ಕಾನೂನು ಮತ್ತು ನ್ಯಾಯ ಸಚಿವಾಲಯ
ವರ್ಷದ ಮೆಲುಕು- 2023: ನ್ಯಾಯಾಂಗ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯ
2023-2024ನೇ ಸಾಲಿನಲ್ಲಿ ʻಟೆಲಿ-ಲಾʼ ಸೇವೆಯನ್ನು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 766 ಜಿಲ್ಲೆಗಳಲ್ಲಿ (112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸೇರಿದಂತೆ) 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಲಾಗಿದೆ
ಹೈಕೋರ್ಟ್‌ಗಳಿಗೆ 110 ನ್ಯಾಯಾಧೀಶರ ನೇಮಕ
7,210 ಕೋಟಿ ರೂ.ಗಳ ಆಯವ್ಯಯ ಅನುದಾನದೊಂದಿಗೆ ʻಇ-ಕೋರ್ಟ್ಸ್ ಹಂತ-3ʼಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ತ್ವರಿತಗತಿ ವಿಶೇಷ ನ್ಯಾಯಾಲಯಗಳ (ಎಫ್‌ಟಿಎಸ್‌ಸಿ) ಯೋಜನೆಯನ್ನು 01.04.2023 ರಿಂದ 31.03.2026 ರವರೆಗೆ ಒಟ್ಟು 1952.23 ಕೋಟಿ ರೂ.ಗಳ ವೆಚ್ಚದಲ್ಲಿ ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಲಾಗಿದೆ
Posted On:
12 DEC 2023 4:01PM by PIB Bengaluru
- ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆ:
- ಹೈಕೋರ್ಟ್‌ಗಳಿಗೆ(ಉಚ್ಚ ನ್ಯಾಯಾಲಯ) ನ್ಯಾಯಮೂರ್ತಿಗಳ ನೇಮಕ:
ಅಲಹಾಬಾದ್ (09), ಆಂಧ್ರಪ್ರದೇಶ (06), ಬಾಂಬೆ (09), ಛತ್ತೀಸ್‌ಗಢ (02), ದೆಹಲಿ (05), ಗುವಾಹಟಿ (05), ಗುಜರಾತ್ (08), ಹಿಮಾಚಲ ಪ್ರದೇಶ (03), ಕರ್ನಾಟಕ (05), ಕೇರಳ (03), ಮಧ್ಯಪ್ರದೇಶ (14), ಮದ್ರಾಸ್ (13), ಮಣಿಪುರ (02), ಮೇಘಾಲಯ (01), ಒಡಿಶಾ (02), ಪಾಟ್ನಾ (02), ಪಂಜಾಬ್ ಮತ್ತು ಹರಿಯಾಣ (04), ರಾಜಸ್ಥಾನ (09), ತೆಲಂಗಾಣ(03), ತ್ರಿಪುರಾ(02), ಉತ್ತರಾಖಂಡ(03).
- ಹೈಕೋರ್ಟ್‌ಗಳಲ್ಲಿ 72 ಹೆಚ್ಚುವರಿ ನ್ಯಾಯಾಧೀಶರನ್ನು ಖಾಯಂ ನ್ಯಾಯಾಧೀಶರನ್ನಾಗಿ ಮಾಡಲಾಗಿದೆ: ಅಲಹಾಬಾದ್ (17), ಬಾಂಬೆ (09), ಕಲ್ಕತ್ತಾ (04), ಛತ್ತೀಸ್‌ಗಢ (01), ದೆಹಲಿ (01), ಗುವಾಹಟಿ (06), ಕರ್ನಾಟಕ (02), ಕೇರಳ (05), ಮದ್ರಾಸ್ (10), ಪಂಜಾಬ್ ಮತ್ತು ಹರಿಯಾಣ (17).
- ಹೈಕೋರ್ಟ್‌ಗಳ 02 ಹೆಚ್ಚುವರಿ ನ್ಯಾಯಾಧೀಶರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿದೆ: ಬಾಂಬೆ (01) ಮತ್ತು ಕರ್ನಾಟಕ (01)
- ಹೈಕೋರ್ಟ್‌ಗಳಿಗೆ 22 ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ: ಅಲಹಾಬಾದ್, ಆಂಧ್ರಪ್ರದೇಶ, ಬಾಂಬೆ, ಕಲ್ಕತ್ತಾ, ಛತ್ತೀಸ್‌ಗಢ, ಗುವಾಹಟಿ, ಗುಜರಾತ್, ಜಾರ್ಖಂಡ್, ಜಮ್ಮ-ಕಾಶ್ಮೀರ ಮತ್ತು ಲಡಾಖ್, ಹಿಮಾಚಲ ಪ್ರದೇಶ, ಕೇರಳ, ಮದ್ರಾಸ್, ಮಣಿಪುರ, ಒರಿಸ್ಸಾ, ಪಾಟ್ನಾ, ರಾಜಸ್ಥಾನ, ತೆಲಂಗಾಣ, ತ್ರಿಪುರ ಮತ್ತು ಉತ್ತರಾಖಂಡ
- 34 ಹೈಕೋರ್ಟ್ ನ್ಯಾಯಾಧೀಶರನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.
- ಟೆಲಿ-ಲಾ:
- 2023-2024ನೇ ಸಾಲಿನಲ್ಲಿ ʻಟೆಲಿ-ಲಾʼ ಯೋಜನೆಯನ್ನು ಅನ್ನು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 766 ಜಿಲ್ಲೆಗಳಲ್ಲಿ (112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸೇರಿದಂತೆ) 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸಲಾಗಿದೆ. ವ್ಯಾಜ್ಯ ಪೂರ್ವ ಸಲಹೆಗಳನ್ನು ನೀಡಲು ಸುಮಾರು 700ವಕೀಲರನ್ನು ನೇಮಿಸಲಾಯಿತು. ನವೆಂಬರ್ 30, 2023ರ ಹೊತ್ತಿಗೆ, 24 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕಾನೂನು ಸಲಹೆ ಮತ್ತು ಸಮಾಲೋಚನೆಯನ್ನು ಒದಗಿಸಲಾಗಿದೆ.
- ಜಿಲ್ಲಾ ಮಟ್ಟದ ಕಾರ್ಯಾಗಾರ - ʻಟೆಲಿ-ಲಾʼ ರಾಜ್ಯ ತಂಡವು ದೇಶಾದ್ಯಂತ 100 ಜಿಲ್ಲಾ ಮಟ್ಟದ ಕಾರ್ಯಾಗಾರಗಳನ್ನು ಆಯೋಜಿಸಿದೆ, ಈ ಕಾರ್ಯಾಗಾರಗಳಲ್ಲಿ ಗ್ರಾಮ ಮಟ್ಟದ ಉದ್ಯಮಿಗಳು (ವಿಎಲ್ಇ), ಅರೆ ನ್ಯಾಯಾಂಗ ಸ್ವಯಂಸೇವಕರು (ಪಿಎಲ್‌ವಿ), ಸರ್ಕಾರಿ ಅಧಿಕಾರಿಗಳು ಮತ್ತು ʻಎಸ್ಎಲ್ಎಸ್ಎʼಗಳು / ʻಡಿಎಲ್ಎಸ್ಎʼಗಳ ಸದಸ್ಯರು ಸೇರಿದಂತೆ 5500ಕ್ಕೂ ಹೆಚ್ಚು ಪಾಲುದಾರರು ಭಾಗವಹಿಸಿದ್ದರು. ʻಟೆಲಿ-ಲಾʼ ಅನುಷ್ಠಾನ, ʻಟೆಲಿ-ಲಾʼ ಯೋಜನೆಯ ಬಗ್ಗೆ ಜಾಗೃತಿ ಮತ್ತು ʻಟೆಲಿ-ಲಾ ನಾಗರಿಕರ ಮೊಬೈಲ್ ತಂತ್ರಾಂಶʼ ಕುರಿತು ಶಿಬಿರಗಳನ್ನು ನಡೆಸಲಾಯಿತು.
