ಗಣಿ ಸಚಿವಾಲಯ

ವರ್ಷಾಂತ್ಯದ ಅವಲೋಕನ 2023- ಗಣಿ ಸಚಿವಾಲಯ 


2023 ಗಣಿ ಸಚಿವಾಲಯ ಸುಧಾರಣೆಗಳು ಮತ್ತು ಉಪಕ್ರಮಗಳಲ್ಲಿ ಮೈಲಿಗಲ್ಲು ಸಾಧಿಸಿದ ವರ್ಷ 

ನೀತಿ ಕ್ರಮಗಳು ಮತ್ತು ಕಾಯ್ದೆಗಳಿಗೆ ಸರಣಿ ತಿದ್ದುಪಡಿ ಕೈಗೊಂಡ ವರ್ಷ 

ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳ ಪಟ್ಟಿಯಲ್ಲಿ 24 ಖನಿಜಗಳ ಸೇರ್ಪಡೆ; ಮೊದಲ ಬಾರಿಗೆ ಅಂತಹ ಖನಿಜಗಳ ಹರಾಜು ಪ್ರಕ್ರಿಯೆ ಆರಂಭ 

ಖನಿಜಾನ್ವೇಷಣೆ ಮತ್ತು ಸಂಸ್ಕರಣೆಯಲ್ಲಿ ಖಾಸಗಿ ವಲಯದವರ ಆಕರ್ಷಣೆ ಮತ್ತು ಇತ್ತೀಚಿನ ತಂತ್ರಜ್ಞಾನ ಅಳವಡಿಕೆಗೆ ಪ್ರಯತ್ನ

ಜಿಲ್ಲಾ ಖನಿಜ ಫೌಂಡೇಷನ್ (ಡಿಎಂಎಫ್ ) ನಿಧಿಯಿಂದ ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶಗಳು ಮತ್ತು ಜನರ ಜೀವನ ಬದಲಾವಣೆ 

ಅಂತಾರಾಷ್ಟ್ರೀಯ ಗಣಿಗಾರಿಕೆ ಕಾರ್ಯಕ್ರಮಗಳಲ್ಲಿ ಗಣಿ ಸಚಿವಾಲಯದ ಸಾಧನೆಗಳ ಪ್ರದರ್ಶನ 

2023-24ರಲ್ಲಿ ಡಿಸೆಂಬರ್ ವರೆಗೆ 358 ಖನಿಜಾನ್ವೇಷಣೆ ಯೋಜನೆಗಳನ್ನು ಕೈಗೆತ್ತಿಕೊಂಡ ಭಾರತೀಯ ಭೂಸರ್ವೇಕ್ಷಣ ಇಲಾಖೆ

ಎನ್ ಎಂಇಟಿಯಿಂದ 419.48 ಕೋಟಿ ರೂ. ಮೌಲ್ಯದ 51 ಖನಿಜಾನ್ವೇಷಣೆ ಯೋಜನೆಗಳಿಗೆ ಅನುಮೋದನೆ 

ಅಂಗ ಸಂಸ್ಥೆಗಳು/ ಅಧೀನ ಕಚೇರಿಗಳು ಮತ್ತಷ್ಟು ಬಲವರ್ಧನೆ 

Posted On: 29 DEC 2023 12:05PM by PIB Bengaluru

“ಬಲಿಷ್ಠವಾದ ಗಣಿಗಾರಿಕೆ ಮತ್ತು ಖನಿಜ ವಲಯವಿಲ್ಲದೆ ಸ್ವಾವಲಂಬನೆ ಸಾಧ್ಯವಿಲ್ಲ; ಏಕೆಂದರೆ ಖನಿಜಗಳು ಮತ್ತು ಗಣಿಗಾರಿಕೆ ನಮ್ಮ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ”-

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಗಣಿ ಸಚಿವಾಲಯವು 2023ನೇ ವರ್ಷದಲ್ಲಿ ನೀತಿ ಉಪಕ್ರಮಗಳು, ಸುಧಾರಣೆಗಳು ಮತ್ತು ಕಾಯ್ದೆಗಳು ಮತ್ತು ನಿಯಮಗಳಲ್ಲಿನ ತಿದ್ದುಪಡಿಗಳ ಸರಣಿಯೊಂದಿಗೆ ನಿರ್ಣಾಯಕ ಸಚಿವಾಲಯಗಳಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಈ ಸುಧಾರಣೆಗಳು ಪ್ರಸ್ತುತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತೀಯ ಆರ್ಥಿಕತೆಗೆ ಮತ್ತಷ್ಟು ವೇಗವನ್ನು ನೀಡಲು ದಾರಿ ಮಾಡಿಕೊಡುತ್ತವೆ.

ಈ ಹಂತಗಳು ನಮ್ಮ ಆರ್ಥಿಕತೆಯ ಕಾರ್ಯತಂತ್ರದ ವಲಯಗಳ ಮೇಲೆ ಪರಿಣಾಮ ಬೀರುವ ದಿಕ್ಕು ಬದಲಿಸುವಂತಹ ಉಪಕ್ರಮಗಳನ್ನು ಸಹ ಒಳಗೊಂಡಿವೆ. 2023ರಲ್ಲಿ ಗಣಿ ಸಚಿವಾಲಯವು ಕೈಗೊಂಡ ಉಪಕ್ರಮಗಳು/ಸುಧಾರಣೆಗಳ ಕೆಲವು ಪ್ರಮುಖ ಮುಖ್ಯಾಂಶಗಳು ಹೀಗಿವೆ:-

Ø  ಭಾರತಕ್ಕಾಗಿ ಮೊದಲ ಬಾರಿಗೆ ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳ ಹರಾಜು ಪ್ರಕ್ರಿಯೆ ಆರಂಭ 
 
Ø ಗಣಿಗಳು ಮತ್ತು ಖನಿಜಗಳು ( ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2023  
 
Ø  ಕಡಲಾಚೆಯ ಪ್ರದೇಶಗಳಲ್ಲಿ ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2023

Ø  ಪ್ರಧಾನ ಮಂತ್ರಿ ಖನೀಜ್ ಕ್ಷೇತ್ರ ಕಲ್ಯಾಣ ಯೋಜನೆ (ಪಿಎಂಕೆಕೆಕೆವೈ) ಯ ಹೆಚ್ಚು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಿನರಲ್ ಫೌಂಡೇಶನ್ (ಡಿಎಂಎಫ್ ) ನ ನಿಯಮಗಳು / ನಿಬಂಧನೆಗಳ ಸರಳೀಕರಣ 

Ø  ಕಾರ್ಯತಾಂತ್ರಿಕ ಮತ್ತು ನಿರ್ಣಾಯಕ ಖನಿಜಗಳು ಮತ್ತು ಗೊಬ್ಬರ ಖನಿಜಗಳಿಗಾಗಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಶೋಧನಾ ಚಟುವಟಿಕೆಗಳನ್ನು ಹೆಚ್ಚಿಸಿದೆ
 
Ø ಗಣಿಗಾರಿಕೆ ವಲಯದಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು. 
 
Ø ಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ (ಐಐಟಿಎಫ್- 2023) ಮೊದಲ ಬಾರಿಗೆ ಯಶಸ್ವಿ ಭಾಗವಹಿಸುವಿಕೆ ಮತ್ತು ಗಣಿ ಪೆವಿಲಿಯನ್ ಸ್ಥಾಪನೆ

ಮೇಲೆ ತಿಳಿಸಿದ ಉಪಕ್ರಮಗಳು/ಸಾಧನೆಗಳು ನಿಶ್ಚಿತವಾಗಿ ನಮ್ಮ ಆರ್ಥಿಕತೆಯ ವಿವಿಧ ವಲಯಗಳಿಗೆ ಹಲವಾರು ಪ್ರಯೋಜನಗಳನ್ನು ಬೀರಿವೆ:-

ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳ ಮೊದಲ ಕಂತಿನ ಹರಾಜು ಪ್ರಕ್ರಿಯೆ ಆರಂಭ 

ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ  ಸಚಿವ, ಶ್ರೀ ಪ್ರಲ್ಹಾದ್ ಜೋಶಿ ಅವರು 2023ರ ನವೆಂಬರ್ 29 ರಂದು ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳ ಹರಾಜಿನ ಮೊದಲ ಕಂತಿನ ಹರಾಜಿಗೆ ಚಾಲನೆ ನೀಡಿದರು. ಇದು 20 ನಿಕ್ಷೇಪಗಳನ್ನು (4 ಎಂಎಲ್ ಮತ್ತು 16 ಸಿಎಲ್) ಖನಿಜಗಳನ್ನು ಒಳಗೊಂಡಿದೆ, ಉದಾಹರಣೆಗೆ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಗ್ರ್ಯಾಫೈಟ್, ಲಿಥಿಯಂ, ಗ್ಲೌಕಾನೈಟ್. ಪೋಟ್ಯಾಶ್, ನಿಕಲ್ ಇತ್ಯಾದಿ. ಹರಡಿವೆ.  ಈ ಖನಿಜಗಳ ಹರಾಜು ಮತ್ತು ಹೊರತೆಗೆಯುವಿಕೆಯು ನಿರ್ಣಾಯಕ ಖನಿಜಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುತ್ತದೆ, ನಮ್ಮ ಆರ್ಥಿಕತೆಯನ್ನು ವೃದ್ಧಿಸಲು, ರಾಷ್ಟ್ರೀಯ ಭದ್ರತೆಯನ್ನು ವೃದ್ಧಿಸಲು ಮತ್ತು ಶುದ್ಧ ಇಂಧನ ಭವಿಷ್ಯಕ್ಕೆ ನಮ್ಮ ಪರಿವರ್ತನೆಯನ್ನು ಬೆಂಬಲಿಸುತ್ತದೆ. 

 
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ನಿರ್ಣಾಯಕ ಖನಿಜ ನಿಕ್ಷೇಪಗಳ ಹರಾಜಿನ ಮೊದಲನೇ ಕಂತಿಗೆ ಚಾಲನೆ ನೀಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. 

2023 ರ ನವೆಂಬರ್ 29 ರಿಂದ ಟೆಂಡರ್ ದಾಖಲೆಯ ಮಾರಾಟದ ಆರಂಭವಾಯಿತು ಮತ್ತು ಪೂರ್ವ ಬಿಡ್ ಸಭೆಯನ್ನು 22.12.2023 ರಂದು ನಡೆಸಲಾಗಿದೆ. ಖನಿಜ ನಿಕ್ಷೇಪಗಳ ವಿವರಗಳು, ಹರಾಜು ನಿಯಮಗಳು, ಟೈಮ್‌ಲೈನ್‌ಗಳು(ಕಾಲಮಿತಿ) ಇತ್ಯಾದಿಗಳನ್ನು ಎಂಎಸ್ ಟಿಸಿ ಹರಾಜು ವೇದಿಕೆಯಲ್ಲಿ ಪಡೆಯಬಹುದಾಗಿದೆ. ಹರಾಜನ್ನು ಆನ್‌ಲೈನ್‌ನಲ್ಲಿ ಪಾರದರ್ಶಕ ರೀತಿಯಲ್ಲಿ ಎರಡು ಹಂತದ ಆರೋಹಣ ವಿಧಾನದಡಿ ಹರಾಜು ಪ್ರಕ್ರಿಯೆಯ ಮೂಲಕ ನಡೆಸಲಾಗುತ್ತಿದೆ.

ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಗಳು 

2023ನೇ ವರ್ಷದಲ್ಲಿ ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅವು ದೇಶದ ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿವೆ. ಈ ಖನಿಜಗಳ ಲಭ್ಯತೆ ಕೊರತೆ ಮತ್ತು ಅವುಗಳನ್ನು ಹೊರತೆಗೆಯುವುದು ಅಥವಾ ಕೆಲವೇ ರಾಷ್ಟ್ರಗಳಲ್ಲಿ ಸಂಸ್ಕರಣೆ ಇರುವುದರಿಂದ ಅದು ಪೂರೈಕೆ ಸರಣಿಯ ಮೇಲೆ ಪರಿಣಾಮ ಬೀರುತ್ತದೆ. ಭವಿಷ್ಯದ ಜಾಗತಿಕ ಆರ್ಥಿಕತೆಯಲ್ಲಿ ತಂತ್ರಜ್ಞಾನ ಅತ್ಯಗತ್ಯವಾಗಿದ್ದು, ಅದು ಖನಿಜಗಳಾದ ಲೀಥಿಯಂ, ಗ್ರಾಫೈಟ್, ಕೋಬಾಲ್ಟ್, ಟಿಟಾನಿಯಂ ಮತ್ತು ಅಪರೂಪದ ಭೂಮಿಯಲ್ಲಿನ ಅಂಶಗಳು(ಆರ್ ಇಇ) ಮೇಲೆ ಅವಲಂಬಿತವಾಗಿದೆ. ಭಾರತ 2030ರ ವೇಳೆಗೆ ಅಸಂಪ್ರದಾಯಿಕ ಮೂಲಗಳ ಮೂಲಕ ಶೇ.50ರಷ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಹೊಂದುವ ಬದ್ಧತೆಯನ್ನು ಹೊಂದಿದೆ. ಈ ಮಹತ್ವದ ಇಂಧನ ಪರಿವರ್ತನೆ ಯೋಜನೆಯಿಂದಾಗಿ ವಿದ್ಯುತ್ ಚಾಲಿತ ಕಾರುಗಳು, ಪವನ ಮತ್ತು ಸೌರ ವಿದ್ಯುತ್ ಯೋಜನೆಗಳು ಹಾಗೂ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆಗಳಿಗೆ ಬೇಡಿಕೆ ಹೆಚ್ಚಿದ್ದು, ಅವುಗಳಲ್ಲಿನ ನಿರ್ಣಾಯಕ ಖನಿಜಗಳಿಗೂ ಬೇಡಿಕೆ ಎದುರಾಗಿದೆ. ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳಿಗೆ ಅಧಿಕ ಬೇಡಿಕೆ ಇದ್ದು, ಅವುಗಳನ್ನು ಸಾಮಾನ್ಯವಾಗಿ ಆಮದು ಮೂಲಕ ನೀಗಿಸಲಾಗುತ್ತಿದೆ. 

ಭಾರತ ನಿರ್ಣಾಯಕ ಖನಿಜಗಳ ಪೂರೈಕೆ ಸರಣಿಯನ್ನು ಬಲಪಡಿಸುವ ಗುರಿಯೊಂದಿಗೆ ಹಲವು ಸರಣಿ ಉಪಕ್ರಮಗಳನ್ನು ಸಕ್ರಿಯವಾಗಿ ಕೈಗೊಂಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಗಣಿ ಮತ್ತು ಖನಿಜಗಳ(ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ) ಕಾಯ್ದೆ (ಎಂಎಂಡಿಆರ್ ಕಾಯ್ದೆ)ಗೆ ಮಹತ್ವದ ತಿದ್ದುಪಡಿಗಳನ್ನು ತಂದು, 2023ರ ಆಗಸ್ಟ್ ನಲ್ಲಿ ಅಧಿಸೂಚನೆ ಹೊರಡಿಸಿ, ಎಂಎಂಡಿಆರ್ ಕಾಯ್ದೆಯ ಮೊದಲ ಪರಿಚ್ಛೇದದ ಡಿ ಭಾಗದಲ್ಲಿ  24 ಖನಿಜಗಳನ್ನು ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳು ಎಂದು ಅಧಿಸೂಚನೆ ಹೊರಡಿಸಲಾಗಿದೆ. ಕಾಯ್ದೆಗೆ ಸಕ್ಷನ್ 11 (ಡಿ) ಅನ್ನು ಸೇರ್ಪಡೆ ಮಾಡಲಾಗಿದ್ದು, ಇದು ಕೇಂದ್ರ ಸರ್ಕಾರಕ್ಕೆ ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜ ನಿಕ್ಷೇಪಗಳ ಹರಾಜಿನ ಅಧಿಕಾರವನ್ನು ನೀಡುತ್ತದೆ. ಮೊದಲನೇ ಪರಿಚ್ಛೇದದ (ಡಿ) ವಿಭಾಗದಲ್ಲಿ ನಮೂದಿಸಲಾದ ಖನಿಜಗಳಿಗೆ ರಿಯಾಯಿತಿಗಳನ್ನು ಮಂಜೂರು ಮಾಡುವ ಅಧಿಕಾರ ನೀಡುತ್ತದೆ. ಅಂತೆಯೇ ಖನಿಜಗಳ(ಹರಾಜು) ತಿದ್ದುಪಡಿ ನಿಯಮ 2023ರ ಅಧಿಸೂಚನೆ ಹೊರಡಿಸಲಾಗಿದ್ದು, ಅದರಲ್ಲಿ ಕೇಂದ್ರ ಸರ್ಕಾರವು ಕೈಗೊಳ್ಳಲಿರುವ ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜ ನಿಕ್ಷೇಪಗಳ ಹರಾಜು ಪ್ರಕ್ರಿಯೆಯನ್ನು ವಿವರಿಸಲಾಗಿದೆ. 

ಇಂತಹ ಹರಾಜುಗಳ ಮೂಲಕ ಸಂಗ್ರಹಿಸಲಾದ ಆದಾಯವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗುವುದು. ಹರಾಜಿನಲ್ಲಿ ಹೆಚ್ಚಿನ ಜನರನ್ನು ಪ್ರೋತ್ಸಾಹಿಸಲು ನಿರ್ಣಾಯಕ ಖನಿಜಗಳಿಗೆ ಗೌರವಧನದ ದರವನ್ನು ಏಕರೂಪಗೊಳಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವಂತೆ ಪ್ಲಾಟಿನಂ ಗ್ರೂಪ್ ಆಫ್ ಮೆಟಲ್ಸ್(ಪಿಜಿಎಂ)ಗೆ ಗೌರವ ಧನ ಶೇ.4, ಮೋಲಿಬ್ ಡೆನಿಮ್ ಗೆ ಶೇ. 7.5, ಗ್ಲುಕೋನೈಟ್ ಮತ್ತು ಪೊಟ್ಯಾಷ್ ಗೆ ಶೇ. 2.5ರಷ್ಟು 2022ರ ಮಾರ್ಚ್ ನಲ್ಲಿ ನಿಗದಿಪಡಿಸಲಾಗಿದೆ. 2023ರ ಅಕ್ಟೋಬರ್ 12ರಂದು ಸರ್ಕಾರ ಲೀಥಿಯಂಗೆ ಶೇ.3, ನಿಯೊಬಿಯುಮತ್ ಗೆ ಶೇ. 3 ಮತ್ತು ರೇರ್ ಅರ್ಥ್ ಎಲಿಮೆಂಟ್ಸ್ ಗೆ ಶೇ.1ರ ಗೌರವ ಧನವನ್ನು ಸರ್ಕಾರ ನಿಗದಿಪಡಿಸಿದೆ. ತೀರಾ ಇತ್ತೀಚೆಗೆ 19.12.2023ರಂದು ಗಣಿ ಸಚಿವಾಲಯ ನಿರ್ಣಾಯಕ ಖನಿಜಗಳಂತಹವುಗಳ ಮಾಹಿತಿಯನ್ನು ಪ್ರಚುರಪಡಿಸಲು ರೋಡ್ ಶೋ ನಡೆಸಿತ್ತು. 

ನೀತಿ ಉಪಕ್ರಮಗಳು: ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ 

ಗಣಿ ಮತ್ತು ಖನಿಜಗಳು ( ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2023  

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಅನ್ನು ತಿದ್ದುಪಡಿ ಮಾಡಿ, ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2023 ಜಾರಿಗೊಳಿಸಲಾಗಿದೆ. ಈ ತಿದ್ದುಪಡಿ ಕಾಯ್ದೆಯ ಅನ್ವಯ ಈ ಕೆಳಗಿನ ಅಂಶಗಳು ಒಳಗೊಂಡಿವೆ. 

i.    ನಿರ್ಣಾಯಕ ಖನಿಜಗಳು ಮತ್ತು ಆಳದ ಗಣಿಗಳಲ್ಲಿ ಶೋಧ ಕಾರ್ಯಕ್ಕೆ ಲೈಸನ್ಸ್ (ಪರವಾನಗಿ) ನೀಡುವುದನ್ನು ಪರಿಚಯಿಸುವುದು. ಹರಾಜಿನ ಮೂಲಕ ಮಂಜೂರು ಮಾಡಲಾದ ಶೋಧನಾ ಪರವಾನಗಿಯನ್ನು  ಹೊಸದಾಗಿ ಕಾಯ್ದೆಯ 7ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ನಿರ್ಣಾಯಕ ಮತ್ತು ಆಳದ ಗಣಿಗಳಲ್ಲಿನ ಕಾರ್ಯಾಚರಣೆಗಳಿಗೆ ಈ ಪರವಾನಗಿ ಅನುವು ಮಾಡಿಕೊಡುತ್ತದೆ. 

ii.    ನಿಗದಿತ ಕಾಲಮಿತಿಯಲ್ಲಿ ಶೋಧನಾ ಪರವಾನಗಿ ಹೊಂದಿರುವ ನಿಕ್ಷೇಪಗಳಲ್ಲಿ ಲೈಸನ್ಸ್ ದಾರರಿಗೆ ಹರಾಜು ಹಾಕಲಾಗುವುದು. ಇದರಿಂದ ರಾಜ್ಯ ಸರ್ಕಾರಗಳಿಗೆ ಉತ್ತಮ ಆದಾಯ ಬರುತ್ತದೆ. ಶೋಧನಾ ಸಂಸ್ಥೆ, ಗಣಿ ಗುತ್ತಿಗೆ ಹೊಂದಿರುವವರಿಂದ ಹರಾಜು ಪ್ರೀಮಿಯಂ ಪಾವತಿ ಪಾಲನ್ನು ಪಡೆಯಲು ಅರ್ಹವಾಗಿದೆ. ಗಣಿಗಳ ಆಳದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಜಿಂಕ್, ಸೀಸಾ, ನಿಕಲ್, ಕೊಬಾಲ್ಟ್, ಪ್ಲಾಟಿನಂ ಖನಿಜಗಳು, ವಜ್ರ ಇತ್ಯಾದಿಗಳನ್ನು ಕ್ಲಿಷ್ಟಕರವಾಗಿ ಮತ್ತು ಶೋಧಿಸುವುದು ದುಬಾರಿಯಾಗಲಿದೆ ಮತ್ತು ಸದ್ಯ ಒಟ್ಟಾರೆ ಈ ಖನಿಜಗಳ ಶೋಧ ಕಾರ್ಯ ಅತಿ ಕಡಿಮೆ ಇದೆ. 

iii.    ದೇಶ ಬಹುತೇಕ ಈ ಖನಿಜಗಳಿಗೆ ಆಮದನ್ನು ಅವಲಂಬಿಸಿದೆ. ಶೋಧನಾ ಪರವಾನಗಿ ಎಲ್ಲಾ ನಿರ್ಣಾಯಕ ಮತ್ತು ಗಣಿಗಳ ಆಳದಲ್ಲಿನ ಖನಿಜಗಳ ಅನ್ವೇಷಣೆ ಆಯಾಮದಲ್ಲಿ ಖಾಸಗಿ ವಲಯವನ್ನು ಉತ್ತೇಜಿಸಲು ನೆರವು ನೀಡುತ್ತಿದೆ.  

iv.    ಅಲ್ಲದೆ 6 ಖನಿಜ ಉತ್ಪನ್ನಗಳು, ಅವುಗಳೆಂದರೆ, (i) ಬೆರಿಲ್ ಮತ್ತು ಇತರ ಬೆರಿಲಿಯಮ್-ಬೇರಿಂಗ್ ಖನಿಜಗಳು (ii) ಲಿಥಿಯಂ-ಬೇರಿಂಗ್ ಖನಿಜಗಳು, (iii) ನಿಯೋಬಿಯಮ್-ಬೇರಿಂಗ್ ಖನಿಜಗಳು, (iv) ಟೈಟಾನಿಯಂ ಹೊಂದಿರುವ ಖನಿಜಗಳು ಮತ್ತು ಅದಿರುಗಳು, (v) ಟ್ಯಾಂಟಲಿಯಮ್-ಬೇರಿಂಗ್ ಖನಿಜಗಳು ಮತ್ತು (vi) ಜಿರ್ಕೋನಿಯಮ್-ಬೇರಿಂಗ್ ಖನಿಜಗಳು ಮತ್ತು ಅದಿರುಗಳನ್ನು ಕಾಯ್ದೆಯ ಪಾರ್ಟ್ ಬಿನಲ್ಲಿನ ಮೊದಲ ಶೆಡ್ಯೂಲ್ ನಲ್ಲಿ ನಿಗದಿಪಡಿಸಲಾದ ಪರಮಾಣು ಖನಿಜಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ.  ಈ ಖನಿಜಗಳನ್ನು ಬಾಹ್ಯಾಕಾಶ ಉದ್ಯಮ, ಎಲೆಕ್ಟ್ರಾನಿಕ್ಸ್, ಸಂವಹನ, ಇಂಧನ ವಲಯ, ವಿದ್ಯುತ್ ಬ್ಯಾಟರಿಗಳಲ್ಲಿ ವಿವಿಧ ಅನ್ವಯಿಕೆಗಳನ್ನು ಹೊಂದಿವೆ ಮತ್ತು ಭಾರತದ ಶೂನ್ಯ ಇಂಗಾಲ ಹೊರಸೂಸುವಿಕೆ ಬದ್ಧತೆಯಲ್ಲಿ ನಿರ್ಣಾಯಕವಾಗಿವೆ. ಪರಮಾಣು ಖನಿಜಗಳ ಪಟ್ಟಿಯಲ್ಲಿ ಅವುಗಳ ಸೇರ್ಪಡೆಯಿಂದಾಗಿ, ಅವುಗಳ ಗಣಿಗಾರಿಕೆ ಮತ್ತು ಶೋಧನಾ ಕಾರ್ಯಕ್ಕೆ ಸರ್ಕಾರಿ ಸಂಸ್ಥೆಗಳಿಗೆ ಮೀಸಲಾಗಿತ್ತು. ಈ ಖನಿಜಗಳನ್ನು ಪಟ್ಟಿಯಿಂದ ತೆಗೆದುಹಾಕುವುದರಿಂದ, ಈ ಖನಿಜಗಳ ಶೋಧ ಕಾರ್ಯ ಮತ್ತು ಗಣಿಗಾರಿಕೆಯನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಲಾಗಿದೆ. ಅದರ ಪರಿಣಾಮವಾಗಿ ದೇಶದಲ್ಲಿ ಈ ಖನಿಜಗಳ ಶೋಧ ಕಾರ್ಯ  ಮತ್ತು ಗಣಿಗಾರಿಕೆ ಗಮನಾರ್ಹವಾಗಿ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. 

v.    ಈ ಕಾಯ್ದೆ ಕೇಂದ್ರ ಸರ್ಕಾರಕ್ಕೆ ವಿಶೇಷವಾಗಿ ಗಣಿಗಾರಿಕೆಗಳ ಹರಾಜಿಗೆ ಅಧಿಕಾರ ನೀಡುತ್ತದೆ ಮತ್ತು ಕಾಯ್ದೆಯ ಪಾರ್ಟ್ ಡಿಯ ಮೊದಲ ಪರಿಚ್ಛೇಧದಲ್ಲಿ ಹೊಸದಾಗಿ ಪಟ್ಟಿ ಮಾಡಲಾದ ನಿರ್ಣಾಯಕ ಖನಿಜಗಳ ಸಂಯುಕ್ತ ಪರವಾನಗಿಗೆ ಅವಕಾಶ ನೀಡುತ್ತದೆ. ಈ ನಿರ್ಣಾಯಕ ಖನಿಜಗಳು ನಮ್ಮ ಆರ್ಥಿಕತೆಯ ಬೆಳವಣಿಗೆಗೆ ಅತ್ಯಗತ್ಯವಾಗಿವೆ. ಇವು ಕೇಂದ್ರ ಸರ್ಕಾರಕ್ಕೆ ನಿರ್ಣಾಯಕ ಖನಿಜಗಳ ಹರಾಜಿನಲ್ಲಿ ವಿನಾಯಿತಿಗಳನ್ನು ನೀಡಲು ನೆರವಾಗುತ್ತದೆ ಮತ್ತು ಹರಾಜಿನ ವೇಗ ಹೆಚ್ಚಿಸಬಹುದಾಗಿದೆ ಮತ್ತು ಮುಂಚಿತವಾಗಿಯೇ ಖನಿಜಗಳ ಉತ್ಪಾದನೆಗೆ ನೆರವಾಗಲಿದೆ. ಕೇಂದ್ರ ಸರ್ಕಾರ ಹರಾಜು ನಡೆಸುವ ಸಮಯದಲ್ಲಿ ರಾಜ್ಯ ಸರ್ಕಾರಗಳು ಮಾತ್ರ ಕೆಲವು ಆಯ್ದ ಬಿಡ್ಡರ್ ಗಳಿಗೆ ಖನಿಜ ವಿನಾಯಿತಿಗಳನ್ನು ಮಂಜೂರು ಮಾಡಬಹುದು ಮತ್ತು ಹರಾಜು ಪ್ರೀಮಿಯಂ ಮತ್ತು ಇತರೆ ಸಾಂಸ್ಥಿಕ ಪಾವತಿಗಳನ್ನು ರಾಜ್ಯ ಸರ್ಕಾರ ಸಂಗ್ರಹಿಸಿಕೊಳ್ಳಬಹುದು.         

