ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕಾಶಿ ತಮಿಳು ಸಂಗಮಮ್-2023ಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ತಮಿಳು ನಿಯೋಗದ ಮೊದಲ ಗುಂಪು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ
ವಿದ್ಯಾರ್ಥಿಗಳ ಗುಂಪಿಗೆ ಪವಿತ್ರ ನದಿ 'ಗಂಗಾ' ಗುಂಪು ಎಂದು ನಾಮಕರಣ
Posted On:
17 DEC 2023 1:05PM by PIB Bengaluru
ಕಾಶಿ ತಮಿಳು ಸಂಗಮದ ಎರಡನೇ ಆವೃತ್ತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಜೆ ವಾರಾಣಸಿಯ ನಮೋ ಘಾಟ್‌ನಲ್ಲಿ ಉದ್ಘಾಟಿಸಲಿದ್ದಾರೆ. ತಮಿಳುನಾಡಿನ ವಿವಿಧ ಭಾಗಗಳ ವಿದ್ಯಾರ್ಥಿಗಳ ಗುಂಪಿಗೆ ಪವಿತ್ರ ನದಿ ‘ಗಂಗಾ’ ಹೆಸರು ಇಡಲಾಗಿದ್ದು, ಈ ನಿಯೋಗದ ಮೊದಲ ಬ್ಯಾಚ್ ಇಂದು 15 ದಿನಗಳ ಕಾಲ ನಡೆಯುವ ಎರಡನೇ ಹಂತದ ಕಾಶಿ ತಮಿಳು ಸಂಗಮಮ್ ನಲ್ಲಿ ಪಾಲ್ಗೊಳ್ಳಲು ಪವಿತ್ರ ನಗರ ಕಾಶಿಗೆ (ವಾರಣಾಸಿ) ಆಗಮಿಸಿದೆ. ಈಗಾಗಲೇ ತಂಡವು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದೆ. ವಾರಾಣಸಿ ಕ್ಯಾಂಪ್ ಗೆ ಆಗಮಿಸಿದ್ದು, ಇದಕ್ಕೂ ಮೊದಲು ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಗುಂಪು ಪ್ರಯಾಗರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಲಿದೆ.
ಶಿಕ್ಷಕರು (ಯಮುನಾ), ವೃತ್ತಿಪರರು (ಗೋದಾವರಿ), ಆಧ್ಯಾತ್ಮಿಕ (ಸರಸ್ವತಿ), ರೈತರು ಮತ್ತು ಕುಶಲಕರ್ಮಿಗಳು (ನರ್ಮದಾ), ಬರಹಗಾರರು (ಸಿಂಧು) ಮತ್ತು ವ್ಯಾಪಾರಿಗಳು ಮತ್ತು ಉದ್ಯಮಿಗಳು (ಕಾವೇರಿ) ಸೇರಿದಂತೆ ಇನ್ನೂ ಆರು ಗುಂಪುಗಳು ಈ ತಮಿಳು ಸಂಗಮಮ್ ನಲ್ಲಿ ಭಾಗವಹಿಸಲು ಕಾಶಿಗೆ ಆಗಮಿಸಲಿವೆ.
ಕೇಂದ್ರ ಶಿಕ್ಷಣ ಸಚಿವಾಲಯವು ಸಂಸ್ಕೃತಿ, ಪ್ರವಾಸೋದ್ಯಮ, ರೈಲ್ವೆ, ಜವಳಿ, ಆಹಾರ ಸಂಸ್ಕರಣೆ (ODOP), MSME, ಮಾಹಿತಿ ಮತ್ತು ಪ್ರಸಾರ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, IRCTC ಮತ್ತು ಸಂಬಂಧಿತ ಸಚಿವಾಲಯಗಳು ಹಾಗೂ ಉತ್ತರ ಪ್ರದೇಶ ಸರ್ಕಾರಿ ಇಲಾಖೆಗಳು ಈ ಕಾರ್ಯಕ್ರಮಕ್ಕೆ ನೋಡಲ್ ಏಜೆನ್ಸಿಯಾಗಿವೆ.