- ʻವಿಎಲ್ಇʼಗಳಿಂದ ವಿಶೇಷ ಜಾಗೃತಿ ಅಭಿಯಾನ: ʻಟೆಲಿ-ಲಾʼ ಯೋಜನೆಯ ಬಗ್ಗೆ ಜಾಗೃತಿ ಕಡಿಮೆ ಇರುವ ಅಥವಾ ಶೂನ್ಯ ಜಾಗೃತಿ ಇರುವ ತಮ್ಮ ವ್ಯಾಪ್ತಿಯ ಪ್ರದೇಶಗಳಲ್ಲಿ ವಿಶೇಷ ಜಾಗೃತಿ ಶಿಬಿರಗಳನ್ನು ನಡೆಸಲು ʻಟೆಲಿ-ಲಾ ವಿಎಲ್ಇʼಗಳು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ʻಟೆಲಿ-ಲಾʼ ಬಗ್ಗೆ ಜಾಗೃತಿ ಮೂಡಿಸಲು ʻಇ-ರಿಕ್ಷಾʼ, ಮೊಬೈಲ್ ವ್ಯಾನ್‌ಗಳು, ಆಟೋರಿಕ್ಷಾ, ಮೋಟಾರ್ ಸೈಕಲ್, ಬೈಸಿಕಲ್ ಮುಂತಾದ ವಿವಿಧ ಸಾರಿಗೆ ವಿಧಾನಗಳನ್ನು ಬಳಸುವ ಮೂಲಕ ʻವಿಎಲ್‌ಇʼಗಳು ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ. ಜಾಗೃತಿ ಶಿಬಿರಗಳಲ್ಲಿ 12000ಕ್ಕೂ ನಾಗರಿಕರು ಭಾಗವಹಿಸಿದ್ದರು.
- 2023ರ ಜೂನ್ 26ರಿಂದ ಜುಲೈ 2ರವರೆಗೆ ʻಟೆಲಿ-ಲಾʼ ಪೋರ್ಟಲ್‌ನಲ್ಲಿ ʻಟೆಲಿ-ಲಾʼ ಯೋಜನೆಯಡಿಯಲ್ಲಿ ದಾಖಲಾದ 1.5 ಲಕ್ಷ ವಿಚಾರಣೆ ನಡೆಸದ ಮತ್ತು ಬಾಕಿ ಇರುವ ಪ್ರಕರಣಗಳನ್ನು ತಲುಪಲು ವಿಶೇಷ ʻಹಿಂಬಾಕಿ ಇತ್ಯರ್ಥ ಅಭಿಯಾನʼವನ್ನು ಪ್ರಾರಂಭಿಸಲಾಯಿತು, ಅಲ್ಲಿ 1,05,771ಕ್ಕೂ ಹೆಚ್ಚು ಪ್ರಕರಣಗಳನ್ನು ʻಟೆಲಿ-ಲಾʼ ತಂಡದ ವಕೀಲರು ಒದಗಿಸಿದರು.
- ಸೆಲ್ಫಿ ಡ್ರೈವ್ ಅಭಿಯಾನ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜಾಗೃತಿ ಮೂಡಿಸಲು ಈ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. ಇದರ ಭಾಗವಾಗಿ, ಫಲಾನುಭವಿಗಳು ಮತ್ತು ಕ್ಷೇತ್ರ ಕಾರ್ಯಕರ್ತರು (ವಿಎಲ್ಇ ಮತ್ತು ಪ್ಯಾನಲ್ ವಕೀಲರು) ಸೆಲ್ಫಿ/ವೀಡಿಯೊಗಳ ಮೂಲಕ ʻಟೆಲಿ ಕಾನೂನು ಸೇವೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ನವೆಂಬರ್ 30, 2023ರ ಹೊತ್ತಿಗೆ, ಒಟ್ಟು 217 ಸೆಲ್ಫಿ / ವೀಡಿಯೊಗಳನ್ನು ʻಟೆಲಿ ಲಾʼ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ(ಫೇಸ್‌ಬುಕ್ ಮತ್ತು ಟ್ವಿಟರ್) ಅಪ್ಲೋಡ್ ಮಾಡಲಾಗಿದೆ.
- ಹೊಸ ರೇಡಿಯೋ ಜಿಂಗಲ್ ಅಭಿಯಾನ ಪ್ರಾರಂಭ (ಆಗಸ್ಟ್ 1 ರಿಂದ ಆಗಸ್ಟ್ 31, 2023): ʻಆಲ್ ಇಂಡಿಯಾ ರೇಡಿಯೋʼ(201 ಕೇಂದ್ರಗಳು), ವಿವಿಧ್‌ಭಾರತಿ(42 ಕೇಂದ್ರ) ಮತ್ತು ʻಎಫ್ಎಂʼ ರೇಡಿಯೋ (29 ಕೇಂದ್ರ)ಗಳಲ್ಲಿ ಹೊಸ ರೇಡಿಯೋ ಜಿಂಗಲ್ ಬಿಡುಗಡೆ ಮಾಡಲಾಯಿತು ಮತ್ತು ಪ್ರಸಾರವಾಯಿತು.
- 2023ರ ಆಗಸ್ಟ್ 25 ರಂದು ʻಟೆಲಿ-ಲಾ 2.0ʼ (ʻಟೆಲಿ-ಲಾʼ ಮತ್ತು ʻನ್ಯಾಯ ಬಂಧು (ಪ್ರೊ ಬೋನೊ) ಕಾನೂನು ಸೇವೆʼ ಯೋಜನೆಯ ಸಂಯೋಜನೆ) ಉದ್ಘಾಟನೆ ಮತ್ತು 50 ಲಕ್ಷ ಕಾನೂನು ಸಲಹೆಗಳ ಸಾಧನೆ ಕಾರ್ಯಕ್ರಮವನ್ನು ʻಸಿರಿ ಫೋರ್ಟ್ʼ ಸಭಾಂಗಣದಲ್ಲಿ ಗೌರವಾನ್ವಿತ ಕಾನೂನು ಮತ್ತು ನ್ಯಾಯ ಖಾತೆ ಸಹಾಯಕ ಸಚಿವರ (ಸ್ವತಂತ್ರ ಉಸ್ತುವಾರಿ) ಉಪಸ್ಥಿತಿಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ʻಟೆಲಿ-ಲಾʼ ಮತ್ತು ʻನ್ಯಾಯ ಬಂಧು ಸೇವೆʼಗಳ ಸಂಯೋಜನೆಗೆ ಚಾಲನೆ ನೀಡಲಾಯಿತು (ಟೆಲಿ-ಲಾ 2.0). ಅಲ್ಲದೆ, ʻಫಲಾನುಭವಿಗಳ ದನಿʼ(4 ನೇ ಆವೃತ್ತಿ) ಮತ್ತು ಪ್ರಶಸ್ತಿ ವಿಜೇತರ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ದೇಶದ 6 ವಲಯಗಳ 12 ಮುಂಚೂಣಿ ಕಾರ್ಯಕರ್ತರನ್ನು ಮಾನ್ಯ ಸಚಿವರು ಸನ್ಮಾನಿಸಿದರು.
- ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್.ಎ.ಎಲ್.ಎಸ್.ಎ.):
- 2023ರ ಜೂನ್ 30 ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ʻ19ನೇ ಅಖಿಲ ಭಾರತ ಕಾನೂನು ಸೇವೆಗಳ ಪ್ರಾಧಿಕಾರʼದ ಸಭೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ʻರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರʼದ(ಎನ್.ಎ.ಎಲ್.ಎಸ್.ಎ.) ಪೋಷಕ-ಮುಖ್ಯಸ್ಥರಾದ ಡಾ.ಡಿ.ವೈ.