ಕಡಲಾಚೆಯ ಪ್ರದೇಶಗಳಲ್ಲಿ ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) (ತಿದ್ದುಪಡಿ) ಕಾಯ್ದೆ 2023:-

 ಕಡಲಾಚೆಯ ಪ್ರದೇಶಗಳಲ್ಲಿ ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) (ತಿದ್ದುಪಡಿ) ಕಾಯ್ದೆ 2023ರಲ್ಲಿ ಈ ಕೆಳಗಿನ ಅಂಶಗಳಿವೆ. ಅವುಗಳೆಂದರೆ:-

i.    ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಮಾತ್ರ ಉತ್ಪಾದನಾ ಗುತ್ತಿಗೆಯನ್ನು ಹರಾಜು ಮೂಲಕ ಮಂಜೂರು ಮಾಡಲಾಗುವುದು. 

ii.    ಶೋಧನಾ ಕಾರ್ಯದ ನಂತರ ಉತ್ಪಾದನಾ ಕಾರ್ಯಾಚರಣೆ ಕೈಗೊಳ್ಳಲು ಆ ಎರಡು ಉದ್ದೇಶಗಳಿಗೆ ಎರಡು ಹಂತದಲ್ಲಿ ಸಂಯುಕ್ತ ಪರವಾನಗಿ ನೀಡುವುದನ್ನು ಆರಂಭಿಸುವುದು ಇದನ್ನು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯಡಿ ಹರಾಜು ಮೂಲಕ ಮಾತ್ರ ಮಂಜೂರು ಮಾಡಬೇಕು.          

iii.    ಕ್ರಮೇಣ ಅರ್ಜಿಗಳನ್ನು ಆಧರಿಸಿ  ಪರ್ಮಿಟ್ ಮತ್ತು ಶೋಧನಾ ಪರವಾನಗಿ ಮಂಜೂರು ಮಾಡುವ ಹಾಲಿ ಸಕ್ಷನ್ 11 ಮತ್ತು 12ನ್ನು ಅರ್ಜಿಗಳನ್ನು ಆಧರಿಸಿ ತೆಗೆದು ಹಾಕುವುದು.            

iv.    ಘೋಷಣಾ ಅಂಶವನ್ನು ಕಾಯ್ದೆಯಡಿ ಸೇರ್ಪಡೆ ಮಾಡಲಾಗುವುದು.(ಸಕ್ಷನ್ 13 ಸಿ ಅಡಿ) ತಿದ್ದುಪಡಿ ಕಾಯ್ದೆ ಅನ್ವಯ ಸಂಯುಕ್ತ ಪರವಾನಗಿ ಅಥವಾ ಉತ್ಪಾದನಾ ಗುತ್ತಿಗೆಯನ್ನು ಅನುಮೋದಿಸಲು ಹರಾಜು ಪದ್ಧತಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ತಿದ್ದುಪಡಿ ಕಾಯ್ದೆ ಜಾರಿಯಾದ ದಿನಾಂಕಕ್ಕೂ ಮುನ್ನ ಸಲ್ಲಿಕೆಯಾಗಿದ್ದ ಅರ್ಜಿಗಳು ಅನರ್ಹವಾಗುತ್ತವೆ. ಅಂತೆಯೇ ತಿದ್ದುಪಡಿ ಕಾಯ್ದೆ ಜಾರಿಗೆ ಮುನ್ನ ಸ್ವೀಕರಿಸಿರುವ ಅರ್ಜಿಗಳಲ್ಲಿ ಶೋಧನಾ ಪರವಾನಗಿ ಮಂಜೂರಾಗಿದ್ದರೆ, ಉತ್ಪಾದನಾ ಗುತ್ತಿಗೆ ಮಂಜೂರು ಮಾಡಲು ಅವರು ಅನರ್ಹರಾಗುತ್ತಾರೆ. ಅದರಂತೆ ಶೋಧನಾ ಪರವಾನಗಿ ಕೂಡ ಪರಿಣಾಮಕಾರಿಯಾಗುವುದಿಲ್ಲ. ಈ ವಲಯದಲ್ಲಿನ ಬಿಕ್ಕಟ್ಟನ್ನು ನಿವಾರಿಸಲು ಈ ಅಂಶವನ್ನು ತೆಗೆದು ಹಾಕಬೇಕು.  

v.    ಉತ್ಪಾದನಾ ಪರವಾನಗಿ ಗುತ್ತಿಗೆಗಳ ನವೀಕರಣವನ್ನು ತೆಗೆದು ಹಾಕಬೇಕು ಮತ್ತು ಎಂಎಂಡಿಆರ್ ಕಾಯ್ದೆಯಂತೆಯೇ ಅದರ ಅವಧಿಯನ್ನು 50 ವರ್ಷಕ್ಕೆ ನಿಗದಿಪಡಿಸಬೇಕು.    

vi.    ಒಬ್ಬ ವ್ಯಕ್ತಿಯು ಒಂದು ಅಥವಾ ಹೆಚ್ಚಿನ ಕಾರ್ಯಾಚರಣಾ ಹಕ್ಕುಗಳ ಅಡಿಯಲ್ಲಿ (ಒಟ್ಟಿಗೆ ಪರಿಗಣಿಸಲಾಗಿದೆ) ಯಾವುದೇ ಖನಿಜ ಅಥವಾ ಸಂಬಂಧಿತ ಖನಿಜಗಳ ಸೂಚಿಸಲಾದ ಗುಂಪಿಗೆ ಸಂಬಂಧಿಸಿದಂತೆ 45 ನಿಮಿಷಗಳ ರೇಖಾಂಶದಿಂದ 45 ನಿಮಿಷಗಳ ಅಕ್ಷಾಂಶಕ್ಕಿಂತ ಹೆಚ್ಚಿನದನ್ನು ಪಡೆಯಲು ಸಾಧ್ಯವಿಲ್ಲ. ಶೋಧನಾ ಕಾರ್ಯಕ್ಕೆ ನಿಧಿಗಳ ಅಗತ್ಯತೆ ಖಾತರಿ ಪಡಿಸುವುದು, ಕಡಲಾಚೆಯ ಗಣಿಗಾರಿಕೆಯಿಂದ ಆಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸುವುದು, ವಿಪತ್ತು ಪರಿಹಾರ, ಸಂಶೋಧನೆ, ಶೋಧನಾ ಕಾರ್ಯದಿಂದ ವ್ಯಕ್ತಿಗಳಿಗೆ ಅನುಕೂಲವಾಗುವುದು. ಅಥವಾ ಉತ್ಪಾದನಾ ಕಾರ್ಯಾಚರಣೆಗಳು ಇತ್ಯಾದಿಗಳು ಕಡಲಾಚೆಯ ಕ್ಲಸ್ಟರ್ ಸ್ಥಾಪನೆ ಮೂಲಕ ಭಾರತದಲ್ಲಿನ ಸಾರ್ವಜನಿಕ ಲೆಕ್ಕಪತ್ರವನ್ನು ನಿರ್ವಹಣೆ ಮಾಡಬಹುದಾಗಿದೆ. ರಾಯಧನದ ಮೂರನೇ ಒಂದು ಭಾಗವನ್ನು ಮೀರದಂತೆ ಖನಿಜಗಳ ಉತ್ಪಾದನೆಯ ಮೇಲಿನ ಹೆಚ್ಚುವರಿ ಲೆವಿಯಿಂದ ಇದು ನಿಧಿಯನ್ನು ಪಡೆಯುತ್ತದೆ.

vii.    ಕೇಂದ್ರ ಸರ್ಕಾರ ಮೀಸಲಿರಿಸಲಾದ ಪ್ರದೇಶಗಳಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಸ್ಪರ್ಧಾತ್ಮಕ ಬಿಡ್ಡಿಂಗ್ ಇಲ್ಲದೆ, ಕಾರ್ಯಾಚರಣೆ ಹಕ್ಕುಗಳನ್ನು ಮಂಜೂರು ಮಾಡುವ ಅಂಶ ಒಳಗೊಂಡಿದೆ

viii.    ವ್ಯಾಪಾರಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಸಂಯುಕ್ತ ಪರವಾನಗಿ ಅಥವಾ ಉತ್ಪಾದನಾ ಗುತ್ತಿಗೆಯನ್ನು ಸುಲಭವಾಗಿ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ.  

ix.    ಶೋಧನಾ ಪರವಾನಗಿ ಮತ್ತು ಉತ್ಪಾದನಾ ಗುತ್ತಿಗೆಯನ್ನು ಕೇವಲ ಪಿಎಸ್ ಯುಗಳಿಗೆ ಮಾತ್ರ ಮಂಜೂರು ಮಾಡಲು ಅಟಾಮಿಕ್ ಖನಿಜಗಳ ವಿಚಾರದಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಅಣು ಖನಿಜಗಳಿರುವ ನಿಕ್ಷೇಪಗಳ ಹಂಚಿಕೆಯನ್ನು ಪಿಎಸ್ ಯುಗಳಿಗೆ ನೀಡಲಾಗುವುದು ಮತ್ತು ಅಂತಹ ಅಣು ಖನಿಜಗಳಿರುವ ನಿಕ್ಷೇಪಗಳನ್ನು ಪಿಎಸ್ ಯು ಮತ್ತು ಖಾಸಗಿ ಸಂಸ್ಥೆಗಳಿಗೆ ಹರಾಜಿನ ಮೂಲಕ ನೀಡಲಾಗುವುದು. 

x.    ಅವಧಿಗೂ ಮುನ್ನವೇ ವಜಾಗೊಳಿಸುವ ಅಧಿಕಾರ ವ್ಯಾಪ್ತಿಯನ್ನು ವ್ಯಾಖ್ಯಾನ ವಿಸ್ತರಿಸಲಾಗಿದ್ದು, ಅದರಲ್ಲಿ ‘ಸಾರ್ವಜನಿಕ ಹಿತಾಸಕ್ತಿ’ ‘ದೇಶದ ಕಾರ್ಯತಾಂತ್ರಿಕ ಹಿತಾಸಕ್ತಿ’ ಅಥವಾ ‘ಇತರೆ ಯಾವುದೇ ಕಾರಣಗಳು’ ಅಂಶಗಳನ್ನು ಸೇರಿಸಲಾಗಿದೆ; 
xi.    ಪ್ರತಿ ಸ್ಟಾಂಡರ್ಡ್ ಬ್ಲಾಕ್ ಗೆ 5 ಲಕ್ಷ ರೂಪಾಯಿ ವರೆಗೆ ದಂಡ ಹೆಚ್ಚಿಸಲಾಗಿದೆ. ಅದನ್ನು 10 ಲಕ್ಷ ರೂಪಾಯಿಗಳ ವರೆಗೆ ವಿಸ್ತರಿಸಲಾಗುವುದು ಮತ್ತು ಸದ್ಯ ಅಕ್ರಮ ಗಣಿಗಾರಿಕೆ ಮಾಡುವ ಪ್ರತಿ ಸ್ಟಾಂಡರ್ಡ್ ನಿಕ್ಷೇಪಗಳಿಗೆ 50 ಸಾವಿರ ರೂಪಾಯಿವರೆಗೆ ದಂಡ ಇದೆ ಮತ್ತು ಇತರೆ ಅಪರಾಧಗಳಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಿಸಲಾಗಿದೆ.  

1957ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ) ಸಕ್ಷನ್ 9 ಉಪ ನಿಯಮ (3)ರಡಿ ಲಭ್ಯವಿರುವ ಅಧಿಕಾರ ಬಳಸಿ, ಎಂಎಂಡಿಆರ್ ಕಾಯ್ದೆ 1957ರ ಎರಡನೇ ಪರಿಚ್ಛೇದವನ್ನು ತಿದ್ದುಪಡಿ ಮಾಡಿ, 12.10.2023ರಂದು ಜಿ.ಎಸ್.ಆರ್. 736(ಇ) ಅಡಿ ಲೀಥಿಯಂ, ನಿಯೋಬಿಯಮ್ ಮತ್ತು ರೇರ್ ಅರ್ಥ್ ಎಲಿಮೆಂಟ್ಸ್ (ಆರ್ ಇಇಎಸ್) ಗಳಿಗೆ ರಾಯಲ್ಟಿ ದರ ನಿಗದಿಪಡಿಸಲಾಗಿದೆ. 

ಖನಿಜಗಳು (ಪರಮಾಣು ಹೊರತುಪಡಿಸಿ ಮತ್ತು ಹೈಡ್ರೋ ಕಾರ್ಬನ್ ಇಂಧನ ಖನಿಜಗಳು) ವಿನಾಯಿತಿ ನಿಯಮ 2016ಅನ್ನು ಖನಿಜಗಳು(ಇತರೆ ಪರಮಾಣು ಹಾಗೂ ಹೈಡ್ರೋ ಕಾರ್ಬನ್ ಎನರ್ಜಿ ಮಿನರಲ್) ವಿನಾಯಿತಿ (ತಿದ್ದುಪಡಿ) ನಿಯಮ 2023ರಲ್ಲಿ ರೇರ್ ಅರ್ಥ್ ಎಲಿಮೆಂಟ್ಸ್ ಗೆ(ಆರ್ ಇಇಎಸ್)ಗೆ ಸರಾಸರಿ ಮಾರಾಟ ದರ(ಎಎಸ್ ಪಿ) / ಅಂದಾಜಿಸಲಾದ ಸಂಪನ್ಮೂಲಗಳ ಮೌಲ್ಯ (ವಿಇಆರ್) ಅನ್ನು ನಿಗದಿಪಡಿಸಲಾಗಿದ್ದು, ಲೀಥಿಯಂಗೆ 12.10.2023ರ ಅನ್ವಯ ಜಿ.ಎಸ್.ಆರ್. 737 (ಇ) ಆದೇಶ ಹೊರಡಿಸಲಾಗಿದೆ. 

ಇತರೆ ಸುಧಾರಣೆಗಳು

i.    2023ರ ಜೂನ್ ನಲ್ಲಿ, ಗಣಿ ಸಚಿವಾಲಯವು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1957 ರ ಸೆಕ್ಷನ್ 20A ಅಡಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಖನಿಜಗಳನ್ನು ವಿಲೇವಾರಿ ಮಾಡಲು ನಿರ್ದೇಶನಗಳನ್ನು ನೀಡಿದೆ (ಭಾಗ ಎ ಮತ್ತು ಭಾಗ ಬಿ ಯ ಮೊದಲ ಶೆಡ್ಯೂಲ್ನ ಭಾಗ ಬಿ ಅಡಿಯಲ್ಲಿ ಸೂಚಿಸಲಾದ ಖನಿಜಗಳನ್ನು ಹೊರತುಪಡಿಸಿ) ರಸ್ತೆ, ಕಾಲುವೆಗಳು, ಕೊಳ ಅಗೆಯುವಿಕೆ ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಧಿಕಾರ ಹೊಂದಿರುವ ಯಾವುದೇ ಸರ್ಕಾರಿ ಸಂಸ್ಥೆಯಿಂದ ಕೈಗೊಳ್ಳಲಾದ ಯಾವುದೇ ಸರ್ಕಾರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಂತಹ ಯಾವುದೇ ಸಾರ್ವಜನಿಕ ಕೆಲಸದಲ್ಲಿ ಪಡೆಯಲಾಗಿದೆ.

ii ಗಣಿ ಸಚಿವಾಲಯವು ಆದೇಶ ಸಂಖ್ಯೆ 16/27/2023-ಎಂ.VI ದಿನಾಂಕ 21.04.2023 ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ರ ಸೆಕ್ಷನ್ 20ಎ ಅಡಿಯಲ್ಲಿ ಹರಾಜಿನ ಪ್ರಕ್ರಿಯೆಯನ್ನು ಆರಂಭಿಸಲು ಎಲ್ಲಾ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಖನಿಜ ರಿಯಾಯಿತಿ ನಿಯಮಗಳು, 1960 (ಎಂಸಿಆರ್, 1960) ರ ಹಿಂದಿನ ನಿಯಮ 58 ರ ಅಡಿಯಲ್ಲಿ ನೀಡಲಾದ ಅವಧಿ ಮೀರಿದ ಗಣಿಗಾರಿಕೆ ಗುತ್ತಿಗೆಗಳಿಗೆ ನಿರ್ದೇಶನಗಳನ್ನು ನೀಡಿದೆ. 

 iii ವಿವಿಧ ದರ್ಜೆಯ ಕಬ್ಬಿಣದ ಅದಿರು ಮತ್ತು ಇತರ ಖನಿಜಗಳ ವರ್ಗೀಕರಣದ ಸಮಸ್ಯೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಅಕ್ಟೋಬರ್ 2023 ರಲ್ಲಿ ಗಣಿ ಸಚಿವಾಲಯವು 03.10.2023 ರ ಪತ್ರವನ್ನು ಉಲ್ಲೇಖಿಸಿ, ಖನಿಜಗಳು ಸಮೃದ್ಧವಾಗಿರುವ ರಾಜ್ಯ ಸರ್ಕಾರಗಳಿಗೆ ತಪ್ಪು ವರ್ಗೀಕರಣವನ್ನು ತಡೆಗಟ್ಟಲು ವಿವಿಧ ದರ್ಜೆಯ ಕಬ್ಬಿಣದ ಅದಿರು ಮತ್ತು ಇತರ ಖನಿಜಗಳ ಮಾರ್ಗಸೂಚಿಗಳನ್ನು ನೀಡಿದೆ. 

 iv. ಹದಿನಾರು (16) ಮಾನ್ಯತೆ ಪಡೆದ ಖಾಸಗಿ ಶೋಧನಾ ಏಜೆನ್ಸಿಗಳು ನಿರೀಕ್ಷಿತ ಪರವಾನಗಿ ಇಲ್ಲದೆ ಸಂಭವನೀಯ ಕಾರ್ಯಾಚರಣೆಯನ್ನು ನಡೆಸುವ ಉದ್ದೇಶಕ್ಕಾಗಿ ಎಂಎಂಡಿಆರ್ ಕಾಯ್ದೆ 1957 ರ ಸೆಕ್ಷನ್ 4 ರ ಉಪ-ವಿಭಾಗ (1) ರ ಎರಡನೇ ನಿಬಂಧನೆಯ ಅಡಿಯಲ್ಲಿ ಸಚಿವಾಲಯದಿಂದ ಸೂಚಿಸಲಾಗಿದೆ.
 
ಹರಾಜು ಸ್ಥಿತಿಗತಿ ಮತ್ತು ಜಿಲ್ಲಾ ಖನಿಜ ಫೌಂಡೇಷನ್ (ಡಿಎಂಎಫ್) 

2015ರಲ್ಲಿ ಹರಾಜು ಪದ್ಧತಿಯನ್ನು ಪರಿಚಯಿಸಿದಾಗಿನಿಂದ, ದೇಶದಲ್ಲಿ 335 ಖನಿಜ ಗಣಿಗಳನ್ನು ಹರಾಜು ಮಾಡಲಾಗಿದೆ. 2023ನೇ ವರ್ಷದಲ್ಲಿ ಡಿಸೆಂಬರ್ ವರೆಗೆ 76 ಖನಿಜ ನಿಕ್ಷೇಪಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಇವುಗಳಲ್ಲಿ 30 ಖನಿಜ ನಿಕ್ಷೇಪಗಳನ್ನು ಗಣಿಗಾರಿಕೆ ಗುತ್ತಿಗೆಗೆ (ಎಂಎಲ್) ಹರಾಜು ಮಾಡಲಾಯಿತು ಮತ್ತು ಉಳಿದ 46 ಕಾಂಪೋಸಿಟ್ ಲೈಸೆನ್ಸ್  ಸಂಯುಕ್ತ ಪರವಾನಗಿ (ಸಿಎಲ್) ಎಂದು ಹರಾಜು ಮಾಡಲಾಯಿತು. 2015 ರಿಂದ ಹರಾಜಾದ ಒಟ್ಟು 335 ಬ್ಲಾಕ್‌ಗಳಲ್ಲಿ 46 ಕಾರ್ಯನಿರ್ವಹಿಸುತ್ತಿವೆ ಮತ್ತು 43 ಉತ್ಪಾದನೆಯಲ್ಲಿವೆ. 2023 ರಲ್ಲಿ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ಗರಿಷ್ಠ ಸಂಖ್ಯೆಯ ನಿಕ್ಷೇಪಗಳನ್ನು ಯಶಸ್ವಿಯಾಗಿ ಹರಾಜು ಹಾಕಿವೆ, ಅಂದರೆ ಕ್ರಮವಾಗಿ 22 ಮತ್ತು 16. 2022 ರಲ್ಲಿ ಒಟ್ಟು 33 ಕಬ್ಬಿಣದ ಅದಿರು ಖನಿಜವನ್ನು ಹರಾಜು ಮಾಡಲಾಯಿತು, ಇದು 2022 ರಲ್ಲಿ ಹರಾಜಾದ ಅತ್ಯಧಿಕ ಖನಿಜ ನಿಕ್ಷೇಪಗಳಾಗಿವೆ. ಅಂತೆಯೇ, ಈ ವರ್ಷವೂ ಸಹ ಅತ್ಯಧಿಕ ಸಂಖ್ಯೆಯ 24 ಕಬ್ಬಿಣದ ಅದಿರು ಖನಿಜವನ್ನು ಹರಾಜು ಮಾಡಲಾಯಿತು ಮತ್ತು ನಂತರ 20 ಲೈಮ್ಸ್ ಸ್ಟೋನ್ ಖನಿಜ ಬ್ಲಾಕ್ ಗಳನ್ನು ಹರಾಜು ಮಾಡಲಾಯಿತು.

2023 ರಲ್ಲಿ ವಿವಿಧ ರಾಜ್ಯಗಳ ನಿಕ್ಷೇಪಗಳಿಂದ ಒಟ್ಟು 267 ಎನ್ ಐಟಿ ಗಳನ್ನು ನೀಡಲಾಗಿದೆ. ಅದರ ವಿವರಗಳು ಈ ಕೆಳಗಿನಂತಿವೆ:

ಹರಾಜಿಗಿಟ್ಟಿರುವ ಬ್ಲಾಕ್ ಗಳ ರಾಜ್ಯವಾರು ವಿವರ

ರಾಜ್ಯಗಳು

2023-24

ಆಂಧ್ರ ಪ್ರದೇಶ

13

ಛತ್ತೀಸ್ ಗಢ

24

ಗುಜರಾತ್

7

ಜಾರ್ಖಂಡ್

7

ಕರ್ನಾಟಕ

24

ಮಧ್ಯಪ್ರದೇಶ

51

ಮಹಾರಾಷ್ಟ್ರ

25

ಒಡಿಶಾ

5

ರಾಜಸ್ಥಾನ

73

ಉತ್ತರ ಪ್ರದೇಶ

11

ಗೋವಾ

5

ಉತ್ತರಾಖಂಡ್

2

ಕೇಂದ್ರ ಸರ್ಕಾರ

20

ಒಟ್ಟು

267


ಎಂಎಂಡಿಆರ್ ಕಾಯ್ದೆಯ ವಿಭಾಗ 9ಬಿ ರಾಜ್ಯ ಸರ್ಕಾರಗಳಿಗೆ ಸಾರ್ವಜನಿಕ ಕಲ್ಯಾಣ ಮತ್ತು ಅನುಕೂಲಕ್ಕಾಗಿ ಕೆಲಸ ಮಾಡಲು ಮತ್ತು ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳಿಂದ ಬಾಧಿತವಾಗಿರುವ ಪ್ರದೇಶಗಳನ್ನು ಮರು ಸ್ಥಾಪಿಸಲು ಜಿಲ್ಲಾ ಮಿನರಲ್ ಫೌಂಡೇಷನ್ (ಡಿಎಂಎಫ್) ಗಳನ್ನು ಸ್ಥಾಪಿಸಲು ಮತ್ತು ರಾಜ್ಯದಲ್ಲಿ ಡಿಎಂಎಫ್ ಗಳ ಸಂಯೋಜನೆ ಮತ್ತು ಕಾರ್ಯಗಳಿಗೆ ನಿಯಮಗಳನ್ನು ರೂಪಿಸಲು ಅಧಿಕಾರ ನೀಡುತ್ತದೆ.

ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 20ಎ ಅಡಿಯಲ್ಲಿ, ಕೇಂದ್ರ ಸರ್ಕಾರವು 16.09.2015 ರಂದು ಪ್ರಧಾನ ಮಂತ್ರಿ ಖನಿಜ್ ಕ್ಷೇತ್ರ ಕಲ್ಯಾಣ ಯೋಜನೆ (ಪಿಎಂಕೆಕೆಕೆವೈ) ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರಗಳು ರೂಪಿಸಿದ ಡಿಎಂಎಫ್ ನಿಯಮಗಳಲ್ಲಿ ಅಳವಡಿಸಲು ನಿರ್ದೇಶನಗಳನ್ನು ನೀಡಿದೆ. ಡಿಎಂಎಫ್ ಗಣಿಗಾರಿಕೆ ಗುತ್ತಿಗೆ ಹೊಂದಿರುವವರಿಂದ ಶಾಸನಬದ್ಧ ಕೊಡುಗೆಗಳಿಂದ ಹಣವನ್ನು ಪಡೆಯುತ್ತದೆ. ಡಿಎಂಎಫ್  ಅಡಿಯಲ್ಲಿ ಹಣವನ್ನು ಸಂಬಂಧಪಟ್ಟ ಜಿಲ್ಲೆಗಳಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಪಿಎಂಕೆಕೆಕೆವೈಅಡಿಯಲ್ಲಿ ಯೋಜನೆಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳ ಪ್ರಕಾರ ಡಿಎಂಎಫ್ ನಿಂದ ಬಳಸಿಕೊಳ್ಳಲಾಗುತ್ತದೆ. ಅದರಂತೆ, 23 ರಾಜ್ಯಗಳ 644 ಜಿಲ್ಲೆಗಳಲ್ಲಿ ಡಿಎಂಎಫ್ ಗಳನ್ನು ರಚಿಸಲಾಗಿದೆ.

2023ರ ಅಕ್ಟೋಬರ್  ರವರೆಗೆ ಡಿಎಂಎಫ್ ಅಡಿಯಲ್ಲಿ 84884.12 ಕೋಟಿ ರೂ. ಸಂಗ್ರಹಿಸಲಾಗಿದೆ ಅದರಲ್ಲಿ ಪಿಎಂಕೆಕೆವೈ ಅಡಿಯಲ್ಲಿ ವಿವಿಧ ಯೋಜನೆಗಳಿಗೆ 79426.00 ಕೋಟಿ ರೂ. ಗಳನ್ನು ವಿನಿಯೋಗಿಸಲಾಗಿದೆ ಮತ್ತು 46770.96 ಕೋಟಿ ರೂ. ಬಳಸಿಕೊಳ್ಳಲಾಗಿದೆ. ಒಟ್ಟಾರೆ ಈ ಯೋಜನೆಯಡಿ 315225 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು, ಈವರೆಗೆ 169576 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

ಇಂಡಿಯನ್ ಮೊಬೈಲ್ ಕಾಂಗ್ರೆಸ್ (ಐಎಂಸಿ) 2023 (2023ರ ಅಕ್ಟೋಬರ್ 27ರಿಂದ 29ರವರೆಗೆ :

i. ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಸಿಒಎಐ) ಜಂಟಿಯಾಗಿ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) (2023) ಅನ್ನು 27 ರಿಂದ 29 ಅಕ್ಟೋಬರ್ 2023 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ 'ಗ್ಲೋಬಲ್ ಡಿಜಿಟಲ್ ಇನ್ನೋವೇಶನ್' ಧೇಯದೊಂದಿಗೆ ಆಯೋಜಿಸಿತ್ತು. ಗಣಿ ಸಚಿವಾಲಯವು ಐಎಂಸಿ, 2023 ರಲ್ಲಿ ಸಕ್ರಿಯವಾಗಿ ಭಾಗವಹಿಸಿತು, ಗಣಿಗಾರಿಕೆ ವಲಯದಲ್ಲಿ 4G/5G ತಂತ್ರಜ್ಞಾನದ ಸಂಭಾವ್ಯ ಬಳಕೆಯನ್ನು ಪ್ರದರ್ಶಿಸುವಲ್ಲಿ ವಿಶೇಷ ಗಮನಹರಿಸಿದೆ. ಗಣಿಗಾರಿಕೆ ಕಾರ್ಯಾಚರಣೆಗಳನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿರುವ ನವೀನ 5G ಬಳಕೆಯ ಪ್ರಕರಣಗಳನ್ನು ಪ್ರದರ್ಶಿಸಲು ವಿವಿಧ ಕಂಪನಿಗಳು. ಗಣಿ ಸಚಿವಾಲಯವು ಐಎಂಸಿ 2023 ರಲ್ಲಿ ಮೀಸಲಾದ 5G ಮಳಿಗೆಯನ್ನು ಸ್ಥಾಪಿಸಿತು, ಅಲ್ಲಿ ಮುಂಚೂಣಿಯಲ್ಲಿರುವ 5G ಬಳಕೆಯನ್ನು ಪ್ರದರ್ಶಿಸಿತು. 

 ii ಈ ವೇಳೆ, ಗಣಿ ಸಚಿವಾಲಯದ ಮಳಿಗೆಗೆ ಗಣಿ ಕಾರ್ಯದರ್ಶಿ, ಗಣಿ ಮತ್ತು ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು, ಗಣಿಗಾರಿಕೆ ವಲಯದಲ್ಲಿ 5G ತಂತ್ರಜ್ಞಾನದ ಅಳವಡಿಕೆ ಮತ್ತು 5G ತಂತ್ರಜ್ಞಾನವು ಗಣಿಗಾರಿಕೆ ಕಾರ್ಯಾಚರಣೆಗಳನ್ನು ಹೇಗೆ ಗಮನಾರ್ಹವಾಗಿ ಸುಧಾರಿಸುತ್ತದೆ, ಅವುಗಳನ್ನು ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಮತ್ತು ಹೇಗೆ ಮಾಡುತ್ತದೆ ಹಾಗೂ ಪರಿಸರ ಜವಾಬ್ದಾರಿಯನ್ನು  ಪ್ರದರ್ಶಿಸಲಾಯಿತು. 

 iii ವಿವಿಧ ಹಿನ್ನೆಲೆಯ ಸುಮಾರು 500ಕ್ಕೂ ಅಧಿಕ ಸಂದರ್ಶಕರು, ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಮ ಸಂಘಗಳು, ಯುವ ಉದ್ಯಮಿಗಳು ಗಣಿ ಸಚಿವಾಲಯದ ಮಳಿಗೆಗೆ ಭೇಟಿ ನೀಡಿದ್ದರು.

42ನೇ ಭಾರತೀಯ ಅಂತಾರಾಷ್ಟ್ರೀಯ ವ್ಯಾಪಾಳ ಮೇಳ (ಐಐಟಿಎಫ್) 2023ರಲ್ಲಿ ಯಶಸ್ವಿ ಭಾಗಿ

ಮೊದಲ ಬಾರಿಗೆ ಸಚಿವಾಲಯವು 2023 ರ ನವೆಂಬರ್ 14 ರಿಂದ 27 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್) 2023 ರಲ್ಲಿ ಭಾಗವಹಿಸಿತು. ಗಣಿಗಾರಿಕೆ ಮಳಿಗೆಯು ಅತ್ಯಂತ ಜನಪ್ರಿಯ ಪೆವಿಲಿಯನ್ ವಿಭಾಗದಲ್ಲಿ ಬೆಳ್ಳಿ ಪ್ರಶಸ್ತಿಯನ್ನು ಪಡೆಯಿತು. ಸುಲಭ ವ್ಯವಹಾರಕ್ಕೆ ಕಾರಣವಾಗುವ ನೀತಿ ಸುಧಾರಣೆಗಳ ಮೂಲಕ ಗಣಿಗಾರಿಕೆ ಮತ್ತು ಖನಿಜ ಉತ್ಪಾದನೆಯ ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸಲು ಸಾರ್ವಜನಿಕ ಮತ್ತು ಖಾಸಗಿ ವಲಯದ ಗಣಿ ಕಂಪನಿಗಳ ಸಹಯೋಗದ ಪ್ರಯತ್ನ ನಡೆಸಿತ್ತು.  

 
 
ಗಣಿಗಾರಿಕೆ ಮಳಿಗೆ  ಸುಮಾರು 70,000 ಸಂದರ್ಶಕರನ್ನು ಆಕರ್ಷಿಸಿತು ಮತ್ತು 2000 ಕ್ಕೂ ಅಧಿಕ ಉತ್ಸಾಹಿ ವಿದ್ಯಾರ್ಥಿಗಳು ಲೋಹಗಳ ಮರುಬಳಕೆಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದರು. ಅವರು ತಮ್ಮ ದೈನಂದಿನ ಜೀವನದಲ್ಲಿ ಗಣಿಗಾರಿಕೆ ಕೈಗಾರಿಕೆಗಳು ಮತ್ತು ಖನಿಜಗಳ ಪ್ರಾಮುಖ್ಯತೆಯ ಬಗ್ಗೆ ತೀವ್ರ ಆಸಕ್ತಿ ತೋರಿಸಿದರು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತಪ್ಪಿಸುವ ಡಿಜಿಟಲ್ ಪ್ರತಿಜ್ಞೆಯನ್ನು ಕೈಗೊಂಡರು. ಪ್ರಧಾನ ಮಂತ್ರಿ ಖನೀಜ ಕ್ಷೇತ್ರ ಕಲ್ಯಾಣ ಯೋಜನೆ (ಪಿಎಂಕೆಕೆಕೆವೈ) ಅಡಿಯಲ್ಲಿ ಗಣಿಗಾರಿಕೆಯಿಂದ ಬಾಧಿತರಾದ ಜನರನ್ನು ಒಳಗೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು ಮಾಡಿದ ಕೆಲಸದ ಬಗ್ಗೆ ಸಂದರ್ಶಕರಿಗೆ ಜಾಗೃತಿ ಮೂಡಿಸಲಾಯಿತು. ಕಿಯೋಂಜಾರ್ (ಒಡಿಶಾ), ಭಿಲ್ವಾರಾ (ರಾಜಸ್ಥಾನ) ಮತ್ತು ಸೋನ್‌ಭದ್ರ (ಉತ್ತರ ಪ್ರದೇಶ) ದ ವಿವಿಧ ಸ್ವಸಹಾಯ ಗುಂಪುಗಳು ಪಿಎಂಕೆಕೆಕೆವೈ ಫಲಾನುಭವಿಗಳಾಗಿ ಅವರು ತಯಾರಿಸಿದ ಕರಕುಶಲ ಮತ್ತು ನೇಯ್ಗೆಗಳನ್ನು ಪ್ರದರ್ಶಿಸಿದರು. ವಿಆರ್ ವಲಯವು ಸಂದರ್ಶಕರಿಗೆ ನೆಲದಾಳದ ಗಣಿಗಾರಿಕೆ ಮತ್ತು ಲೋಹಶಾಸ್ತ್ರದ ಸಂಪೂರ್ಣ ಹೊಸ ಅನುಭವವನ್ನು ನೀಡಿತು. 
 
   
ಗಣಿ ಸಚಿವಾಲಯ 42ನೇ ಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್) 2023 ಯಲ್ಲಿ ಯಶಸ್ವಿಯಾಗಿ ಭಾಗವಹಿಸಿತ್ತು. 

ಅಂತಾರಾಷ್ಟ್ರೀಯ ಸಹಕಾರಿ ಚಟುವಟಿಕೆಗಳು 

1. ಜಂಟಿ ಕಾರ್ಯಕಾರಿ ಗುಂಪು (ಜೆಡಬ್ಲೂಜಿ) ಸಭೆಗಳು :

i. ಭಾರತ ಮತ್ತು ಪೆರು ನಡುವಿನ 3 ನೇ ಜಂಟಿ ಕಾರ್ಯ ಗುಂಪು (ಜೆಡಬ್ಲೂಜಿ) ಸಭೆಯು ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ತಿಳಿವಳಿಕೆ ಒಪ್ಪಂದದ (ಎಂಒಯು) ಅಡಿಯಲ್ಲಿ 2023ರ ಮಾರ್ಚ್ 15 ರಂದು ವರ್ಚುವಲ್ ಮಾದರಿಯ ಮೂಲಕ ನಡೆಯಿತು.

ii. ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದದ (ಎಂಒಯು) ಅಡಿಯಲ್ಲಿ ಭಾರತ ಮತ್ತು ಮೊಜಾಂಬಿಕ್ನ ಜಂಟಿ ಕಾರ್ಯನಿರತ ಗುಂಪಿನ (ಜೆಡಬ್ಲೂಜಿ) 4 ನೇ ಸಭೆಯು 2023ರ  ಜೂನ್ 6 ರಂದು ಗಣಿ ಸಚಿವಾಲಯದಲ್ಲಿ ನಡೆಯಿತು.        

iii ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಭಾರತ ಮತ್ತು ಬೊಲಿವಿಯಾ ನಡುವಿನ 2 ನೇ ಜಂಟಿ ಕಾರ್ಯ ಗುಂಪು ಸಭೆಯನ್ನು 2023ರ ಜೂನ್ 9 ರಂದು ವಿಡಿಯೋ ಕಾನ್ಫರೆನ್ಸ್  ಮೂಲಕ ನಡೆಸಲಾಯಿತು.

