ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕಾಶಿ ತಮಿಳು ಸಂಗಮಂ ಎರಡನೇ ಹಂತದ ಶಿಕ್ಷಕರ ಗುಂಪು ಘಾಟ್‌ಗಳು, ಸುಬ್ರಹ್ಮಣ್ಯ ಭಾರತಿ ಅವರ ನಿವಾಸ ಮತ್ತು ಕಂಚಿ ಮಠಕ್ಕೆ ಭೇಟಿ ನೀಡಿತು
Posted On:
20 DEC 2023 3:48PM by PIB Bengaluru
ಕಾಶಿ ತಮಿಳು ಸಂಗಮಂ ಎರಡನೇ ಹಂತದಲ್ಲಿ ಶಿಕ್ಷಕರನ್ನು (ಯಮುನಾ) ಒಳಗೊಂಡ ನಿಯೋಗವು ಹನುಮಾನ್ ಘಾಟ್‌ಗೆ ಭೇಟಿ ನೀಡಿತು ಮತ್ತು ಆಚಾರ್ಯರಿಂದ ಗಂಗಾ ನದಿಯ ವಿವಿಧ ಘಾಟ್‌ಗಳ ಇತಿಹಾಸದ ಬಗ್ಗೆ ಮಾಹಿತಿ ಪಡೆದುಕೊಂಡಿತು.
ನಂತರ, ಪ್ರತಿನಿಧಿಗಳು ಘಾಟ್‌ಗಳ ಮೇಲಿನ ಪುರಾತನ ದೇವಾಲಯಗಳಿಗೆ ಭೇಟಿ ನೀಡಿ, ಅವುಗಳ ಇತಿಹಾಸ, ದೈವಿಕತೆ ಮತ್ತು ಭವ್ಯತೆಯ ಬಗ್ಗೆ ತಿಳಿದುಕೊಂಡರು. ತಂಡವು ಹನುಮಾನ್ ಘಾಟ್‌ನಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಾರತಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರ ಜತೆ ಕುಶಲೋಪರಿ ನಡೆಸಿತು. ತಂಡವು ಕಂಚಿ ಮಠಕ್ಕೆ ಭೇಟಿ ನೀಡಿ ಅದರ ಇತಿಹಾಸವನ್ನು ತಿಳಿದುಕೊಂಡಿತು.
ಶಿಕ್ಷಕರ ತಂಡವು ಕಾಶಿ ಮತ್ತು ತಮಿಳುನಾಡು ನಡುವಿನ ಆಳವಾದ ಸಂಪರ್ಕದ ಬಗ್ಗೆ ತಿಳಿದುಕೊಂಡಿತು ಮತ್ತು ಹನುಮಾನ್ ಘಾಟ್, ಕೇದಾರ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿತು, ಅಲ್ಲಿ ಹಲವಾರು ತಮಿಳು ಕುಟುಂಬಗಳು ಹಲವು ವರ್ಷಗಳಿಂದ ನೆಲೆಸಿದ್ದು, ಕಾಶಿ ತಮಿಳು ಸಂಗಮದ ವಿಶೇಷ ಉತ್ಸಾಹಕ್ಕೆ ಕಾರಣವಾಗಿದೆ.
ಕಾಶಿ ತಮಿಳು ಸಂಗಮದ ಎರಡನೇ ಹಂತವು ಡಿಸೆಂಬರ್ 30, 2023 ರವರೆಗೆ ನಡೆಯಲಿದೆ. ಕಳೆದ ವರ್ಷ, ಕಾಶಿ ತಮಿಳು ಸಂಗಮದ ಮೊದಲ ಹಂತ ನವೆಂಬರ್ 16 ರಿಂದ ಡಿಸೆಂಬರ್ 16, 2022 ರವರೆಗೆ ಆಯೋಜಿಸಲಾಗಿತ್ತು.
ಈ ಬಾರಿ ಸುಮಾರು 1400 (ಪ್ರತಿ 200 ವ್ಯಕ್ತಿಗಳ 7 ಗುಂಪುಗಳು) ಜನರು ಭಾಗವಹಿಸುವ ನಿರೀಕ್ಷೆಯಿದೆ. ತಮಿಳುನಾಡಿನ ವಿವಿಧ ಭಾಗಗಳಿಂದ ಪ್ರಯಾಣಿಸಿ, ವಿಶೇಷ ಅನುಭ ಪಡೆಯಲಿದ್ದಾರೆ. ಮೊದಲ ಎರಡು ತಂಡಗಳು ಈಗಾಗಲೇ ವಾರಣಾಸಿಗೆ ಆಗಮಿಸಿವೆ. ಈ ತಂಡಗಳು ಕಾಶಿಯ ನಂತರ ಪ್ರಯಾಗ್ರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡುತ್ತವೆ.
***
(Release ID: 1988756)
Visitor Counter : 59