ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ರಾಷ್ಟ್ರಪತಿಗಳು ಲಖನೌ IIITಯ 2ನೇ ಘಟಿಕೋತ್ಸವ ಉದ್ದೇಶಿಸಿ ಭಾಷಣ

Posted On: 12 DEC 2023 1:09PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಡಿಸೆಂಬರ 12, 2023) ಲಕ್ನೋದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT) ಯ 2 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಇಂದು ಭಾರತವು 5 ಡಿಗಳನ್ನು ಹೊಂದಿದೆ - ಬೇಡಿಕೆ, ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ, ಆಸೆ ಮತ್ತು ಕನಸು. ನಮ್ಮ ಅಭಿವೃದ್ಧಿಯ ಪಯಣದಲ್ಲಿ ಈ 5ಡಿಗಳು ಬಹಳ ಪ್ರಯೋಜನಕಾರಿಯಾಗಲಿವೆ. ಒಂದು ದಶಕದ ಹಿಂದೆ 11 ನೇ ಸ್ಥಾನದಲ್ಲಿದ್ದ ನಮ್ಮ ಆರ್ಥಿಕತೆ ಇಂದು 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು 2030 ರ ವೇಳೆಗೆ 3 ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ.. ಭಾರತವು ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬುದು ನಮ್ಮ ಕನಸು. ಐಐಐಟಿ ಲಕ್ನೋದ ಎಲ್ಲಾ ವಿದ್ಯಾರ್ಥಿಗಳು ಈ ದೃಷ್ಟಿಯಲ್ಲಿ ಯೋಜನೆ ಮಾಡಬೇಕು. ಅದನ್ನು ಪೂರೈಸಲು ತಮ್ಮ ಕೈಲಾದ ಮಟ್ಟಿಗೆ ಪರಿಶ್ರಮ ಪಡಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಬದಲಾವಣೆ ಪ್ರಕೃತಿಯ ನಿಯಮ. 4ನೇ ಕೈಗಾರಿಕಾ ಕ್ರಾಂತಿಯ ಆರಂಭವನ್ನು ನಾವು ನೋಡುತ್ತಿದ್ದೇವೆ. ಮಾನವ ಜೀವನವನ್ನು ಸುಲಭಗೊಳಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆಯು ಒಂದು ಪ್ರಮುಖ ಸಾಧನವಾಗಿದೆ ಎಂದು ಸಾಬೀತಾಗಿದೆ. ಅದರ ವ್ಯಾಪಕವಾದ ಅನ್ವಯಗಳೊಂದಿಗೆ, AI ಮತ್ತು ಯಂತ್ರ ಕಲಿಕೆಯು ನಮ್ಮ ಜೀವನದ ಬಹುತೇಕ ಎಲ್ಲಾ ಅಂಶಗಳನ್ನು ಸ್ಪರ್ಶಿಸುತ್ತಿದೆ. ಆರೋಗ್ಯ, ಶಿಕ್ಷಣ, ಕೃಷಿ, ಸ್ಮಾರ್ಟ್ ಸಿಟಿಗಳು, ಮೂಲಸೌಕರ್ಯ, ಸ್ಮಾರ್ಟ್ ಚಲನಶೀಲತೆ ಮತ್ತು ಸಾರಿಗೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ, AI ಮತ್ತು ಯಂತ್ರ ಕಲಿಕೆಯು ನಮ್ಮ ದಕ್ಷತೆ ಮತ್ತು ಕಾರ್ಯ ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸಲು ಅನೇಕ ಅವಕಾಶಗಳನ್ನು ಪ್ರಸ್ತುತಪಡಿಸುತ್ತಿದೆ. ಭಾರತವು 4 ನೇ ಕೈಗಾರಿಕಾ ಕ್ರಾಂತಿಯ ಪ್ರಮುಖ ಭಾಗವಾಗಿದೆ ಮಾತ್ರವಲ್ಲದೆ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಬ್ಲಾಕ್‌ಚೈನ್‌ನಂತಹ ಹೊಸ ತಂತ್ರಜ್ಞಾನಗಳ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.