2. ವಿದೇಶಗಳೊಂದಿಗೆ ದ್ವಿಪಕ್ಷೀಯ/ಬಹುಪಕ್ಷೀಯ ಸಭೆಗಳು:

ಅಂತಾರಾಷ್ಟ್ರೀಯ ಗಣಿಗಾರಿಕೆ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಬಲವರ್ಧನೆಗೊಳಿಸಲು ಗಣಿ ಸಚಿವಾಲಯವು 2023ರಲ್ಲಿ ವಿವಿಧ ದೇಶಗಳೊಂದಿಗೆ ವಿವಿಧ ದ್ವಿಪಕ್ಷೀಯ/ಬಹುಪಕ್ಷೀಯ ಸಭೆಗಳನ್ನು ನಡೆಸಿತು. ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಮಾರ್ಚ್‌ನಲ್ಲಿ ನಿರ್ಣಾಯಕ ಖನಿಜಗಳ ಪೂರೈಕೆ (ಕ್ರಿಟಿಕಲ್ ಮಿನರಲ್ ಸಪ್ಲೈ) ಸರಣಿಯನ್ನು ಬಲಪಡಿಸಲು ಸಂಪನ್ಮೂಲಗಳು ಮತ್ತು ಉತ್ತರ ಆಸ್ಟ್ರೇಲಿಯಾದ ಮೆಡೆಲಿನ್ ಕಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಅಂದಿನ ಗಣಿ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ನೇತೃತ್ವದ ನಿಯೋಗಗಳು ಮೇ ತಿಂಗಳಲ್ಲಿ ಮಂಗೋಲಿಯಾ, ಜೂನ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್, ಜೂನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಆಗಸ್ಟ್‌ನಲ್ಲಿ ಚಿಲಿಯ ನಿಯೋಗಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿತು. ನಿರ್ಣಾಯಕ ಮತ್ತು ಕಾರ್ಯತಾಂತ್ರಿಕ ಖನಿಜಗಳ ಪ್ರದೇಶದಲ್ಲಿನ ಸಹಕಾರವು ಈ ಸಭೆಗಳ ಕೇಂದ್ರಬಿಂದುವಾಗಿದ್ದು, ಭೂವಿಜ್ಞಾನ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಇತ್ಯಾದಿಗಳಲ್ಲಿ ಸಹಕಾರದೊಂದಿಗೆ ಒತ್ತು ನೀಡುತ್ತದೆ. 

ಅಕ್ಟೋಬರ್‌ನಲ್ಲಿ, ಗಣಿ ಕಾರ್ಯದರ್ಶಿ ಶ್ರೀ ವಿ.ಎಲ್. ಕಾಂತ ರಾವ್ ಅವರು ಜರ್ಮನಿಯೊಂದಿಗೆ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸ್ಥಗಿತಗೊಂಡಿರುವ ಗಣಿಗಳು ವಹಿಸಿದ ಪಾತ್ರವನ್ನು  ಮತ್ತು ಅಂತಹ ಗಣಿಗಳನ್ನು ಪಾರಂಪರಿಕ ತಾಣಗಳಾಗಿ ಪರಿವರ್ತಿಸುವ ಕುರಿತು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು. ಅಲ್ಲದೆ, ನವೆಂಬರ್‌ನಲ್ಲಿ ಕಾರ್ಯದರ್ಶಿ ನಿರ್ಣಾಯಕ ಕಚ್ಚಾ ಸಾಮಗ್ರಿಗಳ ಕ್ಲಬ್‌ಗೆ ಸಂಬಂಧಿಸಿದಂತೆ ಐರೋಪ್ಯ ಒಕ್ಕೂಟದೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿದರು ಮತ್ತು ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದೊಂದಿಗೆ ಗಣಿಗಾರಿಕೆ, ಸಂಪನ್ಮೂಲಗಳು ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ಮತ್ತು ಎರಡೂ ಸರ್ಕಾರಗಳ ವಿಶಾಲ ಆದ್ಯತೆಗಳ ಕುರಿತು ಚರ್ಚಿಸಿದರು.

ಐರೋಪ್ಯ ಒಕ್ಕೂಟದ ಜಂಟಿ ಕಾರ್ಯದರ್ಶಿ (ಗಣಿ) ಡಾ. ವೀಣಾ ಕುಮಾರಿ ಡರ್ಮಲ್ ನೇತೃತ್ವದ ನಿಯೋಗಗಳ ಮೂಲಕ ಐರೋಪ್ಯ ಒಕ್ಕೂಟದೊಂದಿಗೆ ಎರಡು ಬಾರಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಾಯಿತು – ಅದರಲ್ಲಿ ಕ್ರಿಟಿಕಲ್ ರಾ ಮೆಟೀರಿಯಲ್ಸ್ ಕ್ಲಬ್‌ಗೆ ಭಾರತ ಸೇರುವ ಬಗ್ಗೆ ಗಮನ ಕೇಂದ್ರೀಕರಿಸಿದೆ, ಗಣಿಗಾರಿಕೆ ವಲಯದಲ್ಲಿ ಭವಿಷ್ಯದ ಸಹಯೋಗವನ್ನು ಅನ್ವೇಷಿಸಲು ಚಿಲಿಯೊಂದಿಗೆ ಮತ್ತು ತರುವಾಯ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದೊಂದಿಗೆ ಆಸ್ಟ್ರೇಲಿಯಾ - ಇಂಡಿಯಾ ಕ್ರಿಟಿಕಲ್ ಮಿನರಲ್ಸ್ ಇನ್ವೆಸ್ಟ್‌ಮೆಂಟ್ ಪಾಲುದಾರಿಕೆ ಕುರಿತು ಚರ್ಚಿಸಿತು. ಒಟ್ಟಾರೆ 2023ನೇ ವರ್ಷವು ಗಣಿಗಾರಿಕೆ ವಲಯದಲ್ಲಿ ಇತರ ದೇಶಗಳೊಂದಿಗೆ ಭಾರತದ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಹೆಚ್ಚು ತೊಡಗಿಸಿಕೊಂಡಿದೆ ಮತ್ತು ಫಲಪ್ರದವಾಗಿದೆ. 

3.  ಇತರೆ ಸಚಿವಾಲಯಗಳು/ ಸರ್ಕಾರಿ ಸಂಸ್ಥೆಗಳು ಮತ್ತು ಉದ್ಯಮಗಳೊಂದಿಗೆ ಸಂವಾದಾತ್ಮಕ ಸಮಾಲೋಚನೆ ನಡೆಸಲಾಗಿದೆ:

i.        ನಿರ್ಣಾಯಕ ಖನಿಜಗಳಿಗೆ ಸಮಗ್ರ ಕಾರ್ಯತಂತ್ರವನ್ನು ರೂಪಿಸಲು ಮತ್ತು ಅದನ್ನು ಬೆಂಬಲಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು "ಕ್ರಿಟಿಕಲ್ ಮಿನರಲ್ಸ್ನ ಅಂತರ-ಸಚಿವಾಲಯದ ಗುಂಪಿನ" ಮೊದಲ ಸಭೆಯು 25.09.2023 ರಂದು ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿ.ಎಲ್.ಕಾಂತ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  

ii.  ಸರ್ಕಾರದ ಪರಿಗಣನೆಯಡಿಯಲ್ಲಿ ನಿರ್ಣಾಯಕ ಖನಿಜಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಉದ್ಯಮ ಪ್ರತಿನಿಧಿಗಳೊಂದಿಗೆ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ 26.09.2023 ರಂದು ಸಂವಾದಾತ್ಮಕ ಸಮಾಲೋಚನೆ ನಡೆಸಲಾಯಿತು. ಭಾರತದ- (ಎ) ಖನಿಜ ಭದ್ರತಾ ಪಾಲುದಾರಿಕೆ -ಮಿನರಲ್ ಸೆಕ್ಯುರಿಟಿ ಪಾರ್ಟ್‌ನರ್‌ಶಿಪ್ (ಎಂಎಸ್‌ಪಿ) ಯೋಜನೆಗಳು (ಬಿ) ಭಾರತ-ಆಸ್ಟ್ರೇಲಿಯಾ ಸಿಇಸಿಎ ಸಮಾಲೋಚನೆಯ ಅಡಿಯಲ್ಲಿ ನಿರ್ಣಾಯಕ ಖನಿಜ ಅಧ್ಯಾಯ (ಸಿ) ಭಾರತ-ಐರೋಪ್ಯ ಒಕ್ಕೂಟದ ಮಾತುಕತೆಗಳ ಅಡಿಯಲ್ಲಿ ಇಂಧನ ಮತ್ತು ಕಚ್ಚಾ ಸಾಮಗ್ರಿಗಳು (ಇಆರ್‌ಎಂ) ಅಧ್ಯಾಯ (ಡಿ) ನಿರ್ಣಾಯಕ ಕಚ್ಚಾ ಸಾಮಗ್ರಿ ಕ್ಲಬ್- ಕ್ರಿಟಿಕಲ್ ರಾ ಮೆಟೀರಿಯಲ್ ಕ್ಲಬ್ (ಸಿಆರ್‌ಎಂ ) ಅನ್ನು ಸ್ಥಾಪಿಸಲು ಐರೋಪ್ಯ ಒಕ್ಕೂಟ ಪ್ರಸ್ತಾಪಿಸಿದೆ. 

ii.    ಜಾಂಬಿಯಾ, ಬೊಲಿವಿಯಾ ಮತ್ತು ಸೌದಿ ಅರೇಬಿಯಾದೊಂದಿಗೆ ಗಣಿಗಾರಿಕೆ ವಲಯದಲ್ಲಿ ಸಹಕಾರದ ಒಳನೋಟಗಳು ಮತ್ತು ಪ್ರತಿಕ್ರಿಯೆಯನ್ನು ಪಡೆಯಲು ಕಾರ್ಯದರ್ಶಿ (ಗಣಿ) ಶ್ರೀ ವಿ.ಎಲ್. ಕಾಂತ ರಾವ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ನಲ್ಲಿ ಕೈಗಾರಿಕಾ ಪಾಲುದಾರರೊಂದಿಗೆ ಸಂವಾದಾತ್ಮಕ ಸಮಾಲೋಚನಾ ಗೋಷ್ಠಿಯನ್ನು ಗಣಿ ಸಚಿವಾಲಯದಲ್ಲಿ ನಡೆಸಲಾಯಿತು.

4.   ಗಣಿಗಾರಿಕೆ ವಲಯದಲ್ಲಿ ಭಾರತದ ಸಾಮರ್ಥ್ಯಗಳು, ಆಸಕ್ತಿ ಮತ್ತು ಅವಕಾಶಗಳನ್ನು ಪ್ರದರ್ಶಿಸಲು ಅಂತಾರಾಷ್ಟ್ರೀಯ ಗಣಿಗಾರಿಕೆ ಕಾರ್ಯಕ್ರಮಗಳಲ್ಲಿ ಭಾಗಿ: 

i. ರೈಲ್ವೆ, ಕಲ್ಲಿದ್ದಲು ಮತ್ತು ಗಣಿ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ನೇತೃತ್ವದ ಭಾರತೀಯ ನಿಯೋಗ 2023ರ ಫೆಬ್ರವರಿ 6ರಿಂದ 9ರವರೆಗೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ ನಲ್ಲಿ ನಡೆದ 'ಮೈನಿಂಗ್ ಇಂಡ್ ಬಾ- 2023' ದಲ್ಲಿ ಭಾಗವಹಿಸಿದರು. ನಮ್ಮ ಗಣಿಗಾರಿಕೆ ಮತ್ತು ಖನಿಜ ವಲಯದ ಶಕ್ತಿಯನ್ನು ಪ್ರದರ್ಶಿಸಲು ಮೈನಿಂಗ್ ಇಂಡಾಬಾ- 2023 ನಲ್ಲಿ ಭಾರತೀಯ ಪೆವಿಲಿಯನ್ ಅನ್ನು ಸಹ ಸ್ಥಾಪಿಸಲಾಯಿತು. 

ii ಜಂಟಿ ಕಾರ್ಯದರ್ಶಿ ಡಾ. ವೀಣಾ ಕುಮಾರಿ ಡರ್ಮಲ್ 2023ರ ಫೆಬ್ರವರಿಯಲ್ಲಿ ಯುಎಇಯ ಅಬುಧಾಬಿ ಯಲ್ಲಿ ನಡೆದ I2U2 ಬ್ಯುಸಿನೆಸ್ ಫೋರಂನಲ್ಲಿ ಭಾಗವಹಿಸಿದರು. I2U2 ಭಾರತ, ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ನ ಖಾಸಗಿ ಮತ್ತು ಸಾರ್ವಜನಿಕ ವಲಯದ ಪಾಲುದಾರರಿಗೆ ಸಂಭಾವ್ಯ ಸಮನ್ವಯಗಳನ್ನು ಅನ್ವೇಷಿಸಲು ಮತ್ತು ರಚನಾತ್ಮಕ ಪಾಲುದಾರಿಕೆಗಳನ್ನು ಬಲಗೊಳಿಸಲು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿತು. 

iii 2023 ರ ಮಾರ್ಚ್ 5 ರಿಂದ 8 ರವರೆಗೆ ಕೆನಡಾದ ಟೊರೊಂಟೊದಲ್ಲಿ ನಡೆದ 'ಪಿಡಿಎಸಿ- 2023'ಯಲ್ಲಿ ಅಂದಿನ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ನೇತೃತ್ವದ ಭಾರತೀಯ ನಿಯೋಗವು ಭಾಗವಹಿಸಿತು. 'ಪಿಡಿಎಸಿ- 2023' ನಲ್ಲಿ ಭಾರತೀಯ ಪೆವಿಲಿಯನ್ ಅನ್ನು ಸಹ ಸ್ಥಾಪಿಸಲಾಗಿತ್ತು. 

iv. ಸಚಿವಾಲಯದ ಆರ್ಥಿಕ ಸಲಹೆಗಾರರಾದ ಶ್ರೀ ಶಕೀಲ್ ಆಲಂ ನೇತೃತ್ವದ ಭಾರತೀಯ ನಿಯೋಗವು 2023 ರ ಏಪ್ರಿಲ್ 17 ರಿಂದ 19 ರವರೆಗೆ ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆದ ಸಿಆರ್ ಯು ನ ವಿಶ್ವ ತಾಮ್ರ ಸಮ್ಮೇಳನ - 2023 ರಲ್ಲಿ ಭಾಗವಹಿಸಿತ್ತು.

v. 2023 ರ ಏಪ್ರಿಲ್ 26 ರಿಂದ 28 ರವರೆಗೆ ಪೋರ್ಚುಗಲ್ನ ಲಿಸ್ಬನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೀಸ (ಲೆಡ್) ಮತ್ತು ಝಿಂಕ್ ಸ್ಟಡಿ ಗ್ರೂಪ್ (ಐಎಲ್ ಜೆಡ್ ಎಸ್ ಜಿ) ಮತ್ತು ಅಂತಾರಾಷ್ಟ್ರೀಯ ತಾಮ್ರ ( ಕಾಪರ್) ಸ್ಟಡಿ ಗ್ರೂಪ್ (ಐಸಿಎಸ್ ಜಿ) ಸಭೆಗಳಲ್ಲಿ ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ವೀಣಾ ಕುಮಾರಿ ಡರ್ಮಲ್ ಭಾಗವಹಿಸಿದ್ದಾರೆ.         

vi. 2023ರ ಜೂನ್ 14 ರಿಂದ 16 ರವರೆಗೆ ಕಾಂಗೋದ ಲುಬುಂಬಾಶಿಯಲ್ಲಿ ನಡೆದ ‘ಡಿಆರ್ ಸಿ ಮೈನಿಂಗ್ ವೀಕ್ ಎಕ್ಸ್‌ಪೋ ಮತ್ತು ಸಮ್ಮೇಳನ’ದಲ್ಲಿ ಜಂಟಿ ಕಾರ್ಯದರ್ಶಿ (ಗಣಿ) ಡಾ. ವೀಣಾ ಕುಮಾರಿ ಡರ್ಮಲ್ ನೇತೃತ್ವದ ಭಾರತೀಯ ನಿಯೋಗವು ಭಾಗವಹಿಸಿತ್ತು    

vii. ಕಾರ್ಯದರ್ಶಿ (ಗಣಿ) ಶ್ರೀ ವಿ.ಎಲ್ ಕಾಂತ ರಾವ್ ನೇತೃತ್ವದ ಭಾರತೀಯ ನಿಯೋಗ 2023ರ ಸೆಪ್ಟೆಂಬರ್ 28 ರಂದು ಫ್ರಾನ್ಸ್ನ ಪ್ಯಾರಿಸ್‌ನಲ್ಲಿ ನಡೆದ ಭವಿಷ್ಯದಲ್ಲಿ ಶುದ್ಧ ಇಂಧನಕ್ಕಾಗಿ  ನಿರ್ಣಾಯಕ ಖನಿಜಗಳನ್ನು ಸುರಕ್ಷಿತಗೊಳಿಸುವ ಕುರಿತು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಯ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದರು. 

viii. ಶ್ರೀ ಶಕೀಲ್ ಆಲಂ ನೇತೃತ್ವದ ಭಾರತೀಯ ನಿಯೋಗವು 2023ರ ಅಕ್ಟೋಬರ್ 3 ರಿಂದ 5 ರವರೆಗೆ ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ತೈಲ ಮತ್ತು ಗಣಿಗಾರಿಕೆ ವಸ್ತುಪ್ರದರ್ಶನ 2023 ರಲ್ಲಿ ಭಾಗವಹಿಸಿತು. ಪ್ರದರ್ಶನದ ಸಮಯದಲ್ಲಿ ಭಾರತೀಯ ಮಳಿಗೆಯನ್ನೂ ಸಹ ಸ್ಥಾಪಿಸಲಾಯಿತು. 

 ix. ಕಾರ್ಯದರ್ಶಿ (ಗಣಿ) ಶ್ರೀ ವಿ.ಎಲ್ ಕಾಂತ ರಾವ್ ನೇತೃತ್ವದ ಭಾರತೀಯ ನಿಯೋಗ 2023 ರ ಅಕ್ಟೋಬರ್ 09 ರಿಂದ 10 ರವರೆಗೆ ಯುಕೆಯ ಲಂಡನ್ ನಲ್ಲಿ 'ಲಂಡನ್ ಮೆಟಲ್ ವೀಕ್' ವಾರ್ಷಿಕ ಕೂಟ ಮತ್ತು 'ಜವಾಬ್ದಾರಿಯುತ ಹೂಡಿಕೆಯ ಮೇಲೆ ನಿರ್ಣಾಯಕ ಖನಿಜ ವಲಯ’ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾರತೀಯ ನಿಯೋಗವು 2023ರ ಅಕ್ಟೋಬರ್ 10 ರಂದು ನಡೆದ ಭದ್ರತಾ ಪಾಲುದಾರಿಕೆ ಪ್ರಾಂಶುಪಾಲರ ಸಭೆಯಲ್ಲಿ ಭಾಗವಹಿಸಿತ್ತು. 

x. ಗಣಿ, ಕಲ್ಲಿದ್ದಲು ಮತ್ತು ರೈಲ್ವೆ ಖಾತೆಯ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ಶ್ರೀ ರಾವ್ಸಾಹೇಬ್ ಪಾಟೀಲ್ ದಾನ್ವೆ ನೇತೃತ್ವದ ಭಾರತೀಯ ನಿಯೋಗವು 2023 ರ ಅಕ್ಟೋಬರ್ 31 ರಿಂದ ನವೆಂಬರ್ 2 ರವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ 'ಅಂತಾರಾಷ್ಟ್ರೀಯ ಗಣಿಗಾರಿಕೆ ಮತ್ತು ಸಂಪನ್ಮೂಲಗಳ ಸಮ್ಮೇಳನ (ಐಎಂಎಆರ್ ಸಿ)- 2023ಯಲ್ಲಿ ಭಾಗವಹಿಸಿತ್ತು. 

xi. ಗಣಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರಾದ ಶ್ರೀಮತಿ ನಿರುಪಮಾ ಕೊಟ್ರು ನೇತೃತ್ವದ ಭಾರತೀಯ ನಿಯೋಗವು 2023ರ ನವೆಂಬರ್ 21 ರಿಂದ 22 ರವರೆಗೆ ಯುಎಇಯ ದುಬೈನಲ್ಲಿ ನಡೆದ ‘ಮೈನಿಂಗ್ ಶೋ-2023’ ನಲ್ಲಿ ಭಾಗವಹಿಸಿತ್ತು. 

ಭಾರತದ ಜಿ-20 ಅಧ್ಯಕ್ಷತೆ 2022ರ ಡಿಸೆಂಬರ್ 1ರಿಂದ 2023ರ ನವೆಂಬರ್ 30ರವರೆಗೆ ನಡೆಯಿತು. 
 
i.)    ಜಿ-20 ಅಧ್ಯಕ್ಷತೆಯಲ್ಲಿ ಶುದ್ಧ, ಸುಸ್ಥಿರ, ಕೈಗೆಟುಕುವ ಮತ್ತು ಅಂತರ್ಗತ ಇಂಧನ ಪರಿವರ್ತನೆಗಳನ್ನು ವೇಗಗೊಳಿಸಲು ಮತ್ತು ಹಂಚಿಕೊಳ್ಳಲು ಮತ್ತು ಸಹಯೋಗಕ್ಕೆ  ಇಂಧನ ಪರಿವರ್ತನೆ ಕಾರ್ಯಕಾರಿ ಗುಂಪು (ಇಟಿಡಬ್ಲ್ಯೂಜಿ) ಅನ್ನು ರಚಿಸಲಾಗಿದೆ. ಇಂಧನ ಪರಿವರ್ತನೆ ಕಾರ್ಯಕಾರಿ ಗುಂಪು ಒಟ್ಟು ನಾಲ್ಕು ಸಭೆಗಳನ್ನು ಭಾರತದ ಜಿ-20 ಅಧ್ಯಕ್ಷತೆಯಡಿಯಲ್ಲಿ 2023ರ ಫೆಬ್ರವರಿ 5 ರಿಂದ  ಜುಲೈ 21 ರವರೆಗೆ ಬೆಂಗಳೂರು, ಗಾಂಧಿನಗರ, ಮುಂಬೈ ಮತ್ತು ಗೋವಾದಲ್ಲಿ ನಡೆಸಲಾಯಿತು. 

ii.)    ಗಣಿ ಸಚಿವಾಲಯವು ಇಂಧನ, ಪರಿಸರ ಮತ್ತು ಜಲ ಕೌನ್ಸಿಲ್ (ಸಿಇಇಡಬ್ಲೂ) ಜೊತೆಗಿನ ಸಮನ್ವಯದಲ್ಲಿ “ಇಂಧನ ಪರಿವರ್ತನೆಗಾಗಿ ನಿರ್ಣಾಯಕ ಖನಿಜಗಳ ಕುರಿತು ಡೀಕೋಡಿಂಗ್ ಜಿ-20 ಸಹಮತ ಕುರಿತು 2023ರ ಅಕ್ಟೋಬರ್ 31 ರಂದು ವರ್ಚುವಲ್ ಗೋಷ್ಠಿಯನ್ನು ಆಯೋಜಿಸಿತ್ತು.

iii.)   ಜಿ-20 ನ ಹೊಸ ದೆಹಲಿ ನಾಯಕರ ಘೋಷಣೆಯು ಇಂಧನ ಪರಿವರ್ತನೆಯಲ್ಲಿ ನಿರ್ಣಾಯಕ ಖನಿಜಗಳ ಪಾತ್ರವನ್ನು ಅಂಗೀಕರಿಸಿದೆ ಮತ್ತು ಘೋಷಣೆಯಲ್ಲಿ ಸೇರಿಸಿದೆ. ಅಲ್ಲದೆ, ಘೋಷಣೆಯು ಭಾರತ ಸರ್ಕಾರವು ಪ್ರಸ್ತಾಪಿಸಿದ ಇಂಧನ ಪರಿವರ್ತನೆಗಾಗಿ ನಿರ್ಣಾಯಕ ಖನಿಜದ ಸಹಯೋಗಕ್ಕಾಗಿ ಉನ್ನತ ಮಟ್ಟದ ಸ್ವಯಂಪ್ರೇರಿತ ತತ್ವಗಳನ್ನು ಸಹ ಉಲ್ಲೇಖಿಸಿದೆ. 

iv.)  ಗಣಿ ಸಚಿವಾಲಯವು ಕ್ರಿಟಿಕಲ್ ಮಿನರಲ್ಸ್ ಮತ್ತು ನಿರ್ಣಾಯಕ ಖನಿಜ ನಿಕ್ಷೇಪಗಳ ಹರಾಜಿನ ಮೊದಲ ಕಂತಿನ ಹರಾಜಿನ ಆರಂಭದಲ್ಲಿ ಸರ್ಕಾರ ಮತ್ತು ಕೈಗಾರಿಕೆಗಳ ಪಾತ್ರದ ಕುರಿತು ವಿವಿಧ ದೇಶಗಳ ರಾಯಭಾರಿಗಳು/ಮಿಷನ್ ಮುಖ್ಯಸ್ಥರು ಹಾಗೂ ಭಾರತದಲ್ಲಿನ ವ್ಯವಹಾರಗಳು ಮತ್ತು ಇತರ ಮಧ್ಯಸ್ಥಗಾರರು, ಪ್ರತಿನಿಧಿಗಳನ್ನು ಒಳಗೊಂಡ ಔಟ್‌ರೀಚ್ ಕಾರ್ಯಕ್ರಮವನ್ನು 2023 ನವೆಂಬರ್ 29 ರಂದು ಆಯೋಜಿಸಿತು. 

ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಭಾಗಿತ್ವ :

 i.    ಖನಿಜ ಭದ್ರತಾ ಪಾಲುದಾರಿಕೆ (ಎಂಎಸ್ ಪಿ):
ಖನಿಜಗಳ ಭದ್ರತೆ (ಮಿನರಲ್ಸ್ ಸೆಕ್ಯುರಿಟಿ) ಪಾಲುದಾರಿಕೆಯು ಮಹತ್ವಾಕಾಂಕ್ಷೆಯ ಹೊಸ ಯುಎಸ್-ನೇತೃತ್ವದ ಬಹುಪಕ್ಷೀಯ ಪಾಲುದಾರಿಕೆಯಾಗಿದ್ದು, ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿರುವ ನಿರ್ಣಾಯಕ ಖನಿಜಗಳ ಪೂರೈಕೆ ಸರಣಿಯನ್ನು ಸುರಕ್ಷಿತಗೊಳಿಸುತ್ತದೆ. 2023ರ ಜೂನ್ ನಲ್ಲಿ, ಪರಿಸರ, ಸಾಮಾಜಿಕ ಮತ್ತು ಆಡಳಿತದ ಮಾನದಂಡಗಳನ್ನು ಒಳಗೊಂಡಂತೆ ಎಂಎಸ್ ಪಿ ಯ ತತ್ವಗಳನ್ನು ಒಪ್ಪಿಕೊಳ್ಳುವಾಗ ಜಾಗತಿಕವಾಗಿ ವೈವಿಧ್ಯಮಯ ಮತ್ತು ಸಮರ್ಥನೀಯ ನಿರ್ಣಾಯಕ ಶಕ್ತಿ ಖನಿಜಗಳ ಪೂರೈಕೆ ಸರಪಳಿಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಭಾರತವು ಎಂಎಸ್ ಪಿ ಯಲ್ಲಿ ಹೊಸ ಪಾಲುದಾರ (14 ನೇ ಸದಸ್ಯ ರಾಷ್ಟ್ರ) ವಾಯಿತು. ಸಮಾಲೋಚನೆ ಮತ್ತು ಎಂಎಸ್ ಪಿ ಯೋಜನೆಗಳಲ್ಲಿ ಭಾರತದ ಭಾಗವಹಿಸುವಿಕೆಗಾಗಿ 19 ಎಂಎಸ್ ಪಿ ಯೋಜನೆಗಳ ಪಟ್ಟಿಯನ್ನು ಹಂಚಿಕೊಳ್ಳಲಾಗಿದೆ. ಭಾರತವು ಮೂರು ಎಂಎಸ್‌ ಪಿ ಯೋಜನೆಗಳಲ್ಲಿ ತನ್ನ ಆಸಕ್ತಿ ತೋರಿಸಿದೆ.
 
ii.    ಭಾರತ- ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ):
 
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ)ವನ್ನು 2022ರ ಏಪ್ರಿಲ್ 2ರಂದು ಸಹಿ ಹಾಕಲಾಯಿತು ಮತ್ತು ಅದು 2022ರ ಡಿಸೆಂಬರ್ ನಿಂದ ಜಾರಿಗೆ ಬಂದಿದೆ. ನಿರ್ಣಾಯಕ ಖನಿಜಗಳ ಶೋಧ, ಗಣಿಗಾರಿಕೆ, ಹೊರತೆಗೆಯುವಿಕೆ ಮತ್ತು ಸಂಸ್ಕರಣಾ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಯೋಗವನ್ನು ಹೆಚ್ಚಿಸಲು ಒಪ್ಪಂದವು ಎರಡೂ ದೇಶಗಳಿಗೆ ಅವಕಾಶವನ್ನು ನೀಡುತ್ತದೆ. ಭಾರತ - ಆಸ್ಟ್ರೇಲಿಯಾದ ಒಟ್ಟು ಐದು ಸುತ್ತುಗಳ ಸಿಇಸಿಎ ಮಾತುಕತೆಗಳು "ಕ್ರಿಟಿಕಲ್ ಮಿನರಲ್ ಟ್ರ್ಯಾಕ್" ನಲ್ಲಿ ನಡೆದಿವೆ.  

 ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್  (ಕಬಿಲ್ ):-

 ಖನೀಜ್ ಬಿದೇಶ್ ಇಂಡಿಯಾ ಲಿಮಿಟೆಡ್ (ಕಬಿಲ್) ಗಣಿ ಸಚಿವಾಲಯವು 2019 ರ ಆಗಸ್ಟ್‌ನಲ್ಲಿ ಸ್ಥಾಪಿಸಿದ ಜಂಟಿ ಸಹಭಾಗಿತ್ವದ ಕಂಪನಿಯಾಗಿದ್ದು, ನಾಲ್ಕೋ, ಎಚ್ ಸಿಎಲ್ ಮತ್ತು ಎಂಇಸಿಎಲ್ ಗಳ ಸಮಾನ ಭಾಗವಹಿಸುವಿಕೆಯೊಂದಿಗೆ ಪ್ರಸ್ತುತ ದೇಶೀಯ ಮಾರುಕಟ್ಟೆಗೆ ಲಿಥಿಯಂ ಮತ್ತು ಕೋಬಾಲ್ಟ್ನ ಸೋರ್ಸಿಂಗ್ ಮತ್ತು ಆಸ್ಟ್ರೇಲಿಯಾ, ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಯೋಜನೆಗಳಲ್ಲಿ ಕೆಲವು ಕಂಪನಿಗಳೊಂದಿಗೆ ತೊಡಗಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಿದೆ. 

ಕಬಿಲ್ ಮತ್ತು ಕ್ರಿಟಿಕಲ್ ಮಿನರಲ್ ಆಫೀಸ್ (ಸಿಎಂಒ) ಕೈಗಾರಿಕೆ, ವಿಜ್ಞಾನ ಮತ್ತು ಸಂಪನ್ಮೂಲಗಳ ಇಲಾಖೆ (ಡಿಐಎಸ್ಆರ್) 2022ರ  ಮಾರ್ಚ್ ನಲ್ಲಿ ಆಸ್ಟ್ರೇಲಿಯಾದ ಸರ್ಕಾರದ ನಡುವೆ ಸಹಿ ಮಾಡಲಾದ ಎಂಒಯು ಅಡಿಯಲ್ಲಿ, ಆಸ್ಟ್ರೇಲಿಯಾದ ಲಿಥಿಯಂ ಮತ್ತು ಕೋಬಾಲ್ಟ್ ಖನಿಜ ಆಸ್ತಿಗಳಲ್ಲಿ ಜಂಟಿ ಪರಿಶ್ರಮ ಮತ್ತು ಹೆಚ್ಚಿನ ಜಂಟಿ ಹೂಡಿಕೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

 ii)    ಜನವರಿ 2023 ರಲ್ಲಿ ಆಸ್ಟ್ರೇಲಿಯಾದ ಪಿಡಬ್ಲೂಸಿ ಎಂಬ ಸಲಹೆಗಾರರನ್ನು ನೇಮಿಸುವ ಮೂಲಕ ಹೂಡಿಕೆಗೆ ಸೂಕ್ತವಾದ ಯೋಜನೆಯ ಆಯ್ಕೆಗಾಗಿ ಕಾರಣ ಪರಿಶ್ರಮದ ಚಟುವಟಿಕೆ ಆರಂಭಿಸಲಾಯಿತು. 
 

iii)   ಮಾರ್ಚ್ 2023 ರಲ್ಲಿ ಐದು ಯೋಜನೆಗಳ (2-ಲಿಥಿಯಂ ಯೋಜನೆಗಳು ಮತ್ತು 3-ಕೋಬಾಲ್ಟ್ ಯೋಜನೆಗಳು) ಕಿರುಪಟ್ಟಿ ಮಾಡುವುದನ್ನು ಪೂರ್ಣಗೊಳಿಸಲಾಗಿದೆ ಮತ್ತು ಈ ಯೋಜನೆಗಳ ವಿವರವಾದ ಪ್ರಕ್ರಿಯೆಗಳನ್ನು ನಂತರ ಆರಂಭಿಸಲಾಗಿದೆ. ವಿವಿಧ ಹಂತಗಳಲ್ಲಿ ನಿಯಮಿತವಾಗಿ ನಿಯಮಗಳ ಪಾಲನೆ ಮೂಲಕ ತ್ವರಿತಗೊಳಿಸುವ ಕ್ರಮಗಳನ್ನು ಎರಡೂ ದೇಶದವರು ಸಕ್ರಿಯವಾಗಿ ಅನುಸರಿಸುತ್ತಿದ್ದಾರೆ. 

iv)  ಅರ್ಜೆಂಟೀನಾದಲ್ಲಿ ಲಿಥಿಯಂ ಗಣಿಗಾರಿಕೆ ಯೋಜನೆಗಳ ಜಂಟಿ ಅಭಿವೃದ್ಧಿಗೆ ಸಾಂಸ್ಥಿಕ ಸಹಕಾರವನ್ನು ಸ್ಥಾಪಿಸಲು 2020 ಡಿಸೆಂಬರ್  ನಲ್ಲಿ ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದ ಸರ್ಕಾರಿ ಸ್ವಾಮ್ಯದ ಉದ್ಯಮಗಳಾದ CAMYEN ನೊಂದಿಗೆ ಸಹಿ ಮಾಡಿದ ತಿಳಿವಳಿಕೆ ಒಪ್ಪಂದವನ್ನು ಉಲ್ಲೇಖಿಸಿ, 2023ರ ಫೆಬ್ರವರಿಯಲ್ಲಿ ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ, CAMYEN ನೊಂದಿಗೆ ಶೋಧನೆ ಮತ್ತು ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕಬಿಲ್ ಐದು ಲಿಥಿಯಂ ಬ್ಲಾಕ್ಗಳ ಶೋಧ ಮತ್ತು ಅಭಿವೃದ್ಧಿಗೆ ನಿರ್ಧರಿಸಿತು. 

v)   ಕಬಿಲ್ ಮಂಡಳಿಯು CAMYEN ನೊಂದಿಗೆ "ಕರಡು ಶೋಧನೆ ಮತ್ತು ಅಭಿವೃದ್ಧಿ ಒಪ್ಪಂದ" ವನ್ನು ಅನುಮೋದಿಸಿದೆ ಮತ್ತು ಜೂನ್ 2023 ರಲ್ಲಿ ಕ್ಯಾಟಮಾರ್ಕಾದಲ್ಲಿ ಶಾಖೆಯ ಕಚೇರಿಯನ್ನು ತೆರೆಯುವ ಪ್ರಸ್ತಾಪವನ್ನು ಮಾಡಿದೆ. ಒಪ್ಪಂದ ಮಾಡಿಕೊಳ್ಳಲು ಗಣಿ ಸಚಿವಾಲಯವು ಕಬಿಲ್ ಗೆ ಅಗತ್ಯ ಅನುಮೋದನೆಯನ್ನು ನೀಡಿದೆ. 

vi)  ಲಿಥಿಯಂನ ಅನ್ವೇಷಣೆ, ಹೊರತೆಗೆಯುವಿಕೆ, ಸಂಸ್ಕರಣೆ ಮತ್ತು ವಾಣಿಜ್ಯೀಕರಣಕ್ಕೆ ಸಂಬಂಧಿಸಿದಂತೆ ಸಂಭವನೀಯ ವ್ಯಾಪಾರ ಅವಕಾಶಗಳನ್ನು ಮೌಲ್ಯಮಾಪನ ಮಾಡಲು ಮೇ, 2023 ರಲ್ಲಿ ಚಿಲಿಯ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿಯಾದ ಇನಾಮಿ (ENAMI) ಯೊಂದಿಗೆ ಬಹಿರಂಗಪಡಿಸಲಾಗದ ಒಪ್ಪಂದಕ್ಕೆ (ಎನ್ ಡಿಎ)ಗೆ  ಸಹಿ ಮಾಡಲಾಗಿದೆ. 

