸಂಕೇತವಾಗಿ ಉಳಿಯುತ್ತದೆ ಎಂದು ಸಚಿವ ಶ್ರೀ ಅಮಿತ್‌ ಶಾ ಹೇಳಿದರು.

 


(Release ID: 1998662) Visitor Counter : 108