ಸಹಕಾರ ಸಚಿವಾಲಯ

​​​​​​​ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಜನವರಿ 8 ರ ಸೋಮವಾರದಂದು ನವದೆಹಲಿಯ ವಿಜ್ಞಾನ ಭವನದಲ್ಲಿ 'PACS ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ' ಎಂಬ 'ರಾಷ್ಟ್ರೀಯ PACS ಮೆಗಾ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, PACS ಗೆ ಇತ್ತೀಚೆಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ನಿರ್ವಹಿಸಲು ಅವಕಾಶ ನೀಡಲಾಯಿತು.

ಕೆಲವೇ ತಿಂಗಳುಗಳಲ್ಲಿ, 34 ರಾಜ್ಯಗಳು/UTಗಳಿಂದ 4400 ಕ್ಕೂ ಹೆಚ್ಚು PACS/ಸಹಕಾರಿ ಸಂಘಗಳು ಈ ಉಪಕ್ರಮಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿವೆ.

2300ಕ್ಕೂ ಹೆಚ್ಚು ಸಹಕಾರ ಸಂಘಗಳು ಈಗಾಗಲೇ ಆರಂಭಿಕ ಅನುಮೋದನೆಯನ್ನು ಪಡೆದಿವೆ ಮತ್ತು ಅವುಗಳಲ್ಲಿ 146 ಜನೌಷಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿವೆ.

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡ್ ಔಷಧಿಗಳಿಗಿಂತ 50-90% ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ.

ಈ ಉಪಕ್ರಮವು PACSಗೆ ಅವರ ಆರ್ಥಿಕ ಚಟುವಟಿಕೆಗಳ ವೈವಿಧ್ಯೀಕರಣ ಮತ್ತು ವಿಸ್ತರಣೆಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ, ಇದರಿಂದಾಗಿ ಅವರೊಂದಿಗೆ ಸಂಬಂಧಿಸಿದ ಲಕ್ಷಾಂತರ ಸಣ್ಣ ಮತ್ತು ಕನಿಷ್ಠ ರೈತರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇದು ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

Posted On: 06 JAN 2024 4:37PM by PIB Bengaluru

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 'ಪ್ರಾಥಮಿಕ ಕೃಷಿ ಸಾಲ ಸಂಘಗಳು (PACS) ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ' ಎಂಬ ಕುರಿತು ರಾಷ್ಟ್ರೀಯ PACS ಮೆಗಾ ಸಮಾವೇಶಕ್ಕೆ  ಸೋಮವಾರ, ಜನವರಿ 8, 2024 ರಂದು ಹೊಸ ವಿಜ್ಞಾನ ಭವನಕ್ಕೆ ಚಾಲನೆ ನೀಡಲಿದ್ದಾರೆ. ಮೆಗಾ ಸಮಾವೇಶವನ್ನು ಸಹಕಾರ ಸಚಿವಾಲಯವು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ (NCDC) ಸಹಯೋಗದೊಂದಿಗೆ ಆಯೋಜಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, PACS ಗೆ ಇತ್ತೀಚೆಗೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ನಿರ್ವಹಿಸಲು ಅವಕಾಶ ನೀಡಲಾಯಿತು. ಕೆಲವೇ ತಿಂಗಳುಗಳಲ್ಲಿ, 34 ರಾಜ್ಯಗಳು/UTಗಳಿಂದ 4400 ಕ್ಕೂ ಹೆಚ್ಚು PACS/ಸಹಕಾರಿ ಸಂಘಗಳು ಈ ಉಪಕ್ರಮಕ್ಕಾಗಿ ಕೇಂದ್ರ ಸರ್ಕಾರದ ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ  ಅರ್ಜಿಗಳನ್ನು ಸಲ್ಲಿಸಿವೆ, ಇವುಗಳಲ್ಲಿ 2300 ಕ್ಕೂ ಹೆಚ್ಚು ಸಹಕಾರಿ ಸಂಘಗಳು ಈಗಾಗಲೇ ಆರಂಭಿಕ ಅನುಮೋದನೆಯನ್ನು ಪಡೆದಿವೆ ಮತ್ತು ಅವುಗಳಲ್ಲಿ 146 ಜನೌಷಧಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿವೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು (ACS)/ ಪ್ರಧಾನ ಕಾರ್ಯದರ್ಶಿಗಳು/ ಸಹಕಾರ ಇಲಾಖೆಯ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗಳು ಮತ್ತು ಜನೌಷಧಿ ಕೇಂದ್ರಗಳನ್ನು ನಿರ್ವಹಿಸಲು ಔಷಧ ಪರವಾನಗಿಯನ್ನು ಪಡೆದಿರುವ ಆ ಪಿಎಸಿಎಸ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಫಾರ್ಮಾಸಿಸ್ಟ್‌ಗಳು ಸಹ ಮೆಗಾ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಸಲಿದ್ದಾರೆ. 'ನ್ಯಾಷನಲ್ ಪಿಎಸಿಎಸ್ ಮೆಗಾ ಕಾನ್ಕ್ಲೇವ್' ನ ಲೈವ್ ಸ್ಟ್ರೀಮಿಂಗ್ ಅನ್ನು ಯೂಟ್ಯೂಬ್ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು (PMBJKs) ಸಾಮಾನ್ಯ ಜನರಿಗೆ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ, ಇದು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡೆಡ್ ಔಷಧಿಗಳಿಗಿಂತ 50-90% ಕಡಿಮೆ ವೆಚ್ಚವಾಗುತ್ತದೆ. ಈ ಕೇಂದ್ರಗಳ ಮೂಲಕ 2000 ಕ್ಕೂ ಹೆಚ್ಚು ವಿಧದ ಜೆನೆರಿಕ್ ಔಷಧಗಳು ಮತ್ತು ಸುಮಾರು 300 ಶಸ್ತ್ರಚಿಕಿತ್ಸಾ ವಸ್ತುಗಳು ಸಾಮಾನ್ಯ ನಾಗರಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ.