 ರಾಷ್ಟ್ರೀಯ ಖನಿಜ ಅನ್ವೇಷಣಾ ಟ್ರಸ್ಟ್  (ಎನ್ ಎಂಇಟಿ )

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ರ ಸೆಕ್ಷನ್ 9ಸಿ ಯ ಉಪ ನಿಯಮ (1) ರ ಅನುಸಾರವಾಗಿ, ಆಗಸ್ಟ್ 2015 ರಲ್ಲಿ ಗೆಜೆಟ್ ಅಧಿಸೂಚನೆಯ ಮೂಲಕ ಭಾರತ ಸರ್ಕಾರವು ಪ್ರಾದೇಶಿಕ ಮತ್ತು ವಿವರವಾದ ಖನಿಜ ಶೋಧನಾ ಚಟುವಟಿಕೆಗಳನ್ನು ಉತ್ತೇಜಿಸಲು ರಾಷ್ಟ್ರೀಯ ಖನಿಜ ಶೋಧನಾ ಟ್ರಸ್ಟ್(ಎನ್ಎಂಇಟಿ) ಅನ್ನು ಸ್ಥಾಪಿಸಿತು.  

2023-24    ನೇ ಹಣಕಾಸು ವರ್ಷದಲ್ಲಿ ಸಾಧನೆಯ ಮೈಲಿಗಲ್ಲುಗಳು (ಡಿಸೆಂಬರ್ 10ರವರೆಗೆ)
 
(i)    ಎನ್ಎಂಇಟಿ 419.48 ಕೋಟಿ ರೂ. ವೆಚ್ಚದಲ್ಲಿ 51 ಖನಿಜ ಅನ್ವೇಷಣೆ/ಆರ್ಥಿಕ ನೆರವು ಮತ್ತು ಸಂಗ್ರಹಣೆ ಯೋಜನೆಗಳನ್ನು ಅನುಮೋದಿಸಿದೆ. 
(ii)    ಎನ್ಎಂಇಟಿ 120 ಕೋಟಿ ರೂ.ಗಳನ್ನು ಶೋಧ ಕಾರ್ಯ/ಆರ್ಥಿಕ ನೆರವು ಮತ್ತು ಯಂತ್ರೋಪಕರಣಗಳ ಖರೀದಿ, ಬೇಸ್‌ಲೈನ್ ಡೇಟಾ ಸೃಷ್ಟಿಯ ಯೋಜನೆಗಳು, ಖನಿಜ ನಿಕ್ಷೇಪಗಳ ಯಶಸ್ವಿ ಹರಾಜಿಗಾಗಿ ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹ ಮತ್ತು ಹೊಸದಾಗಿ ಮಂಜೂರಾದ 51 ಯೋಜನೆಗಳಿಗೆ ಮುಂಗಡವನ್ನು ವಿತರಿಸಿದೆ.
(iii)    ಈ 51 ಯೋಜನೆಗಳು 54.34 ಕೋಟಿ ರೂ. ವೆಚ್ಚದೊಂದಿಗೆ ನಿರ್ಣಾಯಕ ಖನಿಜಗಳ 21 ಯೋಜನೆಗಳನ್ನು ಒಳಗೊಂಡಿವೆ.
(iv)    ಎನ್ಎಂಇಟಿ ಅಧಿಸೂಚಿತ ಖಾಸಗಿ ಶೋಧನಾ ಏಜೆನ್ಸಿಗಳ 17 ಖನಿಜ ಶೋಧ ಕಾರ್ಯ ಯೋಜನೆಗಳಿಗೆ 15.88 ಕೋಟಿ ರೂ.ವೆಚ್ಚದಲ್ಲಿ ಹಣವನ್ನು ನೀಡಿದೆ. 17 ಯೋಜನೆಗಳಲ್ಲಿ 11 ನಿರ್ಣಾಯಕ ಖನಿಜ ಯೋಜನೆಗಳಾಗಿವೆ. 
(v)    ಎನ್ಎಂಇಟಿ  ಮೂರು ರಾಜ್ಯಗಳಿಗೆ 1.54 ಕೋಟಿ ರೂ. ಮೊತ್ತದ 03 ಯೋಜನೆಗಳಿಗೆ ಯಂತ್ರೋಪಕರಣಗಳ ಖರೀದಿಗಾಗಿ ಆರ್ಥಿಕ ನೆರವು ನೀಡಿದೆ.. ಇದು ಈಶಾನ್ಯ ರಾಜ್ಯಗಳ ಎರಡು ಯೋಜನೆಗಳನ್ನು ಅಂದರೆ ಮೇಘಾಲಯ ಮತ್ತು ಮಣಿಪುರ ಮೊತ್ತವು  67 ಲಕ್ಷ ರೂ. ಒಳಗೊಂಡಿದೆ. 
(vi)    ಚಿನ್ನ, ಮೂಲ ಲೋಹಗಳು, ಇತರ ಅಮೂಲ್ಯ ಖನಿಜಗಳು, ಕಾರ್ಯತಂತ್ರ/ನಿರ್ಣಾಯಕ ಖನಿಜಗಳು ಮತ್ತು ರಸಗೊಬ್ಬರ ಖನಿಜಗಳಿಗಾಗಿ ಗ್ರೀನ್‌ಫೀಲ್ಡ್ ಪ್ರದೇಶಗಳಲ್ಲಿನ G4 ಐಟಂಗಳಿಗಾಗಿ ಯೋಜನೆಯ ಅನುಮೋದಿತ ವೆಚ್ಚದ ಶೇ.25 ರಷ್ಟು ಅನ್ವೇಷಣೆ ಪ್ರೋತ್ಸಾಹವನ್ನು (ಇಎ) ಅನ್ನು ಎನ್ಎಂಇಟಿ ಘೋಷಿಸಿದೆ. ನಿಕ್ಷೇಪವನ್ನು ಯಶಸ್ವಿಯಾಗಿ ಹರಾಜು ಮಾಡಿದರೆ ಅಥವಾ G4 ನಿಂದ G3 ಹಂತಕ್ಕೆ ಅಪ್‌ಗ್ರೇಡ್ ಮಾಡಿದರೆ ಅನ್ವೇಷಣೆ ಪ್ರೋತ್ಸಾಹಕಗಳನ್ನು ಪಾವತಿಸಲಾಗುತ್ತದೆ
(vii)    ಎನ್ಎಂಇಟಿ ಮೊದಲ ಶೆಡ್ಯೂಲ್ನ ಭಾಗ D ಮತ್ತು 1957 ರ ಎಂಎಂಡಿಆರ್ ಕಾಯಿದೆಯ ಏಳನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾದ ನಿರ್ಣಾಯಕ ಖನಿಜ ಮತ್ತು ಕಾರ್ಯತಂತ್ರದ ಖನಿಜಗಳ ಪರಿಶೋಧನೆಗಾಗಿ ನೇರವಾಗಿ ನ್ಯಾಷನಲ್ ಮಿನರಲ್ ಎಕ್ಸ್‌ಪ್ಲೋರೇಷನ್ ಟ್ರಸ್ಟ್ (ಎನ್ ಇಎಂಟಿ) ಮೂಲಕ ಅಧಿಸೂಚಿತ ಖಾಸಗಿ ಪರಿಶೋಧನಾ ಏಜೆನ್ಸಿಗಳನ್ನು  (ಎನ್ ಪಿ ಇಎಎಸ್) ನಿಯಂತ್ರಿಸುವ ಪರಿವರ್ತಕ ಯೋಜನೆಯನ್ನು ಅನಾವರಣಗೊಳಿಸಿದೆ, 
 ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣದ ಉಪಕ್ರಮಗಳು (ಜಿಎಸ್ ಐ)
(i)    ಜಿಎಸ್ಐ  ವಾರ್ಷಿಕ ಕಾರ್ಯಕ್ರಮ 2023-24ರ ಅವಧಿಯಲ್ಲಿ ನವೆಂಬರ್ 2023 ರ ಅಂತ್ಯದವರೆಗೆ 23000 ಚದರ ಕಿಮೀ ಗುರಿಯಲ್ಲಿ 8306 ಚದರ ಕಿಮೀ ವಿಶೇಷ ಥೀಮೆಟಿಕ್ ಮ್ಯಾಪಿಂಗ್ (1:25,000 ಪ್ರಮಾಣದಲ್ಲಿ) ಪೂರ್ಣಗೊಳಿಸಿದೆ.
(ii)    ಜಿಎಸ್ಐ ನವೆಂಬರ್ 2023ರ ಅಂತ್ಯದವರೆಗೆ ವಾರ್ಷಿಕ ಕಾರ್ಯಕ್ರಮ 2023-24 ರ ಅವಧಿಯಲ್ಲಿ ಜಿಎಸ್ ಐ 120,000 ಚದರ ಕಿಮೀ ಗುರಿಯಲ್ಲಿ 59343 ಚ.ಕಿ.ಮೀ ರಾಷ್ಟ್ರೀಯ ಜಿಯೋಕೆಮಿಕಲ್ ಮ್ಯಾಪಿಂಗ್ (1:50,000 ಪ್ರಮಾಣದಲ್ಲಿ) ಪೂರ್ಣಗೊಳಿಸಿದೆ. 
(iii)     ಜಿಎಸ್ಐ ವಾರ್ಷಿಕ ಕಾರ್ಯಕ್ರಮ 2023-24 ರ ಅವಧಿಯಲ್ಲಿ ನವೆಂಬರ್ 2023 ರ ಅಂತ್ಯದವರೆಗೆ 1,00,000 ಚದರ ಕಿಮೀ ಗುರಿಯಲ್ಲಿ 33942 ಚ.ಕಿ.ಮೀ ರಾಷ್ಟ್ರೀಯ ಭೂಭೌತಿಕ ಮ್ಯಾಪಿಂಗ್ (1:50,000 ಪ್ರಮಾಣದಲ್ಲಿ) ಪೂರ್ಣಗೊಳಿಸಿದೆ. 
(iv)    ಜಿಎಸ್ಐ ವಾರ್ಷಿಕ ಕಾರ್ಯಕ್ರಮ 2023-24 ರ ಅವಧಿಯಲ್ಲಿ ನವೆಂಬರ್ 2023 ರ ಅಂತ್ಯದವರೆಗೆ 16,000 ಚದರ ಕಿಮೀ ಗುರಿಯಲ್ಲಿ 6702 ಚದರ ಕಿಮೀ ದೊಡ್ಡ ಪ್ರಮಾಣದ ಮ್ಯಾಪಿಂಗ್ (1:10,000/12,500 ಪ್ರಮಾಣದಲ್ಲಿ) ಪೂರ್ಣಗೊಳಿಸಿದೆ.

ರಾಷ್ಟ್ರೀಯ ಏರೋ-ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ (ಎನ್ಎಜಿಎಂಪಿ), ಮೊದಲನೇ ಗುರುತಿಸಲಾದ ಸ್ಪಷ್ಟ ಭೂವೈಜ್ಞಾನಿಕ ಸಂಭಾವ್ಯ ಪ್ರದೇಶದ ಮೇಲೆ ಏಕರೂಪದ ಏರೋ-ಜಿಯೋಫಿಸಿಕಲ್ ಡೇಟಾವನ್ನು ಪಡೆದುಕೊಳ್ಳಲು ಜಿಎಸ್ಐ ನ ಪ್ರಮುಖ ಕಾರ್ಯಕ್ರಮವಾಗಿದೆ. ನವೆಂಬರ್, 2023 ರ ಅಂತ್ಯದವರೆಗೆ ಜಿಎಸ್ ಐ2023-24 ರ ವಾರ್ಷಿಕ ಕಾರ್ಯಕ್ರಮದ ಸಮಯದಲ್ಲಿ, ಹೆಚ್ಚಿನ ಅನ್ವೇಷಣೆಗಾಗಿ ಎನ್ಎಜಿಎಂಪಿ ಮೂಲಕ ಸುಮಾರು 55890 ಚ.ಕಿ.ಮೀ. ಸಂಭಾವ್ಯ ಪ್ರದೇಶಗಳನ್ನು ಗುರುತಿಸಿದೆ. 
(v)    ಜಿಎಸ್ ಐ 2023-24ರಲ್ಲಿ ಸುಮಾರು 358 ಖನಿಜ ಶೋಧನಾ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
(vi)    ಕಾರ್ಯತಾಂತ್ರಿಕ, ನಿರ್ಣಾಯಕ ಮತ್ತು ರಸಗೊಬ್ಬರ ಖನಿಜಗಳ ಅನ್ವೇಷಣೆಗೆ ಉತ್ತೇಜನ ನೀಡಲು, ಎಫ್‌ಎಸ್ 2023-24 ರ ಅವಧಿಯಲ್ಲಿ ಆರ್ ಇಇ, ಲಿ, ಮೊ, ಪೊಟ್ಯಾಶ್, ಟಂಗ್‌ಸ್ಟನ್, ಗ್ರ್ಯಾಫೈಟ್ ಮುಂತಾದ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳ ಮೇಲೆ ಜಿಎಸ್ ಐ 127 ಯೋಜನೆಗಳನ್ನು ತೆಗೆದುಕೊಂಡಿತು. 
(vii)    2023ರ ಫೆಬ್ರವರಿಯಲ್ಲಿ, ಒಟ್ಟು ಮೂರು ಜಿ2 ಹಂತದ ತನಿಖಾ ವರದಿಗಳು [01 ಸತು(ಜಿಂಕ್) ಮತ್ತು 02 ತಾಮ್ರದ ವರದಿಗಳು] ಹರಾಜಿಗಾಗಿ ಜಿಎಸ್ ಐ ನಿಂದ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಯಿತು. ಒಟ್ಟು ಹನ್ನೆರಡು ಜಿ3 ಹಂತದ ತನಿಖಾ ವರದಿಗಳು [03 ಪ್ರತಿ ಪೊಟ್ಯಾಶ್ ಮತ್ತು ವನಾಡಿಯಮ್ ವರದಿಗಳು; 01 ಬಾಕ್ಸೈಟ್, ತಾಮ್ರ, ಸುಣ್ಣದ ಕಲ್ಲು, ಲಿಥಿಯಂ, ಮ್ಯಾಂಗನೀಸ್ ಮತ್ತು ಮಾಲಿಬ್ಡಿನಮ್] ಪ್ರತಿ ವರದಿಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಫೆಬ್ರವರಿ 2023 ರಲ್ಲಿ ಹಸ್ತಾಂತರಿಸಲಾಗಿದೆ. ಏಕಕಾಲದಲ್ಲಿ, ಜಿಎಸ್ ಐನ ಒಟ್ಟು ಮೂವತ್ತೈದು [35] ಜಿ4 ಹಂತದ ಭೂವೈಜ್ಞಾನಿಕ ವರದಿಗಳು/ಭೂವೈಜ್ಞಾನಿಕ ಜ್ಞಾಪನಾ ಪತ್ರಗಳನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ಸಂಯುಕ್ತ ಪರವಾನಗಿಯಾಗಿ ಹರಾಜಿಗಾಗಿ ಹಸ್ತಾಂತರಿಸಿತು. ಜಿ4 ಹಂತದ ಭೂವೈಜ್ಞಾನಿಕ ವರದಿಗಳು/ಭೂವೈಜ್ಞಾನಿಕ ಬಡಂಬಡಿಕೆಗಳು ಬಾಕ್ಸೈಟ್ [ಸಂಖ್ಯೆ 04 ], ಮೂಲ ಲೋಹ [ಸಂಖ್ಯೆ06  ], ಚಿನ್ನ, ಗ್ರ್ಯಾಫೈಟ್ [ಸಂಖ್ಯೆ 03], ಕಬ್ಬಿಣದ ಅದಿರು [ಸಂಖ್ಯೆ 04 ], ಮ್ಯಾಂಗನೀಸ್ [ಸಂಖ್ಯೆ 03 ], ಸುಣ್ಣದಕಲ್ಲುಗಳಿಗೆ ಸಂಬಂಧಿಸಿದೆ. [ಸಂಖ್ಯೆ 04 ], ಮತ್ತು ಲಿಥಿಯಂ, ಮ್ಯಾಂಗನೀಸ್, Ni-PGE-Au, ಫಾಸ್ಫೊರೈಟ್, ಟಿನ್ ಮತ್ತು ಟಂಗ್‌ಸ್ಟನ್ನ ತಲಾ ಒಂದು. ನವೆಂಬರ್ 2023 ರಲ್ಲಿ, ಭಾರತದ ಕೇಂದ್ರ ಸರ್ಕಾರದಿಂದ ನಿರ್ಣಾಯಕ ಖನಿಜ ನಿಕ್ಷೇಪಗಳ ಹರಾಜಿನ 1 ನೇ ಕಂತಿಗೆ ಜಿಎಸ್ ಐ ಗಣಿ ಸಚಿವಾಲಯಕ್ಕೆ ನಿರ್ಣಾಯಕ ಖನಿಜಗಳ 11 ವರದಿಗಳನ್ನು ಹಸ್ತಾಂತರಿಸಿತು. 11 ವರದಿಗಳಲ್ಲಿ ನಾಲ್ಕು ಜಿ2 ಹಂತ, ಮೂರು ಜಿ3 ಹಂತ ಮತ್ತು ನಾಲ್ಕು ಜಿ4 ಹಂತದ ನಿರ್ಣಾಯಕ ಖನಿಜಗಳ ವರದಿಗಳನ್ನು ಒಳಗೊಂಡಿವೆ. 

(ix)  ಅಸ್ತಿತ್ವದಲ್ಲಿರುವ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ, ಜಿಎಸ್ ಐ ನ ಪ್ರಮುಖ ಜಿಯೋಸ್ಪೇಷಿಯಲ್ ಪೋರ್ಟಲ್ "ಭುಕೋಶ್" ಮೂಲಕ ಎಲ್ಲಾ ಸಂಬಂಧಪಟ್ಟ ಮಧ್ಯಸ್ಥಗಾರರ ಬಳಕೆಗಾಗಿ ಬಹು-ವಿಷಯಾಧಾರಿತ ಭೂವೈಜ್ಞಾನಿಕ ಮಾಹಿತಿಯನ್ನು ಮುಕ್ತವಾಗಿ ಪ್ರಸಾರ ಮಾಡುವ ಜವಾಬ್ದಾರಿಯನ್ನು ಪೂರೈಸಲು ಜಿಎಸ್ ಐ ಆನ್‌ಲೈನ್ ಕೋರ್ ಬಿಸಿನೆಸ್ ಇಂಟಿಗ್ರೇಟೆಡ್ ಸಿಸ್ಟಮ್ (ಒಸಿಬಿಐಎಸ್)ಪೋರ್ಟಲ್ ಅನ್ನು ಜಾರಿಗೊಳಿಸಿದೆ. ಈ ದತ್ತಾಂಶವನ್ನು ಯಾರಾದರೂ ಖನಿಜ ಭವಿಷ್ಯಜ್ಞಾನಕ್ಕಾಗಿ ಮತ್ತು ಸಂಶೋಧನೆಯ ಮೂಲಕ ಹೊಸ ಜ್ಞಾನವನ್ನು ಉತ್ಪಾದಿಸಲು ಬಳಸಿಕೊಳ್ಳಬಹುದು. 2023 ರ ಅವಧಿಯಲ್ಲಿ (ಜನವರಿಯಿಂದ ನವೆಂಬರ್, 2022), 33962 ಬಾಹ್ಯ ಬಳಕೆದಾರರು ಜಿಯೋಸ್ಪೇಷಿಯಲ್ ದತ್ತಾಂಶವನ್ನು ಡೌನ್‌ಲೋಡ್ ಮಾಡಿದ್ದಾರೆ ಮತ್ತು 833 ಬಾಹ್ಯ ಬಳಕೆದಾರರು ಜಿಯೋಫಿಸಿಕಲ್ ಡೇಟಾಸೆಟ್‌ಗಳನ್ನು ಡೌನ್‌ಲೋಡ್ ಮಾಡಿದ್ದಾರೆ ಮತ್ತು “ಭೂಕೋಶ್” ಜಿಎಸ್ಐ ಜಿಯೋಸ್ಪೇಷಿಯಲ್ ಪೋರ್ಟಲ್‌ನಲ್ಲಿ ಬಾಹ್ಯ ಬಳಕೆದಾರರು  51043 ಲಾಗಿನ್ ಹಿಟ್ ಮಾಡಿದ್ದಾರೆ.  

(x)    2023-24 ರ ವಾರ್ಷಿಕ ಕಾರ್ಯಕ್ರಮದ ಅವಧಿಯಲ್ಲಿ ಮಿಷನ್-III (ಜಿಯೋಇನ್ಫಾ ರ್ಮ್ಯಾಟಿಕ್ಸ್) ಅಡಿಯಲ್ಲಿ, ನಕ್ಷೆ, ದತ್ತಾಂಶ ಏಕೀಕರಣ, ಪ್ರಕಟಣೆ, ದತ್ತಾಂಶ ಭಂಡಾರ ಮತ್ತು ನಿರ್ವಹಣೆ, ಐಟಿ ಮೂಲಸೌಕರ್ಯ ಇತ್ಯಾದಿಗಳ ಯೋಜನೆಗಳನ್ನು ಜಿಎಸ್ ಐ ಕೈಗೆತ್ತಿಕೊಂಡಿದೆ. ಮಿಷನ್-III ಅಡಿಯಲ್ಲಿನ ಪ್ರಮುಖ ಚಟುವಟಿಕೆಯು i) ಜಿಎಸ್ ಐ ನಲ್ಲಿ ರಾಷ್ಟ್ರೀಯ ಭೂವಿಜ್ಞಾನ ಡೇಟಾ ರೆಪೊಸಿಟರಿ (ಎನ್ ಜಿಡಿಆರ್) ರಚನೆ, ii) 1:50K ಪ್ರಮಾಣದಲ್ಲಿ ಅಖಿಲ ಭಾರತ ರಾಷ್ಟ್ರೀಯ ಭೂರಾಸಾಯನಿಕ ನಕ್ಷೆ ಡೇಟಾ (ಎನ್ ಜಿಸಿಎಂ) ಮತ್ತು ಒಸಿಬಿಐಎಸ್ ನ ಭೂಕೋಶ್ ಜಿಯೋ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ರಾಷ್ಟ್ರೀಯ ಭೂಭೌತ ನಕ್ಷೆ ಡೇಟಾ (ಎನ್ ಜಿಪಿಎಂ)ವಿಶ್ಲೇಷಣೆ ಮತ್ತು ಸಂಯೋಜನೆ, iii) ಜಿಯೋಸ್ಪೇಷಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತದ ಮೆಟಾಲೋಜೆನಿಕ್ ನಕ್ಷೆಯ (1:2M) ನವೀಕರಣ ಮತ್ತು ತಯಾರಿಕೆ, iv) ಭೂವೈಜ್ಞಾನಿಕ ಜಿಲ್ಲಾ ಸಂಪನ್ಮೂಲ ನಕ್ಷೆಗಳ ಸಂಕಲನ, vi) ಮೂಲ ಲೋಹಗಳು, ಅಮೂಲ್ಯ ಲೋಹಗಳು, ಪಿಜಿಇ ಮತ್ತು ಡೈಮಂಡ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಜಿಐಎಸ್ ದತ್ತಾಂಶ ಸೃಷ್ಟಿ, vii ) ವಿವಿಧ ರಾಜ್ಯಗಳ ಭೂವೈಜ್ಞಾನಿಕ ಮತ್ತು ಖನಿಜ ಸಂಪನ್ಮೂಲ ನಕ್ಷೆಯ ಸಂಕಲನ ಮತ್ತು ತಯಾರಿಕೆ ಇತ್ಯಾದಿ. viii) ಮಧ್ಯ ಭಾರತದ ಕಲ್ಲಿದ್ದಲು ಕ್ಷೇತ್ರಗಳ ವಿಶೇಷ ಪ್ರಕಟಣೆ; ix) ಜಾರ್ಖಂಡ್‌ನಲ್ಲಿ ಚಿನ್ನದ ಖನಿಜೀಕರಣ, x) ಉತ್ತರ ಸಿಂಗ್‌ಭೂಮ್ ಮೊಬೈಲ್ ಬೆಲ್ಟ್ (ಎನ್ ಎಸ್ ಎಂಬಿ) ಕುರಿತು ವಿಶೇಷ ಪ್ರಕಟಣೆ xi) ಭಾರತ ಕಡಪಾ ಜಲಾನಯನ ಪ್ರದೇಶದಲ್ಲಿ ಭೂವಿಜ್ಞಾನದ ವಿಶೇಷ ಪ್ರಕಟಣೆ ಮತ್ತು xii) ಉತ್ತರ ಪ್ರದೇಶ ರಾಜ್ಯಗಳ ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳು, ವಿವಿಧ ಪ್ರಕಟಣೆಗಳು ಸಂಖ್ಯೆ 30, Pt.XIII, ಮೂರನೇ ಪರಿಷ್ಕೃತ ಆವೃತ್ತಿ (ಹಿಂದಿಯಲ್ಲಿ 2020 ರ ಪ್ರಕಟಣೆ), xiii) ಲೆಗಸಿ ಬೋರ್‌ಹೋಲ್ ಡೇಟಾ ರೆಪೊಸಿಟರಿ (ಎಲ್ ಬಿ ಆರ್ ಡಿ) ಸೃಷ್ಟಿ ಅಂಶಗಳು ಸೇರಿವೆ.  
(xi)   ಹಲವಾರು ಸಾರ್ವಜನಿಕ-ಉತ್ತಮ ಭೂವೈಜ್ಞಾನಿಕ ಕಾರ್ಯಕ್ರಮಗಳ ವ್ಯವಸ್ಥಿತ ಕಾರ್ಯಗತಗೊಳಿಸುವಿಕೆಯಲ್ಲಿ ಜಿಎಸ್ ಐ ದೀರ್ಘಕಾಲ ತೊಡಗಿಸಿಕೊಂಡಿದೆ. ಹಣಕಾಸು ವರ್ಷ  2023-24 ರ ವಾರ್ಷಿಕ ಕಾರ್ಯಕ್ರಮದ ಸಮಯದಲ್ಲಿ, ಜಿಎಸ್ ಐ ಜಿಯೋಟೆಕ್ನಿಕಲ್ ಅಧ್ಯಯನಗಳ ಕುರಿತು 24 ಸಂಶೋಧನಾ ಯೋಜನೆಗಳು, ಭೂಕುಸಿತ ಅಧ್ಯಯನಗಳ ಕುರಿತು 42 ಯೋಜನೆಗಳು ಮತ್ತು ಭೂಕಂಪ-ಟೆಕ್ಟೋನಿಕ್ ಅಧ್ಯಯನಗಳ ಕುರಿತು 16 ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.
(xii) ಜಿಎಸ್ ಐ ದೇಶದಲ್ಲಿ ಭೂಕುಸಿತ ಅಧ್ಯಯನಕ್ಕೆ ನೋಡಲ್ ಸಂಸ್ಥೆಯಾಗಿದ್ದು, LANDSLIP ಯೋಜನೆಯಡಿಯಲ್ಲಿ ಬ್ರಿಟಿಷ್ ಭೂವೈಜ್ಞಾನಿಕ ಸಮೀಕ್ಷೆಯ (ಬಿಜಿಎಸ್) ಸಹಯೋಗದೊಂದಿಗೆ ರೇನ್‌ಫಾಲ್ ಇಂಡ್ಯೂಸ್ಡ್ ಲ್ಯಾಂಡ್‌ಸ್ಲೈಡ್ ಅರ್ಲಿ ವಾರ್ನಿಂಗ್ ಸಿಸ್ಟಮ್ (LEWS) ಅನ್ನು ಅಭಿವೃದ್ಧಿಪಡಿಸುತ್ತಿದೆ. ಮುನ್ಸೂಚನೆಯ ಮಾದರಿಯನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳು, ತಮಿಳುನಾಡಿನ ನೀಲಗಿರಿ ಜಿಲ್ಲೆ ಮತ್ತು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ವಾರ್ಷಿಕ ಕಾರ್ಯಕ್ರಮ FS 2023-24 ರಲ್ಲಿ ಮೌಲ್ಯೀಕರಿಸಲಾಗುತ್ತಿದೆ. 11 ಭೂಕುಸಿತ ಪೀಡಿತ ರಾಜ್ಯಗಳಲ್ಲಿ ಇದೇ ರೀತಿಯ LEWS ಪ್ರಯೋಗವನ್ನು 2025 ರವರೆಗೆ ಕೈಗೊಳ್ಳಲಾಗುವುದು. 2023-24 ರ ಅವಧಿಯಲ್ಲಿ, ಹಿಮಾಚಲ ಪ್ರದೇಶ, ಕೇರಳ, ಕರ್ನಾಟಕ, ಸಿಕ್ಕಿಂ, ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂನಲ್ಲಿ ಯೋಜನಾ ಕಾರ್ಯಕ್ರಮಗಳು ಮುಂದುವರಿಯುತ್ತಿದೆ. 

(xiii) ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ್ ಪಟ್ಟಣದಲ್ಲಿ ಭೂ ಕುಸಿತದ ಘಟನೆ ಸಂಭವಿಸಿದೆ, ಇದರ ಪರಿಣಾಮವಾಗಿ ನೆಲದ ಬಿರುಕುಗಳು ಮತ್ತು ವಸತಿ ಕಟ್ಟಡಗಳು, ರಸ್ತೆಗಳು, ಹೋಟೆಲ್‌ಗಳು ಸೇರಿದಂತೆ ನಾಗರಿಕ ಕಟ್ಟಡಗಳ ಮೇಲೆ ಬಿರುಕುಗಳು ಉಂಟಾಗಿವೆ. 02.01.2023, ಜೋಶಿಮಠದ ಒಟ್ಟುಗೂಡಿಸುವಿಕೆಯ ಅತ್ಯಂತ ಕೆಳಗಿನ ಭಾಗವಾದ ಮಾರ್ವಾರಿಯಲ್ಲಿ ನೆಲೆಗೊಂಡಿರುವ ತಾರಸಿ ಇಳಿಜಾರಿನ ಪ್ರೀ ಫೇಸ್ ನಿಂದ ದಿಢೀರ್ ನೀರು ಹರಿಯುತ್ತಿದೆ.    ಭೂ ಕುಸಿತದ ಕುರಿತು ಪ್ರಾಥಮಿಕ ತನಿಖೆ ನಡೆಸಲು ಭೂವಿಜ್ಞಾನಿಗಳ ತಂಡವನ್ನು ತುರ್ತಾಗಿ ನಿಯೋಜಿಸಲಾಗಿದೆ ಮತ್ತು ಪ್ರಸ್ತುತ ಅಪಾಯದ ಸನ್ನಿವೇಶದ ಕುರಿತು ಟಿಪ್ಪಣಿಯನ್ನು CBRI/NDMA ಗೆ ಸಲ್ಲಿಸಲಾಗಿದೆ. ಇದಲ್ಲದೆ, ಉತ್ತರಾಖಂಡ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ, ಜಿಐಎಸ್ ಪೀಡಿತ ಪ್ರದೇಶದಲ್ಲಿ ವಿವರವಾದ ಮ್ಯಾಪಿಂಗ್ ಅನ್ನು ಕೈಗೊಂಡಿದೆ. 
 