ಚಂದ್ರಚೂಡ್ ಅವರು ಉದ್ಘಾಟಿಸಿದರು. ದಿನಾಂಕ 30, ಜುಲೈ 2023ರಂದು ನಡೆದ 2ನೇ ದಿನದ ಕಾರ್ಯಕ್ರಮವನ್ನು ʻಜಮ್ಮು ಮತ್ತು ಕಾಶ್ಮೀರ ಕಾನೂನು ಸೇವೆಗಳ ಪ್ರಾಧಿಕಾರʼವು ʻರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರʼದ ಆಶ್ರಯದಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳ ಭವಿಷ್ಯದ ಕ್ರಮಗಳು, ಗುರಿಗಳನ್ನು ನಿಗದಿಪಡಿಸುವುದು, ವಿವಿಧ ಸವಾಲುಗಳನ್ನು ಎದುರಿಸುವುದು ಮತ್ತು ದೇಶದಲ್ಲಿ ಕಾನೂನು ನೆರವು ಕಾರ್ಯಕ್ರಮಗಳನ್ನು ಬಲಪಡಿಸಲು ಮತ್ತು ಸುಗಮಗೊಳಿಸಲು ಜಾರಿಗೆ ತರಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
- ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು(ಎನ್.ಎ.ಎಲ್.ಎಸ್.ಎ.), ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಅನುಮೋದನೆ ಮತ್ತು ಭಾರತ ಸರ್ಕಾರದ ಬೆಂಬಲದೊಂದಿಗೆ, ʻಅಂತರರಾಷ್ಟ್ರೀಯ ಕಾನೂನು ಪ್ರತಿಷ್ಠಾನʼ(ಐಎಲ್ಎಫ್), ʻವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮʼ (ಯುಎನ್‌ಡಿಪಿ) ಹಾಗೂ ವಿಶ್ವಸಂಸ್ಥೆ ಮಕ್ಕಳ ನಿಧಿ(ಯುನಿಸೆಫ್) ಸಹಯೋಗದೊಂದಿಗೆ 2023ರ ನವೆಂಬರ್ 27 ಮತ್ತು 28ರಂದು ʻಕಾನೂನು ನೆರವಿಗೆ ಪ್ರವೇಶ: ನ್ಯಾಯದ ಲಭ್ಯತೆಯ ಬಲವರ್ಧನೆʼ ಕುರಿತಾಗಿ ಚೊಚ್ಚಲ ಪ್ರಾದೇಶಿಕ ಸಮ್ಮೇಳನವನ್ನು ಆಯೋಜಿಸಿತು.
ಎರಡು ದಿನಗಳ ಕಾರ್ಯಕ್ರಮದಲ್ಲಿ, ಕಾನೂನು ನೆರವು ಮತ್ತು ನ್ಯಾಯದ ಲಭ್ಯತೆಯ ವಿವಿಧ ವಿಷಯಗಳ ಮೇಲೆ ಒಟ್ಟು 16 ಗೋಷ್ಠಿಗಳನ್ನು ನಡೆಸಲಾಯಿತು. ಜಾಗತಿಕ ದಕ್ಷಿಣದ 40ಕ್ಕೂ ಹೆಚ್ಚು ಆಫ್ರಿಕಾ, ಏಷ್ಯಾ ಮತ್ತು ಪೆಸಿಫಿಕ್ ದೇಶಗಳ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರು, ಸಚಿವರು, ಸಚಿವಾಲಯದ ಹಿರಿಯ ಅಧಿಕಾರಿಗಳು, ಕಾನೂನು ನೆರವು ಸಂಸ್ಥೆಗಳ ಮುಖ್ಯಸ್ಥರು ಮತ್ತು ನಾಗರಿಕ ಸಮಾಜದ ತಜ್ಞರು ಭಾಗವಹಿಸಿದ್ದರು. ಜಾಗತಿಕ ದಕ್ಷಿಣದಲ್ಲಿ ನ್ಯಾಯದ ಲಭ್ಯತೆ ಕುರಿತಾದ ಅತ್ಯಂತ ಒತ್ತಡದ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಹಾಗೂ ಕಾನೂನು ನೆರವು ಮತ್ತು ನ್ಯಾಯ ವ್ಯವಸ್ಥೆಯನ್ನು ಬಲಪಡಿಸಲು ಕ್ರಿಯಾತ್ಮಕ ಫಲಿತಾಂಶಗಳನ್ನು ರೂಪಿಸಲು ನಾಯಕರು ಒಗ್ಗೂಡಿದ ಮೊದಲ ಸಭೆ ಇದಾಗಿದೆ.
- ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆ:
ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ನ್ಯಾಯದ ಲಭ್ಯತೆಯನ್ನು ಸುಧಾರಿಸುವ ಉದ್ದೇಶದಿಂದ ಇʻ-ಕೋರ್ಟ್ಸ್ ಮಿಷನ್ ಮೋಡ್ʼ ಯೋಜನೆಯನ್ನು ಪ್ರಾರಂಭಿಸಲಾಯಿತು. ʻಇ-ಕೋರ್ಟ್ಸ್ ಹಂತ 1ʼರಲ್ಲಿ ನ್ಯಾಯಾಲಯಗಳ ಮೂಲಭೂತ ಗಣಕೀಕರಣ ಮತ್ತು ಸ್ಥಳೀಯ ಸಂಪರ್ಕ ಜಾಲವನ್ನು ಒದಗಿಸುವ ಗುರಿಯನ್ನು ಹೊಂದಲಾಗಿತ್ತು. 2015ರಲ್ಲಿ 1,670 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆಯ ಎರಡನೇ ಹಂತವು ಪ್ರಾರಂಭವಾಯಿತು. ಈ ಪೈಕಿ 1668.43 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಎರಡನೇ ಹಂತದಲ್ಲಿ ಈವರೆಗೆ 18,735 ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳನ್ನು ಗಣಕೀಕರಣಗೊಳಿಸಲಾಗಿದೆ.
ʻಡಬ್ಲ್ಯುಎಎನ್ʼ(WAN) ಯೋಜನೆಯ ಭಾಗವಾಗಿ, ʻಒಎಫ್‌ಸಿ, ʻಆರ್‌ಎಫ್ʼ, ʻವಿಸ್ಯಾಟ್ʼ ಮುಂತಾದ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು 2992 ನ್ಯಾಯಾಲಯ ಸಂಕೀರ್ಣಗಳ ಪೈಕಿ 2977ಕ್ಕೆ (99.4% ಸ್ಥಳಗಳು) 10 ಎಂಬಿಪಿಎಸ್‌ನಿಂದ 100 ಎಂಬಿಪಿಎಸ್ ಬ್ಯಾಂಡ್ವಿಡ್ತ್ ವೇಗದೊಂದಿಗೆ ಸಂಪರ್ಕವನ್ನು ಒದಗಿಸಲಾಗಿದೆ.
ಸ್ಥಿತಿಸ್ಥಾಪಕ ಹುಡುಕಾಟ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾದ ʻರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ʼ(ಎನ್‌ಜಿಡಿಜಿ) ಬಳಸಿಕೊಂಡು, ವಕೀಲರು ಮತ್ತು ಕಕ್ಷಿದಾರರು 24.47 ಕೋಟಿ ಪ್ರಕರಣಗಳ ಹಾಲಿ ಸ್ಥಿತಿ-ಗತಿ ಮಾಹಿತಿಯನ್ನು ಹಾಗೂ 24.13 ಕೋಟಿ ಆದೇಶಗಳು / ತೀರ್ಪುಗಳನ್ನು ನೋಡಬಹುದು.
ಕೋವಿಡ್ ಲಾಕ್‌ಡೌನ್ ಅವಧಿಯಿಂದ, ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಸೇರಿದಂತೆ ಭಾರತದಾದ್ಯಂತ ನ್ಯಾಯಾಲಯಗಳು 2.97 ಕೋಟಿಗೂ ಹೆಚ್ಚು ʻವರ್ಚುವಲ್ ವಿಚಾರಣೆʼಗಳನ್ನು ನಡೆಸಿವೆ, ಇದು ಭಾರತವನ್ನು ವರ್ಚುವಲ್ ವಿಚಾರಣೆಗಳಲ್ಲಿ ವಿಶ್ವ ನಾಯಕನನ್ನಾಗಿ ಮಾಡಿದೆ.
ಗುಜರಾತ್, ಗುವಾಹಟಿ, ಒಡಿಶಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ, ಮಧ್ಯಪ್ರದೇಶ ಹೈಕೋರ್ಟ್‌ಗಳು ಮತ್ತು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ಪ್ರಾರಂಭವಾಗಿದೆ.
ಸಂಚಾರ ಅಪರಾಧಗಳ ವಿಚಾರಣೆಗಾಗಿ 20 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 25 ʻವರ್ಚುವಲ್ ನ್ಯಾಯಾಲಯʼಗಳನ್ನು ಸ್ಥಾಪಿಸಲಾಗಿದೆ. ಈ ನ್ಯಾಯಾಲಯಗಳು 4.11 ಕೋಟಿಗೂ ಹೆಚ್ಚು ಪ್ರಕರಣಗಳನ್ನು ಆಲಿಸಿದ್ದು, 478.69 ಕೋಟಿ ರೂ.ಗಳ ದಂಡವನ್ನು ವಸೂಲಿ ಮಾಡಿವೆ. ʻಎನ್ಐʼ ಕಾಯ್ದೆಯ ಸೆಕ್ಷನ್ 138 ಅಡಿ ಚೆಕ್‌ಬೌನ್ಸ್ ಪ್ರಕರಣಗಳ ವಿಚಾರಣೆಗಾಗಿ ದೆಹಲಿ ಹೈಕೋರ್ಟ್ 34 ಡಿಜಿಟಲ್ ನ್ಯಾಯಾಲಯಗಳನ್ನು ಪ್ರಾರಂಭಿಸಿದೆ.
