ಸಂಸದೀಯ ವ್ಯವಹಾರಗಳ ಸಚಿವಾಲಯ
ಯುವ ಸಂಸತ್ ಸ್ಪರ್ಧೆಗಳಿಗೆ ಖರ್ಚು ಮಾಡಿದ ಹಣ
Posted On:
13 DEC 2023 3:01PM by PIB Bengaluru
ಸಂಸದೀಯ ವ್ಯವಹಾರಗಳ ಸಚಿವಾಲಯವು ದೇಶಾದ್ಯಂತದ ಶಾಲೆಗಳಲ್ಲಿ ಈ ಕೆಳಗಿನ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸುತ್ತದೆ:-
- ದಿಲ್ಲಿಯ ಎನ್ಸಿಟಿ ಸರಕಾರದ ಶಿಕ್ಷಣ ನಿರ್ದೇಶನಾಲಯ ಮತ್ತು ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಅಡಿಯಲ್ಲಿ ಬರುವ ಶಾಲೆಗಳಿಗೆ ಯುವ ಸಂಸತ್ ಸ್ಪರ್ಧೆಗಳು.
- ಕೇಂದ್ರೀಯ ವಿದ್ಯಾಲಯಗಳಿಗಾಗಿ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆ
- ಜವಾಹರ್ ನವೋದಯ ವಿದ್ಯಾಲಯಗಳಿಗಾಗಿ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆ.
ಯೋಜನೆಗಳ ಪ್ರಕಾರ, ಪ್ರತಿಯೊಂದು ಸ್ಪರ್ಧೆಗಳನ್ನು ಆಯಾ ಪೋಷಕ ಶಿಕ್ಷಣ ಸಂಸ್ಥೆಗಳಿಂದ ನಾಮನಿರ್ದೇಶನಗೊಂಡ ಭಾಗವಹಿಸುವ ಶಾಲೆಗಳ ನಡುವೆ ಆಯೋಜಿಸಲಾಗುತ್ತದೆ. ಅಂದರೆ ಶಿಕ್ಷಣ ನಿರ್ದೇಶನಾಲಯ, ದಿಲ್ಲಿ ಸರ್ಕಾರದ ಎನ್ಸಿಟಿ ಮತ್ತು ಶಿಕ್ಷಣ ಇಲಾಖೆ, ಹೊಸದಿಲ್ಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ); ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿ. ಶಾಲೆಗಳು ಇದರಲ್ಲಿ ಸೇರಿರುತ್ತವೆ. ತಮ್ಮ ಸಾಂಸ್ಥಿಕ ರಚನೆಗೆ ಅನುಗುಣವಾಗಿ ಮಾತೃ ಶಿಕ್ಷಣ ಸಂಸ್ಥೆಗಳು ಶಾಲೆಗಳನ್ನು ನಾಮನಿರ್ದೇಶನ ಮಾಡುತ್ತವೆಯೇ ಹೊರತು ರಾಜ್ಯವಾರು ಅಲ್ಲ
ಕಳೆದ ಐದು ವರ್ಷಗಳಲ್ಲಿ ಭಾಗವಹಿಸಿದ ಶಾಲೆಗಳ ವಿವರಗಳು ಈ ಕೆಳಗಿನಂತಿವೆ:-
ಕ್ರಮ ಸಂಖ್ಯೆ
|
ವರ್ಷ
|
ಭಾಗವಹಿಸಿದ ಸಂಸ್ಥೆಗಳ ಸಂಖ್ಯೆ
|
|
|
|
ದಿಲ್ಲಿ ಶಾಲೆಗಳು
|
ಕೆ.ವಿ.ಗಳು
|
ಜೆ.ವಿ.ಗಳು
|
|
1
|
2018-19
|
33
|
125
|
64
|
|
2
|
2019-20
|
31
|
125
|
64
|
|
3
|
2020-21
|
ಕೋವಿಡ್ – 19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ಸಂಘಟಿಸಲಾಗಿಲ್ಲ.
|
|
4
|
2021-22
|
|
5
|
2022-23
|
39
|
150
|
80
|
|
|
|
|
|
|
|
ಕಳೆದ ಐದು ವರ್ಷಗಳಲ್ಲಿ ಶಾಲೆಗಳಲ್ಲಿ ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸಲು ಸಂಸದೀಯ ವ್ಯವಹಾರಗಳ ಸಚಿವಾಲಯವು ಖರ್ಚು ಮಾಡಿದ ಹಣದ ವಿವರಗಳು ಈ ಕೆಳಗಿನಂತಿವೆ:
ಕ್ರಮ ಸಂಖ್ಯೆ
|
ಹಣಕಾಸು ವರ್ಷ
|
ಸಂಸದೀಯ ವ್ಯವಹಾರಗಳ ಸಚಿವಾಲಯವು ಖರ್ಚು ಮಾಡಿದ ನಿಧಿ (ರೂ.ಗಳಲ್ಲಿ)
|
1
|
2018-19
|
26,43,150/-
|
2
|
2019-20
|
35,69,837/-
|
3
|
2020-21
|
6,78,086/-
|
4
|
2021-22
|
40,000/-
|
5
|
2022-23
|
3,84,557/-
|
ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಲು, ಶಿಸ್ತಿನ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಲು, ಇತರರ ಅಭಿಪ್ರಾಯಗಳ ಬಗ್ಗೆ ಸಹಿಷ್ಣುತೆಯನ್ನು ಬೆಳೆಸಲು ಮತ್ತು ವಿದ್ಯಾರ್ಥಿ ಸಮುದಾಯವು ಸಂಸತ್ತಿನ ಕಾರ್ಯಚಟುವಟಿಕೆಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಸಂಸದೀಯ ವ್ಯವಹಾರಗಳ ಸಚಿವಾಲಯವು ಯುವ ಸಂಸತ್ ಸ್ಪರ್ಧೆಗಳನ್ನು ಆಯೋಜಿಸುತ್ತದೆ.
ಈ ಮಾಹಿತಿಯನ್ನು ಕಾನೂನು ಮತ್ತು ನ್ಯಾಯ ಸಚಿವಾಲಯದ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ) ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು; ಹಾಗು ಸಂಸ್ಕೃತಿ ಸಚಿವಾಲಯದ ಸಹಾಯಕ ಸಚಿವರೂ ಆದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(Release ID: 1985923)
Visitor Counter : 58