(xiv)       ಡಿಜಿಪಿಎಸ್      ಡಿಜಿಪಿಎಸ್ (ಎಸ್ ಜಿಡಿಆರ್ ಪಿಸಿ)

ಜಿಎಸ್ಐ ರಿಯಲ್ ಟೈಮ್ ರೆಕಾರ್ಡಿಂಗ್ ಮತ್ತು ಮೇಲ್ವಿಚಾರಣೆ ಹಾಗೂ ಭೂಕಂಪಗಳ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳುತ್ತಿದ್ದು, ಅದು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿತವಾಗಿರುವ ಭೂಕಂಪನ ಪರಿವೀಕ್ಷಣಾಲಯಗಳ ಮೂಲಕ ಈ ಕಾರ್ಯ ಮಾಡುತ್ತಿದೆ. ಜಿಎಸ್ಐ ದೇಶಾದ್ಯಂತ ರಿಯಲ್ ಟೈಮ್ ತಳಮಟ್ಟದ ಮಾಹಿತಿ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು 35 ಕಾಯಂ ಡಿಜಿಪಿಎಸ್ ಕೇಂದ್ರಗಳನ್ನು ಸ್ಥಾಪಿಸಿದೆ. ಸಿಸ್ಮೊ-ಜಿಯೊಡೆಟಿಕ್ ಡಾಟಾ ರಿಸೀವಿಂಗ್ ಅಂಡ್ ಪ್ರೋಸಸಿಂಗ್ ಸೆಂಟರ್(ಎಸ್ ಜಿಡಿಆರ್ ಪಿಸಿ) ದತ್ತಾಂಶವನ್ನು ವಿಶ್ಲೇಷಿಸಿ, ಪ್ರಮುಖ ಸಂಶೋಧನಾ ಕಾರ್ಯವನ್ನು ಮಾಡುತ್ತಿದೆ.   
(xv) ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ವಿಪತ್ತು ನಿರ್ವಹಣಾ ಕೋಶದಿಂದ ನಾರ್ಕೊಂಡ್ಯಾಮ್ ದ್ವೀಪದಲ್ಲಿ ಭೌಗೋಳಿಕ ವೈಜ್ಞಾನಿಕ ವಿಶ್ಲೇಷಣೆ ಕೈಗೊಳ್ಳಲು ಮನವಿಯನ್ನು ಸ್ವೀಕರಿಸಲಾಗಿದೆ. ಅಲ್ಲಿ 2023ರ ಮಾರ್ಚ್-ಏಪ್ರಿಲ್ ತಿಂಗಳುಗಳ ಅವಧಿಯಲ್ಲಿ ಸ್ಥಳೀಯ ಅಧಿಕಾರಿಗಳ ಪ್ರಕಾರ ಸರಣಿ ಭೂಕಂಪನಗಳ ಘಟನೆಗಳು ವರದಿಯಾಗಿವೆ. ಈ ಮನವಿಯನ್ನು ಆಧರಿಸಿ ಜಿಎಸ್ಐ ಭೌಗೋಳಿಕ ವಿಜ್ಞಾನಿಗಳ ತಂಡವನ್ನು ಸಿಸ್ಮೋ-ಜೆನಿಕ್ ಜಿಯೋಸೈಂಟಿಫಿಕ್ ಪ್ರಾಥಮಿಕ ಅಧ್ಯಯನ ಕೈಗೊಳ್ಳಲಿದೆ. 25.05.2023 ರಿಂದ 07.07.2023ರ ಅವಧಿಯಲ್ಲಿ ಸಿಸ್ಮೋ ಗ್ರಾಫ್ ಸಾಧನಗಳ 3 ಡಿಜಿಟಲ್ ಬಿಡಿ ಭಾಗಗಳನ್ನು ತಾತ್ಕಾಲಿಕ ಭೂಕಂಪನ ಜಾಲವನ್ನು ಅಳವಡಿಸಲಾಗಿದೆ. ಭೂಕಂಪನ ಚಟುವಟಿಕೆಗಳ ಪ್ರದೇಶಗಳ ಮೇಲ್ವಿಚಾರಣೆ ಮತ್ತು ನಿಗಾವಹಿಸುವುದು ಇದರ ಉದ್ದೇಶವಾಗಿದೆ. ಸಂಬಂಧಿಸಿದ ಪ್ರಾಧಿಕಾರಕ್ಕೆ ಅಧ್ಯಯನ ವರದಿ ಹಾಗೂ ಅಗತ್ಯ ಶಿಫಾರಸ್ಸುಗಳನ್ನು ಸಲ್ಲಿಸಲಾಗುವುದು.  


ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಸಮಕ್ಷಮದಲ್ಲಿ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಜಿಎಸ್ಐ ಅಧಿಕಾರಿಗಳು ಮತ್ತು ಇತರರಿಗೆ 2022ನೇ ಸಾಲಿನ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು

xvi)  ಮಿಷನ್–IV ಚಟುವಟಿಕೆಗಳ ಭಾಗವಾಗಿ ವಿವಿಧ ಭೂವಿಜ್ಞಾನ ವಲಯಗಳಲ್ಲಿ ಅಂದರೆ ಪೆಟ್ರೋಲಜಿ, ಪಲೆನೌಟಾಲಜಿ, ಪ್ಲಾನಿಟರಿ ಜಿಯೋಸೈನ್ಸ್, ಪೋಲಾರ್ ಮತ್ತು ಗ್ಲೇಸಿಯಲ್ ಜಿಯೋಲಜಿ ಹಾಗೂ ಜಿಯೋ ಕ್ರೊನಾಲಜಿ ಮತ್ತು ಐಸೋಟೋಪ್ ಜಿಯೋಲಜಿ ಅಡಿ ಮೂಲ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. ಇವುಗಳನ್ನು ಪ್ರಮುಖವಾಗಿ ಪೆಟ್ರೋಲಜಿ ಯೋಜನೆಯಲ್ಲಿ ನಾನಾ ಖನಿಜಗಳ ಸಂಭವನೀಯತೆಯನ್ನು ಆಧರಿಸಿ, ಅವುಗಳನ್ನು ಅರ್ಥಮಾಡಿಕೊಂಡು ನಿಯಂತ್ರಿಸುವ ಮಾರ್ಗೋಪಾಯಗಳನ್ನು ತಿಳಿಯಲು ವಿನ್ಯಾಸಗೊಳಿಸಲಾಗಿದೆ. 2023-24ರಲ್ಲಿ ಕೈಗೊಂಡಿರುವ ಕೆಲವು ಪ್ರಮುಖ ಸಂಶೋಧನೆಗಳಲ್ಲಿ ಕರ್ನಾಟಕದ ಮಂಗಳೂರು ಶಿಚ್ ಬೆಲ್ಟ್ ನಲ್ಲಿ ಅಪರೂಪದ ಲೋಹಗಳು ಮತ್ತು ಆರ್ ಇ ಇ ಜಿನಸಿಸ್ ಹಾಗೂ ಸ್ವರೂಪಗಳ ಅಧ್ಯಯನ ಸೇರಿದೆ. ಅಲ್ಲದೆ ರಾಜಸ್ತಾನದ ಧನಿ ಗ್ರಾನೈಟ್, ಲಡಾಖ್ ನ ಬಾಥೋಲಿತ್, ಮಧ್ಯ ಭಾರತ ಮತ್ತು ಡಾರ್ಜಿಲಿಂಗ್ನ ಗೊರುಬಥನ್ ರಚನೆ, ಲ್ಯಾಟರೈಟ್ಗಳ ಖನಿಜ ಮತ್ತು ಭೂರಾಸಾಯನಿಕ ಗುಣಲಕ್ಷಣಗಳು, ಲ್ಯಾಟೆರಿಟಿಕ್ ಬಾಕ್ಸೈಟ್ ಮತ್ತು ಕಚ್ ಗುಜರಾತ್ನ ಬಾಕ್ಸೈಟ್, ಮೇಘಾಲಯದ ಪೂರ್ವ ಮತ್ತು ಪಶ್ಚಿಮ ಖಾಸಿ ಬೆಟ್ಟಗಳು ಇತ್ಯಾದಿ. ಒಟ್ಟು 22 ವಸ್ತುಗಳನ್ನು ಪ್ರಸ್ತುತ ಈ ಮಾರ್ಗಗಳಲ್ಲಿ ನಡೆಸಲಾಗುತ್ತಿದೆ. 
(xvii) 2023-24ರ ವಾರ್ಷಿಕ ಕಾರ್ಯಕ್ರಮದಡಿ 2023ರ ನವೆಂಬರ್ ಅಂತ್ಯದವರೆಗೆ ಜಿಎಸ್ಐ ತರಬೇತಿ ಕೇಂದ್ರ ವಿವಿಧ ವಿಷಯಗಳ ಕುರಿತಂತೆ 122 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹಲವು ಡಿಜಿಎಂಎಸ್ ಮತ್ತು ಇತರ ಸಂಸ್ಥೆಗಳ 2984ಕ್ಕೂ ಅಧಿಕ ಪ್ರತಿನಿಧಿಗಳು ಜಿಎಸ್ಐನಿಂದ ತರಬೇತಿ ಪಡೆದಿದ್ದಾರೆ. 

ಭಾರತೀಯ ಬ್ಯೂರೋ ಆಫ್ ಮೈನ್ಸ್ (ಐಬಿಎಂ)

ಐಬಿಎಂನ ಪ್ರಮುಖ ಕಾರ್ಯಚಟುವಟಿಕೆಗಳು ಅಂದರೆ ಹಲವು ಕ್ಷೇತ್ರ ತಪಾಸಣೆಗಳನ್ನು ನಡೆಸುವುದು. ಅದಿರು ಶೋಧನೆ ಸೇರಿದಂತೆ ಇತರ ಪ್ರಮುಖ ಸಾಧನೆಗಳು ಹೀಗಿವೆ;  

1.    ಆನ್ ಲೈನ್ ಮೌಲ್ಯಮಾಪನ ವ್ಯವಸ್ಥೆ ಮೂಲಕ ಗಣಿಗಳಿಗೆ ಸ್ಟಾರ್ ರೇಟಿಂಗ್ ನೀಡಲು ಸುಸ್ಥಿರ ಅಭಿವೃದ್ಧಿ ಚೌಕಟ್ಟು(ಎಸ್ ಡಿಎಫ್) ಜಾರಿ: 2021-22ನೇ ವರ್ಷದಲ್ಲಿ 76 ಗಣಿಗಳಿಗೆ ಫೈವ್ ಸ್ಟಾರ್ ರೇಟಿಂಗ್ ದೊರೆತಿದೆ ಮತ್ತು 2023ರ ಮಾರ್ಚ್ ನಲ್ಲಿ ನಾಗ್ಪುರದಲ್ಲಿ ನಡೆದ ಐಬಿಎಂ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಇವುಗಳನ್ನು ಕೇಂದ್ರ ಗಣಿ ಸಚಿವರು ಸನ್ಮಾನಿಸಿದರು. ಸ್ಟಾರ್ ರೇಟಿಂಗ್ ವ್ಯವಸ್ಥೆ ಜಾರಿಯಾದ ನಂತರ ವರ್ಷವಾರು ಗಣಿಗಳಿಗೆ ನೀಡಲಾದ ಫೈವ್ರ ಸ್ಟಾರ್ ವಿವರಗಳು ಈ ಕೆಳಗಿನಂತಿವೆ:

2.    ಗಣಿ ಸರ್ವೇಕ್ಷಣಾ ವ್ಯವಸ್ಥೆ(ಎಂಎಂಎಸ್) ಇದು ಉಪಗ್ರಹ ಆಧಾರಿತ ನಿಗಾ ವ್ಯವಸ್ಥೆಯಾಗಿದ್ದು, ಸ್ವಯಂಚಾಲಿತ ರಿಮೋಟ್ ಸೆನ್ಸಿಂಗ್ ಪತ್ತೆ ತಂತ್ರಜ್ಞಾನದ ಮೂಲಕ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತಡೆಯುವುದು ಹಾಗೂ ಸ್ಪಂದನಾತ್ಮಕ ಖನಿಜ ಆಡಳಿತ ಸ್ಥಾಪಿಸುವುದು ಇದರ ಉದ್ದೇಶವಾಗಿದೆ. ಗಣಿಗಾರಿಕೆ ಸರ್ವೇಕ್ಷಣಾ ವ್ಯವಸ್ಥೆಯನ್ನು ಬಳಸಿ, 2022-23ನೇ ಸಾಲಿನ 4ನೇ ಹಂತದಲ್ಲಿ ಪ್ರಮುಖ ಖನಿಜಗಳಿಗೆ 138 ಟ್ರಿಗರ್ ಗಳನ್ನು ಸೃಷ್ಟಿಸಲಾಗಿದೆ. ಈವರೆಗೆ 40 ಟ್ರಿಗರ್ ಗಳನ್ನು ಪರಿಶೀಲಿಸಲಾಗಿದ್ದು, 7 ಅನಧಿಕೃತ ಗಣಿಗಾರಿಕೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 
3.    ಗಣಿಗಾರಿಕೆ ಟೆನಮೆಂಟ್ ವ್ಯವಸ್ಥೆ(ಎಂಟಿಎಸ್), ಎಂಟಿಎಸ್ ಗಳ ರಿಟರ್ನ್ಸ್ ಮತ್ತು ನೋಂದಣಿ ಮಾದರಿಯನ್ನು 2022ರ ಮೇ 1ರ ನಂತರ ಯಶಸ್ವಿಯಾಗಿ ಆನ್ ಲೈನ್ ನಲ್ಲಿ ಅಳವಡಿಸಲಾಗಿದ್ದು, 2022ರ ಏಪ್ರಿಲ್ ನಂತರ ರಿಟರ್ನ್ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 12.07.2022ರಂದು ನಡೆದ 6ನೇ ಗಣಿಗಾರಿಕೆ ಶೃಂಗಸಭೆಯಲ್ಲಿ ನೋಂದಣಿ ರಿಟರ್ನ್ಸ್ ಮತ್ತು ಗಣಿಗಾರಿಕೆ ಯೋಜನೆಗಳ ಮಾದರಿಯನ್ನು ಬಿಡುಗಡೆ ಮಾಡಲಾಯಿತು. ಐಬಿಎಂ ನೋಂದಣಿ ಪೋರ್ಟಲ್ ಅನ್ನು ಎನ್ಎಸ್ ಡಬ್ಲ್ಯೂಎಸ್ ಪೋರ್ಟಲ್ ನೊಂದಿಗೆ 1.5.2023ರಂದು ಯಶಸ್ವಿಯಾಗಿ ಸಂಯೋಜಿಸಲಾಗಿದೆ. 
ನೋಂದಣಿ ಮಾದರಿ: 2023-24ನೇ ಹಣಕಾಸು ವರ್ಷದಲ್ಲಿ ನವೆಂಬರ್ 2023ರ ವರೆಗೆ ಒಟ್ಟು ಪೋರ್ಟಲ್ ನಲ್ಲಿ ಒಟ್ಟು 427 ನಾನಾ ವಾಣಿಜ್ಯೋದ್ಯಮಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟಾರೆ 2023ರ ಅಕ್ಟೋಬರ್ ವರೆಗೆ 8086 ಗಣಿ ನಡೆಸುವವರು,  5437 ಕೊನೆಯ ಬಳಕೆದಾರರು, 10392 ವ್ಯಾಪಾರಿಗಳು, 2937 ದಾಸ್ತಾನುದಾರರು, 1610 ರಫ್ತುದಾರರು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. 
ರಿಟರ್ನ್ಸ್ ಮಾದರಿ:  2023ರ ನವೆಂಬರ್ ಅಂತ್ಯದವರೆಗೆ 1850 ಮೈನರ್ ಗಳು ಮತ್ತು  756 ಎಂಡ್ ಯೂಸರ್ಸ್ 2022-23ನೇ ಸಾಲಿನ ವಾರ್ಷಿಕ ರಿಟರ್ನ್ಸ್ ಸಲ್ಲಿಸಿದ್ದಾರೆ. ಗಣಿಗಾರಿಕೆ ಯೋಜನಾ ಮಾದರಿ: 2023-24ನೇ ಸಾಲಿನಲ್ಲಿ 2023ರ ನವೆಂಬರ್ ವರೆಗೆ  487 ಗಣಿಗಾರಿಕೆ ಯೋಜನೆಗಳನ್ನು ಐಬಿಎಂ-ಎಂಪಿಎಎಸ್ ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸಲಾಗಿದೆ. ಇತರೆ ಮಾದರಿಗಳ ಕುರಿತಂತೆ ಡಿಪಿಆರ್ ಪ್ರಗತಿಯಲ್ಲಿದೆ ಮತ್ತು ಹಂತ ಹಂತವಾಗಿ ಅವುಗಳು ಕಾರ್ಯಾರಂಭ ಮಾಡಲಿವೆ. 
ವೆಬ್ ಪೋರ್ಟಲ್ : https://miningplan.ibm.gov.in/MINING_PLAN/
4.    ಡ್ರೋಣ್ ಅಪ್ಲಿಕೇಶನ್ ಅನುಷ್ಠಾನದ ಭಾಗವಾಗಿ 2022-23ನೇ ಅವಧಿಯಲ್ಲಿ 8 ದಿನಗಳ ತರಬೇತಿಯನ್ನು ಐಬಿಎಂ ಕೇಂದ್ರ ಕಚೇರಿ ಹಾಗೂ ಪ್ರಾದೇಶಿಕ ಕಚೇರಿಗಳ 124 ಸಿಬ್ಬಂದಿಗೆ ಜಿಐಎಸ್ ನ ಮೂಲ ಮತ್ತು ಡ್ರೋಣ್ ಸಮೀಕ್ಷೆ ದತ್ತಾಂಶ ವಿಶ್ಲೇಷಣೆ ಬಗ್ಗೆ ತರಬೇತಿ ನೀಡಲಾಗಿದೆ. 
5.    ಯುಎವಿ ಸರ್ವೆ ಸಂಬಂಧಿತ ಚಟುವಟಿಕೆಗಳು: ಡ್ರೋಣ್ ಸರ್ವೆಗಳನ್ನು ನಡೆಸಲು ಎಂಸಿಡಿಆರ್ 2017ರ ನಿಯಮ 34ಎ ಅಡಿ ಉಪನಿಯಮ 5ರಡಿ ಐಬಿಎಂ ಪ್ರಮಾಣಿತ ಕಾರ್ಯಸೂಚಿ ವಿಧಾನ(ಎಸ್ ಒಪಿ)ಗಳನ್ನು ಪ್ರಕಟಿಸಿದೆ ಮತ್ತು ಗಣಿಗಾರಿಕೆ ಪ್ರದೇಶಗಳ ಡಿಜಿಟಲ್ ವೈಮಾನಿಕ ದೃಶ್ಯಗಳನ್ನು ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಿದೆ. ಐಬಿಎಂ ನಿರ್ವಹಣೆ ಮಾಡುವ ಪುಸ್ತಕದಲ್ಲಿ ಎಂಸಿಡಿಆರ್ 2017ರ 34ಎ ಅಡಿ ಪಡೆಯುವ ಡ್ರೋಣ್/ಉಪಗ್ರಹ ದತ್ತಾಂಶವನ್ನು ಸ್ವೀಕರಿಸಿ, ಅವುಗಳನ್ನು ದಾಖಲಿಸಲಾಗುವುದು. ಐಬಿಎಂ ಇತ್ತೀಚೆಗೆ ತನ್ನ ಕೇಂದ್ರ ಕಚೇರಿಯಲ್ಲಿ 131 ಟೆರಾ ಬೈಟ್ಸ್ ಸಾಮರ್ಥ್ಯದ ಬೃಹತ್ ದತ್ತಾಂಶ ಕೇಂದ್ರವನ್ನು ಕಾರ್ಯಾರಂಭ ಮಾಡಿದೆ. 2023ರ ನವೆಂಬರ್ ವರೆಗೆ 1332 ಗಣಿಗಳು ಆನ್ ಲೈನ್ ಡ್ರೋಣ್ ದತ್ತಾಂಶ ಡ್ರೋಣ್ ಡಾಟಾ ಮ್ಯಾನೇಜ್ ಮೆಂಟ್ ಸಿಸ್ಟಮ್ ಪೋರ್ಟಲ್ ನಲ್ಲಿ ಸಲ್ಲಿಕೆ ಮಾಡಿವೆ. 2023ರ ನವೆಂಬರ್ ವರೆಗೆ ಒಟ್ಟಾರೆ ಎಸ್ ಒಪಿ ದತ್ತಾಂಶದಂತೆ 286ರಲ್ಲಿ 278 ತಮ್ಮ ದತ್ತಾಂಶಗಳನ್ನು ಡಿಡಿಎಂಎಸ್ ಪೋರ್ಟಡ್ ನಲ್ಲಿ ಅಪ್ ಲೋಡ್ ಮಾಡಿವೆ.   
6.    2023ನೇ ಪ್ರಸಕ್ತ ವರ್ಷದಲ್ಲಿ 2023ರ ಸೆಪ್ಟೆಂಬರ್ ವರೆಗೆ ಖನಿಜಗಳ ಸರಾಸರಿ ಮಾರಾಟ ದರ(ಎಎಸ್ ಪಿ) ಮತ್ತು ಅಕ್ಟೋಬರ್ 2023ರ ವರೆಗೆ ಲೋಹಗಳ ದರ ಮತ್ತು 2023ರ ಆಗಸ್ಟ್ ವರೆಗೆ ಕಾರ್ಯತಾಂತ್ರಿಕ ಲೋಹಗಳ ದರಗಳನ್ನು ಐಬಿಎಂ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇದೇ ಮೊದಲ ಬಾರಿ ಕಾರ್ಯತಾಂತ್ರಿಕ ಲೋಹಗಳ ಎಎಸ್ ಪಿ ಬಿಡುಗಡೆ ಮಾಡಲಾಗಿದೆ. 
7.    ಐಬಿಎಂ ಅತ್ಯಂತ ಪ್ರಮುಖ ಪ್ರಕಟಣೆಯಾದ ಭಾರತೀಯ ಮಿನರಲ್ಸ್ ಇಯರ್ ಬುಕ್ 2021(Vol. I to III), ಎನ್ಎಂಐಅನ್ನು ಹೊರತಂದಿದೆ. ಅದರಲ್ಲಿ 01.04.2020ರ ನೋಟ ಒಳಗೊಂಡಿದೆ. 2022ರ ಏಪ್ರಿಲ್ ನಿಂದ ಸೆಪ್ಟೆಂಬರ್, ಅಕ್ಟೋಬರ್ ವರೆಗೆ ಅರ್ಧ ವಾರ್ಷಿಕ ಖನಿಜಗಳ ಮಾಹಿತಿಯ ಬುಲೆಟಿನ್ ಹೊರತರಲಾಗಿದೆ. ಗಣಿ ಗುತ್ತಿಗೆ ಮತ್ತು ಸಂಭವನೀಯ ಪರವಾನಗಿ 2022 ವಿಚಾರ ಹಾಗೂ 2022ರ ಡಿಸೆಂಬರ್ ವರೆಗೆ ಖನಿಜ ಉತ್ಪಾದನೆಯ ತಿಂಗಳ ಅಂಕಿ-ಅಂಶಗಳು (ಎಂಎಸ್ ಎಂಪಿ)ನ್ನು ಹೊರತರಲಾಗಿದ್ದು, ಜತೆಗೆ ಎಲ್ಲಾ ಬಾಧ್ಯಸ್ಥದಾರರ ಅನುಕೂಲಕ್ಕಾಗಿ ತಾಂತ್ರಿಕ ದತ್ತಾಂಶವನ್ನು ಪ್ರಚುರಪಡಿಸಲಾಗಿದೆ. 
8.    ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿಯ ಭಾಗವಾಗಿ 2023-24ರಲ್ಲಿ 2023ರ ನವೆಂಬರ್ ವರೆಗೆ ಐಬಿಎಂ ಒಟ್ಟು 08 ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದು, ಅದರಲ್ಲಿ 168 ಐಬಿಎಂ ಸಿಬ್ಬಂದಿ ಹಾಗೂ 262 ಉದ್ಯಮದ ಸಿಬ್ಬಂದಿ ಭಾಗವಹಿಸಿದ್ದರು. 
9.    2023-24ರ ಸಾಲಿನಲ್ಲಿ ಐಬಿಎಂ ಕಚೇರಿಗಳು 2023ರ ನವೆಂಬರ್ 16 ರಿಂದ 30ರ ವರೆಗೆ ತನ್ನ ಕಚೇರಿಗಳು ಹಾಗೂ ಗಣಿಗಾರಿಕೆ ಪ್ರದೇಶಗಳು ಹಾಗೂ ಸುತ್ತಮುತ್ತಲ ಗ್ರಾಮಗಳು ಮತ್ತು ಶಾಲೆಗಳಲ್ಲಿ ಸ್ವಚ್ಛತಾ ಪಕ್ವಾಡ ಆಚರಿಸಿದವು. ಅಲ್ಲದ ಐಬಿಎಂ 15.09.2023 ರಿಂದ 01.10.2023ರ ವರೆಗೆ ಸ್ವಚ್ಛತಾ ಹಿ ಸೇವಾ ಆಚರಿಸಿತು. ಈ ಸಮಯದಲ್ಲಿ ಬೈಸಿಕಲ್ ಜಾಥಾಗಳು, ವಾಕಥಾನ್, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ, ಸಾಮೂಹಿಕ ಸ್ವಚ್ಛತಾ ಕಾರ್ಯಗಳು, ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಕಾರ್ಯಕ್ರಮಗಳು, ಸ್ವಚ್ಛತಾ ಕಿಟ್ ಗಳ ವಿತರಣೆ, ಮತ್ತಿತರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಐಬಿಎಂ ಗೌರವಾನ್ವಿತ ಪ್ರಧಾನಮಂತ್ರಿಗಳ ಉಪಕ್ರಮ ಏಕ್ ತಾರಿಕ್ ಏಕ್ ಘಂಟಾ ಏಕ್ ಸಾತ್ ಕಾರ್ಯಕ್ರಮಕ್ಕೆ ಬೆಂಬಲ ನೀಡಿತ್ತು. 
10.    ಖನಿಜ ಸಂರಕ್ಷಣೆ, ಅಭಿವೃದ್ಧಿ ಮತ್ತು ನಿಯಂತ್ರಣ ವಲಯದಲ್ಲಿ 75 ವರ್ಷ ರಾಷ್ಟ್ರಕ್ಕೆ ಬದ್ಧತೆಯ ಸೇವೆ ಸಮರ್ಪಣೆಯ ಸ್ಮರಣೆಗಾಗಿ ಐಬಿಎಂ 2023ರ ಮಾರ್ಚ್ 1 ರಂದು ತನ್ನ ಸಂಸ್ಥಾಪನಾ ದಿನವನ್ನು ವೈಭವಯುತವಾಗಿ ಆಚರಿಸಿತು. ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಗೌರವಾನ್ವಿತ ಶ್ರೀ ಪ್ರಲ್ಹಾದ್ ಜೋಶಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಐಬಿಎಂನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕಂಟ್ರೋಲರ್ ಜನರಲ್(ಹಂಗಾಗಿ) ಶ್ರೀ ಸಂಜಯ್ ಲೋಹಿಯಾ ಮತ್ತು ನವದೆಹಲಿಯ ಗಣಿ ಸಚಿವಾಲಯದ ಇತರ ಹಿರಿಯರು ಮತ್ತು ರಾಜ್ಯ ಇಲಾಖೆಗಳು ಹಾಗೂ ಸಾರ್ವಜನಿಕ ವಲಯ ಮತ್ತು ಗಣಿ ಉದ್ಯಮದವರು ಇದರಲ್ಲಿ ಐಬಿಎಂ ಜತೆ ಕೈಜೋಡಿಸಿದರು. ಕಾರ್ಯಕ್ರಮದಲ್ಲಿ 76 ಫೈವ್ ಸ್ಟಾರ್ ಶ್ರೇಯಾಂಕಿತ ಗಣಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ “ಮೈ ಸ್ಟಾಂಪ್ ಸ್ಮಾರಕ ಅಂಚೆ ಲಕೋಟೆ ಮತ್ತು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.  
ಸ್ವಚ್ಛತಾ ಅಭಿಯಾನ 3.0
02.10.2023 ರಿಂದ 31.10.2023 ರ ಅವಧಿಯಲ್ಲಿ ಐಬಿಎಂ ಕೇಂದ್ರ ಕಚೇರಿ ಮತ್ತು ಎಲ್ಲಾ ಇತರ ಪ್ರಾದೇಶಿಕ ಸ್ಥಳಗಳಲ್ಲಿ ಕ್ಷೇತ್ರ ಕಚೇರಿಗಳ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಿದ ವಿಶೇಷ ಸ್ವಚ್ಛತಾ ಅಭಿಯಾನ 3.0 ಅನ್ನು ಆಚರಿಸಲಾಗಿದೆ. ಈ ಅಭಿಯಾನದಲ್ಲಿ, ದಾಖಲೆ ನಿರ್ವಹಣೆ 8000 ಕಡತಗಳು, ರದ್ದಿಗೆ / ಬಳಕೆಯಲ್ಲಿಲ್ಲದ ವಸ್ತುಗಳ ವಿಲೇವಾರಿ, ನಾಲ್ಕು ವಿನೂತನ ಕಲ್ಪನೆಗಳ ಅಭಿವೃದ್ಧಿ, ಶಾಲೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ 30 ಹೊರಾಂಗಣ ವಿಶೇಷ ಪ್ರಚಾರ ಚಟುವಟಿಕೆಗಳು, ಕಚೇರಿ ಆವರಣಗಳ ಸ್ವಚ್ಛತೆ ಮತ್ತು ಸುಂದರೀಕರಣ, ಪರಿಸರ ಸ್ನೇಹಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಚಟುವಟಿಕೆಗಳು 15 ಗಣಿ ತಾಣಗಳನ್ನು ಗುರಿಯಾಗಿ ಪ್ರಸ್ತಾಪಿಸಲಾಗಿದೆ. ದಾಖಲೆ ನಿರ್ವಹಣೆಗೆ ಶೇ. 100ರಷ್ಟು ಗುರಿಯನ್ನು ಸಾಧಿಸಲಾಗಿದೆ. (ಪ್ರಸ್ತಾಪಿತ 4 ರ ವಿರುದ್ಧ) ಜಬಲ್‌ಪುರ ಪ್ರಾದೇಶಿಕ ಕಚೇರಿ, ಅಜ್ಮೀರ್ ಪ್ರಾದೇಶಿಕ ಕಚೇರಿ ಮತ್ತು ಸರ್ಕಾರದಲ್ಲಿ ತಲಾ ಒಂದರಂತೆ 3 ಕಾಂಪೋಸ್ಟ್ ಪಿಟ್ ಸೈಟ್ಗಳ ಅಭಿವೃದ್ಧಿ ಸೇರಿದಂತೆ 7 ನವೀನ ಆಲೋಚನೆಗಳನ್ನು ಅಳವಡಿಸಲಾಗಿದೆ. ರಾಂಚಿಯಲ್ಲಿ ಶಾಲೆಯನ್ನು ನಡೆಸುವುದು, ಇಝಡ್ ಕೋಲ್ಕತ್ತಾ ಕಚೇರಿಯಲ್ಲಿ ಹರ್ಬಲ್ ಗಾರ್ಡನ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ಅಭಿವೃದ್ಧಿ ಮತ್ತು ಬೆಂಗಳೂರಿನ ಕಚೇರಿಯಲ್ಲಿ ವಾಲಿಬಾಲ್ ಅಂಕಣದ ಅಭಿವೃದ್ಧಿ. 51 ಶಾಲೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣ ವಿಶೇಷ ಅಭಿಯಾನಗಳನ್ನು ಗುರಿ 30ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ  ಕಾರ್ಯಗತಗೊಳಿಸಲಾಗಿದೆ. 2182 ಚದರ ಅಡಿ ಜಾಗವನ್ನು ತೆರವುಗೊಳಿಸಲಾಗಿದೆ ಮತ್ತು ತ್ಯಾಜ್ಯ ಅಥವಾ ರದ್ದಿ ವಸ್ತುಗಳ ವಿಲೇವಾರಿಯಿಂದ 4,43,420 ರೂ. ಆದಾಯ ಗಳಿಸಲಾಗಿದೆ. ಅಭಿಯಾನದ ಅವಧಿಯಲ್ಲಿ ದೇಶಾದ್ಯಂತ ಐಬಿಎಂ ಕಚೇರಿಗಳಿರುವ 16 ಕಡೆ ಫಿಟ್ ಇಂಡಿಯಾ ಓಟ 4.0 ಆಯೋಜಿಸಲಾಗಿತ್ತು. 2022-23ನೇ ಸಾಲಿನ ಸ್ವಚ್ಛತಾ ಪಕ್ವಾಡ ಅಭಿಯಾನದಲ್ಲಿ ಒಟ್ಟಾರೆ ನಿರ್ವಹಣೆಗಾಗಿ ಐಬಿಎಂಗೆ ಮೂರನೇ ಸ್ಥಾನ ಲಭಿಸಿದೆ. 
 
