ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ವಲಯದಲ್ಲಿ ಸ್ವಾವಲಂಬನೆಯತ್ತ; ಏಪ್ರಿಲ್ - ನವೆಂಬರ್ 2023ರ ಅವಧಿಯಲ್ಲಿ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿ ಶೇ. 8.38%ರಷ್ಟು ಹೆಚ್ಚಳ
ಮಿಶ್ರಣಕ್ಕಾಗಿ ಆಮದು ಮಾಡಿಕೊಳ್ಳುವ ಕಲ್ಲಿದ್ದಲು ಬಳಕೆ ಪ್ರಮಾಣದಲ್ಲಿ ಶೇ.44.28%ರಷ್ಟು ಇಳಿಕೆ
Posted On:
23 DEC 2023 11:12AM by PIB Bengaluru
ಭಾರತವು ವಿಶ್ವದ ಮೂರನೇ ಅತಿ ದೊಡ್ಡ ವಿದ್ಯುತ್ ಬಳಕೆ ಗ್ರಾಹಕ ಸ್ಥಾನದಲ್ಲಿದ್ದು, ವಾರ್ಷಿಕ ವಿದ್ಯುತ್ ಬೇಡಿಕೆಯು ಸುಮಾರು ಶೇ.4.7%ರಷ್ಟು ಹೆಚ್ಚಳವಾಗಿರುವುದು ಗಮನಾರ್ಹ. ಹಿಂದಿನ ವರ್ಷದ ಇದೇ ಅವಧಿಗೆ ಅವಧಿಗೆ ಹೋಲಿಸಿದರೆ 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ವಿದ್ಯುತ್ ಉತ್ಪಾದನೆಯಲ್ಲಿ ದೇಶವು ಗಮನಾರ್ಹವೆನಿಸಿದ ಶೇ. 7.71%ರಷ್ಟು ಏರಿಕೆ ಕಂಡಿದೆ.
ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ಏಪ್ರಿಲ್-ನವೆಂಬರ್ 23ರ ಅವಧಿಯಲ್ಲಿ ಶೇ.11.19%ರಷ್ಟು ಹೆಚ್ಚಳ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ತಾಪಮಾನದಲ್ಲಿ ವಿಪರೀತ ಏರಿಕೆ, ದೇಶದ ಉತ್ತರ ಭಾಗದಲ್ಲಿ ಮಾನ್ಸೂನ್ ಪ್ರವೇಶ ವಿಳಂಬ ಹಾಗೂ ಕೋವಿಡ್ ನಂತರ ವಾಣಿಜ್ಯ ಚಟುವಟಿಕೆಗಳ ಪುನಶ್ಚೇತನದ ಪರಿಣಾಮ ಬೇಡಿಕೆ, ಬಳಕೆ ಹೆಚ್ಚಾಗಿದೆ.
ಏಪ್ರಿಲ್‌ನಿಂದ ನವೆಂಬರ್ 2023 ರವರೆಗಿನ ಅವಧಿಯಲ್ಲಿ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಮೂಲದಿಂದ 779.1 ಬಿಲಿಯನ್ ಯುನಿಟ್ ನಷ್ಟು (ಬಿಯು) ವಿದ್ಯುತ್ ಉತ್ಪಾದಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 718.83 ಬಿಲಿಯನ್ ಯುನಿಟ್‌ಗಳಷ್ಟೇ (ಬಿಯು) ಉತ್ಪಾದಿಸಲಾಗಿತ್ತು. ಆ ಮೂಲಕ ಉತ್ಪಾದನೆಯಲ್ಲಿ ಶೇ. 8.38%ರಷ್ಟು ಹೆಚ್ಚಳವಾಗಿರುವುದು ಕಾಣುತ್ತದೆ.
ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯ ಹೊರತಾಗಿಯೂ, ಮಿಶ್ರಣಕ್ಕಾಗಿ ಬಳಸುವ ಆಮದು ಮಾಡಿಕೊಂಡ ಕಲ್ಲಿದ್ದಲಿನ ಪ್ರಮಾಣವು ಹಿಂದಿನ ವರ್ಷದ ಇದೇ ಅವಧಿಯಲ್ಲಿ 27.21 ಮಿಲಿಯನ್ ಟನ್‌ನಿಂದ ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ನವೆಂಬರ್ 23ರವರೆಗೆ 15.16 ಮಿಲಿಯನ್‌ಗೆ ಅಂದರೆ ಶೇ. 44.28% ರಷ್ಟು ಕಡಿಮೆಯಾಗಿದೆ. ಇದು ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ರಾಷ್ಟ್ರದ ಬದ್ಧತೆಯನ್ನು ತೋರಿಸುತ್ತದೆ ಮತ್ತು ಒಟ್ಟಾರೆ ಕಲ್ಲಿದ್ದಲು ಆಮದು ಅವಲಂಬನೆಯನ್ನು ಕಡಿಮೆ ಮಾಡಿರುವುದು ಸ್ಪಷ್ಟವಾಗಿದೆ.
ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರವು ತನ್ನ ಪ್ರಯತ್ನಗಳನ್ನು ಮುಂದುವರಿಯುತ್ತದೆ. ಹಾಗೆಯೇ ಲಭ್ಯತೆಯನ್ನು ಹೆಚ್ಚಿಸುವ ಮತ್ತು ಆಮದು ಮಾಡಿಕೊಂಡ ಕಲ್ಲಿದ್ದಲಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಇದರಿಂದಾಗಿ ವಿದೇಶಿ ಮೀಸಲುಗಳನ್ನು ರಕ್ಷಿಸುತ್ತದೆ.
****
(Release ID: 1989914)
Visitor Counter : 84