ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಮೊತ್ತಮೊದಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023 ಅನ್ನು ವಿಜ್ರಂಭಿತ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಉದ್ಘಾಟಿಸಿದರು
ಕ್ರೀಡಾ ಸಂಭ್ರಮಾಚರಣೆಯ ಸಾಂಸ್ಕೃತಿಕ ಪ್ರದರ್ಶನಗಳಿಂದ ತುಂಬಿದ ಉದ್ಘಾಟನಾ ಸಮಾರಂಭವು 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 1400 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಪ್ರತಿನಿಧಿಗಳನ್ನು ಉತ್ಸಾಹಭರಿತಗೊಳಿಸಿತು
ಡಿಸೆಂಬರ್ 10-17 ರ ನಡುವೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ದೆಹಲಿಯಲ್ಲಿ ಜರುಗಲಿದೆ
Posted On:
11 DEC 2023 6:08PM by PIB Bengaluru
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆಗಳು ಮತ್ತು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ದೆಹಲಿಯ ಜಾಧವ್ ಒಳಾಂಗಣ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ 2023 ಅನ್ನು ಉದ್ಘಾಟಿಸಿದರು.
ಡಿಸೆಂಬರ್ 10 ಮತ್ತು 17 ರ ನಡುವೆ ದೆಹಲಿಯ ಮೂರು ಸ್ಥಳಗಳಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಸೇವಾ ಕ್ರೀಡಾ ಮಂಡಳಿಯಿಂದ 1450 ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ, ಹಿಮಾಚಲ ಪ್ರದೇಶ ಪೊಲೀಸ್ ಬ್ಯಾಂಡ್ ಬಳಗದವರಿಂದ ಮಧುರ ದೇಶಭಕ್ತಿ ಸಂದೇಶದ ಅದ್ಭುತ ಪ್ರದರ್ಶನ ನಡೆಯಿತು. ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳಿಂದ ಕಲ್ಬೆಲಿಯ ನೃತ್ಯ ಪ್ರದರ್ಶನವೂ ನಡೆಯಿತು, ನಂತರ ಪ್ಯಾರಾ ನೃತ್ಯವನ್ನು ಬಿಂಬಿಸುವ 'ವಿ ಆರ್ ಒನ್' ಗುಂಪಿನ ನೃತ್ಯ ಕಲಾವಿದರಿಂದ ಪೆಪ್ಪಿ ಮೇಳ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಚೆಂಡನ್ನು ರೋಲಿಂಗ್ ಮಾಡುವ ಕ್ರೀಡಾ ಗೀತೆ ಮೊಳಗಿತು. 'ಪ್ಯಾರಾ ಗೇಮ್ಸ್ ನ ವಿಕಾಸ' ವಿಷಯದ ಮೇಲೆ ಎಲ್ಇಡಿ ನೃತ್ಯ ಪ್ರದರ್ಶನವು ಪ್ರೇಕ್ಷಕರನ್ನು ಆಕರ್ಷಿಸಿತು.
ಸಚಿವ ಶ್ರೀ ಅನುರಾಗ್ ಠಾಕೂರ್ ಅವರ ಜೊತೆಯಲ್ಲಿ ಪ್ಯಾರಾ ಕ್ರೀಡೆಯ ದಂತಕಥೆಗಳಾದ ದೀಪಾ ಮಲಿಕ್, ಭಾವಿನಾ ಪಟೇಲ್, ಸುಮಿತ್ ಅಂತಿಲ್ ಮತ್ತು ಇತರರು, ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು ಉದ್ಘಾಟಿಸುವ ಸಮಾರಂಭದಲ್ಲಿ ಉಪಸ್ಥಿತರಿದ್ದರು , ಮತ್ತು ಟಾರ್ಚ್ ರಿಲೇಯಲ್ಲಿ ಭಾಗವಹಿಸಿದರು.
“ದೇಶದ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಹೊಸ ಆಂದೋಲನಕ್ಕಾಗಿ ಬೆಳಕಿನ ಚೆಂಡನ್ನು ರೋಲಿಂಗ್ ಮಾಡುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಉದ್ಘಾಟಿಸುವ ಪ್ರಯತ್ನ ನಡೆಯುತ್ತಿದ್ದು ಇದು ಭಾರತೀಯ ಕ್ರೀಡೆಗಳಿಗೆ ಮತ್ತು ಕ್ರೀಡಾ ಪಟುಗಳಿಗೆ ಐತಿಹಾಸಿಕ ಕ್ಷಣವಾಗಿದೆ. ಈ ಉಪಕ್ರಮವು ಎಲ್ಲಾ ಕ್ರೀಡಾಪಟುಗಳಿಗೆ ಅವರ ಸಾಮರ್ಥ್ಯಗಳನ್ನು ಮೀರಿ ಸಮಾನ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ನವ ಭಾರತವನ್ನು ಸೂಚಿಸುತ್ತದೆ” ಎಂದು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಹೇಳಿದರು.
ಭಾಗವಹಿಸುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು “ಇಲ್ಲಿಗೆ ಬಂದು ಭಾಗವಹಿಸಲು ನೀವುಗಳು ಮಾಡಿದ ಸಾಹಸಮಯ ಪ್ರಯತ್ನಗಳನ್ನು ಗುರುತಿಸಲು ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಸೇರಿದಂತೆ 3000 ಕ್ಕೂ ಹೆಚ್ಚು ಜನರು ಇಲ್ಲಿ ಸೇರಿದ್ದಾರೆ ಮತ್ತು ಒಟ್ಟು 276 ಚಿನ್ನದ ಪದಕಗಳನ್ನು ಪಡೆದುಕೊಳ್ಳಲು ಸಿದ್ಧವಾಗಿದ್ದಾರೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ನಾನು ಶುಭ ಹಾರೈಸುತ್ತೇನೆ.” ಎಂದು ಹೇಳಿದರು.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಯತ್ನಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವಾಲಯ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಗಳ ರಾಜ್ಯ ಸಚಿವ ಶ್ರೀ ನಿಸಿತ್ ಪರ್ಮಾಣಿಕ್, “ವಿಕಲಾಂಗ್ ಪದದ ಬದಲಿಗೆ ದಿವ್ಯಾಂಗ್ ಪದವನ್ನು ಜಾರಿಗೆ ತಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂಗವಿಕಲರು ಎಂಬ ಪದವನ್ನು ಬಳಸದೆ ಅವರನ್ನು ದಿವ್ಯಾಂಗರು ಎಂದು ಕರೆಯಲು ಒತ್ತಾಯಿಸಿದರು. ಅವರ ದೂರದೃಷ್ಟಿಯ ಪ್ರಯತ್ನಗಳೇ ಜನರನ್ನು ತಮ್ಮ ಆಲೋಚನೆಗಳನ್ನು ಬದಲಾಯಿಸಲು ಪ್ರೋತ್ಸಾಹಿಸುತ್ತಿವೆ. ನಾವು ಗೌರವಾನ್ವಿತರಾಗಿ ಕಾಣುತ್ತೇವೆ, ಹಾಗೂ ಸದಾ ಅವರಿಗೆ ಕೃತಜ್ಞರಾಗಿರುತ್ತೇವೆ.” ಎಂದು ಹೇಳಿದರು.
"ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಭಾರತೀಯ ಕ್ರೀಡೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರೀ ಅನುರಾಗ್ ಠಾಕೂರ್ ಮತ್ತು ಕ್ರೀಡಾ ಸಚಿವಾಲಯದ ಸಂಪೂರ್ಣ ತಂಡವನ್ನು ನಾನು ಅಭಿನಂದಿಸುತ್ತೇನೆ, ಭಾರತವು 2030 ರ ವೇಳೆಗೆ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ 200 ಕ್ಕೂ ಹೆಚ್ಚು ಪದಕಗಳನ್ನು ಗಳಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ" ಎಂದು ಅವರು ಹೇಳಿದರು.
ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟವನ್ನು ಆಯೋಜಿಸುವ ಹಿಂದೆ ಕೇಂದ್ರ ಸರ್ಕಾರದ ಉದ್ದೇಶವು ಎಲ್ಲಾ ದಿವ್ಯಾಂಗ ಕ್ರೀಡಾಳುಗಳನ್ನು ಸಬಲೀಕರಣಗೊಳಿಸುವುದಾಗಿದೆ. ಸರ್ಕಾರವು ಅಂಗವಿಕಲರ ಕಲ್ಯಾಣಕ್ಕಾಗಿ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿದೆ.
ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು - ಇಂದಿರಾ ಗಾಂಧಿ ಸ್ಟೇಡಿಯಂ, ಜವಾಹರ್ ಲಾಲ್ ನೆಹರು ಸ್ಟೇಡಿಯಂ ಮತ್ತು ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ಎಂಬ ಮೂರು ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಏಳು ಪ್ಯಾರಾ ಸ್ಪೋರ್ಟ್ಸ್ ಅಥ್ಲೆಟಿಕ್ಸ್, ಶೂಟಿಂಗ್, ಆರ್ಚರಿ, ಫುಟ್ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಮತ್ತು ವೇಟ್ ಲಿಫ್ಟಿಂಗ್ ನಲ್ಲಿ ಸ್ಪರ್ಧೆ ನಡೆಯಲಿದೆ. ಶೀತಲ್ ದೇವಿ, ಭಾವಿನಾ ಪಟೇಲ್, ಅಶೋಕ್ ಮುಂತಾದ ಭಾರತದ ಕೆಲವು ಪ್ರಮುಖ ಅಂತಾರಾಷ್ಟ್ರೀಯ ದಿವ್ಯಾಂಗ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಖೇಲೋ ಇಂಡಿಯಾ ಯೂತ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಳ ಯಶಸ್ಸಿನ ನಂತರ ಇದೀಗ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಆಯೋಜಿಸಲಾಗುತ್ತಿದ್ದು, ಪ್ರಥಮ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಆಯೋಜಿಸುತ್ತಿರುವ ಬಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಸಂಭ್ರಮದ ವಾತಾವರಣವಿದೆ. ದಿವ್ಯಾಂಗರ ಕ್ರೀಡಾ ಹಬ್ಬವು ಒಳಗೊಳ್ಳುವಿಕೆಯ ಸಂಕೇತವಾಗಿದೆ ಮತ್ತು ಮಾನವ ಘನತೆಯನ್ನು ಗೌರವದೊಂದಿಗೆ ಆಚರಿಸುತ್ತದೆ.
*****
(Release ID: 1985220)
Visitor Counter : 86