11.    ರೋಜ್ಗಾರ್ ಮೇಳದ ಮೂಲಕ ಸಮರೋಪಾದಿಯಲ್ಲಿ ಖಾಲಿ ಹುದ್ದೆಗಳ ಭರ್ತಿ: ಡಿಒಪಿಟಿ ತನ್ನ ಆದೇಶ ಸಂಖ್ಯೆ ದಿನಾಂಕ 16.09.2022ರಲ್ಲಿ ಸೂಚಿಸಿರುವಂತೆ ಗಣಿ ಸಚಿವಾಲಯದಡಿ ಬರುವ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸಮರೋಪಾದಿಯಲ್ಲಿ ತುಂಬಲು ಸೂಚಿಸಲಾಗಿದೆ. (ಪೋರ್ಟಲ್ ನಲ್ಲಿ ಖಾಲಿ ಹುದ್ದೆಗಳ ಭರ್ತಿ ವಿವರಗಳನ್ನು ಗಣಿ ಸಚಿವಾಲಯದಡಿ ನೀಡಲಾಗಿದೆ URL: https://doptonline.nic.in/mr/) ಗಣಿ ಸಚಿವಾಲಯದಡಿ ಬರುವ ಆಡಳಿತ ನಿಯಂತ್ರಣ ಸಂಸ್ಥೆಗಳಿಗೆ ಇದು ಒಳಪಡಲಿದೆ. ಅದರಂತೆ 2023ನೇ ವರ್ಷದಲ್ಲಿ 143 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 
 
ರಾಷ್ಟ್ರೀಯ ಅಲ್ಯುಮೀನಿಯಂ ಕಂಪನಿ ನಿಯಮಿತ (ನಾಲ್ಕೊ)
2022-23ನೇ ಹಣಕಾಸು ವರ್ಷದಲ್ಲಿ ನಾಲ್ಕೋ ಸಂಸ್ಥೆ ತನ್ನ ವಾಣಿಜ್ಯ ವಹಿವಾಟು ವಲಯದಲ್ಲಿ ಗಮನಾರ್ಹ ಸಾಧನೆಯನ್ನು ದಾಖಲಿಸಿದೆ, ಅದರ ವಿವರ ಕೆಳಗಿನಂತಿದೆ:
2022-23ನೇ ಹಣಕಾಸು ವರ್ಷದ ಸಾಧನೆಗಯ ಪ್ರಮುಖಾಂಶಗಳು :
ಹಣಕಾಸು ಪ್ರಮುಖಾಂಶಗಳು:
 
(i)    ನಾಲ್ಕೋ ಸಂಸ್ಥೆ ಆರಂಭವಾದಾಗಿನಿಂದ ಇದೇ ಮೊದಲ ಬಾರಿ ಅತ್ಯಧಿಕ ಆದಾಯ ಅಂದರೆ 14,255 ಕೋಟಿ ರೂಪಾಯಿ ತನ್ನ ಕಾರ್ಯಾಚರಣೆಯಿಂದ ಗಳಿಸಿದೆ.  
(ii)    ಜಾಗತಿಕ ವಾಣಿಜ್ಯ ಸವಾಲುಗಳು ಮತ್ತು ಅಧಿಕ ಉತ್ಪಾದನಾ ವೆಚ್ಚ ಪೂರೈಕೆ ಬೇಡಿಕೆ ಮತ್ತು ಮಾರುಕಟ್ಟೆ ವ್ಯತ್ಯಯದ ನಡುವೆಯೂ ನಾಲ್ಕೋ 2022-23ಬನೇ ಹಣಕಾಸು ವರ್ಷದಲ್ಲಿ 1, 544.49  ಕೋಟಿ ರೂ. ನಿವ್ವಳ ಆದಾಯ ಗಳಿಸಿದೆ.  
(iii)    ಕಂಪನಿ 2022ರಲ್ಲಿ ಜಾಗತಿಕ ಮಟ್ಟದಲ್ಲಿ ಅತಿ ಕಡಿಮೆ ದರದಲ್ಲಿ ಬಾಕ್ಸೈಟ್ ಮತ್ತು ಅಲ್ಯುಮಿನಿಯಂ ಉತ್ಪಾದನೆ ಸ್ಥಾನದಲ್ಲಿ ಮುಂದುವರಿದಿದೆ.  
ಉತ್ಪಾದನೆ ಪ್ರಮುಖಾಂಶಗಳು: 
 
(i)    2022-23ನೇ ಹಣಕಾಸು ವರ್ಷದಲ್ಲಿ ವಾರ್ಷಿಕ ಗುರಿ 75.50 ಲಕ್ಷ ಇತ್ತು. ಅದಕ್ಕೆ ಪ್ರತಿಯಾಗಿ 75.51 ಲಕ್ಷ ಬಾಕ್ಸೈಟ್ ಉತ್ಪಾದಿಸಲಾಗಿದೆ. ಆ ಮೂಲಕ  2018-19ರಲ್ಲಿ ಈ ಹಿಂದೆ ದಾಖಲಿಸಲಾಗಿದ್ದ 74.14 ಲಕ್ಷ ಟನ್ ದಾಖಲೆಯನ್ನು ಹಿಂದಿಕ್ಕಿದೆ. 

(ii)    2022-23ನೇ ಹಣಕಾಸು ವರ್ಷದಲ್ಲಿ ಬಾಕ್ಸೈಟ್ ಉತ್ಪಾದನೆ 74.50 ಲಕ್ಷ ಟನ್ ಗುರಿ ಇತ್ತು. ಅದಕ್ಕೆ ಬದಲಾಗಿ 74.57 ಲಕ್ಷ ಟನ್ ಸಾಧಿಸಲಾಗಿದೆ.   
 
(iii)    ಅಲ್ಯುಮಿನಿಯ ರಿಫೈನರಿ ಕೂಡ ಅಧಿಕ ದಾಖಲೆಯಾಗಿದ್ದು, ಸಾಮಾನ್ಯ ಸಾಮರ್ಥ್ಯ 21.0 ಲಕ್ಷ ಟನ್ ಗೆ ಬದಲಾಗಿ, ಅಲ್ಯುಮಿನಿಯಂ ಹೈಡ್ರೇಟ್ ಉತ್ಪಾದನೆ 21.23 ಲಕ್ಷ ಟನ್ ಗೆ ಏರಿದೆ. ಇದು ಶೇ. 101.1ರಷ್ಟು ಸಾಮರ್ಥ್ಯ ಬಳಕೆಯಾಗಿದೆ. 
(iv)    ಸತತ ಎರಡನೇ ವರ್ಷ ಅಲ್ಯುಮಿನಿಯಂ ಸ್ಮೆಲ್ಟರ್ ನಲ್ಲಿ ಎಲ್ಲಾ 960 ಪಿಒಟಿಗಳಲ್ಲಿ ಪೂರ್ಣ ಸಾಮರ್ಥ್ಯದ 4.6 ಲಕ್ಷ ಟನ್ ಉತ್ಪಾದಿಸಲಾಗಿದೆ.   
ಮಾರಾಟ ಪ್ರಮುಖಾಂಶಗಳು :
 
2022-23ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಲೋಹಗಳ ಮಾರಾಟ 4.64 ಲಕ್ಷ ಟನ್ ಸಾಧಿಸಲಾಗಿದೆ. ಇದು ಹಿಂದೆ 2021-22ರಲ್ಲಿ 4.56 ಲಕ್ಷ ಟನ್ ಇತ್ತು. 
 
ಹೊಸ ಉತ್ಪನ್ನ :
 29.12.2022 ರಂದು ಅಲ್ಯುಮಿನಿಯಂ ಎಲ್ಇಡಿ ಕ್ಯಾಪ್ ನ ಅಲೋಯ್ ಎಎ1100 ಒಳಗೊಂಡ ಟೆಂಪರ್ ಎಚ್ 12 ಎಂಬ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಲಾಯಿತು.  
ಖರೀದಿ :
 
 ಜಿಇಎಂ ಖರೀದಿ :
 
(i)    ಜಿಇಎಂ ಪೋರ್ಟಲ್ ಮೂಲಕ 2021-22ನೇ ಹಣಕಾಸು ವರ್ಷದಲ್ಲಿ 3,121.47 ಕೋಟಿ ರೂ. ಖರೀದಿ ಮಾಡಲಾಗಿತ್ತು 2022-23ನೇ ಹಣಕಾಸು ವರ್ಷದಲ್ಲಿ ಅದು. 4,211.97 ಕೋಟಿ ರೂ. ಆಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35 ಹೆಚ್ಚಳ ದಾಖಲಾಗಿದೆ. 
 
(ii)        ಜೆಮ್ ನಲ್ಲಿ ಲಭ್ಯವಿರುವ ವಸ್ತುಗಳ ಒಟ್ಟಾರೆ ಖರಿದಿಯಲ್ಲಿ ನಾಲ್ಕೊ ಶೇ.97.66ರಷ್ಟು ಖರೀದಿ ಮಾಡಿದೆ.  
 
(iii)       ಎಂಎಸ್ಇಎಸ್ ಗಳ ಖರೀದಿ ಕಡ್ಡಾಯವಾಗಿ ಶೇ. 25ರಷ್ಟಿತ್ತು. ಆದರೆ ಶೇ.29.88ರಷ್ಟು ಖರೀದಿ ಮಾಡಲಾಗಿದೆ.  
 
 2023-24ನೇ ಹಣಕಾಸು ವರ್ಷದಲ್ಲಿ ಸಾಧನೆಯು ಪ್ರಮುಖಾಂಶಗಳು (2023ರ ನವೆಂಬರ್ ವರೆಗೆ )
 
(i)    ನಾಲ್ಕೊ 2023ರ ನವೆಂಬರ್ ತಿಂಗಳ ವರೆಗೆ ಅತ್ಯಧಿಕ ಅಲ್ಯುಮಿನಿಯಂ ಲೋಹ ಮಾರಾಟ 3,09,502 ಎಂಟಿ ಸಾಧಿಸಿದೆ. ಹಿಂದಿನ ವರ್ಷದ ದಾಖಲೆ 3,06,809 ಮಿಲಿಯನ್ ಟನ್ ಗಳನ್ನು ಹಿಂದಿಕ್ಕಿದೆ.  
(ii)    ಏಪ್ರಿಲ್ 2023ರಲ್ಲಿ ಕಲ್ಲಿದ್ದಲು ಸಾಗಾಣೆ ಉತ್ಕಲ್-ಡಿ ಕಲ್ಲಿದ್ದಲು ಗಣಿಯಿಂದ ಸಿಪಿಪಿ ವರೆಗೆ ಆರಂಭವಾಯಿತು. ಉತ್ಕಲ್ ಡಿ ಕಲ್ಲಿದ್ದಲು ನಿಕ್ಷೇಪದಲ್ಲಿ ಒಂದು ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಒಟ್ಟಾರೆ ಗುರಿಯನ್ನು ಈಗಾಗಲೇ ಸಾಧಿಸಲಾಗಿದೆ.  
(iii)       ಪೊಟ್ಟಂಗಿ ಬಾಕ್ಸೈಟ್ ಗಣಿ: ಜೂನ್ 2023ರಲ್ಲಿ ಇಸಿ ವಿತರಿಸಲಾಗಿದೆ ಮತ್ತು 2023ರ ಆಗಸ್ಟ್ ನಲ್ಲಿ ಎರಡನೇ ಹಂತದ ಎಫ್ ಸಿ ನೀಡಲಾಗಿದೆ.   
 
ಕಂಪನಿ ಕೈಗೊಂಡಿರುವ ಪ್ರಮುಖ ಸಿಎಸ್ ಆರ್ ಚಟುವಟಿಕೆಗಳು:  
ಕಂಪನಿ ಸ್ಥಳೀಯ ಜನರಿಗಾಗಿ ಹಲವು ಸಾಮಾಜಿಕ, ಆರ್ಥಿದಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಕಂಪನಿ ಸಿಎಸ್ಆರ್ ಯೋಜನೆಯಡಿ ಕೈಗೊಂಡಿರುವ ಕೆಲವು ಗಮನಾರ್ಹ ಕ್ರಮಗಳು ಈ ಕೆಳಗಿನಂತಿವೆ.  
(i)    ನಾಲ್ಕೊ-ಕಿ-ಲಾಡ್ಲಿ ಯೋಜನೆ: ಭಾರತ ಸರ್ಕಾರದ ಬೇಟಿ ಬಚಾವೊ – ಬೇಟಿ ಪಢಾವೊ ಯೋಜನೆಗೆ ಅನುಗುಣವಾಗಿ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಕೊರಾಪುಟ್ ಜಿಲ್ಲೆ ಮತ್ತು ಅಂಗುಲ್ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಬಿಪಿಎಲ್ ಕುಟುಂಬಗಳ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುವುದು(ಈವರೆಗೆ 816 ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ)
 
(ii)    ಇಂದ್ರಧನುಷ್ ಯೋಜನೆ: ಕೊರಾಪುಟ್ ಜಿಲ್ಲೆಯ ವಿವಿಧ ಗ್ರಾಮಗಳ ಆದಿವಾಸಿ ಮಕ್ಕಳಿಗೆ ಉಚಿತ ವಸತಿ, ಪ್ರಾಥಮಿಕ ಶಿಕ್ಷಣವನ್ನು ಪ್ರಾಯೋಜಿಸುವುದು(ಈವರೆಗೆ 1,147 ವಿದ್ಯಾರ್ಥಿಗಳಿಗೆ ನೆರವು)
 
(iii)    8 ಸಂಚಾರಿ ಆರೋಗ್ಯ ಘಟಕಗಳ ಮೂಲಕ ಮನೆಯ ಬಾಗಿಲಿಗೆ ಆರೋಗ್ಯ ಸೇವೆ(ಎಂಎಚ್ ಯುಗಳು): ಕಳಪೆ ಮತ್ತು ಲಭ್ಯವಿಲ್ಲದ ಆರೋಗ್ಯ ಮೂಲಸೌಕರ್ಯ ಹಿನ್ನೆಲೆಯಲ್ಲಿ ನಾಲ್ಕೊ 8 ಸಂಚಾರಿ ಆರೋಗ್ಯ ಘಟಕಗಳನ್ನು(ಎಂಎಚ್ ಯು)ಗಳನ್ನು ನಡೆಸುತ್ತಿದ್ದು, ಅವುಗಳ ಮೂಲಕ ಜನರ ಮನೆ ಬಾಗಿಲಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಈ ಎಂಎಚ್ ಯುಗಳ ಮೂಲಕ ಕೊರಾಪುಟ್ ಮತ್ತು ಅಂಗುಲ್ ಜಿಲ್ಲೆಯ ನಾನಾ ಗ್ರಾಮಗಳಿಗೆ ಒದಗಿಸುತ್ತಿದ್ದು, ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ರೋಗಿಗಳಿಗೆ ಪ್ರಯೋಜನವಾಗುತ್ತಿದೆ. 
 
 ಸ್ವಚ್ಛತಾ ಆಂದೋಲನದಲ್ಲಿ ನಾಲ್ಕೋ ಭಾಗಿ :
(i)    ನಾಲ್ಕೊದ ಎಲ್ಲ ಘಟಕಗಳಲ್ಲಿ 2023ರ ಅಕ್ಟೋಬರ್ 2 ರಿಂದ 31ರ ವರೆಗೆ ಸ್ವಚ್ಛತಾ ಅಭಿಯಾನ – 3.0 ಆಚರಿಸಲಾಯಿತು. ಸ್ವಚ್ಛತಾ ಆಂದೋಲನ ಜಾಗೃತಿ ಜಾಥಾಗಳು, ಗಿಡ ವಿತರಣೆ, ಸ್ವಚ್ಛತಾ ಪ್ರತಿಜ್ಞೆ, ಬೀದಿ ನಾಟಕ, ರದ್ದಿ ವಿಲೇವಾರಿ ಮತ್ತು ಶ್ರಮದಾನ ಇತ್ಯಾದಿ ಹಲವು ಚಟುವಟಿಕೆಗಳನ್ನು ನಾಲ್ಕೋದ ಎಲ್ಲಾ ಘಟಕಗಳಲ್ಲಿ ಕೈಗೊಳ್ಳಲಾಯಿತು.  
(ii)    ಎಲ್ಲಾ ಕ್ಷೇತ್ರೀಯ ಕಚೇರಿಗಳು, ಉತ್ಪಾದನಾ ಘಟಕಗಳು, ಪ್ರಾದೇಶಿಕ ಕಚೇರಿಗಳು ಮತ್ತು ಕಾರ್ಪೊರೇಟ್ ಕಚೇರಿಯಲ್ಲಿ ಹಳೆಯ ಕಡತಗಳನ್ನು ತೆಗೆದುಹಾಕಿ, ಸ್ವಚ್ಛಗೊಳಿಸಲಾಯಿತು. 
 
 
ಪ್ರಮುಖ ಪ್ರಶಸ್ತಿಗಳು & ಶ್ಲಾಘನೆಗಳು:
 
(i)    ಪಂಚಪಟಮಾಲಿ ಬಾಕ್ಸೈಟ್ ಗಣಿಗೆ ಐಬಿಎಂನಿಂದ 5 ಸ್ಟಾರ್ ರೇಟಿಂಗ್ ನೀಡಲಾಗಿದೆ. ಗಣಿ ಸಚಿವಾಲಯ 2021-22ನೇ ಹಣಕಾಸು ವರ್ಷದಲ್ಲಿ ಸುಸ್ಥಿರ ಗಣಿಗಾರಿಕೆಗೆ ಹೆಸರಾಗಿದೆ.  
(ii)    ಪ್ರಗತಿ ಮೈದಾನದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2023ಯಲ್ಲಿ ಗಣಿ ಸಚಿವಾಲಯ ಗಣಿ ಪೆವಿಲಿಯನ್ ಅನ್ನು ಸ್ಥಾಪಿಸಿದ್ದು, ಅದರಲ್ಲಿ ನಾಲ್ಕೊ ಭಾಗವಹಿಸಿತ್ತು ಮತ್ತು ವರ್ಚುವಲ್ ರಿಯಾಲಿಟಿ ಮೂಲಕ ತನ್ನ ಚಟುವಟಿಕೆಗಳನ್ನು ಪ್ರದರ್ಶಿಸಿತು.
 
ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (ಎಚ್ ಸಿಎಲ್ )
i.    2022-23ನೇ ಹಣಕಾಸು ವರ್ಷದಲ್ಲಿ ಕಂಪನಿ ತೆರಿಗೆಗೆ ಮುನ್ನ 395.66 ಕೋಟಿ ಲಾಭ ಹಾಗೂ ಕಾರ್ಯಾಚರಣೆಯಿಂದ 1677.33 ಕೋಟಿ ಆದಾಯವನ್ನು ಗಳಿಸಿದೆ.  
ii.    ಹೆಚ್ ಸಿಎಲ್ ಭಾರತ ಸರ್ಕಾರಕ್ಕೆ  58.84 ಕೋಟಿ ರೂ. ಲಾಭಾಂಶವನ್ನು ಪಾವತಿಸಿದೆ. ಒಟ್ಟಾರೆ ಷೇರುದಾರರಿಗೆ 88.97 ಕೋಟಿ ರೂ. ಲಾಭಾಂಶ ಪಾವತಿಸಿದೆ.  
iii.    2022-23ನೇ ಹಣಕಾಸು ವರ್ಷದಲ್ಲಿ ಕಂಪನಿ ತನ್ನ ನಿಕ್ಷೇಪಗಳು ಮತ್ತು ಸಂಪನ್ಮೂಲಗಳ ಮೂಲಕ  66.59  ಮಿಲಿಯನ್ ಟನ್ ತಾಮ್ರದ ಅದಿರನ್ನು ಸೇರ್ಪಡೆ ಮಾಡಿದೆ.  01.04.2023 ರಂತೆ ಒಟ್ಟಾರೆ ತಾಮ್ರದ ಅದಿರಿನ ನಿಕ್ಷೇಪ ಮತ್ತು ಸಂಪನ್ಮೂಲದಲ್ಲಿ ಹೆಚ್ ಸಿ ಎಲ್ 698.44 ಮಿಲಿಯನ್ ಟನ್ ಅದಿರನ್ನು ಗಣಿಗಾರಿಕೆ ಮಾಡಿದೆ. ಅದರ ಸರಾಸರಿ ಗ್ರೇಡ್ ಶೇ. 1.31ರಷ್ಟಾಗಿದೆ. 
    iv.           ಹೆಚ್ ಸಿ ಎಲ್ ಕೋಲ್ಕತ್ತಾದ ಉಪಮುಖ್ಯ ಕಾರ್ಮಿಕ ಆಯುಕ್ತರು(ಸೆಂಟ್ರಲ್) ಇವರ ಮುಂದೆ 8ನೇ ವೇತನ ಇತ್ಯರ್ಥ ತ್ರಿಪಕ್ಷೀಯ ಒಪ್ಪಂದಕ್ಕೆ 03.01.2023ಕ್ಕೆ ಸಹಿ ಹಾಕಿದೆ. ಅದರಲ್ಲಿ ಸಿಬ್ಬಂದಿಗೆ ವೇತನ ಮತ್ತು ಭತ್ಯೆಯನ್ನು ಪರಿಷ್ಕರಿಸಲಾಗಿದೆ. ಇದರ ಇತ್ಯರ್ಥ ಹತ್ತು ವರ್ಷಗಳ ಅವಧಿಯದ್ದಾಗಿದ್ದು, ಅದು 01.11.2017 ರಿಂದ 31.10.2027ರ ವರೆಗೆ ಅನ್ವಯವಾಗುತ್ತದೆ.   
      v.  ಎಚ್ ಸಿಎಲ್ & ಐಐಟಿಐಎಸ್ಎಂ ಧನ್ಬಾದ್      
ಹೆಚ್ ಸಿಎಲ್ ಮತ್ತು ಐಐಟಿಐಎಸ್ ಎಂ ಧನ್ಬಾದ್ ನಡುವೆ 03.01.2023ರಂದು ಸಹಭಾಗಿತ್ವ ಮತ್ತು ಪ್ರಾಯೋಜಕತ್ವದ ಸಂಶೋಧನಾ ಯೋಜನೆಗಳಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಆ ಮೂಲಕ ಗಣಿಗಾರಿಕೆ ವಿಧಾನಗಳಲ್ಲಿ ತಂತ್ರಜ್ಞಾನಗಳ ಬಳಕೆ, ಉತ್ಪಾದನೆ ಸುಧಾರಣೆ ಮತ್ತು ಗಣಿಗಳ ಸುರಕ್ಷತೆ, ಪರಿಸರ ಅನುಮೋದನೆ ಇತ್ಯಾದಿಗಳಿಗೆ ಒತ್ತು ನೀಡಲಾಗಿದೆ. 
    vi.            ಎಚ್ ಸಿಎಲ್ ಮತ್ತು ಟಿಸಿಐಎಲ್ 
ಹೆಚ್ ಸಿಎಲ್ ಮತ್ತು ಟಿಸಿಐಎಲ್ 28.10.2023ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023ಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ ಮತ್ತು ಗಣಿಗಳಲ್ಲಿ 5ಜಿ ತಂತ್ರಜ್ಞಾನ ಬಳಕೆಯನ್ನು ಪ್ರದರ್ಶಿಸಿತು. 
  vii.            ಗಣಿ ಉದ್ಯಮದಲ್ಲಿ ಶ್ರೇಷ್ಠ ನಿಯಮಗಳನ್ನು ರೂಪಿಸುವ ಮೂಲಕ 2021-22ನೇ ವರ್ಷದಲ್ಲಿ ಮಾಲಂಜಖಾಂದ್ ತಾಮ್ರ ಯೋಜನೆಗೆ 5 ಸ್ಟಾರ್ ರೇಟಿಂಗ್ ಪ್ರಶಸ್ತಿ ಲಭಿಸಿದೆ.   
viii.       ಎಚ್ ಸಿಎಲ್ 35ನೇ ಸಿಎಫ್ ಬಿಪಿ(ಕೌನ್ಸಿಲ್ ಫಾರ್ ಫೇರ್ ಬಿಸನೆಸ್ ಪ್ರಾಕ್ಟಿಸಸ್) ಜಮನ್ ಲಾಲ್ ಬಜಾಜ್ ಪ್ರಶಸ್ತಿಯನ್ನು 2022-23ನೇ ಸಾಲಿನಲ್ಲಿ ಪಡೆದಿದೆ. ಬೃಹತ್ ಉತ್ಪಾದನಾ ಉದ್ಯಮ ವಿಭಾಗದಲ್ಲಿ 16.05.2023ರಲ್ಲಿ ಮುಂಬೈನಲ್ಲಿ ಪ್ರಶಸ್ತಿಗೆ ಭಾಜನವಾಗಿದೆ
    ix.         30.06.2023ರಂದು ಕೋಲ್ಕತ್ತಾದಲ್ಲಿ ನಡೆದ ಭಾರತೀಯ ಗಣಿಗಾರಿಕೆ ಮತ್ತು ಖನಿಜಗಳ ಸಮಾವೇಶದಲ್ಲಿ ಹೆಚ್ ಸಿಎಲ್, ವರ್ಷದ ಸ್ಮಾರ್ಟ್ ತ್ಯಾಜ್ಯ ನಿರ್ವಹಣಾ ಉಪಕ್ರಮದಲ್ಲಿ ಅಸೋಚಾಮ್ ಬಿಸಿನೆಸ್ ಎಕ್ಸಲೆಂಟ್ ಪ್ರಶಸ್ತಿಗೆ ಪಾತ್ರವಾಗಿದೆ.   
      x.            ಹೆಚ್ ಸಿಎಲ್ ಅನ್ನು ಬೃಹತ್ ಸಂಯೋಜಿತ ಉತ್ಪಾದನಾ ಘಟಕ ವಿಭಾಗದಲ್ಲಿ ಐಐಎಂ(ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮೆಟಲ್ಸ್) ನಾನ್ ಫೆರೋರಿಯಸ್ ಉತ್ತಮ ಸಾಧನೆ ಪ್ರಶಸ್ತಿಗೆ ಭಾಜನವಾಗಿದೆ. 
xi.    ನವದೆಹಲಿಯ ರಾಷ್ಟ್ರಪತಿ ಭವನದ ಸಾಂಸ್ಕೃತಿ ಕೇಂದ್ರ(ಆರ್ ಬಿಸಿಸಿ)ಯಲ್ಲಿ 24.07.2023ರಂದು ನಡೆದ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ – 2022ನಲ್ಲಿ  ಹೆಚ್ ಸಿಎಲ್ ಭಾಗಿಯಾಗಿತ್ತು.   
xii.    ರಾಜಸ್ಥಾನದ ಉದಯಪುರದಲ್ಲಿ 2023ರ ಫೆಬ್ರವರಿ 23 ರಿಂದ 25ರ ವರೆಗೆ ನಡೆದ “ಅಲ್ಲೂರಿಂಗ್ ರಾಜಸ್ತಾನ” ಪ್ರದರ್ಶನದಲ್ಲಿ ಹೆಚ್ ಸಿಎಲ್ ಉತ್ತಮ ಮಳಿಗೆ ಪ್ರಶಸ್ತಿಯನ್ನು ಪಡೆಯಿತು ಮತ್ತು ಭಾರತದ ಜಿ-20 ಅಧ್ಯಕ್ಷತೆಯ ಆಚರಣೆಯಲ್ಲಿ 24.08.2023ರಂದು ಕೋಲ್ಕತ್ತಾದಲ್ಲಿ ನಡೆದ ಅತ್ಯಾಧುನಿಕ, ಶಕ್ತಿಶಾಲಿ ಮತ್ತು ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ 26ನೇ ರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಉತ್ತಮ ಪೆವಿಲಿಯನ್ ಪ್ರಶಸ್ತಿಗೆ ಭಾಜನವಾಗಿದೆ. 
xiii.          ದೀರ್ಘಾವಧಿಯವರೆಗೆ ಗಾಯವಿಲ್ಲದ ಗಣಿಗಳ ವಿಭಾಗದಲ್ಲಿ ಮಾಲನಜಕ್ ಮತ್ತು ತಾಮ್ರದ ಗಣಿ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.    
xiv.         ಜಾರ್ಖಂಡ್, ಮಧ್ಯಪ್ರದೇಶ ಮತ್ತು ರಾಜಸ್ಥಾನದೊಳಗಿನ   ಗಣಿ ಗುತ್ತಿಗೆಗಳೊಳಗೆ 3 ವರ್ಷಗಳ ಅವಧಿಗೆ ಶೋಧ ಮತ್ತು ಇತರೆ ಕಾರ್ಯಗಳನ್ನು ಕೈಗೊಳ್ಳಲು ಹೆಚ್ ಸಿಎಲ್ 25.08.2023 ರಂದು ಮಿನರಲ್ ಎಕ್ಸಪ್ಲೊರೇಶನ್ ಮತ್ತು ಕನ್ಸಲ್ಟೆನ್ಸಿ ಲಿಮಿಟೆಡ್ ಜತೆ ಎಂಒಯುಗೆ ಸಹಿ ಹಾಕಲಾಗಿದೆ.  
  xv.            ಹೆಚ್ ಸಿಎಲ್, 63 ಪದವೀಧರ ಇಂಜಿನಿಯರ್ ತರಬೇತಿಯಲ್ಲಿರುವವರಿಗೆ ಉದ್ಯೋಗ ಪತ್ರಗಳನ್ನು ವಿತರಿಸಿದೆ. 5 ಮೈನಿಂಗ್ ಮೇಟ್ಸ್ ಗ್ರೇಡ್ 1 ಮತ್ತು 3 ಎಲೆಕ್ಟ್ರಿಶಿಯನ್ ಗ್ರೇಡ್ 2 ಇವರಿಗೆ 20.01.2023ರಂದು ನಡೆದ 3ನೇ ಪಿಎಂ ರೋಜ್ಗಾರ್ ಮೇಳದಲ್ಲಿ ಉದ್ಯೋಗ ಪತ್ರ ವಿತರಿಸಲಾಯಿತು.  
xvi.           ಹೆಚ್ ಸಿಎಲ್  ಒಂದು ನೋಡಲ್ ಸಂಸ್ಥೆಯಾಗಿದೆ ಮತ್ತು ಭಾರತ ಸರ್ಕಾರದ ಗಣಿ ಸಚಿವಾಲಯದ ಪರವಾಗಿ ಕೇಪ್ ಟೌನ್ ನಲ್ಲಿ 06.02.2023 ರಿಂದ 09.02.2023ರ ವರೆಗೆ ನಡೆದ ಮೈನಿಂಗ್ ಇಂಡಾಬಾ ಸಮಾವೇಶ 2023ಯಲ್ಲಿ ಮಳಿಗೆಯನ್ನು ಸ್ಥಾಪಿಸಿತ್ತು. ಕೇಂದ್ರ ರೈಲ್ವೆ, ಕಲ್ಲಿದ್ದಲು ಮತ್ತು ಗಣಿಗಾರಿಕೆ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಧಾನ್ವೆ ಮತ್ತು ಮಧ್ಯಪ್ರದೇಶ ಸರ್ಕಾರದ ಗಣಿಗಾರಿಕೆ ಮತ್ತು ಕಾರ್ಮಿಕ ಇಲಾಖೆಯ ಗೌರವಾನ್ವಿತ ಸಚಿವ ಶ್ರೀ ಬ್ರಿಜೇಂದ್ರ ಪ್ರತಾಪ್ ಸಿಂಗ್ ಅವರು ಪೆವಿಲಿಯನ್ ಅನ್ನು ಉದ್ಘಾಟಿಸಿದರು. 

