ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಎಸೆತದಲ್ಲಿ ದಾಖಲೆ ನಿರ್ಮಿಸುವ ಮೂಲಕ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ನಲ್ಲಿ ಗಮನ ಸೆಳೆದ ಏಶ್ಯನ್ ಗೇಮ್ಸ್ ತಾರೆ ಪ್ರಣವ್ ಸೂರ್ಮಾ
ಶೂಟಿಂಗ್ ಪದಕ ಸುತ್ತುಗಳು ಪ್ರಾರಂಭವಾಗುತ್ತಿದ್ದಂತೆ ಏಷ್ಯನ್ ಗೇಮ್ಸ್ ನಲ್ಲಿ ಕ್ಲಬ್ ಥ್ರೋನಲ್ಲಿ ಚಿನ್ನ ಗೆದ್ದ ಸೂರ್ಮಾ
Posted On:
13 DEC 2023 6:49PM by PIB Bengaluru
ಹರಿಯಾಣದ ಪ್ರಣವ್ ಸೂರ್ಮಾ ಅವರು ಏಷ್ಯಾ ಪ್ಯಾರಾ ಗೇಮ್ಸ್ ನ ಎಫ್ 51 ವಿಭಾಗದ ಪುರುಷರ ಕ್ಲಬ್ ಥ್ರೋನಲ್ಲಿ (ಮರದ ರಚನೆಯ ಕ್ಲಬ್ ಎಸೆತದಲ್ಲಿ) ಚಿನ್ನ ಗೆದ್ದಿದ್ದಾರೆ. ಜೆಎಲ್ಎನ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023ರಲ್ಲಿ ಹರಿಯಾಣದ ಅಥ್ಲೀಟ್ 33.54 ಮೀಟರ್ ದೂರಕ್ಕೆ ಮರದ ಕ್ಲಬ್ ಎಸೆದರು. ಹ್ಯಾಂಗ್ಝೌನಲ್ಲಿ ನಡೆದ ಸ್ಪರ್ಧೆಯಲ್ಲಿ ಸೂರ್ಮಾ 30.01 ಮೀಟರ್ ದೂರಕ್ಕೆ ಎಸೆದು ಚಿನ್ನ ಗೆದ್ದಿದ್ದರು. ಭಾರತದ ಧರಂಬೀರ್ 31.09 ಮೀಟರ್ ದೂರ ಎಸೆದು ಏಷ್ಯನ್ ದಾಖಲೆ ನಿರ್ಮಿಸಿದ್ದರು.ಅದು ಇದುವರೆಗಿನ ದಾಖಲೆಯಾಗಿತ್ತು.
ಪ್ಯಾರಾ ಸ್ಪೋರ್ಟ್ಸ್ನಲ್ಲಿ ಪ್ರಣವ್ ಸೂರ್ಮಾ ಅವರ ಪ್ರಯಾಣ ಪಥವು ಅವರ ನಂಬಲಾಗದ ರೋಮಾಂಚಕ ದೃಢನಿಶ್ಚಯ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಗಮನಾರ್ಹ ಸಾಕ್ಷಿಯಾಗಿದೆ. 16 ನೇ ವಯಸ್ಸಿನಲ್ಲಿ, ಅವರು ಜೀವನವನ್ನು ಅಸ್ತವ್ಯಸ್ತ ಮಾಡುವಂತಹ ಅಪಘಾತವನ್ನು ಸಹಿಸಿಕೊಂಡರು, ಅದು ಬೆನ್ನುಹುರಿ ಗಾಯ ಉಂಟು ಮಾಡಿತು ಮತ್ತು ಪಾರ್ಶ್ವವಾಯುವಿಗೆ ಕಾರಣವಾಯಿತು. 2018ರಲ್ಲಿ, ಅವರು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸುವಂತಹ ಧೈರ್ಯಶಾಲಿ ನಿಲುವನ್ನು ತಳೆದರು.
ಸೂರ್ಮಾ ಚಿನ್ನ ಗೆದ್ದ ಇದೇ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ರಾಮ್ ರತನ್ ಸಿಂಗ್ 25.43 ಮೀಟರ್ ಎಸೆದು ಬೆಳ್ಳಿ ಗೆದ್ದರೆ, ತಮಿಳುನಾಡಿನ ಅಲೆಕ್ಸಾಂಡರ್ ಎಂ 25.28 ಮೀಟರ್ ಎಸೆದು ಕಂಚಿನ ಪದಕ ಗೆದ್ದರು.
ಡಾ.ಕರ್ಣಿ ಸಿಂಗ್ ಶೂಟಿಂಗ್ ವಲಯದಲ್ಲಿ ಶೂಟಿಂಗ್ ನಲ್ಲಿ ಪದಕದ ಸುತ್ತುಗಳು ಪ್ರಾರಂಭವಾದವು. ಎಸ್ಎಚ್ 2 ವಿಭಾಗದಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸಿದ ಅನುಭವಿ ತಾರೆ ವಿಜಯ್ ಸಿಂಗ್ ಕುಂಟಾಲ್ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಒಟ್ಟು 618.3 ಅಂಕಗಳೊಂದಿಗೆ ಚಿನ್ನ ಗೆದ್ದರು.