ಕಾನೂನು ದಾಖಲೆಗಳ ವಿದ್ಯುನ್ಮಾನ ಫೈಲಿಂಗ್‌ಗಾಗಿ ಇ-ಫೈಲಿಂಗ್ ವ್ಯವಸ್ಥೆಯನ್ನು ಹೊರತರಲಾಗಿದೆ. ಇದು ವಕೀಲರಿಗೆ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಯಾವುದೇ ಸ್ಥಳದಿಂದ 24×7 ಪಡೆಯಲು ಮತ್ತು ಅಪ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ, ಇದು ದಾಖಲೆಗಳನ್ನು ಸಲ್ಲಿಸಲು ನ್ಯಾಯಾಲಯಕ್ಕೆ ಬರುವುದನ್ನು ತಪ್ಪಿಸುತ್ತದೆ.
ಪ್ರಕರಣಗಳ ಇ-ಫೈಲಿಂಗ್‌ಗೆ ನ್ಯಾಯಾಲಯದ ಶುಲ್ಕಗಳು ಮತ್ತು ದಂಡಗಳನ್ನು ಒಳಗೊಂಡಂತೆ ಹಣ ಪಾವತಿಗೆ ಎಲೆಕ್ಟ್ರಾನಿಕ್ ಪಾವತಿಯ ಆಯ್ಕೆಯ ಅಗತ್ಯವಿದ್ದು, ಈ ಮೊತ್ತವನ್ನು ನೇರವಾಗಿ ಸಂಚಿತ ನಿಧಿಗೆ ಪಾವತಿಸಬೇಕಾಗುತ್ತದೆ. ಒಟ್ಟು 21 ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಯಲ್ಲಿ ಇ-ಪಾವತಿಗಳನ್ನು ಜಾರಿಗೆ ತಂದಿವೆ.
ನ್ಯಾಯ ವಿತರಣೆಯನ್ನು ಸಮಗ್ರಗೊಳಿಸಲು ಮತ್ತು ಡಿಜಿಟಲ್ ವಿಭಜನೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮಾಹಿತಿ ಪಡೆಯುವುದರಿಂದ ಹಿಡಿದು ಇ-ಫೈಲಿಂಗ್‌ವರೆಗೆ ಯಾವುದೇ ರೀತಿಯ ಸಹಾಯ ಅಗತ್ಯವಿರುವ ವಕೀಲರು ಅಥವಾ ಕಕ್ಷಿದಾರರಿಗೆ ನೆರವಾಗಲು 875 ʻಇ-ಸೇವಾ ಕೇಂದ್ರʼಗಳನ್ನು ಪ್ರಾರಂಭಿಸಲಾಗಿದೆ.
ವಕೀಲರು / ಕಕ್ಷಿದಾರರಿಗೆ ಪ್ರಕರಣದ ಸ್ಥಿತಿಗತಿ, ವಿಚಾರಣಾ ವೇಳಾಪಟ್ಟಿ, ತೀರ್ಪುಗಳು ಇತ್ಯಾದಿಗಳ ಬಗ್ಗೆ ನೈಜ ಸಮಯದ ಮಾಹಿತಿಯನ್ನು 7 ನಾಗರಿಕ ಕೇಂದ್ರಿತ ಸೇವಾ ವೇದಿಕೆಗಳು ಅಥವಾ ಸೇವಾ ವಿತರಣಾ ಚಾನೆಲ್‌ಗಳ ಮೂಲಕ ಒದಗಿಸಲಾಗುತ್ತದೆ. ʻಎಸ್ಎಂಎಸ್ ಪುಶ್ ಅಂಡ್ ಪುಲ್ʼ(ಪ್ರತಿದಿನ 2,00,000 ಎಸ್ಎಂಎಸ್ ಕಳುಹಿಸಲಾಗುತ್ತದೆ), ಇಮೇಲ್ (ಪ್ರತಿದಿನ 2,50,000 ಕಳುಹಿಸಲಾಗುತ್ತದೆ), ಬಹುಭಾಷಾ ಮತ್ತು ಸ್ಪರ್ಶ ಇ-ಕೋರ್ಟ್ ಸೇವೆಗಳ ಪೋರ್ಟಲ್ (ಪ್ರತಿದಿನ 35 ಲಕ್ಷ ಪ್ರವೇಶ), ನ್ಯಾಯಾಂಗ ಸೇವಾ ಕೇಂದ್ರಗಳು (ಜೆಎಸ್‌ಸಿ), ಮಾಹಿತಿ ಕಿಯೋಸ್ಕ್‌ಗಳು, ವಕೀಲರು / ಕಕ್ಷಿದಾರರಿಗಾಗಿ ಇ-ಕೋರ್ಟ್ಸ್ ಮೊಬೈಲ್ ತಂತ್ರಾಂಶ (31.10.2023 ರವರೆಗೆ 2.07 ಕೋಟಿ ಡೌನ್‌ಲೋಡ್‌ಗಳು) ಮತ್ತು ʻಜಸ್ಟ್ ಐಎಸ್ ತಂತ್ರಾಂಶʼ (30.10.2023 ರವರೆಗೆ 19,433 ಡೌನ್‌ಲೋಡ್‌ಗಳು) ಮುಂತಾದ ಸೇವೆಗಳು ಇದರಲ್ಲಿ ಸೇರಿವೆ.
ʻರಾಷ್ಟ್ರೀಯ ಸೇವೆ ಮತ್ತು ಎಲೆಕ್ಟ್ರಾನಿಕ್ ಪ್ರಕ್ರಿಯೆಗಳ ನಿಗಾʼ(ಎನ್ಎಸ್‌ಟಿಇಪಿ) ವ್ಯವಸ್ಥೆಯನ್ನು, ಸಮನ್ಸ್ ವಿತರಣೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ 28 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ.
ತೀರ್ಪುಗಳನ್ನು ಸುಲಭವಾಗಿ ಹುಡುಕಲು ಅದರ ಮಧ್ಯಸ್ಥಗಾರರ ಅನುಕೂಲಕ್ಕಾಗಿ ಹೊಸ 'ತೀರ್ಪು ಮತ್ತು ಆದೇಶ ಶೋಧ' ಪೋರ್ಟಲ್ ಅನ್ನು ಉದ್ಘಾಟಿಸಲಾಗಿದೆ. ಇದನ್ನು https://judgments.ecourts.gov.in ಮೂಲಕ ಪ್ರವೇಶಿಸಬಹುದು.
ನ್ಯಾಯ ಕ್ಷೇತ್ರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಇಲಾಖೆಯ ವಿವಿಧ ಯೋಜನೆಗಳ ಜಾಹೀರಾತು ನೀಡಲು ಮತ್ತು ಸಾರ್ವಜನಿಕರಿಗೆ ವಿವಿಧ ಕ್ಷೇತ್ರಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲು 25 ಹೈಕೋರ್ಟ್‌ಗಳಲ್ಲಿ 39 ʻನ್ಯಾಯ ಗಡಿಯಾರʼ(ಜಸ್ಟೀಸ್ ಕ್ಲಾಕ್) ಗಳನ್ನು ಸ್ಥಾಪಿಸಲಾಗಿದೆ. ʻವರ್ಚುವಲ್ ಜಸ್ಟೀಸ್ ಕ್ಲಾಕ್ʼ ಅನ್ನು ಸಹ ಪೋರ್ಟಲ್‌ನಲ್ಲಿ ಆರಂಭಿಸಲಾಗಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯದ ʻಇ-ಸಮಿತಿʼಯು ʻಐಸಿಟಿʼ ಸೇವೆಗಳ ಬಗ್ಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ, ಇದು 5,35,558 ಮಧ್ಯಸ್ಥಗಾರರನ್ನು ಒಳಗೊಂಡಿದೆ.