 

 
xvii.        ಹೆಚ್ ಸಿಎಲ್ 23.02.2023ರಲ್ಲಿ ಮುಂಬೈನಲ್ಲಿ ನಡೆದ ಐಡಿಡಿಸಿ ಕಾಪರ್ ಸಮಾವೇಶ 2023ಯಲ್ಲಿ ಭಾಗವಹಿಸಿತ್ತು ಮತ್ತು 24.02.2023ರಂದು ಕೆಸಿಸಿ ಖೇತ್ರಿ ನಗರದಲ್ಲಿ “ನಾನ್ ಫೆರೋರಿಯಸ್ ಖನಿಜ ಉದ್ಯಮಗಳ ವ್ಯಾಪಕ ಶೋಧ ಆವಿಷ್ಕಾರಗಳ ಮೂಲಕ ಸಾಮರ್ಥ್ಯವೃದ್ಧಿ” ಕುರಿತಂತೆ ನಡೆದ 43ನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿತ್ತು.  
xviii.   29.04.2023 ರಂದು ವೃತ್ತಿಪರ ಸಂಸ್ಥೆ ಮಾಲಂಜಖಂಡ್ ಕಾಪರ್ ಯೋಜನೆಯ ಮಾಲಂಜ್ ಖಂಡ್ ತಾಂತ್ರಿಕ ಸಂಸ್ಥೆ(ಎಂಟಿಎ) ಆಶ್ರಯದಲ್ಲಿ “ಸುಸ್ಥಿರ ಭವಿಷ್ಯಕ್ಕಾಗಿ ಆಳವಾದ ಗಣಿಗಾರಿಕೆ ಪರಿಹಾರಗಳು” ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಲಾಗಿತ್ತು. 
xix.          ಕಲ್ಲಿದ್ದಲು ಗಣಿ ಮತ್ತು ಉಕ್ಕು ಸ್ಥಾಯಿ ಸಮಿತಿಗಳ ಸಭೆಗಳು ಲೇಹ್ ನಲ್ಲಿ 02.05.2023ರಂದು ಕೂಡಗಿನಲ್ಲಿ 22.08.2023ರಂದು ನಡೆಯಿತು. ಹೆಚ್ ಸಿಎಲ್ ನ ವಿಷಯ “ಗಣಿಗಾರಿಕೆ ಮತ್ತು ಲೋಹಕ್ಕೆ ಸಂಬಂಧಿಸಿದಂತೆ ತಾಮ್ರ ಉದ್ಯಮದಲ್ಲಿ ಸ್ವಾವಲಂಬನೆ” ಎಂಬುದಾಗಿದೆ. 
  xx.         ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಸಂಸ್ಥೆ ತನ್ನೆಲ್ಲಾ ಘಟಕಗಳು ಮತ್ತು ಕಚೇರಿಗಳಲ್ಲಿ 21.06.2023ರಂದು 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು.   
xxi.           ಆಜಾದಿ ಕಾ ಅಮೃತ ಮಹೋತ್ಸವ(ಎಕೆಎಎಂ) ಭಾಗವಾಗಿ ಹೆಚ್ ಸಿಎಲ್ ತನ್ನೆಲ್ಲಾ ಘಟಕಗಳಲ್ಲಿ ಸ್ವಾಸ್ಥ್ಯ ಶಿಬಿರ(ಆಯುಷ್ ಗೆ ಒತ್ತು ನೀಡಿ) ಶಿಬಿರಗಳನ್ನು ಆಯೋಜಿಸಿತ್ತು. ಸಚಿವಾಲಯದ ನಿರ್ದೇಶನದಂತೆ ವಿಷಯಾಧಾರಿತ ಆಜಾದಿ ಕಾ ಅಮೃತ ಮಹೋತ್ಸವ(ಎಕೆಎಎಂ) ಆಚರಿಸಲಾಯಿತು. 
xxii.         ವಿಶ್ವ ಪರಿಸರ ದಿನಾಚರಣೆ  05.06.2023ಗೂ ಮುನ್ನ ಜನಸಂಪರ್ಕ ಚಟುವಟಿಕೆಗಳು, ವಿಚಾರಸಂಕಿರಣ, ಕ್ವಿಜ್, ಬೈಸಿಕಲ್ ಜಾಥಾ ಇತ್ಯಾದಿ ಮಿಷನ್ ಲೈಫ್ ಬಗ್ಗೆ ಒಂದು ತಿಂಗಳಿಡಿ ಜಾಗೃತಿ ಮೂಡಿಸುವ ಅಭಿಯಾನವನ್ನು ಹಮ್ಮಿಕೊಂಡಿತ್ತು.  ಹೆಚ್ ಸಿಎಲ್  ನ ಎಲ್ಲ ಘಟಕಗಳು ಮತ್ತು ಕಚೇರಿಗಳಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. 
xxiii.       ಕಂಪನಿಗಳ ಕಾಯ್ದೆ 2023ರ ಸಕ್ಷನ್ 143(6)(ಎ) ಅಡಿ 2023ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದಲ್ಲಿ    ಹೆಚ್ ಸಿಎಲ್  ನ ಹಣಕಾಸು ವಹಿವಾಟು ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಪೂರಕ ಆಡಿಟ್ ಅನ್ನು ನಡೆಸಿ, 21.07.2023ಕ್ಕೆ ಯಾವುದೇ ವಿಶ್ಲೇಷಣೆ ಮಾಡಲಿಲ್ಲ. 
xxiv.        ಕೇಂದ್ರ ಆಯುಷ್ ಮತ್ತು ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ 04.08.2023ರಂದು  ಹೆಚ್ ಸಿಎಲ್ ಆಯೋಜಿಸಿದ್ದ ಆಯುಷ್ ಸ್ವಾಸ್ಥ್ಯ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್,  ಹೆಚ್ ಸಿಎಲ್ ಸಿಎಂಡಿ, ನಿರ್ದೇಶಕರು(ಕಾರ್ಯಾಚರಣೆ) ಮತ್ತು ನಿರ್ದೇಶಕರು(ಗಣಿಗಾರಿಕೆ_) ಕೂಡ ಉಪಸ್ಥಿತರಿದ್ದರು. 
xxv.     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ     ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣೆಗಾಗಿ  ಹೆಚ್ ಸಿಎಲ್ 03.08.2023ರಂದು ತನ್ನೆಲ್ಲಾ ಘಟಕಗಳಲ್ಲಿ ಅಂಗಾಂಗ ದಾನ ದಿನದ ಸಂದರ್ಭದಲ್ಲಿ(ಅಂಗಾಂಗ ದಾನ ಮಹೋತ್ಸವ)  ಹೆಚ್ ಸಿಎಲ್ ಪ್ರತಿಜ್ಞೆ ಸ್ವೀಕರಿಸಿತು.    
xxvi.   14.08.2023ರಂದು  ಹೆಚ್ ಸಿಎಲ್ ತನ್ನಲ್ಲಾ ಘಟಕಗಳು ಮತ್ತು ಕಚೇರಿಗಳಲ್ಲಿ  ಮೇರಿ ಮಾಟಿ ಮೇರಾ ದೇಶ್ ಅಭಿಯಾನವನ್ನು ಕೈಗೊಂಡಿತ್ತು. ಈ ಸಂದರ್ಭದಲ್ಲಿ ಕೋಲ್ಕತ್ತಾದ  ಹೆಚ್ ಸಿಎಲ್ ಕಾರ್ಪೊರೇಟ್ ಸಿಬ್ಬಂದಿಗಳಿಗೆ  ಹೆಚ್ ಸಿಎಲ್ ಸಿಎಂಡಿ, ಪಂಚಪ್ರಾಣ ಶಪಥ ಸಂಕಲ್ಪವನ್ನು ಬೋಧಿಸಿದರು. 
xxvii.    ಕೋಲ್ಕತ್ತಾದ – 700025 ರ ಪದ್ಮಪುಕೌರ್ ನ ವಾರ್ಡ್ ಸಂಖ್ಯೆ 72ರ ಸಮುದಾಯದೊಂದಿಗೆ ಸ್ವಚ್ಛತೆಯಲ್ಲಿ ತೊಡಗುವ ಅಭಿಯಾನದಲ್ಲಿ 01.10.2023ರಂದು “ಏಕ್ ತಾರಿಖ್ ಏಕ್ ಘಂಟಾ ಏಕ್ ಸಾತ್” ಅಭಿಯಾನದಲ್ಲಿ ಹೆಚ್ ಸಿಎಲ್ ತಂಡ ಭಾಗವಹಿಸಿತ್ತು.
xxviii.        03.10.2023ರಂದು ಮಂಗೋಲಿಯಾದ ಉಲ್ಲಾನ್ ಬಾತರ್ ನಲ್ಲಿ ನಡೆದ 12ನೇ ಮಂಗೋಲಿಯನ್ ಗಣಿಗಾರಿಕೆ ಮತ್ತು ತೈಲ ಎಕ್ಸ್ ಪೋ 2023ಯಲ್ಲಿ ಭಾರತೀಯ ಪೆವಿಲಿಯನ್ ಅನ್ನು ಮಂಗೋಲಿಯಾದಲ್ಲಿನ ಭಾರತೀಯ ರಾಯಭಾರಿ ಗೌರವಾನ್ವಿತ ಎಂ.ಪಿ. ಸಿಂಗ್ ಉದ್ಘಾಟಿಸಿದರು. ಗಣಿ ಸಚಿವಾಲಯದ ಪರವಾಗಿ ಉಲ್ಲಾನ್ ಬಾತರ್ ಎಕ್ಸ್ ಪೋದಲ್ಲಿ ಭಾರತೀಯ ಪೆವಿಲಿಯನ್ ಸ್ಥಾಪನೆಗೆ  ಹೆಚ್ ಸಿಎಲ್ ನೋಡಲ್ ಪಿಎಸ್ ಯು ಆಗಿತ್ತು. ಗಣಿ ಸಚಿವಾಲಯದ ನಿಯೋಗದ ತಂಡ ಮತ್ತು ಇತರೆ ಪಿಎಸ್ ಯುಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದವು. 
xxix.          ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ‘ಸ್ವಚ್ಛ ಭಾರತ ಸ್ವಾಸ್ಥ್ಯ ಭಾರತ” ಆಚರಣೆಯ ಭಾಗವಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 4.0ದಲ್ಲಿ ಹೆಮ್ಮೆಯಿಂದ ಭಾಗಿಯಾಗಿತ್ತು.   
xxx.          ಕಲ್ಲಿದ್ದಲು, ಗಣಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ದಾನ್ವೆ 31.10.2023ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಐಎಂಎಆರ್ ಸಿ ಭಾರತೀಯ ಪೆವಿಲಿಯನ್ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಐಎಂಎಆರ್ ಸಿ ಕಾರ್ಯಕ್ರಮದಲ್ಲಿ  ಹೆಚ್ ಸಿಎಲ್ ತನ್ನ ನಿಯೋಗದೊಂದಿಗೆ ಭಾಗವಹಿಸಿತ್ತು.  
xxxi.            2023ರ ನವೆಂಬರ್ 14 ರಿಂದ 27ರ ವರೆಗೆ ಪ್ರಗತಿ ಮೈದಾನದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ವ್ಯಾಪಾರ ಮೇಳ(ಐಐಟಿಎಫ್) 2023ಯಲ್ಲಿ ಗಣಿ ಸಚಿವಾಲಯದ ಪೆವಿಲಿಯನ್ ಸ್ಥಾಪನೆಯಲ್ಲಿ  ಹೆಚ್ ಸಿಎಲ್  ಭಾಗವಹಿಸಿತ್ತು. ತನ್ನ ಸಿಎಸ್ ಆರ್ ಚಟುವಟಿಕೆಯ ಫಲಾನುಭವಿಗಳಾದ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ವರ್ಚುವಲ್ ರಿಯಾಲಿಟಿ ಮೂಲಕ ಪ್ರದರ್ಶಿಸಲಾಯಿತು. 
xxxii.          2023ರ ನವೆಂಬರ್ 16 ರಿಂದ 30ರ ವರೆಗೆ ಎರಡನೇ ಪಾಕ್ಷಿಕದಲ್ಲಿ  ಹೆಚ್ ಸಿಎಲ್ ಸ್ವಚ್ಛತಾ ಪಕ್ವಾಡವನ್ನು ಆಯೋಜಿಸಿತ್ತು. ಅದರ ಕೆಲವು ಪ್ರಮುಖಾಂಶಗಳೆಂದರೆ, ಗಣಿಗಳನ್ನು ಶುಚಿಗೊಳಿಸುವುದು, ಸುತ್ತಮುತ್ತಲ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವುದು. ಗಣಿಗಳಲ್ಲಿ ಶೂನ್ಯ ತ್ಯಾಜ್ಯದ ಆರಂಭಿಕ ಯೋಜನೆಗೆ ಚಾಲನೆ ನೀಡುವುದು, ಸಾಮೂಹಿಕ ಗಿಡ ನೆಡುವ ಕಾರ್ಯಕ್ರಮ ಮತ್ತಿತರವು ಸೇರಿದ್ದು, ಇವು ಗಣಿಗಾರಿಕೆ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಸ್ವಚ್ಛತಾ ಹಿ ಸೇವಾ ಅಭಿಯಾನದಡಿ ಗಣಿ ಕಾರ್ಯದರ್ಶಿ 21.09.2023ರಂದು ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು.  ಹೆಚ್ ಸಿಎಲ್ ನ ಸಿಎಂಡಿ ಸೇರಿದಂತೆ ಎಲ್ಲಾ ಕಾರ್ಯಕಾರಿ ಮುಖ್ಯಸ್ಥರು ಹಾಗೂ  ಹೆಚ್ ಸಿಎಲ್ ನ ಹಿರಿಯ ಅಧಿಕಾರಿಗಳು ಈ ಪ್ರತಿಜ್ಞೆಯನ್ನು ಸ್ವೀಕರಿಸಿದರು ಮತ್ತು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.     
ಖನಿಜ ಶೋಧನಾ ಮತ್ತು ಸಮಾಲೋಚನೆ ಲಿಮಿಟೆಡ್  (ಎಂಇಸಿಎಲ್ )
i.    2023-24ನೇ ಸಾಲಿನಲ್ಲಿ 2023 ನವೆಂಬರ್ ವರೆಗೆ ಡ್ರಿಲ್ಲಿಂಗ್ ಸಾಧನೆ 2,00,314 m.  ಕಳೆದ ವರ್ಷ 2023ರ ಮಾರ್ಚ್ ವರೆಗೆ ಕಂಪನಿ  235844 m. ನಷ್ಟು ಡ್ರಿಲ್ಲಿಂಗ್ ದಾಖಲಿಸಿತ್ತು. 
ii.    2023ರ ನವೆಂಬರ್ ವರೆಗೆ ಒಟ್ಟು ನಿವ್ವಳ ಅದಾಯ (ಇತರೆ ಆದಾಯ ಸೇರಿ) 173.74 ಕೋಟಿ ರೂ.
    iii.         2023 ರಲ್ಲಿ (2023 ನವೆಂಬರ್ ವರೆಗೆ),  ಎಂಇಸಿಎಲ್ 22 ಸಂಖ್ಯೆಯ  ವಿವಿಧ ಖನಿಜಗಳ ಸರಕುಗಳ ಭೂವೈಜ್ಞಾನಿಕ ವರದಿಗಳು ಉದಾಹರಣೆಗೆ ಲಿಗ್ನೈಟ್, ತಾಮ್ರ, ಕಬ್ಬಿಣದ ಅದಿರು, ಮ್ಯಾಂಗನೀಸ್, ಗ್ರ್ಯಾಫೈಟ್, ಪೊಟ್ಯಾಷ್, ಸುಣ್ಣದಕಲ್ಲು, ನಿಕಲ್, ಚಿನ್ನ ಇತ್ಯಾದಿಗಳ ವರದಿಗಳನ್ನು ಸಲ್ಲಿಸಿದೆ ಮತ್ತು 2815.047 ಮಿಲಿಯನ್ ಟನ್ ಸಂಪನ್ಮೂಲಗಳನ್ನು ರಾಷ್ಟ್ರೀಯ ಖನಿಜ ದಾಸ್ತಾನುಗಳಿಗೆ ಸೇರಿಸಿದೆ, ಅದರಲ್ಲಿ 19 ಭೂವೈಜ್ಞಾನಿಕ ವರದಿಗಳನ್ನು ಎನ್ ಎಂಇಟಿ ಗೆ ಸಲ್ಲಿಸಲಾಗಿದೆ.   
    iv.       2023-24 ನೇ ಸಾಲಿನಲ್ಲಿ ನವೆಂಬರ್ ವರೆಗೆ, ಎಮ್‌ಇಸಿಎಲ್ ಅಂದಾಜು ವೆಚ್ಚದ 17 ಸಂಖ್ಯೆಯ 63.91 ಕೋಟಿ ಮತ್ತು ಅಂದಾಜು ವೆಚ್ಚದ ಯೋಜನೆಗಳಿಗೆ ಅನುಮೋದನೆಯನ್ನು ಪಡೆದಿದೆ. ಇನ್ನೂ 46.01 ಕೋಟಿ ರೂ. ವೆಚ್ಚದ 10  ಯೋಜನೆಗಳ ಅನುಮೋದನೆ ಪ್ರಕ್ರಿಯೆ ಪ್ರಗತಿಯಲ್ಲಿದೆ.   
      v.         ಈ  ವರ್ಷದಲ್ಲಿ ಎಂಇಸಿಎಲ್ ತೀವ್ರ ಹವಾಮಾನ ಪರಿಸ್ಥಿತಿಗಳೊಂದಿಗೆ ಜಮ್ಮು& ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ನೀಲಂ ಖಾನ್ ಪ್ರದೇಶದಲ್ಲಿ ಒಂದನೇ ಹಂತದ ಶೋಧ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಹಂತದಲ್ಲಿ ಸಂಗ್ರಹಿಸಿದ ಮಾದರಿಗಳಿಗೆ ಪ್ರಯೋಗಾಲಯ ಕಾರ್ಯಗಳು ಪ್ರಗತಿಯಲ್ಲಿವೆ.
    vi.            ಎಂಇಸಿಎಲ್ ತನ್ನ ಹರಾಜು ಪ್ರಕ್ರಿಯೆಗೆ ತಾಂತ್ರಿಕ ಬೆಂಬಲ ಮತ್ತು ಸೇವೆಗಳನ್ನು ಒದಗಿಸಲು ಖನಿಜ ನಿಕ್ಷೇಪಗಳ ತಯಾರಿಕೆ ಮತ್ತು ಪ್ರದರ್ಶನಕ್ಕಾಗಿ ಗಣಿ ಸಚಿವಾಲಯದೊಂದಿಗೆ ತೊಡಗಿಸಿಕೊಂಡಿದೆ. ಆರಂಭದಲ್ಲಿ 50 ನಿಕ್ಷೇಪಗಳ ಕಾರ್ಯತಾಂತ್ರಿಕ ಮತ್ತು ನಿರ್ಣಾಯಕ ಖನಿಜಗಳನ್ನು ವಿವಿಧ ಹಂತಗಳಲ್ಲಿ ಹರಾಜು ಮಾಡಲು ಗುರುತಿಸಲಾಗಿದೆ, ಅದರಲ್ಲಿ 16 ನಿಕ್ಷೇಪಗಳನ್ನು ಎಂಇಸಿಎಲ್ ಅನ್ವೇಷಿಸಿದೆ. ಮೊದಲ ಕಂತಿನಲ್ಲಿ 20 ನಿಕ್ಷೇಪಗಳಿಗೆ ಎನ್‌ಐಟಿ ವಿತರಿಸಲಾಗಿದೆ.
vi.    ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಮತ್ತು ಮಿನರಲ್ ಎಕ್ಸ್‌ಪ್ಲೋರೇಷನ್ ಅಂಡ್ ಕನ್ಸಲ್ಟೆನ್ಸಿ ಲಿಮಿಟೆಡ್ (ಎಂಇಸಿಎಲ್) ನಡುವೆ ಪೂರ್ವ ವಲಯದಲ್ಲಿ ಎನ್‌ಜಿಪಿಎಂ ಕೆಲಸಕ್ಕೆ ಪೂರಕವಾದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
viii.    ಕಲ್ಲಿದ್ದಲು ಮತ್ತು ಲಿಗ್ನೈಟ್‌ನಲ್ಲಿನ ಶೋಧನಾ ಕಾರ್ಯದಲ್ಲಿ  ಜಿಎಸ್‌ಐಗೆ ಪೂರಕವಾಗಲು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ಮತ್ತು ಮಿನರಲ್ ಎಕ್ಸ್‌ಪ್ಲೋರೇಷನ್ ಅಂಡ್ ಕನ್ಸಲ್ಟೆನ್ಸಿ ಲಿಮಿಟೆಡ್ (ಎಂಇಸಿಎಲ್) ನಡುವಿನ ಎಂಒಯು ವಿಸ್ತರಣೆ. 
    ix.           ತಾಮ್ರದ ಪರಿಶೋಧನೆಗಾಗಿ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ (ಎಚ್ ಸಿಎಲ್) ನೊಂದಿಗೆ ತಿಳುವಳಿಕೆ ಒಪ್ಪಂದ (ಎಂಒಯು). 
      x.        ಎನ್ ಜಿ ಪಿಎಂ ಕಾರ್ಯಕ್ರಮದ ಅಡಿಯಲ್ಲಿ ಭೂ ಗುರುತ್ವಾಕರ್ಷಣೆ ಮತ್ತು ಕಾಂತೀಯ ಸಮೀಕ್ಷೆ, ದತ್ತಾಂಶ ಸಂಸ್ಕರಣೆ, ವ್ಯಾಖ್ಯಾನ ಮತ್ತು ತಾಂತ್ರಿಕ ವರದಿ ಸಲ್ಲಿಕೆಗಾಗಿ ಉತ್ತರ ಪ್ರದೇಶ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ ಐ) ನೊಂದಿಗೆ ಒಪ್ಪಂದದ ತಿಳಿವಳಿಕೆ (ಎಂಒಎ) ಮಾಡಿಕೊಂಡಿದೆ. 
    xi. ಕಾರ್ಯತಾಂತ್ರಿಕ ವೈವಿಧ್ಯೀಕರಣ ಕಾರ್ಯಕ್ರಮದಲ್ಲಿ ಎಂಇಸಿಎಲ್ ನ ಸುಸ್ಥಿರತೆ ಮತ್ತು ಲಾಭವನ್ನು ಹೆಚ್ಚಿಸಲು ವಾಣಿಜ್ಯ ಮಟ್ಟ ಮತ್ತು ಕಾರ್ಪೊರೇಟ್ ಮಟ್ಟದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಎಂಇಸಿಎಲ್ ರಾಜ್ಯ ಸರ್ಕಾರಕ್ಕೆ ಖನಿಜ ನಿಕ್ಷೇಪಗಳನ್ನು ಹರಾಜು ಉದ್ದೇಶಕ್ಕೆ ಗುರುತಿಸಲು ಕಾರ್ಯ ಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ಸಮಾಲೋಚನಾ ಸೇವೆಗಳನ್ನು ಒದಗಿಸುತ್ತಿದೆ. ಹಲವು ಕಲ್ಲಿದ್ದಲು ಮತ್ತು ಇಂಧನ ಕಂಪನಿಗಳಿಗೆ, ರಾಜ್ಯ ಸರ್ಕಾರಗಳಿಗೆ ಸಿಪಿಎಸ್ಇಗಳಿಗೆ ಮತ್ತು ಇತರೆ ಸಂಸ್ಥೆಗಳಿಗೆ ಭೂ ರಾಸಾಯನಿಕ ವಿಶ್ಲೇಷಣಾ ಸೇವೆಗಳನ್ನು ಒದಗಿಸಲು ರೆಫರಿ ಏಜನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.  
xiii.    ವ್ಯಾಪಾರ ಅಭಿವೃದ್ಧಿ ಮತ್ತು ವಾಣಿಜ್ಯ ವಿಭಾಗದ ಮೂಲಕ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸ್ಪರ್ಧಾತ್ಮಕ ತಾಂತ್ರಿಕ ವಾಣಿಜ್ಯ ಆಫರ್ ಗಳನ್ನು ಪಡೆಯಲು ನಿರಂತರ ಪ್ರಯತ್ನಗಳನ್ನು ನಡೆಸಿ, ಹೆಚ್ಚಿನ ಕೆಲಸ ಕಾರ್ಯಗಳನ್ನು ಪಡೆಯುತ್ತಿದೆ ಮತ್ತು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಎಂಒಯು ಮಾಡಿಕೊಳ್ಳುತ್ತಿದೆ. ಅದರ ಪರಿಣಾಮ 2023ನೇ ವರ್ಷದಲ್ಲಿ 30.11.2023ರ ವರೆಗೆ ಒಟ್ಟಾರೆ 424.50 ಕೋಟಿ ರೂ. ಆರ್ಡರ್ ಗಳನ್ನು ಬುಕ್ ಮಾಡಲಾಗಿದೆ. ಇದರಲ್ಲಿ ನಾಲ್ಕೊ, ಆರ್ ಎಸ್ ಎಂಎಂಎಲ್, ಹೆಚ್ ಸಿಎಲ್, ಎನ್ಎಂಡಿಸಿ, ಜಿಎಸ್ಐ, ಸಿಎಂಪಿಡಿಐಎಲ್, ಡಿಎಂಜಿ ಕರ್ನಾಟಕ ಮತ್ತಿತರ ಸಂಸ್ಥೆಗಳ ಗುತ್ತಿಗೆ ಕಾರ್ಯಗಳು ಸಹ ಸೇರಿವೆ ಮತ್ತು ಕಲ್ಲಿದ್ದಲು ಸಚಿವಾಲಯ(ಎಂಒಸಿ) ಪರವಾಗಿ ಕಲ್ಲಿದ್ದಲು ಶೋಧ ಕಾರ್ಯಗಳಿಗೆ ಉತ್ತೇಜನ ಮತ್ತು ಎನ್ಎಂಇಟಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.             
xiii.         ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ: ಎಂಇಸಿಎಲ್ ಒಂದು ಪ್ರಮುಖ ಸಾರ್ವಜನಿಕ ವಲಯದ ಜವಾಬ್ದಾರಿಯುತ ಉದ್ದಿಮೆಯಾಗಿದ್ದು, ಅದು ಕಲ್ಲಿದ್ದಲು, ಲಿಗ್ನೈಟ್, ಕಬ್ಬಿಣದ ಅದಿರು, ತಾಮ್ರ, ಜಿಂಕ್, ಲೈಮ್ ಸ್ಟೋನ್ ಇತ್ಯಾದಿ ಪ್ರಮುಖ ಖನಿಜಗಳ ಶೋಧ ಕಾರ್ಯವನ್ನು ಕೈಗೊಳ್ಳುತ್ತದೆ ಹಾಗೂ ದೇಶದ ಹಲವು ಗ್ರಾಮಗಳಲ್ಲಿ ಗಣಿಗಾರಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಸಾಮಾನ್ಯವಾಗಿ ಎಂಇಸಿಎಲ್ ಕೈಗೊಳ್ಳುವ ಶೋಧ ಕಾರ್ಯ ಯೋಜನೆಗಳು ಗುಡ್ಡಗಾಡು ಪ್ರದೇಶದಲ್ಲಿರುತ್ತದೆ.    
xiv.     ಕಂಪನಿಯ ವಹಿವಾಟನ್ನು ನಡೆಸುವ ಜತೆಗೆ ಎಂಇಸಿಎಲ್, ತನ್ನ ಭೌಗೋಳಿಕ ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಮತ್ತು ಅದರಲ್ಲಿ ಭಾಗಿಯಾಗುವ ಬದ್ಧತೆಯನ್ನು ಹೊಂದಿದೆ ಹಾಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮೂಲಸೌಕರ್ಯ ಆರೋಗ್ಯ ಮತ್ತು ನೈರ್ಮಲ್ಯ ಸಾಂಸ್ಕೃತಿಕ ಅಭಿವೃದ್ಧಿಗೆ ಸಮಾನ ಅವಕಾಶಗಳನ್ನು ಜನರಿಗೆ ಒದಗಿಸಿ, ತಮ್ಮ ಕಂಪನಿಗಳ ಸ್ಥಳಗಳ ಸುತ್ತ ಸಿಎಸ್ಆರ್ ಮತ್ತು ಎಸ್ ಡಿ ಉಪಕ್ರಮಗಳಡಿ ಜನರಿಗೆ ಹಲವು ಕಾರ್ಯಗಳನ್ನು ಕೈಗೊಳ್ಳುತ್ತಿದೆ.        
  xv.        ಯೋಜನೆಗಳು/ಸಿಎಚ್ ಕ್ಯೂ/ಆರ್ ಎಂಸಿಗಳ ಸುತ್ತಮುತ್ತ ವಾಸಿಸುವ ಜನರ ಅಗತ್ಯತೆಗಳನ್ನು ವ್ಯವಸ್ಥಿತವಾಗಿ ಪೂರೈಸಲು ಸುಸ್ಥಿರ ರೀತಿಯಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಗತ್ಯತೆಗಳನ್ನು ಆಧರಿಸಿ, ಯೋಜನೆ, ಕಾರ್ಯಾಚರಣೆ ಮತ್ತು ಸಿಎಸ್ಆರ್ ಹಾfಗೂ ಎಸ್ ಡಿ ಚಟುವಟಿಕೆಗಳ ಮೇಲೆ ನಿಗಾ ಇಡುವ ಕ್ರಮಗಳನ್ನು ಜರುಗಿಸಲಿದೆ. ಅದರಂತೆ ಎಂಇಸಿಎಲ್ ಸಿಎಸ್ಆರ್ ಮತ್ತು ಎಸ್ ಡಿ ನೀತಿಯಲ್ಲಿ ಹಿಂದಿನ ಪದ್ಧತಿಯನ್ನು ಆಧರಿಸಿ ಮತ್ತು ಅನುಭವಗಳನ್ನು ಆಧರಿಸಿ, ಎಂಇಸಿಎಲ್ ಸುತ್ತ ಹಲವು ಸಿಎಸ್ಆರ್ ಮತ್ತು ಎಸ್ ಡಿ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಡಿಪಿಇ ಮಾರ್ಗಸೂಚಿಗಳನ್ನು ಪರಿಗಣಿಸಲಾಗುತ್ತಿದೆ
2023    ನೇ ಸಾಲಿನ ಸಾಧನೆಗಳ ಪ್ರಮುಖಾಂಶಗಳು (2023ರ ನವೆಂಬರ್ ವರೆಗೆ)
 
i.    ಎಂಇಸಿಎಲ್  ರಾಷ್ಟ್ರೀಯ ಮಿನರಲ್ ಇನ್ವೆಂಟರಿಗೆ 2815.047  ಮಿಲಿಯನ್ ಟನ್ ಖನಿಜ ನಿಕ್ಷೇಪಗಳನ್ನು ಸೇರಿಸಿದೆ. 
ii.    2022-23ನೇ ಸಾಲಿನಲ್ಲಿ ಕಂಪನಿ ಭಾರತ ಸರ್ಕಾರಕ್ಕೆ 4.18 ಕೋಟಿ ರೂ. ಲಾಭಾಂಶವನ್ನು ಪಾವತಿಸಲು ಉದ್ದೇಶಿಸಿದೆ. 
    iii.       ಎಂಇಸಿಎಲ್ ಈ ವರ್ಷದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ(ಎಕೆಎಂ) ಆಶ್ರಯದಲ್ಲಿ ನೂರಕ್ಕೂ ಅಧಿಕ ಸಾರ್ವಜನಿಕ ಚಟುವಟಿಕೆಗಳನ್ನು ಕೈಗೊಂಡಿದೆ
 
ಜವಹರಲಾಲ್ ನೆಹರು ಅಲ್ಯುಮಿನಿ ಸಂಶೋಧನಾ ಅಭಿವೃದ್ಧಿ ಮತ್ತು ವಿನ್ಯಾಸ ಕೇಂದ್ರ (ಜೆಎನ್ ಎಆರ್ ಡಿಸಿಸಿ), ನಾಗ್ಪುರ 
2023-24ನೇ ವರ್ಷದಲ್ಲಿ ಡಿಸೆಂಬರ್ 2023ರ ವರೆಗೆ ಜೆಎನ್ಎಆರ್ ಡಿಡಿಸಿ ಅಡಿ ಒಂದು ಯೋಜನೆಯನ್ನು ಪೂರ್ಣಗೊಳಿಸಿದೆ ಮತ್ತು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ 19 ಸಂಶೋಧನಾ ಮತ್ತು ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ.  
ತಾಂತ್ರಿಕ ಪರೀಕ್ಷೆ ಮತ್ತು ಸಮಾಲೋಚನಾ ಕಾರ್ಯ:-
     i.   ನವೆಂಬರ್ 2023ರ ವರೆಗೆ ನವದೆಹಲಿಯ ಕ್ಯೂಸಿಐ ಧನಬಾದ್ ನ ಸಿಐಎಂಎಫ್ಆರ್ ನಲ್ಲಿ ಮೂರನೇ ವ್ಯಕ್ತಿಯ 17,000 ಕಲ್ಲಿದ್ದಲು ಮಾದರಿಗಳನ್ನು ವಿಶ್ಲೇಷಣೆ ಮಾಡಿದೆ.  
   ii.   ಜಿಎಸ್ಐ ಜೈಪುರ ಮತ್ತು ಇತರ ಪ್ರದೇಶಗಳ ಮಣ್ಣು ಮತ್ತು ಕೆಸರು ಇತರೆ ಅಂಶಗಳ 5,000ಕ್ಕೂ ಅಧಿಕ ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಿದೆ. 
 iii.   ಭುವನೇಶ್ವರದ ಒಎಂಇಸಿಎಲ್ ನಲ್ಲಿ ಸುಮಾರು 2000 ಮಾದರಿಗಳು  ಬಾಕ್ಸೈಟ್, ಗ್ರಾಫೈಟ್, ಕಬ್ಬಿಣದ ಅದಿರು ಮತ್ತು ರೇರ್ ಅರ್ಥ್ ಎಲಿಮೆಂಟ್ಸ್ ಮಾದರಿಗಳನ್ನು ಪರೀಕ್ಷಿಸಿದೆ.  
 iv.   ಮಹಾರಾಷ್ಟ್ರದ ಗಡ್ ಚಿರೌಳಿಯಲ್ಲಿ ಮೆಸರ್ಸ್ ಲಾಯ್ಡ್ ಮೆಟಲ್ಸ್ ಮತ್ತು ಎನರ್ಜಿ ಲಿಮಿಟೆಡ್, ಸೂರಜ್ ಗಢ್ ನ ಐರನ್ ಓಡ್ ಕಂಪನಿಯಡಿ ಸುಮಾರು 5,000 ಕಬ್ಬಿಣದ ಅದಿರು ಮಾದರಿಗಳ ಪರೀಕ್ಷಾ ಕಾರ್ಯ ಪ್ರಕ್ರಿಯೆಯಲ್ಲಿದೆ.  
    v.   ನಾಗ್ಪುರದ ಎಂಇಸಿಎಲ್ ನಲ್ಲಿ 1,000 ವಿಭಿನ್ನ ಖನಿಜ ಮಾದರಿಗಳ ಪರೀಕ್ಷೆ ನಡೆದಿದೆ. 
ವಿಚಾರ ಸಂಕಿರಣ ಮತ್ತು ಸಮಾವೇಶಗಳು 
i.    ಭಾರತದ ರಾಂಚಿಯಲ್ಲಿ 2023ರ ಜುಲೈ 07-08ರಂದು ನಾನ್ ಫೆರೋರಿಯಸ್ ಮೆಟಲ್ಸ್ ಕುರಿತ 27ನೇ ಅಂತಾರಾಷ್ಟ್ರೀಯ ಸಮಾವೇಶ – 2023(ಐಸಿಎನ್ಎಫ್ಎಂ) ನಡೆಯಿತು.   
ii.    2023ರ ಆಗಸ್ಟ್ 18ರಂದು ಜೆಎನ್ಎಆರ್ ಡಿಡಿಸಿಯಲ್ಲಿ “ಬಾಕ್ಸೈಟ್ ನಿಕ್ಷೇಪಗಳ ಭೌಗೋಳಿಕ-ತಾಂತ್ರಿಕ ಮೌಲ್ಯಮಾಪನ” ಕುರಿತ ಸಮಾವೇಶ 
iii.    ನಾಗ್ಪುರದ ಜೆಎನ್ಎಆರ್ ಡಿಡಿಸಿಯಿಂದ ಹೈದರಾಬಾದ್ ನ ಎನ್ಆರ್ ಎಸ್ ಸಿ – ಇಸ್ರೋದಲ್ಲಿ 27 ಅಕ್ಟೋಬರ್ 23ರಂದು ಅತ್ಯಾಧುನಿಕ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿ, ಬಾಕ್ಸೈಟ್ ಗುಣಮಟ್ಟ ಮತ್ತು ಪ್ರಮಾಣ ಮೌಲ್ಯಮಾಪನ” ಕುರಿತ ವಿಚಾರಗೋಷ್ಠಿ ನಡೆಯಿತು.   
iv.    ಯುಎಇಯ ದುಬೈನಲ್ಲಿ 2023ರ ನವೆಂಬರ್ 05-08ರ ವರೆಗೆ 41ನೇ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಸ್ತುಪ್ರದರ್ಶನ (ಐಸಿಎಸ್ಒಬಿಎ-2023) 
v.    75ನೇ ಎಕೆಎಎಂ ಜಾಗೃತಿ ಕಾರ್ಯಕ್ರಮಗಳು – ಭಾರತದಾದ್ಯಂತ(84 ತ್ಯಾಜ್ಯ ಬಳಕೆ ಮತ್ತು ತ್ಯಾಜ್ಯ ಮರು ಸಂಸ್ಕರಣಾ ಆಂದೋಲನಗಳು (ಎಐ, ಸಿಯು, ಪಿಬಿ, ಜೆಡ್ ಎನ್ ಮತ್ತು ಸ್ಟೀಲ್) ಸೇರಿದಂತೆ) ಇದರಲ್ಲಿ ಉದ್ಯಮದ ಭೇಟಿ ಮತ್ತು 5 ಕಾಲೇಜುಗಳಲ್ಲಿ ಜಾಗೃತಿ ಸಮಾವೇಶಗಳು ಮತ್ತು ವಿದರ್ಭ ಪ್ರಾಂತ್ಯದ 11 ಜಿಲ್ಲೆಗಳಲ್ಲಿ 22 ಜಿಲ್ಲಾ ಪಂಚಾಯಿತಿ ಶಾಲೆಗಳಲ್ಲಿ (2023ರ ಏಪ್ರಿಲ್ ನಿಂದ ಆಗಸ್ಟ್ ವರೆಗೆ) ಜಾಗೃತಿ ಕಾರ್ಯಕ್ರಗಳನ್ನು ನಡೆಸಲಾಗಿದೆ. 
vi.    11ನೇ ಅಂತಾರಾಷ್ಟ್ರೀಯ ಐಬಿಎಎಎಸ್-2023 ಸಮಾವೇಶ ಮತ್ತು ವಸ್ತುಪ್ರದರ್ಶನ; ಅಂತಾರಾಷ್ಟ್ರೀಯ ಬಾಕ್ಸೈಟ್, ಅಲ್ಯುಮಿನಿಯಾ ಮತ್ತು ಅಲ್ಯುಮೀನಿಯಂ ಸೊಸೈಟಿ, ನಾಗ್ಪುರ 04-06 ಡಿಸೆಂಬರ್ 2023  
ಐಇಬಿಆರ್ 
ಜೆಎನ್ ಎಆರ್ ಡಿಡಿಸಿ ಈಗಾಗಲೇ 17.25 ಕೋಟಿ ರೂ.ಗಳ ಐಇಬಿಆರ್ ಜೊತೆಗೆ 2023-24ರಲ್ಲಿ ಆಂತರಿಕ ಆದಾಯದ ಗುರಿ 16 ಕೋಟಿಗಳನ್ನು ಮೀರಿಸಿದೆ.¬¬
ಪೇಟೆಂಟ್ಸ್ 
ಜೆಎನ್ ಎಆರ್ ಡಿಡಿಸಿ ಅಭಿವೃದ್ಧಿಪಡಿಸಿದ ವಿವಿಧ ನವೀನ ಪ್ರಕ್ರಿಯೆಗಾಗಿ ಎರಡು ಪೇಟೆಂಟ್‌ಗಳನ್ನು ನೀಡಲಾಯಿತು.
 

