ಪ್ರಧಾನ ಮಂತ್ರಿಯವರ ಕಛೇರಿ

​​​​​​​ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದ ಉತ್ತರ ಪ್ರದೇಶ ವಿಶ್ವಕರ್ಮ ಸಮುದಾಯ

Posted On: 08 JAN 2024 3:20PM by PIB Bengaluru

ವಿಕಸಿತ ಭಾರತ ಸಂಕಲ್ಪ ಯಾತ್ರೆ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್‌ ಮೂಲಕ ಸಂವಾದ ನಡೆಸಿದರು. ದೇಶಾದ್ಯಂತ ಸಹಸ್ರಾರು ಮಂದಿ ಸಂಕಲ್ಪ ಯಾತ್ರೆ ಫಲಾನುಭವಿಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಹಂತದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ಉತ್ತರ ಪ್ರದೇಶದ ಗೋರಖ್‌ ಪುರ್‌ ನ ಶ್ರೀ ಲಕ್ಷ್ಮೀ ಪ್ರಜಾಪತಿ ಕುಟುಂಬ ಟೆರ್ರಾಕೋಟ ರೇಷ್ಮೇ ಉದ್ಯಮದಲ್ಲಿ ತೊಡಗಿದ್ದು, ಶ್ರೀ ಲಕ್ಷ್ಮೀ ಸ್ವಸಹಾಯ ಗುಂಪು ರಚಿಸಿಕೊಂಡಿದೆ. ಇಲ್ಲಿ ಒಟ್ಟು 12 ಮಂದಿ ಸದಸ್ಯರಿದ್ದಾರೆ ಮತ್ತು 75 ಮಂದಿ ಸಹ ಸದಸ್ಯರ ಗುಂಪು ಇದಾಗಿದೆ. ಇವರ ವಾರ್ಷಿಕ ಆದಾಯ ಒಂದು ಕೋಟಿ ರೂಪಾಯಿಯಷ್ಟಿದ್ದು, ತಮ್ಮ ಉದ್ಯಮ ಕುರಿತು ಪ್ರಧಾನಮಂತ್ರಿಯವರಿಗೆ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಪ್ರಯೋಜನಗಳನ್ನು ಪಡೆಯುವ ಬಗ್ಗೆ ಪ್ರಧಾನಮಂತ್ರಿಯವರು ವಿಚಾರಿಸಿದಾಗ ‍ಶ್ರೀ ಪ್ರಜಾಪತಿ ಅವರು, ಮುಖ್ಯಮಂತ್ರಿಯವರು ದೂರದೃಷ್ಟಿಯಿಂದ ಈ ಮಹತ್ವದ ಯೋಜನೆ ಜಾರಿ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಪ್ರತಿಯೊಬ್ಬ ಕರಕುಶಲ ಕರ್ಮಿಗಳು ಪರಿಕರಗಳ ಕಿಟ್‌, ವಿದ್ಯುತ್‌ ಹಾಗೂ ಮಣ್ಣಿನ ಕೆಲಸ ಮಾಡುವ ಯಂತ್ರಗಳನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾದ ವಿವಿಧ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಸಹ ಪಡೆಯುತ್ತಿದ್ದಾರೆ ಎಂದರು.

ಹಿಂದಿನ ಸರ್ಕಾರಗಳಿಗೆ ಹೋಲಿಸಿದ ಶ್ರೀ ಪ್ರಜಾಪತಿ ಅವರು, ಹಾಲಿ ಸರ್ಕಾರ ಶೌಚಾಲಯಗಳ ನಿರ್ಮಾಣ, ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗಳನ್ನು ಜಾರಿಗೊಳಿಸಿದೆ ಮತ್ತು ಇಂತಹ ಯೋಜನೆಗಳ ಬಗ್ಗೆ ವೃತ್ತಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದೆ ಹಾಗೂ ಸರ್ಕಾರಿ ಅಧಿಕಾರಿಗಳು ತಳಮಟ್ಟದಲ್ಲಿ ಅರಿವು ಮೂಡಿಸುತ್ತಿದ್ದಾರೆ ಎಂದರು. ಮೋದಿ ಕೀ ಗ್ಯಾರೆಂಟಿ ವಾಹನ ಗ್ರಾಮಕ್ಕೆ ಭೇಟಿ ನೀಡಿದಾಗ ಜನರಿಂದ ನೂಕು ನುಗ್ಗುಲು ಉಂಟಾಗುತ್ತದೆ. ಪ್ರಧಾನಮಂತ್ರಿಯವರ ಭಾಷಣ ಜನರ ಗಮನ ಸೆಳೆಯುತ್ತದೆ ಎಂದು ಹೇಳಿದರು.      

ಬೆಂಗಳೂರು, ಹೈದರಾಬಾದ್‌, ಲಖನೌ, ದೆಹಲಿ ಸೇರಿದಂತೆ ಬಹುತೇಕ ಮೆಟ್ರೋ ಪಾಲಿಟಿನ್‌ ನಗರಗಳು, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು ಮತ್ತಿತರೆ ಕಡೆಗಳಲ್ಲಿ ಟೆರ್ರಾಕಾಟ್‌ ರೇಷ್ಮೆ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. 

ಪಿಎಂ ವಿಶ್ವಕರ್ಮ ಯೋಜನೆಯ ಹಿಂದಿನ ಆಶಯವನ್ನು ಅನಾವರಣಗೊಳಿಸಿದ ಪ್ರಧಾನಮಂತ್ರಿಯವರು, ಇದು ಜೀವನದ ಪಥ ಬಲಿಸುವ ಯೋಜನೆಗಳಾಗಿವೆ. ಈ ಯೋಜನೆಯಡಿ ಎಲ್ಲಾ ಕುಶಲಕರ್ಮಿಗಳು, ಕರಕುಶಲ ಕರ್ಮಿಗಳಿಗೆ ಆಧುನಿಕ ಪರಿಕರಗಳು ಮತ್ತು ತಂತ್ರಜ್ಞಾನ ಒದಗಿಸಲಾಗುತ್ತಿದೆ. ಪಿಎಂ ವಿಶ್ವಕರ್ಮ ಯೋಜನೆ ಕುರಿತು ಜನಜಾಗೃತಿ ಮೂಡಿಸುವಂತೆ ‍ಶ್ರೀ ಪ್ರಜಾಪತಿ ಅವರಿಗೆ ಈ ಸಂದರ್ಭದಲ್ಲಿ ಸಲಹೆ ಮಾಡಿದರು. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಸಲುವಾಗಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಗೆ ಒತ್ತು ನೀಡಲಾಗಿದೆ. ಯೋಜನೆಯನ್ನು ಯಶಸ್ವಿಗೆ ಜನರ ಒಳಗೊಳ್ಳುವಿಕೆ ಮತ್ತು ಭಾಗವಹಿಸುವಿಕೆ ಕುರಿತು ಪ್ರಧಾನಮಂತ್ರಿಯವರು ತೃಪ್ತಿ ವ್ಯಕ್ತಪಡಿಸಿದರು.   

 

***

 



(Release ID: 1994227) Visitor Counter : 81