ʻಇ-ಕೋರ್ಟ್ಸ್ʼ ಯೋಜನೆಯು ಕಳೆದ ಮೂರು ವರ್ಷಗಳಿಂದ ಸತತವಾಗಿ ʻಇ-ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿʼ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನವಾಗಿದೆ.
ʻಇ-ಕೋರ್ಟ್ಸ್ ಹಂತ -2ʼ ಮುಗಿದಿರುವುದರಿಂದ, 13.09.2023 ರಂದು ಸಚಿವ ಸಂಪುಟವು 7,210 ಕೋಟಿ ರೂ.ಗಳ ಬಜೆಟ್ ಅನುದಾನದೊಂದಿಗೆ ʻಇಕೋರ್ಟ್ಸ್ ಹಂತ-3ʼಕ್ಕೆ ಅನುಮೋದನೆ ನೀಡಿದೆ. ಹಂತ -1 ಮತ್ತು ಹಂತ -2ರ ಲಾಭಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ದು, ಡಿಜಿಟಲ್, ಆನ್‌ಲೈನ್ ಮತ್ತು ಕಾಗದರಹಿತ ನ್ಯಾಯಾಲಯಗಳತ್ತ ಸಾಗುವ ಮೂಲಕ ಸುಗಮ ನ್ಯಾಯ ನೀಡಿಕೆಯನ್ನು ಗರಿಷ್ಠಗೊಳಿಸುವ ಗುರಿಯನ್ನು ʻಇ-ಕೋರ್ಟ್ಸ್ ಹಂತ-3ʼ ಹೊಂದಿದೆ. ನ್ಯಾಯಾಂಗಕ್ಕಾಗಿ ಏಕೀಕೃತ ತಂತ್ರಜ್ಞಾನ ವೇದಿಕೆಯನ್ನು ರಚಿಸುವುದು ಮೂರನೇ ಹಂತದ ಮುಖ್ಯ ಉದ್ದೇಶವಾಗಿದೆ. ಇದು ನ್ಯಾಯಾಲಯಗಳು, ಕಕ್ಷಿದಾರರು ಮತ್ತು ಇತರ ಮಧ್ಯಸ್ಥಗಾರರ ನಡುವೆ ತಡೆರಹಿತ ಮತ್ತು ಕಾಗದರಹಿತ ಸಂಪರ್ಕಸೇತುವನ್ನು ಒದಗಿಸುತ್ತದೆ. ʻಇ-ಕೋರ್ಟ್ಸ್ʼ ಯೋಜನೆಯ ಹಂತ -3ರ ಉದ್ದೇಶಿತ ಕಾಲಾವಧಿ 2023ರಿಂದ ಪ್ರಾರಂಭವಾಗಿ ನಾಲ್ಕು ವರ್ಷಗಳವರೆಗೆ ಇರಲಿದೆ. ಈ ಯೋಜನೆಯು "ಸ್ಮಾರ್ಟ್" ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಸುಗಮ ಬಳಕೆದಾರ ಅನುಭವವನ್ನು ಒದಗಿಸಲು ಸಹಾಯ ಮಾಡುತ್ತದೆ. ರಿಜಿಸ್ಟ್ರಿಗಳು ಕಡಿಮೆ ಡೇಟಾ ಎಂಟ್ರಿ ಮತ್ತು ಕನಿಷ್ಠ ಫೈಲ್ ಪರಿಶೀಲನೆಯನ್ನು ಹೊಂದಿರುತ್ತವೆ, ಇದು ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆಗೆ ದಾರಿ ಮಾಡುವುದಲ್ಲದೆ, ನೀತಿ ಯೋಜನೆಯನ್ನು ಸುಗಮಗೊಳಿಸುತ್ತದೆ. ನ್ಯಾಯಾಲಯದ ಅನುಭವವನ್ನು ದೇಶದ ಎಲ್ಲಾ ನಾಗರಿಕರಿಗೆ ಅನುಕೂಲಕರ, ಅಗ್ಗದ ಮತ್ತು ತೊಂದರೆ ಮುಕ್ತವಾಗಿಸುವ ಮೂಲಕ ನ್ಯಾಯ ನೀಡಿಕೆ ಸುಲಭತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ʻಇ-ಕೋರ್ಟ್ಸ್ ಹಂತ -3 ʼಒಂದು ಕ್ರಾಂತಿಕಾರಿ ಕ್ರಮವೆಂದು ಸಾಬೀತುಪಡಿಸುತ್ತದೆ.
- ತ್ವರಿತಗತಿ ವಿಶೇಷ ನ್ಯಾಯಾಲಯಗಳ (ಎಫ್.ಟಿ.ಎಸ್.ಸಿ) ಯೋಜನೆ:
ಅತ್ಯಾಚಾರ ಮತ್ತು ʻಪೋಕ್ಸೊ ಕಾಯ್ದೆʼಯ ಸಂತ್ರಸ್ತರಿಗೆ ಸಂಬಂಧಿತ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ತ್ವರಿತ ನ್ಯಾಯವನ್ನು ಒದಗಿಸಲು ವಿಶೇಷ ʻಪೋಕ್ಸೊ (ಇ-ಪೋಕ್ಸೊ) ನ್ಯಾಯಾಲಯಗಳುʼ ಸೇರಿದಂತೆ ತ್ವರಿತ ವಿಶೇಷ ನ್ಯಾಯಾಲಯಗಳನ್ನು (ಎಫ್.ಟಿ.ಎಸ್.ಸಿ) ಸ್ಥಾಪಿಸುವ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಭಾರತ ಸರ್ಕಾರವು 2019ರ ಅಕ್ಟೋಬರ್‌ನಲ್ಲಿ ಪ್ರಾರಂಭಿಸಿತು. ಈ ಯೋಜನೆಯನ್ನು ಆರಂಭದಲ್ಲಿ ಒಂದು ವರ್ಷದವರೆಗೆ, ಅಂದರೆ ಮಾರ್ಚ್ 2023 ರವರೆಗೆ ವಿಸ್ತರಿಸಲಾಯಿತು. ಕೇಂದ್ರ ಸಚಿವ ಸಂಪುಟವು ಈ ಯೋಜನೆಯನ್ನು ಇನ್ನೂ ಮೂರು ವರ್ಷಗಳವರೆಗೆ ಅಂದರೆ 01.04.2023 ರಿಂದ 31.03.2026 ರವರೆಗೆ ಒಟ್ಟು 1952.23 ಕೋಟಿ ರೂ.ಗಳ ವೆಚ್ಚದಲ್ಲಿ ವಿಸ್ತರಿಸಿದೆ. ಕೇಂದ್ರ ಸರ್ಕಾರವು ಇದಕ್ಕಾಗಿ ʻನಿರ್ಭಯಾ ನಿಧಿʼಯಿಂದ ತನ್ನ ಪಾಲಿನ 1207.24 ಕೋಟಿ ರೂ.ಗಳನ್ನು ಒದಗಿಸಿದೆ. ನ್ಯಾಯಾಂಗ ಇಲಾಖೆಯು ತ್ವರಿತಗತಿ ನ್ಯಾಯಾಲಯಗಳ ನಿರ್ವಹಣೆಗಾಗಿ 29 ರಾಜ್ಯಗಳು ಮತ್ತು ಕೆಂದ್ರಾಡಳಿತ ಪ್ರದೇಶಗಳಿಗೆ 06.12.2023 ರವರೆಗೆ ಒಟ್ಟು 734.93 ಕೋಟಿ ರೂ.ಗಳನ್ನು (2019-20ನೇ ಹಣಕಾಸು ವರ್ಷದಲ್ಲಿ 140 ಕೋಟಿ ರೂ., 2020-21ನೇ ಹಣಕಾಸು ವರ್ಷದಲ್ಲಿ 160 ಕೋಟಿ ರೂ., 2021-21ನೇ ಹಣಕಾಸು ವರ್ಷದಲ್ಲಿ 134.56 ಕೋಟಿ ರೂ., 2021-22ನೇ ಹಣಕಾಸು ವರ್ಷದಲ್ಲಿ 200 ಕೋಟಿ ರೂ. ಮತ್ತು 2023-24ನೇ ಹಣಕಾಸು ವರ್ಷದಲ್ಲಿ 200 ಕೋಟಿ ರೂ.) ಬಿಡುಗಡೆ ಮಾಡಿದೆ.