 

1.    29.09.2023 ರಂದು ಆದೇಶ ಸಂಖ್ಯೆ 455707ರಂತೆ ಕಡಿಮೆ ಸೋಡ ಅಂಶವಿರುವ ಅಲ್ಯುಮಿನಿಯಂ ಹೈಡ್ರಾಕ್ಸೈಡ್ ಸಿದ್ಧತಾ ಪ್ರಕ್ರಿಯೆ      


2.    21.11.2023ರ  ಪ್ರಕಾರ  ಆದೇಶ ಸಂಖ್ಯೆ 471016 ರೆಸಿಡಿಯೊಲ್ ಅಲ್ಯುಮಿನಿಯಂನಿಂದ ಅಧಿಕ ಅಲ್ಯುಮಿನಿಯ ಕಾಸ್ಟಬಲ್ಸ್ ಅಭಿವೃದ್ಧಿ ಪ್ರಕ್ರಿಯೆ
 
ಪ್ರಶಸ್ತಿ / ಮಾನ್ಯತೆ 
 
 
ಜೆಎನ್ ಎಆರ್ ಡಿಡಿಸಿ ಯ ವಿಜ್ಞಾನಿ ಡಾ ಪ್ರಿಯಾಂಕಾ ನಾಯರ್ ಅವರಿಗೆ 11 ನೇ ಅಂತಾರಾಷ್ಟ್ರೀಯ ಐಬಿಎಎಸ್ -2023 ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಪ್ರಥಮ ಬಹುಮಾನ ನೀಡಲಾಯಿತು; 2023ರ ಡಿಸೆಂಬರ್ 04-06ರವರೆಗೆ ನಾಗ್ಪುರ  ಅಂತಾರಾಷ್ಟ್ರೀಯ ಬಾಕ್ಸೈಟ್, ಅಲ್ಯುಮಿನಾ ಮತ್ತು ಅಲ್ಯೂಮಿನಿಯಂ ಸೊಸೈಟಿ, “2-ಪ್ರೊಪನಾಲ್ ಅಲ್ಯೂಮಿನಿಯಂ ಸಾಲ್ಟ್ (ಎಐಪಿ) ಅನ್ನು ವೇಗವರ್ಧಕವನ್ನು ಬಳಸದೆಯೇ 4N ಶುದ್ಧ ಅಲ್ಯೂಮಿನಾಕ್ಕೆ ಮಧ್ಯಂತರವಾಗಿ ತಯಾರಿಸುವುದು ಸೇರಿದೆ. 
ಹೊಸ ಸೌಕರ್ಯಗಳು, ಪ್ರಯೋಗಾಲಯಗಳ ಉದ್ಘಾಟನೆ 
ಐಎಎಸ್, ಭಾರತ ಸರ್ಕಾರದ ಗಣಿ ಸಚಿವಾಲಯ ಕಾರ್ಯದರ್ಶಿ ಶ್ರೀ ವಿ.ಎಲ್. ಕಾಂತ ರಾವ್, 21.10.23 ರಂದು ಜೆಎನ್ ಎಆರ್ ಡಿಸಿಸಿ ಯ ಚಟುವಟಿಕೆಗಳನ್ನು ಪರಿಶೀಲಿಸಿದರು. ಅವರು 3 ಹೊಸ ಪ್ರಯೋಗಾಲಯ ಸೌಲಭ್ಯಗಳನ್ನು ಉದ್ಘಾಟಿಸಿದರು (ಅಮೂಲ್ಯ ಲೋಹಗಳಿಗಾಗಿ ಫೈರ್ ಅಸ್ಸೇ ಲ್ಯಾಬ್, ಡೌನ್‌ಸ್ಟ್ರೀಮ್ ಲ್ಯಾಬ್ನ ಮೈಕ್ರೋಸ್ಕೋಪ್ ಮತ್ತು ಮೈಕ್ರೋಹಾರ್ಡ್ನೆಸ್ ಪರೀಕ್ಷಕ).

      
 
ಸ್ವಚ್ಛ ಭಾರತ್  ಮಿಷನ್ 2.0 :-
 
ಎಸ್ ಬಿಎಂ 2.0 ಅಡಿ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು. 

i.    ಜೆಎನ್ ಎಆರ್ ಡಿಡಿಸಿ  ಕಚೇರಿಯ ಒಂದನೇ ಬ್ಲಾಕ್ ನಲ್ಲಿ  ಎರಡು ಸಂಖ್ಯೆಯ ಮಹಿಳೆಯರು ಮತ್ತು ಪುರುಷರ ಶೌಚಾಲಯಗಳನ್ನು ನವೀಕರಿಸಲಾಯಿತು. 
ii.            D-1 & D-2 ಅತಿಥಿ ಗೃಹ ನವೀಕರಣ
 ಜೆಎನ್ ಎಆರ್ ಡಿಡಿಸಿ ಗಣಿ ಸಚಿವಾಲಯವು ಸ್ಥಾಪಿಸಿದ ಮೈನಿಂಗ್ ಪೆವಿಲಿಯನ್‌ನಲ್ಲಿ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ 2023 ರಲ್ಲಿ ಭಾಗವಹಿಸಿತು ಮತ್ತು ಅದರ ಚಟುವಟಿಕೆಗಳನ್ನು ಪ್ರದರ್ಶಿಸಿತು. ಲೋಹಗಳ ಮರುಬಳಕೆಯ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಕಾರ್ಯಾಗಾರಗಳು ವ್ಯಾಪಕ ಮೆಚ್ಚುಗೆ ಪಡೆದವು.

ರಾಷ್ಟ್ರೀಯ ರಾಕ್ ಮೆಕ್ಯಾನಿಕ್ಸ್ ಸಂಸ್ಥೆ (ಎನ್ ಐಆರ್ ಎಂ) ಬೆಂಗಳೂರು 
 
ಎನ್ ಐಆರ್ ಎಂ ಪ್ರೊಜಕ್ಷನ್ಸ್/ ಅಂದಾಜು 

2023ರ ಜನವರಿ 1 ರಿಂದ 2023ರ ಡಿಸೆಂಬರ್ 30ರ ವರೆಗೆ ಎನ್ಐಆರ್ ಎಂ 21.73 ಕೋಟಿ ರೂಪಾಯಿ ಮೌಲ್ಯದ 54 ಯೋಜನೆಗಳನ್ನು ಪೂರ್ಣಗೊಳಿಸಿದೆ. ಅಲ್ಲದೆ, 2024ರ ಮಾರ್ಚ್ ವರೆಗೆ ಎನ್ಐಆರ್ ಎಂ ಗಣಿಗಾರಿಕೆ, ಸಿವಿಲ್ ಮತ್ತು ನಿರ್ಣಾಯಕ ಮೂಲಸೌಕರ್ಯ ವಲಯದಲ್ಲಿ 20ಕ್ಕೂ ಅಧಿಕ ಯೋಜನೆಗಳನ್ನು ಪೂರ್ಣಗೊಳಿಸುವ ಸಾದ್ಯತೆ ಇದೆ. 2024ರ ಮಾರ್ಚ್ 31ರ ವರೆಗೆ ಹಲವು ಉದ್ದಿಮೆಗಳು ಎದುರಿಸುತ್ತಿರುವ ಸವಾಲುಗಳಿಗೆ ರಾಕ್ ಮೆಕ್ಯಾನಿಕ್ಸ್ ಮತ್ತು ರಾಕ್ ಇಂಜಿನಿಯರಿಂಗ್ ಪರಿಹಾರಗಳನ್ನು ಒದಗಿಸಲು ಉದ್ದೇಶಿಸಿದೆ. ಎನ್ಐಆರ್ ಎಂನ ಕಾರ್ಯ ಬಹುತೇಕ ಉದ್ಯಮದ ಅಗತ್ಯತೆಗಳನ್ನು ಅವಲಂಬಿಸಿದೆ ಮತ್ತು ಅದರ ಯೋಜನೆಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸದಾ ಬದಲಾಗುತ್ತಿರುತ್ತವೆ. 
ಆರ್ಥಿಕ ಆಯಾಮದಲ್ಲಿ ನಾವು ಬಹುತೇಕ ಗಣನೀಯ ಪ್ರಗತಿಯನ್ನು ಸಾಧಿಸಿದ್ದೇವೆ ಮತ್ತು ಈ ವರ್ಷ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಸೃಷ್ಟಿಸಿಕೊಂಡಿದ್ದೇವೆ. ಹೆಚ್ಚುವರಿಯಾಗಿ ಎನ್ಐಆರ್ ಎಂ ವೈಜ್ಞಾನಿಕ ಇನ್ ಸ್ಟ್ರುಮೆಂಟೇಶನ್ ಮತ್ತು ಸೌಕರ್ಯಗಳ ಉನ್ನತೀಕರಣದ ಜತೆ ಬದಲಾಗುತ್ತಿರುವ ಜಾಗತಿಕ ಅಗತ್ಯತೆಗಳನ್ನು ಆಂತರಿಕ ಸಂಪನ್ಮೂಲದಿಂದ ಎದುರಿಸಲಾಗುತ್ತಿದೆ. ಎನ್ಐಆರ್ ಎಂ ಅಧಿಕ ತಾಂತ್ರಿಕ ಮತ್ತು ಹಣಕಾಸು ಸುಸ್ಥಿರತೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದರ ಉನ್ನತ ಗುಣಮಟ್ಟದ ಸೇವೆಗಳಿಗೆ ಬಂಡವಾಳ ಉನ್ನತೀಕರಣ, ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಮತ್ತು ವಾರ್ಷಿಕ 8 ರಿಂದ 10 ಕೋಟಿ ರೂಪಾಯಿ ವರೆಗೆ ಆರ್ಥಿಕ ನೆರವು ಸೇರಿದಂತೆ ಬಲಿಷ್ಠ ನೆರವು ಅಗತ್ಯವಿದೆ. 
ಸಾರ್ವಜನಿಕ ಖಾಸಗಿ ಎರಡೂ ವಲಯಗಳಲ್ಲಿ ಗಣಿಗಾರಿಕೆ, ಇಂಧನ, ಅಣು ಮತ್ತು ಪರಮಾಣು ಮೂಲಸೌಕರ್ಯದಲ್ಲಿ ಸಹಭಾಗಿತ್ವವನ್ನು ಸಾಧಿಸಲಾಗುತ್ತಿದೆ. ಭವಿಷ್ಯದ ಜಾಗತಿಕ ಸವಾಲುಗಳನ್ನು ಎದುರಿಸಲು ಸ್ಥಿರ ಕಾರ್ಯತಂತ್ರಗಳನ್ನು ರೂಪಿಸಿ, ಎನ್ಐಆರ್ ಎಂ ಹೊಸ ಎತ್ತರಕ್ಕೆ ಏರಲು ಸಜ್ಜಾಗುತ್ತಿದೆ.  
ಎನ್ ಐಆರ್ ಎಂ- ಕೌಶಲ್ಯ ಮತ್ತು ಜಾಗೃತಿಗೆ ಕೈಗಾರಿಕಾ ಸಂವಾದ: ಎಕೆಎಎಂ ಉಪನ್ಯಾಸ ಸರಣಿಯ ಭಾಗವಾಗಿ, ಎನ್ಐಆರ್ ಎಂನ ಅತ್ಯಾಧುನಿಕ ಸೇವೆಗಳಡಿ ಉಪನ್ಯಾಸಗಳು, ಪ್ರದರ್ಶನಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳು ಒಳಗೊಂಡಿದ್ದು, ಸದಾ ಬೆಳವಣಿಗೆಯಾಗುತ್ತಿರುವ ಉದ್ಯಮಕ್ಕೆ ಆಧುನಿಕ, ಇತ್ತೀಚಿನ ತಂತ್ರಜ್ಞಾನಗಳನ್ನು ಲಭ್ಯವಾಗುವಂತೆ ಮಾಡುವ ಜತೆಗೆ ಜಿಯೋಲಾಜಿಕಲ್, ಜಿಯೋಟೆಕ್ನಿಕಲ್ ಮತ್ತು ರಾಕ್ ಇಂಜಿನಿಯರಿಂಗ್ ವಲಯದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ. ಎನ್ಐಆರ್ ಎಂನ ವಿಜ್ಞಾನಿಗಳು ಬಿಐಎಸ್, ಐಎಸ್ಆರ್ ಎಂ, ಐಎಸ್ಇಜಿ, ಎಂಇಎಐ, ಕೆಎಸ್ ಡಿಸಿ, ಕೆಎಸ್ ಡಿಎಂಎ, ಐಜಿಎಸ್, ಐಜಿಯು, ಐಎಸ್ಇಟಿ ಮತ್ತು ಐಎಸ್ಆರ್ ಎಂಟಿಟಿ ಗಳಂತಹ ತಜ್ಞರ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ. 
ಎನ್ಐಆರ್ ಎಂ ನಾನಾ ಶೈಕ್ಷಣಿಕ ಸಂಸ್ಥೆಗಳ 17 ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ತರಬೇತಿ ನೀಡಿದೆ. ಚೆನ್ನೈನ ಕೆಜಿಎಫ್ ಅಣ್ಣಾ ವಿಶ್ವವಿದ್ಯಾಲಯದ ಡಾ. ಟಿ.ಟಿ. ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇರಳದ ಕ್ಯಾಲಿಕಟ್ ಯೂನಿವರ್ಸಿಟಿ, ಕರ್ನಾಟಕದ ಮಂಗಳೂರು ವಿಶ್ವವಿದ್ಯಾಲಯ, ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿಯ ಭಾಗವಾಗಿವೆ.
ಐಐಟಿಎಫ್ 2023 : ಎನ್ಐಆರ್ ಎಂ, ಐಐಟಿಎಫ್ 2023ನ ಮೈನಿಂಗ್ ಪೆವಿಲಿಯನ್ ನಲ್ಲಿ ಭಾಗವಹಿಸಿತ್ತು ಮತ್ತು ವೈಯಕ್ತಿಕ ಸಂವಾದಗಳು, ವಿಡಿಯೋ ಗೋಷ್ಠಿಗಳು, ಟುಟೋರಿಯಲ್ಸ್ ಮತ್ತು ಕ್ವಿಜ್ ಗಳ ಮೂಲಕ ಗಣಿಗಾರಿಕೆ ಮತ್ತು ಮೂಲಸೌಕರ್ಯ ವಲಯದ ಸಮಸ್ಯೆಗಳಿಗೆ ವಿಶ್ವದರ್ಜೆಯ ಪರಿಹಾರಗಳನ್ನು ಒದಗಿಸುವುದು ಕುರಿತು ಜನರಿಗೆ ತಿಳಿಸಲಾಯಿತು. ವೃತ್ತಿಪರರು, ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳು ಮೈನಿಂಗ್ ಪೆವಿಲಿಯನ್ ಗೆ ಭೇಟಿ ನೀಡಿದ್ದರು. 
            
ಐಐಟಿಎಫ್ 2023ಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ದೃಶ್ಯಗಳು  
(i)    ಎನ್ ಐಆರ್ ಎಂ ವೈಜ್ಞಾನಿಕ ಪ್ರಕಟಣೆಗಳು:  ಈ ಅವಧಿಯಲ್ಲಿ ಸಂಸ್ಥೆ 26 ತಾಂತ್ರಿಕ ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್‌ ಗಳಲ್ಲಿ ಮತ್ತು ಸಮಾವೇಶದಲ್ಲಿ ಪ್ರಕಟವಾಗಿರುವ ಶ್ರೇಯ ಸಂದಾಯವಾಗಿದೆ.
2024    ಆಜಾದಿ ಕಾ ಅಮೃತ ಮಹೋತ್ಸವ (ಎಕೆಎಎಂ) ಭಾಗವಾಗಿ ಗಣಿ ಸಚಿವಾಲಯ (ಭಾರತ ಸರ್ಕಾರದ) ಎನ್ ಐಆರ್ ಎಂ 75 ಭಿನ್ನ ಎಂಜಿನಿಯರಿಂಗ್/ವಿಜ್ಞಾನ ಕಾಲೇಜುಗಳು/ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆತ್ಮ ನಿರ್ಭರ ಭಾರತ ಥೀಮ್ ನಡಿ “ರಾಷ್ಟ್ರ ನಿರ್ಮಾಣದಲ್ಲಿ ರಾಕ್ ಎಂಜಿನಿಯರಿಂಗ್ ಪಾತ್ರ’’ ಎಂಬ ವಿಷಯದ ಕುರಿತು ಉಪನ್ಯಾಸ ಸರಣಿಯನ್ನು ಆಯೋಜಿಸಿತ್ತು,  
 
2023ರ ಜನವರಿಯಿಂದ ಡಿಸೆಂಬರ್ ವರೆಗೆ ಕೈಗೊಂಡ ಪ್ರಮುಖ ಯೋಜನೆಗಳ ಪಟ್ಟಿಯಲ್ಲಿ ಇವು ಸೇರಿವೆ:

1    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬಳಸಲಾಗುವ ಗ್ರಾನೈಟ್ ಕಲ್ಲುಗಳ ಗುಣಮಟ್ಟ ಪರಿಶೀಲನೆ 
2    ಕರ್ನಾಟಕದ ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪ ಯೋಜನೆಗಾಗಿ ಕಚ್ಚಾ ಗ್ರಾನೈಟ್ ನಿಕ್ಷೇಪಗಳ ಗುಣಮಟ್ಟ ಪರಿಶೀಲನೆ 
3     ರಾಜಸ್ಥಾನದ M/s HZL ನ ರಾಮ್‌ಪುರ ಅಗುಚಾ ಮೈನ್ಸ್‌ನಲ್ಲಿ ನಿರ್ಣಾಯಕ ಘಟಕಗಳ ಎನ್ ಡಿಟಿ ಮತ್ತು ಎಚ್ ಇಎಂಎಂ ಉಪಕರಣ ಪರೀಕ್ಷೆ 

4    ರಾಜಸ್ಥಾನದ ರಾವತ್‌ಭಟದಲ್ಲಿ ಕಾರ್ಯಯೋಜನಾ ಸ್ಥಳದಲ್ಲಿ  ತುರ್ತು ಬೆಂಬಲ ಕೇಂದ್ರದ ಅಡಿಪಾಯ ಮಹಡಿಯ ನಿರ್ಮಾಣ ಹಂತದ ಎಂಜಿನಿಯರಿಂಗ್ ಭೂವೈಜ್ಞಾನಿಕ ಮ್ಯಾಪಿಂಗ್.
5    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ  ಪೋಲವರಂ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ನ (12 x 80 ಎಂಡಬ್ಲೂ) ಪವರ್ ಹೌಸ್ ಬ್ಲಾಕ್ ಮತ್ತು ಒತ್ತಡದ ಸುರಂಗಗಳ ಎಂಜಿನಿಯರಿಂಗ್ ಭೂವೈಜ್ಞಾನಿಕ ಪತ್ತೆ  
6    ಮಧ್ಯಪ್ರದೇಶದ ಬಲ್ವಾರ ಭಾಗದಲ್ಲಿ ಎನ್ ಎಚ್-347ಬಿಜಿ ತೇಜಾಜಿನಗರದ 4 ಲೇನಿಂಗ್ನ ಪೋರ್ಟಲ್ ಪ್ರದೇಶಗಳಲ್ಲಿ ಇಂಜಿನಿಯರಿಂಗ್ ಭೌಗೋಳಿಕ/ ಜಿಯೋಟೆಕ್ನಿಕಲ್ ಮ್ಯಾಪಿಂಗ್ ಮತ್ತು ಭೇರುಘಾಟ್ ಮತ್ತು ಅವಳಿ ಸುರಂಗಗಳಿಗೆ ಕಲ್ಲಿನ ದ್ರವ್ಯರಾಶಿಯ ಗುಣಲಕ್ಷಣಗಳು
7    ಗುಜರಾತಿನ ಸೂರತ್ ವಿಮಾನ ನಿಲ್ದಾಣದ ಆವರಣದ ಮೂಲಕ ಹಾದುಹೋಗುವ ಸಮಾಧಿ 42" ಎಸ್ ಬಿಎಚ್ ಟಿ ಗ್ಯಾಸ್ ಪೈಪ್‌ಲೈನ್‌ನಲ್ಲಿ ಕಂಪನದ ಪ್ರಭಾವದ ವಿಶ್ಲೇಷಣೆಗಾಗಿ ನಾಮನಿರ್ದೇಶನದ ಆಧಾರದ ಮೇಲೆ ಎನ್ ಐಅರ್ ಎಂನ ಸೇವೆಗಳನ್ನು ನೇಮಿಸಿಕೊಳ್ಳುವುದು 
8    ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭೂಭೌತಶಾಸ್ತ್ರದ ತನಿಖೆಯು ಅತಿಯಾದ ಬಂಡೆಯ ದ್ರವ್ಯರಾಶಿಯನ್ನು ನಿರೂಪಿಸಲು ಮತ್ತು ಸೆಂಗುಲಂ ವರ್ಧನೆ ಯೋಜನೆಯ ಜಲ ಸುರಂಗ ಜೋಡಣೆಯ ಉದ್ದಕ್ಕೂ ಆಳವಿಲ್ಲದ ಜಲಚರಗಳನ್ನು ಪತ್ತೆಹಚ್ಚುವ ಕಾರ್ಯ  
9    ಕರ್ನಾಟಕದ ಮಂಗಳೂರಿನ ಎಚ್ ಪಿಸಿಎಲ್ ನ ಎಸ್ ಸಿಡಿಎ ಕಂಟ್ರೋಲ್ ರೂಂ ಕಟ್ಟಡದಲ್ಲಿನ ಬಿರುಕುಗಳ ಕಾರಣವನ್ನು ನಿರ್ಣಯಿಸಲು ಭೂ ಭೌತಿಕ ತನಿಖೆ
10    ರಾಜಸ್ಥಾನದ ಹಿಂದೂಸ್ತಾನ್ ಝಿಂಕ್ ಲಿಮಿಟೆಡ್ ನ ರಾಮ್‌ಪುರಾ ಅಗುಚಾ  ಗಣಿಯ ಸೂಕ್ಷ್ಮ ಕಂಪನ ಗಳ ಮೇಲ್ವಿಚಾರಣೆಗೆ ಮಾರ್ಗದರ್ಶನ ಮತ್ತು ಬೆಂಬಲ 
11    ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಇಟ್ಟನಹಳ್ಳಿ ಗ್ರಾಮದಲ್ಲಿರುವ (130.53 ಹೆಕ್ಟೇರ್) ಭದ್ರಾ ಕಬ್ಬಿಣದ ಅದಿರು ಗಣಿ (130.53 ಹೆ) ಗಣಿ ಗುಂಡಿ ಮತ್ತು ತ್ಯಾಜ್ಯ ಸುರಿಯುವ ಇಳಿಜಾರು ಸ್ಥಿರತೆ ಅಧ್ಯಯನ.
12    ಕರ್ನಾಟಕದ ಬಳ್ಳಾರಿಯ ಸಂಡೂರು ತಾಲ್ಲೂಕು ಲಕ್ಷ್ಮೀಪುರ ಗ್ರಾಮದ ದೇವದಾರಿ ಕಬ್ಬಿಣದ ಅದಿರು ಗಣಿ (ಎಂಎಲ್.No.006,100.54ಎಚ್ ಎ), ಗಣಿ ಪಿಟ್ ಮತ್ತು ತ್ಯಾಜ್ಯ ಸುರಿಯುವ ಸ್ಥಿರತೆಯ ಮೌಲ್ಯಮಾಪನಕ್ಕಾಗಿ ಜಿಯೋಟೆಕ್ನಿಕಲ್ ಅಧ್ಯಯನ 
14    ರಾಜಸ್ಥಾನದಲ್ಲಿ ಎಚ್ ಝಡ್ ಎಲ್ ರಾಜಪುರ ದರಿಬಾ ಗಣಿ ನಿಲ್ದಾಣಗಳ ವಿನ್ಯಾಸಕ್ಕಾಗಿ ಇನ್-ಸಿಟು ಸ್ಟ್ರೆಸ್ ಪ್ಯಾರಾಮೀಟರ್ಗಳ ನಿರ್ಣಯ 

15     ಜಮ್ಮು ಮತ್ತು ಕಾಶ್ಮೀರ ಎಚ್ ಎಲ್  ಯೋಜನೆಗಳು ಕಿರ್ತಾಲ್-II ನ ಡಿಸಿಲ್ಟಿಂಗ್ ಚೇಂಬರ್‌ನಲ್ಲಿ ಇನ್ ಸಿತು ಒತ್ತಡದ ನಿಯತಾಂಕಗಳನ್ನು ಕೈಗೊಳ್ಳುವುದು. 
16    ಮಹಾರಾಷ್ಟ್ರದ ಭಾವಲಿ ಪಿಎಸ್‌ಪಿಯ ಪವರ್‌ಹೌಸ್ ಸೈಟ್‌ನಲ್ಲಿ ಹೈಡ್ರಾಲಿಕ್ ಫ್ರಾಕ್ಚರ್ ಮತ್ತು ಗುಡ್‌ಮ್ಯಾನ್ ಜ್ಯಾಕ್ ಪರೀಕ್ಷೆಗಳನ್ನು ಕೈಗೊಳ್ಳುವುದು. 
17    ಮಧ್ಯಪ್ರದೇಶದ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ನ ಮಲಾಂಜ್ ಖಂಡ್ ಕಾಪರ್ ಪ್ರಾಜೆಕ್ಟ್‌ನಲ್ಲಿ ಜಿಯೋಟೆಕ್ನಿಕಲ್ ಮ್ಯಾಪಿಂಗ್ ಮತ್ತು ನ್ಯೂಮರಿಕಲ್ ಮಾಡೆಲಿಂಗ್ ಆಫ್ ಅಂಡರ್‌ಗ್ರೌಂಡ್ ವರ್ಕಿಂಗ್ಸ್
18    ಭೂತಾನ್ನ ಪುನತ್‌ಸಂಗ್ಚು-II ಜಲವಿದ್ಯುತ್ ಯೋಜನೆಯ ಸಿ-3 ಪ್ಯಾಕೇಜ್‌ನಲ್ಲಿ ಜಿಯೋಟೆಕ್ನಿಕಲ್ ಮತ್ತು ಜಿಯೋಡೆಟಿಕ್ ಇನ್‌ಸ್ಟ್ರುಮೆಂಟೇಶನ್ ದತ್ತಾಂಶದ ವಿಶ್ಲೇಷಣೆ.
19    ಉತ್ತರಾಖಂಡ್ದ ಲಕ್ವಾರ್ ವಿವಿಧೋದ್ದೇಶ ಯೋಜನೆ (300ಎಂಡಬ್ಲೂ), ಪವರ್‌ಹೌಸ್ ಸಂಕೀರ್ಣದ 3D ನ್ಮೂಮರಿಕಲ್ ಮಾಡೆಲಿಂಗ್ ಅಧ್ಯಯನಗಳು.
20    ಕರ್ನಾಟಕದ ಕೈಗಾದ ಕೈಗಾ ಪರಮಾಣು ವಿದ್ಯುತ್ ಸ್ಥಾವರದ ಘಟಕ 5 ಮತ್ತು 6 ರ ನಿರ್ಮಾಣಕ್ಕಾಗಿ ಬ್ಲಾಸ್ಟಿಂಗ್‌ನಿಂದಾಗಿ ನೆಲದ ಕಂಪನ ಮತ್ತು ಗಾಳಿಯ ಅಧಿಕ ಒತ್ತಡದ ಮೇಲ್ವಿಚಾರಣೆ 
21    ತೆಲಂಗಾಣದ ಹೈದರಾಬಾದ್ ಡಿಎಸ್ ಆರ್ -ಎಸ್ ಆರ್ ಪ್ರೈಮ್ ಸ್ಪೇಸ್‌ಗಳು ಎಲ್ ಎಲ್ ಪಿ, ದಿ ವರ್ಲ್ಡ್ ಅಟ್ ಜುಬಿಲಿ ಹಿಲ್ಸ್" ಸೈಟ್‌ನಲ್ಲಿ ಸೈಟ್ ಗ್ರೇಡಿಂಗ್‌ಗಾಗಿ ನಿಯಂತ್ರಿತ ಬ್ಲಾಸ್ಟಿಂಗ್ನ ತಾಂತ್ರಿಕ ಮಾರ್ಗದರ್ಶನ ಮತ್ತು ನೆಲದ ಕಂಪನ ಮತ್ತು ಗಾಳಿಯ ಅಧಿಕ ಒತ್ತಡದ ಮಾನಿಟರಿಂಗ್ (ಹಂತ II ವಿಸ್ತರಣೆ) 
22    ಭೂತಾನ್ನ ನಿಯಂತ್ರಿತ ಬ್ಲಾಸ್ಟಿಂಗ್ ಪಿಎಚ್ ಪಿಎ-II ಮೂಲಕ ಪುನತ್‌ಸಂಗ್ಚು-II (1020ಮೆಗಾವ್ಯಾಟ್) ಜಲವಿದ್ಯುತ್ ಯೋಜನೆಯ ವಿವಿಧ ಪವರ್‌ಹೌಸ್ ಸಂಕೀರ್ಣ ಘಟಕಗಳ ಉತ್ಖನನಕ್ಕಾಗಿ ತಾಂತ್ರಿಕ ಮಾರ್ಗದರ್ಶನ ಸೇವೆಗಳು.
23    ರಾಜಸ್ಥಾನದ ಬನ್ವಾರಾದ ಮಹಿ ಬನ್ಸವಾರದ ಪರಮಾಣು ಶಕ್ತಿ ಯೋಜನೆಯಲ್ಲಿ ನಡೆಯುತ್ತಿರುವ ಭೂವೈಜ್ಞಾನಿಕ/ಜಿಯೋಟೆಕ್ನಿಕಲ್ ತನಿಖೆಗಳಿಗೆ ಕ್ಯೂಎ ಬೆಂಬಲ
24    ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯ ಚುಟ್ಕಾ ಗ್ರಾಮದ ಪ್ರಸ್ತಾವಿತ ಚುಟ್ಕಾ ಮಧ್ಯಪ್ರದೇಶ ಪರಮಾಣು ವಿದ್ಯುತ್ ಯೋಜನೆಯ ಸುತ್ತಲಿನ ಪ್ರದೇಶದಲ್ಲಿ ಮ್ಯಾಕ್ರೋ ಭೂಕುಸಿತ ಅಪಾಯದ ವಲಯ ಮ್ಯಾಪಿಂಗ್

*****



(Release ID: 1992290) Visitor Counter : 140