ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ 2024 ರ ಅಡಿಯಲ್ಲಿ ನಾಮನಿರ್ದೇಶನಗಳನ್ನು ಘೋಷಿಸಲಾಗಿದೆ
ವಿಜ್ಞಾನ ರತ್ನ, ವಿಜ್ಞಾನ ಶ್ರೀ, ವಿಜ್ಞಾನ ಯುವ ಮತ್ತು ವಿಜ್ಞಾನ ತಂಡ ಎಂಬ ನಾಲ್ಕು ವಿಭಾಗಗಳಲ್ಲಿ ಐವತ್ತಾರು ಪ್ರಶಸ್ತಿಗಳನ್ನು ಘೋಷಿಸಲಾಗಿದೆ
ಪ್ರಶಸ್ತಿಗಳನ್ನು ರಾಷ್ಟ್ರೀಯ ತಂತ್ರಜ್ಞಾನ ದಿನದಂದು (ಮೇ 11, 2024) ಘೋಷಿಸಲಾಗುವುದು
Posted On:
14 JAN 2024 10:54AM by PIB Bengaluru
ಭಾರತ ಸರ್ಕಾರವು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ "ರಾಷ್ಟ್ರೀಯ ವಿಜ್ಞಾನ ಪುರಸ್ಕಾರ" ವನ್ನು ಘೋಷಿಸಿದೆ. ಸಂಶೋಧಕರು, ತಂತ್ರಜ್ಞರು ಮತ್ತು ಆವಿಷ್ಕಾರಕರ ಅತ್ಯುತ್ತಮ ಮತ್ತು ಸ್ಪೂರ್ತಿದಾಯಕ ವೈಜ್ಞಾನಿಕ, ತಾಂತ್ರಿಕ ಮತ್ತು ನಾವೀನ್ಯತೆ ಕೊಡುಗೆಗಳನ್ನು ರಾಷ್ಟ್ರೀಯ ಪ್ರಶಸ್ತಿ ಗುರುತಿಸುತ್ತದೆ.
ವಿಜ್ಞಾನ, ತಂತ್ರಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಆವಿಷ್ಕಾರದ ವಿವಿಧ ಕ್ಷೇತ್ರಗಳಲ್ಲಿನ ವ್ಯಕ್ತಿಗಳು ಅಥವಾ ತಂಡಗಳಲ್ಲಿರಾಷ್ಟ್ರೀಯ ವಿಜ್ಞಾನ ಪುರಸ್ಕಾರ (ಆರ್ವಿಪಿ) ಗೆ ನಾಮನಿರ್ದೇಶನಗಳು / ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಗಳನ್ನು ಈ ಕೆಳಗಿನ ನಾಲ್ಕು ವಿಭಾಗಗಳಲ್ಲಿ ನೀಡಲಾಗುವುದು:
- ವಿಜ್ಞಾನ ರತ್ನ (ವಿಆರ್): ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸಲು ಗರಿಷ್ಠ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ.
- ವಿಜ್ಞಾನ ಶ್ರೀ (ವಿಎಸ್): ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ವಿಶಿಷ್ಟ ಕೊಡುಗೆಗಳನ್ನು ಗುರುತಿಸಲು ಗರಿಷ್ಠ 25 ಪ್ರಶಸ್ತಿಗಳನ್ನು ನೀಡಲಾಗುವುದು.
- ವಿಜ್ಞಾನ ಯುವ: ಶಾಂತಿ ಸ್ವರೂಪ್ ಭಟ್ನಾಗರ್ (ವಿವೈ-ಎಸ್ಎಸ್ಬಿ) ಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ಯುವ ವಿಜ್ಞಾನಿಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಗರಿಷ್ಠ 25 ಪ್ರಶಸ್ತಿಗಳನ್ನು ನೀಡಲಾಗುವುದು.
- ವಿಜ್ಞಾನ ತಂಡ (ವಿಟಿ) ಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ತಂಡದಲ್ಲಿ ಅಸಾಧಾರಣ ಕೊಡುಗೆ ನೀಡಿದ ಮೂರು ಅಥವಾ ಹೆಚ್ಚು ವಿಜ್ಞಾನಿಗಳು / ಸಂಶೋಧಕರು / ನಾವೀನ್ಯಕಾರರನ್ನು ಒಳಗೊಂಡ ತಂಡಕ್ಕೆ ಗರಿಷ್ಠ ಮೂರು ಪ್ರಶಸ್ತಿಗಳನ್ನು ನೀಡಬಹುದು.
ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು ಈ ಕೆಳಗಿನ 13 ಕ್ಷೇತ್ರಗಳಲ್ಲಿ ನೀಡಲಾಗುತ್ತದೆ, ಅವುಗಳೆಂದರೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ, ಭೂ ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ವಿಜ್ಞಾನ, ಕೃಷಿ ವಿಜ್ಞಾನ, ಪರಿಸರ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ಪರಮಾಣು ಶಕ್ತಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಇತರರು.
2024 ರ ಜನವರಿ 14ರಿಂದ2024 ರ ಫೆಬ್ರವರಿ 28 ರವರೆಗೆ ಗೃಹ ಸಚಿವಾಲಯದ (https://awards.gov.in/) ಪ್ರಶಸ್ತಿ ಪೋರ್ಟಲ್ನಲ್ಲಿ ಈ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.ಸಾಮಾನ್ಯ ಮಾರ್ಗಸೂಚಿಗಳು ಮತ್ತು ಆರ್ವಿಪಿ ವಿವರಗಳು ಪ್ರಶಸ್ತಿಗಳ ಪೋರ್ಟಲ್ನಲ್ಲಿ ಲಭ್ಯವಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಈ ವರ್ಷದ ಪ್ರಶಸ್ತಿಗಳನ್ನು ಸಂಯೋಜಿಸುತ್ತಿದೆ.
ಪ್ರಶಸ್ತಿಗಳನ್ನು 2024ರ ಮೇ 11ರಂದು (ರಾಷ್ಟ್ರೀಯ ತಂತ್ರಜ್ಞಾನ ದಿನ)ಘೋಷಿಸಲಾಗುವುದು. ಎಲ್ಲಾ ವರ್ಗದ ಪ್ರಶಸ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭವು2024 ರ ಆಗಸ್ಟ್ 23ರಂದು (ರಾಷ್ಟ್ರೀಯ ಬಾಹ್ಯಾಕಾಶ ದಿನ) ನಡೆಯಲಿದೆ.
<><><><><>
(Release ID: 1996054)
Visitor Counter : 165