ಯೋಜನೆಯ ಸಾಧನೆಗಳು
- 30 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 412 ವಿಶೇಷ ಪೋಕ್ಸೊ ನ್ಯಾಯಾಲಯಗಳೊಂದಿಗೆ 758 ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇವು 2,00,000ಕ್ಕೂ ಹೆಚ್ಚು ಪ್ರಕರಣಗಳನ್ನು (ಅಕ್ಟೋಬರ್, 2023 ರವರೆಗೆ) ವಿಲೇವಾರಿ ಮಾಡಿವೆ. ಈ ಯೋಜನೆಯನ್ನು ರಾಜ್ಯಕ್ಕೂ ವಿಸ್ತರಿಸುವಂತೆ ಪುದುಚೇರಿ ವಿಶೇಷ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮೇ 2023ರಲ್ಲಿ ಒಂದು ವಿಶೇಷ ಪೋಕ್ಸೊ ನ್ಯಾಯಾಲಯವನ್ನು ಅಲ್ಲಿ ಕಾರ್ಯಗತಗೊಳಿಸಲಾಗಿದೆ.
- ತ್ವರಿತಗತಿ ನ್ಯಾಯಾಲಯಗಳು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಭದ್ರತೆಯ ಕಾರಣಕ್ಕಾಗಿ ಹೋರಾಡುವ ರಾಷ್ಟ್ರೀಯ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
- ತ್ವರಿತಗತಿ ನ್ಯಾಯಾಲಯಗಳು ವಿಸೇಷ ನ್ಯಾಯಾಲಯಗಳಾಗಿದ್ದು, ಇವು ಲೈಂಗಿಕ ಅಪರಾಧಗಳ ಅಸಹಾಯಕ ಬಲಿಪಶುಗಳಿಗೆ ನ್ಯಾಯವನ್ನು ತ್ವರಿತವಾಗಿ ಒದಗಿಸಲು ಸಹಾಯ ಮಾಡಿವೆ; ಲೈಂಗಿಕ ಅಪರಾಧಿಗಳಿಗೆ ಪ್ರತಿರೋಧದ ನೀತಿಯನ್ನು ರಚಿಸುವಲ್ಲಿ, ನ್ಯಾಯ ವ್ಯವಸ್ಥೆಯಲ್ಲಿ ನಾಗರಿಕರ ನಂಬಿಕೆಯನ್ನು ಬಲಪಡಿಸುವಲ್ಲಿ ಮತ್ತು ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ವಾತಾವರಣಕ್ಕೆ ದಾರಿ ಮಾಡಿಕೊಡುವಲ್ಲಿ ನೆರವಾಗಿವೆ.
- ನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಳ ರಾಷ್ಟ್ರೀಯ ಯೋಜನೆ:
ʻನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಳಿಗಾಗಿ ರಾಷ್ಟ್ರೀಯ ಯೋಜನೆʼಯನ್ನು ಆಗಸ್ಟ್ 2011ರಲ್ಲಿ ಸ್ಥಾಪಿಸಲಾಯಿತು. ಈ ಯೋಜನೆಯು ಇಡೀ ದೇಶದಲ್ಲಿ ನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಳ ಮೇಲೆ ಗಮನ ಹರಿಸುತ್ತದೆ ಮತ್ತು ಆ ಮೂಲಕ ಎಲ್ಲಾ ವರ್ಗದ ಮಧ್ಯಸ್ಥಗಾರರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವತ್ತ ಗಮನ ಕೇಂದ್ರೀಕರಿಸುತ್ತದೆ. ಇದರ ಉದ್ದೇಶಗಳು ಎರಡು ಹಂತದಲ್ಲಿವೆ:
- ವ್ಯವಸ್ಥೆಯಲ್ಲಿ ವಿಳಂಬ ಮತ್ತು ಬಾಕಿಗಳನ್ನು ಕಡಿಮೆ ಮಾಡುವ ಮೂಲಕ ನ್ಯಾಯ ಲಭ್ಯತೆಯನ್ನು ಹೆಚ್ಚಿಸುವುದು, ಮತ್ತು
- ರಚನಾತ್ಮಕ ಬದಲಾವಣೆಗಳ ಮೂಲಕ ಹಾಗೂ ಕಾರ್ಯಕ್ಷಮತೆಯ ಮಾನದಂಡಗಳು ಮತ್ತು ಸಾಮರ್ಥ್ಯಗಳನ್ನು ನಿಗದಿಪಡಿಸುವ ಮೂಲಕ ಉತ್ತರದಾಯಿತ್ವವನ್ನು ಹೆಚ್ಚಿಸುವುದು
ರಾಷ್ಟ್ರೀಯ ಯೋಜನೆ ಅಡಿಯಲ್ಲಿ ಕೈಗೊಂಡ ಉಪಕ್ರಮಗಳು
- ನ್ಯಾಯಾಂಗಕ್ಕೆ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆ (ಸಿ.ಎಸ್.ಎಸ್.) ಅನುಷ್ಠಾನ:
ರಾಷ್ಟ್ರೀಯ ಯೋಜನೆಯ ಪ್ರಮುಖ ಉಪಕ್ರಮಗಳಲ್ಲಿ ಒಂದು ನ್ಯಾಯಾಂಗಕ್ಕೆ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಗೆ (ಸಿಎಸ್ಎಸ್) ಸಂಬಂಧಿಸಿದ್ದಾಗಿದೆ. ನ್ಯಾಯಾಂಗಕ್ಕಾಗಿ ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯು ಜಿಲ್ಲೆ, ಉಪ ಜಿಲ್ಲೆ, ತಾಲ್ಲೂಕು, ಮತ್ತು ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಮಟ್ಟಗಳು ಸೇರಿದಂತೆ ದೇಶಾದ್ಯಂತ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು / ನ್ಯಾಯಾಂಗ ಅಧಿಕಾರಿಗಳಿಗೆ ಸೂಕ್ತ ಸಂಖ್ಯೆಯ ನ್ಯಾಯಾಲಯ ಸಭಾಂಗಣಗಳು, ವಸತಿ ಸೌಕರ್ಯಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ದೇಶಾದ್ಯಂತ ನ್ಯಾಯಾಂಗದ ಕಾರ್ಯನಿರ್ವಹಣೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಪ್ರತಿಯೊಬ್ಬ ನಾಗರಿಕರನ್ನು ತಲುಪಲು ಸಹಾಯ ಮಾಡುತ್ತದೆ.
ಈ ಕೇಂದ್ರ ಪ್ರಾಯೋಜಿತ ಯೋಜನೆಯನ್ನು (ಸಿಎಸ್‌ಎಸ್) 5 ವರ್ಷಗಳ ಅವಧಿಗೆ ಅಂದರೆ 2021-22 ರಿಂದ 2025-26 ರವರೆಗೆ 9000 ಕೋಟಿ ರೂ.ಗಳ ಅನುದಾನದೊಂದಿಗೆ (5307 ಕೋಟಿ ರೂ.ಗಳ ಕೇಂದ್ರ ಪಾಲು ಸೇರಿದಂತೆ) ಮುಂದುವರಿಸಲು ಸರ್ಕಾರ ಅನುಮೋದನೆ ನೀಡಿದೆ. ಇದು ನ್ಯಾಯಾಲಯ ಸಭಾಂಗಣಗಳು ಮತ್ತು ವಸತಿ ಘಟಕಗಳು ಮಾತ್ರವಲ್ಲದೆ ವಕೀಲರು ಮತ್ತು ಕಕ್ಷಿದಾರರ ಅನುಕೂಲಕ್ಕಾಗಿ ವಕೀಲರ ಸಭಾಂಗಣಗಳು, ಶೌಚಾಲಯ ಸಂಕೀರ್ಣಗಳು ಮತ್ತು ಡಿಜಿಟಲ್ ಕಂಪ್ಯೂಟರ್ ಕೊಠಡಿಗಳನ್ನು ಒದಗಿಸುವಂತಹ ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.