ಈ ಹಿಂದೆ ಪ್ಯಾರಾ ನ್ಯಾಷನಲ್ ನಲ್ಲಿ ಗಡಿ ಭದ್ರತಾ ಪಡೆಗಾಗಿ ಪದಕಗಳನ್ನು ಗೆದ್ದಿರುವ ವಿಜಯ್ ಅವರನ್ನು ಅನುಸರಿಸಿದ ತೆಲಂಗಾಣದ ಸತ್ಯ ಜನಾರ್ಧನ ಶ್ರೀಧರ್ ರಾಯಲಾ (607.5 ಅಂಕಗಳೊಂದಿಗೆ ಬೆಳ್ಳಿ) ಮತ್ತು ಪಂಜಾಬಿನ ದಲ್ಬೀರ್ ಸಿಂಗ್ (604.3 ಅಂಕಗಳೊಂದಿಗೆ ಕಂಚು) ನಂತರದ ಸ್ಥಾನಗಳಲ್ಲಿದ್ದಾರೆ.
ಬುಧವಾರ ಇನ್ನೂ ಮೂರು ಚಿನ್ನ ಲಭಿಸಿದವು.
10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ವುಮೆನ್ ಎಸ್ಎಚ್ -1 ವಿಭಾಗದಲ್ಲಿ ರಾಜಸ್ಥಾನದ ಮೋನಾ ಅಗರ್ವಾಲ್ ಒಟ್ಟು 619.7 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಹರಿಯಾಣದ ಸಿಮ್ರಾನ್ ಶರ್ಮಾ 606.5 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಉತ್ತರ ಪ್ರದೇಶ ಮೂಲದ ಆಕಾಂಶಾ 604.6 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
ಎಸ್ಎಚ್ 1 ವಿಭಾಗದ 10 ಮೀಟರ್ ಏರ್ ರೈಫಲ್ನಲ್ಲಿ ಮಹಾರಾಷ್ಟ್ರದ ಸ್ವರೂಪ್ ಉನ್ಹಾಲ್ಕರ್ 243.8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಹರಿಯಾಣದ ದೀಪಕ್ ಸೈನಿ 242.9 ಅಂಕಗಳೊಂದಿಗೆ ಬೆಳ್ಳಿ ಗೆದ್ದರು, ಹರಿಯಾಣದವರೇ ಆದ ಇಶಾಂಕ್ ಅಹುಜಾ ಕಂಚಿನ ಪದಕ ಗೆದ್ದರು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಟ್ಯಾಂಡಿಂಗ್ ಎಸ್ಎಚ್ -1 ರಲ್ಲಿ ಮಧ್ಯಪ್ರದೇಶದ ರುಬಿನಾ ಫ್ರಾನ್ಸಿಸ್ ಒಟ್ಟು 233.1 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಉತ್ತರ ಪ್ರದೇಶದ ಸುಮೇಧಾ ಪಾಠಕ್ ಒಟ್ಟು 229.2 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ದೆಹಲಿಯ ಭಕ್ತಿ ಶರ್ಮಾ ಒಟ್ಟು 207.8 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು.
ಪವರ್ ಲಿಫ್ಟಿಂಗ್:
ಪ್ಯಾರಾ ಪವರ್ ಲಿಫ್ಟಿಂಗ್ 61 ಕೆಜಿ ಎಲೈಟ್ ವಿಭಾಗದಲ್ಲಿ ಪಂಜಾಬ್ ನ ಸೀಮಾ ರಾಣಿ 88 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದರು. ಉತ್ತರ ಪ್ರದೇಶದ ಝೈನಬ್ ಖತೂನ್ (80 ಕೆಜಿ) ಮತ್ತು ತಮಿಳುನಾಡಿನ ಎಂ.ನಾಥಿಯಾ (72 ಕೆಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ಎಲೈಟ್ 59 ಕೆಜಿ ವಿಭಾಗದಲ್ಲಿ ಒಡಿಶಾದ ಗದಾಧರ್ ಸಾಹು ಒಟ್ಟು 140 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದರು. ಕೇರಳದ ಜೋಬಿ ಮ್ಯಾಥ್ಯೂ (137 ಕೆಜಿ) ಬೆಳ್ಳಿ ಗೆದ್ದರೆ, ದಿಲ್ಲಿಯ ಗುಲ್ಫಾಮ್ ಅಹ್ಮದ್ (134 ಕೆಜಿ) ಕಂಚಿನ ಪದಕ ಗೆದ್ದರು.
ಎಲೈಟ್ 55 ಕೆಜಿ ವಿಭಾಗದಲ್ಲಿ ಹರಿಯಾಣದ ಸುಮನ್ ದೇವಿ 87 ಕೆಜಿ ವಿಭಾಗದಲ್ಲಿ ಉತ್ತಮ ಪ್ರಯತ್ನ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ವಿಭಾಗದಲ್ಲಿ ಅವರ ಸಾಧನೆ ಅತ್ಯುತ್ತಮವಾಗಿತ್ತು. ದಿಲ್ಲಿಯ ರಾಜ್ ಕುಮಾರಿ (70 ಕೆಜಿ) ಬೆಳ್ಳಿ ಮತ್ತು ತಮಿಳುನಾಡಿನ ಗೋಮತಿ (66 ಕೆಜಿ) ಕಂಚಿನ ಪದಕ ಗೆದ್ದರು.
****
(Release ID: 1986126)
Visitor Counter : 90