ಈ ಉಪಕ್ರಮವು PACS ಗೆ ಅವರ ಆರ್ಥಿಕ ಚಟುವಟಿಕೆಗಳ ವೈವಿಧ್ಯೀಕರಣ ಮತ್ತು ವಿಸ್ತರಣೆಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ, ಹೀಗಾಗಿ ಅವರೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ರೈತರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ದೇಶದಲ್ಲಿ ಸಹಕಾರಿ ಆಂದೋಲನದ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತಿರುವ PACS ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಸಹಕಾರ-ಸೇ-ಸಮೃದ್ಧಿ"ಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಕಾರ ಸಚಿವಾಲಯವು ನಿರಂತರವಾಗಿ ಶ್ರಮಿಸುತ್ತಿದೆ. PACS ನ ಗಣಕೀಕರಣವು ದೇಶಾದ್ಯಂತ ನಡೆಯುತ್ತಿದೆ, ಇದರ ಅಡಿಯಲ್ಲಿ, PACS ಅನ್ನು ERP ಆಧಾರಿತ ಸಾಮಾನ್ಯ ರಾಷ್ಟ್ರೀಯ ಸಾಫ್ಟ್‌ವೇರ್ ಮೂಲಕ NABARD ಗೆ ಲಿಂಕ್ ಮಾಡಲಾಗುತ್ತಿದೆ. ಇದಲ್ಲದೆ, PACS ನ ವ್ಯಾಪಾರ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು ಮತ್ತು ಅವುಗಳ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು, ಅವರಿಗೆ ಮಾದರಿ ಬೈಲಾಗಳನ್ನು ಸಿದ್ಧಪಡಿಸಲಾಗಿದೆ. ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ನೀತಿ ನಿರೂಪಣೆಯಲ್ಲಿ ನೆರವಾಗಲು ಹೊಸ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಮತ್ತು ಹೊಸ ರಾಷ್ಟ್ರೀಯ ಸಹಕಾರ ನೀತಿಯನ್ನು ಸಹ ರೂಪಿಸಲಾಗುತ್ತಿದೆ. ಗುಣಮಟ್ಟದ ಬೀಜಗಳು, ಸಾವಯವ ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ರಫ್ತು ಉತ್ತೇಜಿಸಲು, ಬೀಜಗಳು, ಸಾವಯವ ಮತ್ತು ರಫ್ತುಗಳಿಗಾಗಿ ಮೂರು ಹೊಸ ಬಹು-ರಾಜ್ಯ ಸಹಕಾರ ಸಂಘಗಳನ್ನು ಸಹ ಸ್ಥಾಪಿಸಲಾಗಿದೆ. ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ದೇಶದಲ್ಲಿ ಸಾಕಷ್ಟು ಸಂಗ್ರಹಣಾ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಯನ್ನು ಸಹ ಜಾರಿಗೊಳಿಸಲಾಗುತ್ತಿದೆ, ಇದರ ಅಡಿಯಲ್ಲಿ PACS ಮಟ್ಟದಲ್ಲಿ ಗೋಡೌನ್‌ಗಳು ಮತ್ತು ಇತರ ಕೃಷಿ ಮೂಲಸೌಕರ್ಯಗಳನ್ನು ರಚಿಸಲಾಗಿದೆ.

ಈ ಎಲ್ಲಾ ಪ್ರಮುಖ ಉಪಕ್ರಮಗಳು PACS/ಪ್ರಾಥಮಿಕ ಮಟ್ಟದ ಸಹಕಾರಿ ಸಂಘಗಳನ್ನು ಬಲಪಡಿಸುವಲ್ಲಿ ಮುಂದಾಗಿವೆ, ಜೊತೆಗೆ ಕೋಟ್ಯಂತರ ರೈತರ ಜೀವನಕ್ಕೆ ಸಮೃದ್ಧಿಯನ್ನು ತರುತ್ತವೆ.

****



(Release ID: 1993830) Visitor Counter : 98