ಗೃಹ ವ್ಯವಹಾರಗಳ ಸಚಿವಾಲಯ
ಬಿಪರ್ಜೋಯ್ ಚಂಡಮಾರುತದಿಂದ ತೀವ್ರ ಹಾನಿಗೊಳಗಾದ ಗುಜರಾತ್ಗೆ 338.24 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲು ಗೃಹ ಸಚಿವಾಲಯ ಅನುಮೋದನೆ ನೀಡಿದೆ
ನೈರುತ್ಯ ಮುಂಗಾರು ಸಮಯದಲ್ಲಿ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತದಿಂದ ತೀವ್ರವಾಗಿ ಹಾನಿಗೊಳಗಾದ ಹಿಮಾಚಲ ಪ್ರದೇಶಕ್ಕೆ ರಾಷ್ಟ್ರೀಯ ವಿಪತ್ತು ಮೀಸಲು ಪಡೆ(NDRF)ನಿಂದ ಹೆಚ್ಚುವರಿ 633.73 ಕೋಟಿ ರೂಪಾಯಿ ಧನ ಸಹಾಯ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೇಂದ್ರ ಮತ್ತು ಗುಜರಾತ್ ಸರ್ಕಾರವು ಸುಧಾರಿತ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಾವುನೋವಿನ ಸಂಖ್ಯೆ ಶೂನ್ಯಕ್ಕೆ ಇಳಿದು ಸಾಧನೆ ಮಾಡಿವೆ.
ಗುಜರಾತ್ನಲ್ಲಿ ಬಿಪರ್ಜೋಯ್ ಚಂಡಮಾರುತದ ತೀವ್ರ ಪರಿಣಾಮ ಹಾಗೂ ಹಿಮಾಚಲ ಪ್ರದೇಶದಲ್ಲಿ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತದ ನಂತರ, ಅಲ್ಲಿ ಉಂಟಾಗಿರುವ ಹಾನಿಯ ಮೌಲ್ಯಮಾಪನಕ್ಕಾಗಿ ಕೇಂದ್ರ ಗೃಹ ಸಚಿವಾಲಯ ತಕ್ಷಣವೇ ಅಂತರ-ಸಚಿವಾಲಯದ ಕೇಂದ್ರ ತಂಡವನ್ನು ನಿಯೋಜಿಸಿತು.
ಹಿಮಾಚಲ ಪ್ರದೇಶಕ್ಕೆ ತಕ್ಷಣಕ್ಕೆ ಪರಿಹಾರ ಕಾರ್ಯ ನಿರ್ವಹಣೆಗೆ ಸಹಾಯವಾಗಲು ಕಳೆದ ಆಗಸ್ಟ್ ತಿಂಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF)ಯಿಂದ 200 ಕೋಟಿ ರೂಪಾಯಿಗಳನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಯಿತು.
ಕೇಂದ್ರ ಸರ್ಕಾರವು ಈ ಹಿಂದೆ ತನ್ನ ಪಾಲಿನ ಮೊದಲ ಕಂತಿನ 584 ಕೋಟಿ ರೂ.ಗಳನ್ನು ಗುಜರಾತ್ ನ ಎಸ್‌ಡಿಆರ್ ಎಫ್ ಮತ್ತು ಹಿಮಾಚಲ ಪ್ರದೇಶದ ಎಸ್‌ಡಿಆರ್ ಎಫ್ ಗೆ ತನ್ನ ಪಾಲಿನ ಎರಡೂ ಕಂತುಗಳನ್ನು 360.80 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು
प्रविष्टि तिथि:
12 DEC 2023 4:24PM by PIB Bengaluru
