ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

​​​​​​​ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಎರಡನೇ ಹಂತದ ಕಾಶಿ ತಮಿಳು ಸಂಗಮದ ತಮಿಳು ನಿಯೋಗದ 2 ನೇ ತಂಡ 


ಶಿಕ್ಷಕರ ಜೊತೆಗೆ ಇತರ ಜನರೂ ಸೇರಿದಂತೆ ಸುಮಾರು 250 ಜನರನ್ನೊಳಗೊಂಡ ತಂಡ (ಪವಿತ್ರ ನದಿಯ ಯಮುನಾ ಹೆಸರಿಡಲಾಗಿದೆ) ಅಂದರೆ ತಮಿಳು ನಿಯೋಗದ ಎರಡನೇ ಬ್ಯಾಚ್ ಇಂದು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿತು. 

ಪ್ರತಿನಿಧಿಗಳು ಗಂಗಾ ತೀರ, ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಸ್ಥಾನಗಳು ಮತ್ತು ಅನ್ನಪೂರ್ಣ ಭವನಕ್ಕೆ ಭೇಟಿ ನೀಡಿದರು.

Posted On: 19 DEC 2023 3:47PM by PIB Bengaluru

ಕಾಶಿ ತಮಿಳು ಸಂಗಮದ ಎರಡನೇ ಹಂತವು ಡಿಸೆಂಬರ್ 30, 2023 ರವರೆಗೆ ಮುಂದುವರಿಯುತ್ತದೆ. ಕಳೆದ ವರ್ಷ, ಕಾಶಿ ತಮಿಳು ಸಂಗಮದ ಮೊದಲ ಹಂತವನ್ನು ನವೆಂಬರ್ 16 ರಿಂದ ಡಿಸೆಂಬರ್ 16, 2022 ರವರೆಗೆ ಆಯೋಜಿಸಲಾಗಿತ್ತು. ತಮಿಳುನಾಡಿನ ವಿವಿಧ ಭಾಗಗಳಿಂದ ಪ್ರಯಾಣಿಸುವ, ಜೀವನದ ವಿವಿಧ ಮಜಲುಗಳನ್ನು ಪ್ರತಿನಿಧಿಸುವ ಸುಮಾರು 1400 (ಪ್ರತಿ 200 ವ್ಯಕ್ತಿಗಳ 7 ಗುಂಪುಗಳು) ಜನರು ಭಾಗವಹಿಸುವ ನಿರೀಕ್ಷೆಯಿದೆ. ಅವರು ಕಾಶಿಯಲ್ಲಿ ತಂಗುವ ಅವಧಿಯಲ್ಲಿ, ಪೂರ್ವನಿರ್ಧರಿತ ಪ್ರವಾಸದ ರೂಪ ರೇಷೆ ಪ್ರಕಾರ, ಅವರು ಪ್ರಯಾಗ್ರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡುತ್ತಾರೆ. 

***



(Release ID: 1988261) Visitor Counter : 58