AI ಮತ್ತು ಇತರ ಸಮಕಾಲೀನ ತಾಂತ್ರಿಕ ಬೆಳವಣಿಗೆಗಳು ಅನಿಯಮಿತ ಮತ್ತು ಅಭೂತಪೂರ್ವ ಅಭಿವೃದ್ಧಿ ಮತ್ತು ಪರಿವರ್ತಕ ಸಾಧ್ಯತೆಗಳನ್ನು ನೀಡುತ್ತವೆ. ಆದರೆ, AI ಬಳಕೆಯಿಂದ ಉಂಟಾಗುವ ನೈತಿಕ ಸಂದಿಗ್ಧತೆಗಳನ್ನು ಮೊದಲು ಪರಿಹರಿಸುವುದು ಅವಶ್ಯಕ. ಯಾಂತ್ರೀಕರಣದಿಂದ ಉದ್ಭವವಾಗುವ ಉದ್ಯೋಗ ಸಮಸ್ಯೆಯಾಗಿರಬಹುದು, ಅಥವಾ ಆರ್ಥಿಕ ಅಸಮಾನತೆಯ ಅಂತರ ಹೆಚ್ಚಾಗಿರಬಹುದು ಅಥವಾ AI ನಿಂದ ಉಂಟಾಗುವ ಮಾನವ ಪಕ್ಷಪಾತವಾಗಿರಬಹುದು, ನಾವು ಪ್ರತಿ ಸಮಸ್ಯೆಗೆ ಸೃಜನಶೀಲ ಪರಿಹಾರಗಳನ್ನು ಕಂಡುಹಿಡಿಯಬೇಕು. ‘ಕೃತಕ ಬುದ್ಧಿಮತ್ತೆ’ ಜೊತೆಗೆ ‘ಭಾವನಾತ್ಮಕ ಬುದ್ಧಿಮತ್ತೆ’ಗೂ ನಾವು ಪ್ರಾಮುಖ್ಯತೆ ನೀಡುವುದನ್ನು ಕಲಿತುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಮಾನವ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿರುವ ಸಾಧನವಾಗಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಅತ್ಯಂತ ಕೆಳ ಹಂತದ ವ್ಯಕ್ತಿಗೆ ಪ್ರಯೋಜನವನ್ನು ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಐಐಐಟಿ ಲಕ್ನೋಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯ ಸ್ಥಾನಮಾನವನ್ನು ನೀಡಿರುವುದು ಶ್ಲಾಘನೀಯ. ಈ ಸ್ಥಿತಿಯು ಈ ಸಂಸ್ಥೆಯ ಸಾಮರ್ಥ್ಯ ಮತ್ತು ದಕ್ಷತೆಯ ಸೂಚಕವಾಗಿದೆ. ಈ ಸ್ಥಾನಮಾನದೊಂದಿಗೆ, ದೇಶ ಮತ್ತು ಸಮಾಜವು ಅವರಿಂದ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಹೊಂದಲು ಮಾತ್ರವಲ್ಲದೆ ಅಂತಹ ಶ್ರೇಷ್ಠತೆಯ ಆಯಾಮಗಳನ್ನು ಸ್ಥಾಪಿಸುತ್ತದೆ ಎಂದು ಅವರು ಹೇಳಿದರು.

ಪ್ರಾದೇಶಿಕ ಭಾಷೆಗಳಲ್ಲಿ ಜ್ಞಾನವನ್ನು ಸಂಪಾದಿಸುವ ಆಲೋಚನೆಯು ಸಕಾರಾತ್ಮಕ ಹೆಜ್ಜೆಯಾಗಿದೆ. ಈ ಹಂತವು ಭಾಷಾ ಮಿತಿಗಳಿಂದಾಗಿ ಜ್ಞಾನ ವರ್ಧನೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕುವಲ್ಲಿ ಒಂದು ದೊಡ್ಡ ಹೆಜ್ಜೆ ಎಂದು ಸಾಬೀತುಪಡಿಸುತ್ತದೆ. ಇನ್ಕ್ಯುಬೇಶನ್ ಸೆಂಟರ್ ಸ್ಥಾಪನೆ ಸಿ.ಆರ್.ಇ.ಎ.ಟಿ.ಇ. ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕಾರ್ಯಾತ್ಮಕ ಮತ್ತು ಸ್ಪಷ್ಟವಾದ ರೂಪವನ್ನು ನೀಡಲು ಇದೊಂದು
 ಶ್ಲಾಘನೀಯ ಹೆಜ್ಜೆಯಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಅದರ ಅನ್ವಯಗಳ ಮೇಲೆ ಕೇಂದ್ರೀಕರಿಸಿದ ಪಠ್ಯಕ್ರಮವು ಹೊಸ ತಾಂತ್ರಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಸಮಾಜ ಮತ್ತು ಉದ್ಯಮವು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಸಮಯದೊಂದಿಗೆ ಉದ್ಭವಿಸುವ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಐಐಐಟಿ ಲಕ್ನೋ ಬದ್ಧವಾಗಿದೆ ಎಂದು ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

 

ರಾಷ್ಟ್ರಪತಿಗಳ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
 

***



(Release ID: 1985463) Visitor Counter : 65