ಬಿಪರ್ಜೋಯ್ ಚಂಡಮಾರುತದಿಂದ ತೀವ್ರ ಹಾನಿಗೊಳಗಾದ ಗುಜರಾತ್ ಗೆ 338.24 ಕೋಟಿ ರೂ.ಗಳ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ, ಹಿಮಾಚಲ ಪ್ರದೇಶಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎನ್ ಡಿಆರ್ ಎಫ್) 633.73 ಕೋಟಿ ರೂ.ಗಳ ಹೆಚ್ಚುವರಿ ಆರ್ಥಿಕ ನೆರವನ್ನು ಗೃಹ ಸಚಿವಾಲಯ (ಎಂಎಚ್ ಎ) ಅನುಮೋದಿಸಿದೆ. ಈ ವರ್ಷ ನೈಋತ್ಯ ಮಾನ್ಸೂನ್ ಸಮಯದಲ್ಲಿ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತದಿಂದಾಗಿ ರಾಜ್ಯವು ತೀವ್ರವಾಗಿ ಬಾಧಿತವಾಗಿತ್ತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ ಕೇಂದ್ರ ಮತ್ತು ಗುಜರಾತ್ ಸರ್ಕಾರ ಸುಧಾರಿತ ಸಿದ್ಧತೆಗಳನ್ನು ಮಾಡಿಕೊಂಡು ಶೂನ್ಯ ಸಾವುನೋವು ಪ್ರಮಾಣವನ್ನು ಸಾಧಿಸಿತು. ಅತ್ಯಂತ ತೀವ್ರವಾದ ಬಿಪರ್ಜೋಯ್ ಚಂಡಮಾರುತದ ನಂತರ, ಗೃಹ ಸಚಿವಾಲಯವು ತಕ್ಷಣವೇ ಅಂತರ ಸಚಿವಾಲಯದ ಕೇಂದ್ರ ತಂಡವನ್ನು (ಐಎಂಸಿಟಿ) ಹಾನಿಯ ಮೌಲ್ಯಮಾಪನಕ್ಕಾಗಿ ನಿಯೋಜಿಸಿತು, ರಾಜ್ಯ ಸರ್ಕಾರದ ಜ್ಞಾಪಕ ಪತ್ರಕ್ಕಾಗಿ ಕಾಯದೆ. ಕೇಂದ್ರ ಸರ್ಕಾರವು ಈ ಹಿಂದೆ ತನ್ನ ಪಾಲಿನ ಮೊದಲ ಕಂತಿನ 584 ಕೋಟಿ ರೂ.ಗಳನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಗೆ (ಎಸ್‌ಡಿಆರ್ ಎಫ್) ಬಿಡುಗಡೆ ಮಾಡಿತ್ತು.
ಹಿಮಾಚಲ ಪ್ರದೇಶದಲ್ಲಿ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತದ ನಂತರ, ಸಂತ್ರಸ್ತರಿಗೆ ತ್ವರಿತ ಪರಿಹಾರವನ್ನು ಒದಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ವಿಧಾನವನ್ನು ಅನುಸರಿಸಿ, ಹಾನಿಯ ಮೌಲ್ಯಮಾಪನಕ್ಕಾಗಿ ಅಂತರ ಸಚಿವಾಲಯದ ಕೇಂದ್ರ ತಂಡವನ್ನು ರಾಜ್ಯ ಸರ್ಕಾರದ ಜ್ಞಾಪಕ ಪತ್ರಕ್ಕಾಗಿ ಕಾಯದೆ ನಿಯೋಜಿಸಲಾಯಿತು. ಹಿಮಾಚಲ ಪ್ರದೇಶಕ್ಕೆ ತಕ್ಷಣದ ಪರಿಹಾರ ಕಾರ್ಯಾಚರಣೆಗಳನ್ನು ನಿರ್ವಹಿಸಲು ಸಹಾಯ ಮಾಡಲು 2023 ರ ಆಗಸ್ಟ್ 21 ರಂದು ಎಸ್‌ಡಿಆರ್ ಎಫ್ ನಿಂದ ದ 200.00 ಕೋಟಿ ರೂ.ಗಳನ್ನು ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಈ ಹಿಂದೆ ತನ್ನ ಪಾಲಿನ ಎರಡೂ ಕಂತುಗಳನ್ನು ಎಸ್‌ಡಿಆರ್ ಎಫ್ ಗೆ ಬಿಡುಗಡೆ ಮಾಡಿದೆ.
*****
(रिलीज़ आईडी: 1985478)
आगंतुक पटल : 145