ಜನರಿಂದ-ಜನರ ಸಂಪರ್ಕ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಕಾಶಿ ಮತ್ತು ತಮಿಳುನಾಡು ನಡುವಿನ ಬಂಧಗಳನ್ನು ಪುನರುಜ್ಜೀವನಗೊಳಿಸುವುದಾಗಿದೆ. ಪ್ರಾಚೀನ ಭಾರತದಲ್ಲಿ ಕಲಿಕೆ ಮತ್ತು ಸಂಸ್ಕೃತಿಯ ಎರಡು ಪ್ರಮುಖ ಕೇಂದ್ರಗಳಾಗಿವೆ. ಈ ಎರಡು ಪ್ರದೇಶಗಳ ಜನರ ನಡುವೆ ಹಂಚಿಕೆಯ ಪರಂಪರೆಯ ತಿಳಿವಳಿಕೆ ಮತ್ತು ಸಂಬಂಧಗಳನ್ನು ಬಲಪಡಿಸುವ, ಜ್ಞಾನ ಮತ್ತು ಸಂಸ್ಕೃತಿಯ ಎರಡು ಸಂಪ್ರದಾಯಗಳನ್ನು ಒಗ್ಗೂಡಿಸುವ ಪ್ರಯತ್ನವೂ ಇದಾಗಿದೆ. ಈ ಹಬ್ಬವು ಎರಡು ಸಂಸ್ಕೃತಿಗಳ ನಡುವಿನ ಪ್ರಾಚೀನ ಬೌದ್ಧಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಕುಶಲಕರ್ಮಿಗಳ ಸಂಪರ್ಕವನ್ನು ಪುನರುಜ್ಜೀವನಗೊಳಿಸುವ ಮತ್ತು ಬಲಪಡಿಸುವ ಉದ್ದೇಶವನ್ನು ಹೊಂದಿದೆ. 15 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ತಮಿಳುನಾಡು ಮತ್ತು ವಾರಣಾಸಿಯ ವಿವಿಧ ಸಾಂಸ್ಕೃತಿಕ ತಂಡಗಳು ಕಾಶಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿವೆ.
ಕಲೆ ಮತ್ತು ಸಂಸ್ಕೃತಿ, ಕೈಮಗ್ಗ, ಕರಕುಶಲ ವಸ್ತುಗಳು, ತಿನಿಸು ಮತ್ತು ತಮಿಳುನಾಡು ಮತ್ತು ಕಾಶಿಯ ಇತರ ವಿಶೇಷ ಉತ್ಪನ್ನಗಳನ್ನು ಪ್ರದರ್ಶಿಸುವ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಕಾಶಿಯ ನಮೋ ಘಾಟ್‌ನಲ್ಲಿ ತಮಿಳುನಾಡು ಮತ್ತು ಕಾಶಿಯ ಸಂಸ್ಕೃತಿಗಳನ್ನು ಸಂಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಕಾರ್ಯಕ್ರಮದ ಸಂಪೂರ್ಣ ಅವಧಿಯಲ್ಲಿ, ಸಾಹಿತ್ಯ, ಪ್ರಾಚೀನ ಗ್ರಂಥಗಳು, ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಸಂಗೀತ, ನೃತ್ಯ, ನಾಟಕ, ಯೋಗ, ಆಯುರ್ವೇದ, ಕೈಮಗ್ಗ, ಕರಕುಶಲ ಮುಂತಾದ ಜ್ಞಾನದ ವಿವಿಧ ಅಂಶಗಳ ಕುರಿತು ವಿಚಾರಗೋಷ್ಠಿಗಳು, ಚರ್ಚೆಗಳು, ಉಪನ್ಯಾಸಗಳು ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ನಾವೀನ್ಯತೆ, ವ್ಯಾಪಾರ ವಿನಿಮಯಗಳು, EdTech ಮತ್ತು ಮುಂದಿನ-ಪೀಳಿಗೆಯ ತಂತ್ರಜ್ಞಾನಗಳ ವಿನಿಮಯಕ್ಕೂ ವೇದಿಕೆ ಕಲ್ಪಿಸಲಾಗಿದೆ. ತಜ್ಞರು ಮತ್ತು ವಿದ್ವಾಂಸರು, ತಮಿಳುನಾಡು ಮತ್ತು ಕಾಶಿಯ ವಿವಿಧ ವಿಭಾಗಗಳು/ವೃತ್ತಿಗಳ ಸ್ಥಳೀಯ ವೃತ್ತಿಗಾರರು ಸಹ ಈ ವಿಶೇಷ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಕಲಿಕೆಯಿಂದ ಪ್ರಾಯೋಗಿಕ ಜ್ಞಾನ/ನಾವೀನ್ಯತೆ ಹೊರಹೊಮ್ಮುತ್ತದೆ.
ತಮಿಳುನಾಡಿನ ನಿಯೋಗದ ಹೊರತಾಗಿ, ಕಾಶಿಯ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
***
(Release ID: 1987450)
Visitor Counter : 75