ಯೋಜನೆ ಪ್ರಾರಂಭವಾದಾಗಿನಿಂದ 11.12.23 ರವರೆಗೆ 10,443.75 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ 2014-15 ರಿಂದ 6999.44 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದು ಯೋಜನೆಯಡಿ ಬಿಡುಗಡೆಯಾದ ಒಟ್ಟು ನಿಧಿಯ ಸುಮಾರು 67.02%ರಷ್ಟಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1,051 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಅದರಲ್ಲಿ 577 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 857.20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಹೈಕೋರ್ಟ್‌ಗಳು ನೀಡಿದ ಮಾಹಿತಿಯ ಪ್ರಕಾರ, 21,507 ನ್ಯಾಯಾಲಯ ಸಭಾಂಗಣಗಳು ಲಭ್ಯವಿವೆ, ಇದು 2014ರಲ್ಲಿ ಲಭ್ಯವಿರುವ 15,818 ನ್ಯಾಯಾಲಯ ಸಭಾಂಗಣಗಳಿಗೆ ಹೋಲಿಸಿದರೆ ಗಮನಾರ್ಹ ಹೆಚ್ಚಳವಾಗಿದೆ. ವಸತಿ ಘಟಕಗಳಿಗೆ ಸಂಬಂಧಿಸಿದಂತೆ, ಪ್ರಸ್ತುತ 20,017 ನ್ಯಾಯಾಧೀಶರು / ನ್ಯಾಯಾಂಗ ಅಧಿಕಾರಿಗಳ ಸಂಖ್ಯೆಗೆ 18,882 ವಸತಿ ಘಟಕಗಳು ಲಭ್ಯವಿವೆ. 2014ರಲ್ಲಿ 10,211 ವಸತಿ ಘಟಕಗಳು ಲಭ್ಯವಿದ್ದವು. ಇದಲ್ಲದೆ, ʻನ್ಯಾಯ ವಿಕಾಸ್ ಪೋರ್ಟಲ್ʼ ಪ್ರಕಾರ 3,109 ನ್ಯಾಯಾಲಯ ಸಭಾಂಗಣಗಳು ಮತ್ತು 1,807 ವಸತಿ ಘಟಕಗಳು ಪ್ರಸ್ತುತ ನಿರ್ಮಾಣ ಹಂತದಲ್ಲಿವೆ.
ʻನ್ಯಾಯ ವಿಕಾಸ್ 2.0ʼ ಆರಂಭ:
- ನಿರ್ಮಾಣ ಯೋಜನೆಗಳ ಮೇಲ್ವಿಚಾರಣೆಗಾಗಿ ಆನ್‌ಲೈನ್ ಸಾಧನವಾಗಿ ʻನ್ಯಾಯ ವಿಕಾಸ್ʼ ಉಪಕ್ರಮವನ್ನು ಗೌರವಾನ್ವಿತ ಕಾನೂನು ಮತ್ತು ನ್ಯಾಯ ಸಚಿವರು 2018ರ ಜೂನ್ 11ರಂದು ಪ್ರಾರಂಭಿಸಿದರು. ʻನ್ಯಾಯ ವಿಕಾಸ್ʼ ವೆಬ್‌ಪೋರ್ಟಲ್ ಮತ್ತು ಮೊಬೈಲ್ ತಂತ್ರಾಂಶವನ್ನು ನವೀಕರಿಸಲಾಗಿದ್ದು 2020ರ ಏಪ್ರಿಲ್ 1ರಿಂದ ವರ್ಧಿತ ಸಾಮರ್ಥ್ಯಗಳು ಮತ್ತು ಕಾರ್ಯಚಟುವಟಿಕೆಗಳೊಂದಿಗೆ ʻಆವೃತ್ತಿ 2.0ʼ ಅನ್ನು ಸಾರ್ವಜನಿಕರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದನ್ನು ವಿವಿಧ ರಾಜ್ಯ ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ʻಎನ್.ಆರ್.ಎಸ್.ಸಿʼ, ʻಇಸ್ರೋʼ ಸಹಾಯದಿಂದ ಅಭಿವೃದ್ಧಿಪಡಿಸಲಾಗಿದೆ. 30.11.2023ರ ಹೊತ್ತಿಗೆ, 6,828 ನ್ಯಾಯಾಲಯ ಸಭಾಂಗಣಗಳು (ಪೂರ್ಣಗೊಂಡಿರುವ, ನಿರ್ಮಾಣ ಹಂತದಲ್ಲಿರುವ ಮತ್ತು ಪ್ರಸ್ತಾವಿತ), 6,341 ವಸತಿ ಘಟಕಗಳನ್ನು (ಪೂರ್ಣಗೊಂಡಿದೆ, ನಿರ್ಮಾಣ ಹಂತದಲ್ಲಿದೆ ಮತ್ತು ಪ್ರಸ್ತಾಪಿಸಲಾಗಿದೆ) ʻಜಿಯೋಟ್ಯಾಗ್ʼ ಮಾಡಲಾಗಿದೆ.
- ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ
ಸಾಂವಿಧಾನಿಕ ಚೌಕಟ್ಟಿನ ಪ್ರಕಾರ, ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಆಯ್ಕೆ ಮತ್ತು ನೇಮಕಾತಿಯು ಸಂಬಂಧಪಟ್ಟ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ʻಮಲಿಕ್ ಮಝರ್ ಪ್ರಕರಣʼದಲ್ಲಿ ನ್ಯಾಯಾಂಗ ಆದೇಶದ ಮೂಲಕ ಸುಪ್ರೀಂ ಕೋರ್ಟ್, ಅಧೀನ ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಸರಿಸಬೇಕಾದ ಪ್ರಕ್ರಿಯೆ ಮತ್ತು ಕಾಲಮಿತಿಯನ್ನು ರೂಪಿಸಿದೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ವಿಷಯವನ್ನು ನ್ಯಾಯಾಂಗ ಇಲಾಖೆಯು ರಾಜ್ಯಗಳು ಮತ್ತು ಹೈಕೋರ್ಟ್‌ಗಳ ಸಮಾಲೋಚನೆಯೊಂದಿಗೆ ನಿರ್ವಹಿಸುತ್ತದೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ಮಂಜೂರಾದ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ ಮತ್ತು ಖಾಲಿ ಇರುವ ನ್ಯಾಯಾಂಗ ಅಧಿಕಾರಿಗಳ ಖಾಲಿ ಹುದ್ದೆಗಳನ್ನು ಮಾಸಿಕ ಆಧಾರದ ಮೇಲೆ ವರದಿ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ನ್ಯಾಯಾಂಗ ಇಲಾಖೆ ತನ್ನ ವೆಬ್‌ಗಾಣದಲ್ಲಿ ʻಎಂಐಎಸ್ ವೆಬ್-ಪೋರ್ಟಲ್ʼ ಅನ್ನು ಸ್ಥಾಪಿಸಿದೆ. ಇದು ನೀತಿ ನಿರೂಪಕರಿಗೆ ಮಾಸಿಕ ನ್ಯಾಯಾಂಗ ದತ್ತಾಂಶವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ʻಮಲಿಕ್ ಮಜರ್ ಸುಲ್ತಾನ್ ಪ್ರಕರಣʼದ ನಿರ್ದೇಶನಗಳ ಅನುಸರಣೆಯನ್ನು ವರದಿ ಮಾಡಲು ಏಪ್ರಿಲ್, 2021ರಿಂದ ಈ ಪೋರ್ಟಲ್ ನ್ಯಾಯಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ.
- ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು
ಪ್ರಕರಣಗಳ ವಿಲೇವಾರಿ ನ್ಯಾಯಾಂಗದ ವ್ಯಾಪ್ತಿಗೆ ಒಳಪಡುತ್ತದೆ. ಆದಾಗ್ಯೂ, ಸಂವಿಧಾನದ 39 ಎ ವಿಧಿಯಲ್ಲಿ ಸೂಚಿಸಿರುವಂತೆ, ನ್ಯಾಯದ ಲಭ್ಯತೆಯನ್ನು ಸುಧಾರಿಸಲು ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರವು ಸ್ಥಾಪಿಸಿದ ʻನ್ಯಾಯ ವಿತರಣೆ ಮತ್ತು ಕಾನೂನು ಸುಧಾರಣೆಗಳ ರಾಷ್ಟ್ರೀಯ ಯೋಜನೆʼಯು, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳಿಗೆ ಮೂಲಸೌಕರ್ಯಗಳನ್ನು [ನ್ಯಾಯಾಲಯ ಸಭಾಂಗಣಗಳು ಮತ್ತು ವಸತಿ ಘಟಕಗಳು] ಸುಧಾರಿಸುವುದು, ಉತ್ತಮ ನ್ಯಾಯ ವಿತರಣೆಗಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಬಳಸಿಕೊಳ್ಳುವುದು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಅನೇಕ ಕಾರ್ಯತಂತ್ರದ ಉಪಕ್ರಮಗಳನ್ನು ಅಳವಡಿಸಿಕೊಂಡಿದೆ. ಜಿಲ್ಲಾ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಟ್ಟದಲ್ಲಿ ʻಹಿಂಬಾಕಿ ಸಮಿತಿʼ(ಅರಿಯರ್ಸ್ ಕಮಿಟಿ) ಅನುಸರಣೆಯ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವುದು, ಪರ್ಯಾಯ ವಿವಾದ ಪರಿಹಾರಕ್ಕೆ (ಎಡಿಆರ್) ಒತ್ತು ನೀಡುವುದು ಹಾಗೂ ವಿಶೇಷ ರೀತಿಯ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಉಪಕ್ರಮಗಳು ಸಹ ಇದರಲ್ಲಿ ಸೇರಿವೆ. ಡಿಸೆಂಬರ್ 11, 2023ರ ಹೊತ್ತಿಗೆ, ಸುಪ್ರೀಂ ಕೋರ್ಟ್‌ನಲ್ಲಿ 79,781 ಪ್ರಕರಣಗಳು ಬಾಕಿ ಉಳಿದಿವೆ. 2023ರ ಡಿಸೆಂಬರ್ 11ರ ವೇಳೆಗೆ ಹೈಕೋರ್ಟ್‌ಗಳು ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಕ್ರಮವಾಗಿ 61,95,535 ಮತ್ತು 4,43,45,599 ಪ್ರಕರಣಗಳು ಬಾಕಿ ಉಳಿದಿವೆ.
- ಸುಗಮ ವಹಿವಾಟು ವಾತಾವರಣ
- ಈಸ್ ಆಫ್ ಡೂಯಿಂಗ್ ಬಿಸಿನೆಸ್ (ಇ.ಒ.ಡಿ.ಬಿ) ಸೂಚ್ಯಂಕವು ʻವಿಶ್ವ ಬ್ಯಾಂಕ್ ಗ್ರೂಪ್ʼ ಸ್ಥಾಪಿಸಿದ ಶ್ರೇಯಾಂಕ ವ್ಯವಸ್ಥೆಯಾಗಿದೆ. ಈ ಸೂಚ್ಯಂಕದಲ್ಲಿ 'ಉನ್ನತ ಶ್ರೇಯಾಂಕ'ವು(ಕಡಿಮೆ ಸಾಂಖ್ಯಿಕ ಮೌಲ್ಯ) ವ್ಯವಹಾರಗಳಿಗೆ ಉತ್ತಮ ವಾತಾವರಣ, ಸರಳವಾದ ನಿಯಮಗಳು ಮತ್ತು ಆಸ್ತಿ ಹಕ್ಕುಗಳ ಬಲವಾದ ರಕ್ಷಣೆಗಳನ್ನು ಸೂಚಿಸುತ್ತದೆ. ʻಒಪ್ಪಂದಗಳ ಅನುಷ್ಠಾನ ಸೂಚ್ಯಂಕʼವು, ಪ್ರಮಾಣೀಕೃತ ವಾಣಿಜ್ಯ ವಿವಾದವನ್ನು ಪರಿಹರಿಸಲು ಹಿಡಿಯುವ ಸಮಯ ಮತ್ತು ಆಗುವ ವೆಚ್ಚವನ್ನು ಅಳೆಯುತ್ತದೆ. ಜೊತೆಗೆ ನ್ಯಾಯಾಂಗದಲ್ಲಿ ಉತ್ತಮ ಅಭ್ಯಾಸಗಳ ಸರಣಿಯನ್ನು ಅಳೆಯುತ್ತದೆ. ನ್ಯಾಯಾಂಗ ಇಲಾಖೆಯು ಈ ಸೂಚ್ಯಂಕವನ್ನು ಜಾರಿಗೊಳಿಸುವ ನೋಡಲ್ ಇಲಾಖೆಯಾಗಿತ್ತು. ಹೂಡಿಕೆ ಮತ್ತು ವ್ಯವಹಾರಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಸಲುವಾಗಿ, ಒಪ್ಪಂದಗಳನ್ನು ತ್ವರಿತವಾಗಿ ಜಾರಿಗೊಳಿಸಲು ಅನುವು ಮಾಡಿಕೊಡುವ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ. ಸುಗಮ ವ್ಯಾಪಾರವನ್ನು ಸುಧಾರಿಸಲು, ಭಾರತದ ಸರ್ವೋಚ್ಚ ನ್ಯಾಯಾಲಯದ ʻಇ-ಸಮಿತಿʼ ಹಾಗೂ ದೆಹಲಿ, ಬಾಂಬೆ, ಕರ್ನಾಟಕ ಮತ್ತು ಕಲ್ಕತ್ತಾ ಹೈಕೋರ್ಟ್‌ಗಳ ಸಮನ್ವಯದೊಂದಿಗೆ ನ್ಯಾಯಾಂಗ ಇಲಾಖೆ ವಿವಿಧ ಸುಧಾರಣೆಗಳನ್ನು ಕೈಗೊಂಡಿದೆ.
ವಾಣಿಜ್ಯ ಪ್ರಕರಣಗಳನ್ನು ನಿರ್ವಹಿಸಲು ದೆಹಲಿಯಲ್ಲಿ 46, ಮುಂಬೈನಲ್ಲಿ 6, ಬೆಂಗಳೂರಿನಲ್ಲಿ 10 ಮತ್ತು ಕೋಲ್ಕತ್ತಾದಲ್ಲಿ 4 ವಿಶೇಷ ವಾಣಿಜ್ಯ ನ್ಯಾಯಾಲಯಗಳನ್ನು ಕಾರ್ಯಗತಗೊಳಿಸಲಾಗಿದೆ. ದೆಹಲಿಯ 46 ವಿಶೇಷ ವಾಣಿಜ್ಯ ನ್ಯಾಯಾಲಯಗಳಲ್ಲಿ, 2 ಡಿಜಿಟಲ್ ವಾಣಿಜ್ಯ ನ್ಯಾಯಾಲಯಗಳನ್ನು ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯಗತಗೊಳಿಸಲಾಗಿದೆ. ಇವು ಇ-ಫೈಲಿಂಗ್ ಮತ್ತು ವರ್ಚುವಲ್ ವಿಚಾರಣೆ ಸೌಲಭ್ಯವನ್ನು ಒಳಗೊಂಡಿರುವ ಕಾಗದರಹಿತ ನ್ಯಾಯಾಲಯಗಳಾಗಿವೆ.
- ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಇತರೆ ಉಪಕ್ರಮಗಳಲ್ಲಿ - 500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ವಾಣಿಜ್ಯ ವಿವಾದಗಳನ್ನು ಇತ್ಯರ್ಥಪಡಿಸಲು ವಿವಿಧ ಹೈಕೋರ್ಟ್‌ಗಳಲ್ಲಿ ವಿಶೇಷ ಪೀಠಗಳು, ನಿರ್ದಿಷ್ಟ ಪರಿಹಾರ (ತಿದ್ದುಪಡಿ) ಕಾಯ್ದೆ, 2018ರ ಸೆಕ್ಷನ್ 20 ಬಿ ಪ್ರಕಾರ ಮೂಲಸೌಕರ್ಯ ಯೋಜನೆ ಗುತ್ತಿಗೆ ವಿವಾದಗಳಿಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಮೂರು ಮುಂದೂಡಿಕೆ ನಿಯಮಗಳ ಅನುಷ್ಠಾನ (ಕಲರ್ ಬ್ಯಾಂಡಿಂಗ್ ಸೌಲಭ್ಯದ ಮೂಲಕ), ಐಸಿಟಿ ಬಳಕೆ, ಇ-ಫೈಲಿಂಗ್, ಯಾದೃಚ್ಛಿಕ ಮತ್ತು ಸ್ವಯಂಚಾಲಿತ ಪ್ರಕರಣಗಳ ಹಂಚಿಕೆ, ನ್ಯಾಯಾಧೀಶರು ಮತ್ತು ವಕೀಲರಿಂದ ಎಲೆಕ್ಟ್ರಾನಿಕ್ ಕೇಸ್ ನಿರ್ವಹಣಾ ಸಾಧನಗಳ ಬಳಕೆ, ಇ-ಸಮನ್ಸ್ ಮುಂತಾದವು ಸೇರಿವೆ.
*****
(Release ID: 1985883)
Visitor Counter : 248