ಪ್ರಧಾನ ಮಂತ್ರಿಯವರ ಕಛೇರಿ

ಛತ್ತೀಸ್ಗಢದ ಬುಡಕಟ್ಟು ಮಹಿಳೆ ಸರ್ಕಾರದ ಯೋಜನೆಗಳ ಬಗ್ಗೆ ಇರುವ ತಮ್ಮ ಅರಿವಿನಿಂದ   ಪ್ರಧಾನಮಂತ್ರಿಯವರ ಮೆಚ್ಚುಗೆಗೆ ಪಾತ್ರರಾದರು


ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ನಾಗರಿಕರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ: ಪ್ರಧಾನಿ

Posted On: 08 JAN 2024 3:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳೊಂದಿಗೆ ದೇಶಾದ್ಯಂತದ ಸಾವಿರಾರು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನಮಂತ್ರಿಯವರೊಂದಿಗಿನ ಸಂವಾದದ ಸಂದರ್ಭದಲ್ಲಿ, ಛತ್ತೀಸ್ಗಢದ ಕಂಕೇರ್ನ ರೈತ ಕುಟುಂಬಕ್ಕೆ ಸೇರಿದ ಶ್ರೀಮತಿ ಭೂಮಿಕಾ ಭೂರಾಯ ಅವರು ತಮ್ಮ ಹಳ್ಳಿಯಲ್ಲಿರುವ 29 ವನ ಧನ ಗುಂಪುಗಳಲ್ಲಿ ಒಂದರಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ವನ ಧನ ಯೋಜನೆ, ಉಜ್ವಲ ಗ್ಯಾಸ್. ಸಂಪರ್ಕ, ಜಲ ಜೀವನ್, ಎಂನರೆಗಾ ಕಾರ್ಡ್, ಪಡಿತರ ಚೀಟಿ ಮತ್ತು ಪಿಎಂ  ಕಿಸಾನ್ ಸಮ್ಮಾನ್ ನಿಧಿ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಹೇಳಿದರು.  
 
ಶ್ರೀಮತಿ ಭೂಮಿಕಾ ಅವರು ಸರ್ಕಾರದ ಎಲ್ಲಾ ಯೋಜನೆಗಳ ಹೆಸರನ್ನು ನೆನಪಿಸಿಕೊಂಡಾಗ ಪ್ರಧಾನಮಂತ್ರಿಯವರು ಪ್ರಭಾವಿತರಾದರು ಮತ್ತು ಅಂತಹ ಅನುಭವವು ಜನರಿಗಾಗಿ ಕೆಲಸ ಮಾಡುವಲ್ಲಿ ಸರ್ಕಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಲಪಡಿಸುತ್ತದೆ ಎಂದು ಹೇಳಿದರು. ಸಮಯಕ್ಕೆ ಸರಿಯಾಗಿ ಪಡಿತರ ಲಭ್ಯತೆ ಬಗ್ಗೆಯೂ ಪ್ರಧಾನಮಂತ್ರಿಯವರು ಅವರಿಂದ ಮಾಹಿತಿ ಪಡೆದರು. ಕುತೂಹಲದಿಂದ, ಸರ್ಕಾರದ ಯೋಜನೆಗಳ ಬಗ್ಗೆ ಶ್ರೀಮತಿ ಭೂಮಿಕಾ ಅವರನ್ನು ಅವರ ಮಾಹಿತಿಯ ಮೂಲದ ಬಗ್ಗೆ ಪ್ರಧಾನಮಂತ್ರಿಯವರು ಕೇಳಿದರು, ಅದಕ್ಕೆ ಅವರು ತಮ್ಮ ಕುಟುಂಬ ಮತ್ತು ಪೋಷಕರು ಎಂದು ಹೇಳಿದರು. ಶ್ರೀಮತಿ ಭೂಮಿಕಾ ಅವರ ತಂದೆ ತಾಯಿಯರಿಬ್ಬರೂ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ನೀಡಿದ ಕೊಡುಗೆಯನ್ನು ಶ್ರೀ ಮೋದಿ ಶ್ಲಾಘಿಸಿದರು. ಅವರ ಕಿರಿಯ ಸಹೋದರ ಕೂಡ ಪ್ರಸ್ತುತ ಕಾಲೇಜಿನಲ್ಲಿ ಓದುತ್ತಿದ್ದಾನೆ. ಗ್ರಾಮದ ಇತರ ನಿವಾಸಿಗಳು ತಮ್ಮ ಮಕ್ಕಳು ಶಿಕ್ಷಣದಲ್ಲಿ ತೊಡಗುವಂತೆ  ಮಾಡಲು ಪ್ರಧಾನಮಂತ್ರಿಯವರು ಒತ್ತಾಯಿಸಿದರು.

ಮಾರ್ಟ್ಗಳಿಗೆ ಕೆಜಿಗೆ 700 ರೂ.ಗೆ ಮಾರಾಟ ಮಾಡಲಾಗುವ ಮಾವಾ ಲಾಡು ಮತ್ತು ನೆಲ್ಲಿಕಾಯಿ ಉಪ್ಪಿನಕಾಯಿಗಳನ್ನು ಉತ್ಪಾದಿಸುವ ತಮ್ಮ ಸ್ವ-ಸಹಾಯ ವನ ಧನ ಗುಂಪಿನ ಬಗ್ಗೆ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು, ಇದನ್ನು ಯಾವುದೇ ತೊಂದರೆಯಿಲ್ಲದೆ ಫಲಾನುಭವಿಗಳಿಗೆ ಎಲ್ಲಾ ಸವಲತ್ತುಗಳು ಲಭ್ಯವಾಗುವಂತೆ ಮಾಡಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಮೋದಿಯವರು, ಸಾಮಾನ್ಯವಾಗಿ ನಶೆಗೆ ಬಳಸುವ ಮಾವಾವನ್ನು ಸರಿಯಾಗಿ ಬಳಸಿಕೊಳ್ಳುವ ಅವರ ಪ್ರಯತ್ನವನ್ನು ಶ್ಲಾಘಿಸಿದರು. ‘ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ನಾಗರಿಕರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ವನಧನ ಕೇಂದ್ರಗಳು ಸಾಧಿಸಿದ  ಶ್ರೇಯ  ಶ್ರೀಮತಿ ಭೂಮಿಕಾಗೆ ಸೇರಿದ್ದವು. ಎಂದು ಪ್ರಧಾನಮಂತ್ರಿಯವರು ಹೇಳಿದರು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಪ್ರಾರಂಭಿಸಲಾದ ಬುಡಕಟ್ಟು ಜನರಿಗೆ ಹೆಚ್ಚಿನ ಸಹಾಯವಾಗಲಿರುವ ಪ್ರಧಾನ ಮಂತ್ರಿ ಜನ ಮನ ಯೋಜನೆ ಬಗ್ಗೆ ಅವರು ಮಾಹಿತಿ ನೀಡಿದರು, 
 

.* * *.



(Release ID: 1994231) Visitor Counter : 63