ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

​​​​​​​PMBJP ಅಡಿಯಲ್ಲಿ ಸುವಿಧಾ ಸ್ಯಾನಿಟರಿ ನ್ಯಾಪ್‌ಕಿನ್‌ 

Posted On: 08 DEC 2023 3:05PM by PIB Bengaluru

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಅಡಿಯಲ್ಲಿ, ಸರ್ಕಾರವು ಜನ ಔಷಧಿ ಸುವಿಧಾ ಸ್ಯಾನಿಟರಿ ನ್ಯಾಪ್ಕಿನ್‌ ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡಲು ಮುಂದಾಗಿದೆ. ಮುಟ್ಟಿನ ಆರೋಗ್ಯ ಸೇವೆಗಳ ಸುಲಭ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮಹಿಳೆಯರಿಗೆ ರೂ. 1ಗೆ ಪ್ಯಾಡ್‌ ನೀಡಲಾಗುವುದು. ಈ ಪ್ಯಾಡ್‌ ಗಳನ್ನು ದೇಶಾದ್ಯಂತ ತೆರೆಯಲಾದ 10000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. 30ನೇ ನವೆಂಬರ 2023 ರವರೆಗೆ, 47.87 ಕೋಟಿ ಸುವಿಧಾ ಸ್ಯಾನಿಟರಿ ಪ್ಯಾಡ್‌ಗಳನ್ನು ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗಿದೆ.

ಪ್ರತಿ ಪ್ಯಾಡ್‌ಗೆ 1/- ನಂತೆ ಸುವಿಧಾ ಸ್ಯಾನಿಟರಿ ಪ್ಯಾಡ್‌ ಗಳನ್ನು ಹೆಚ್ಚು ಸಬ್ಸಿಡಿ ದರದಲ್ಲಿ ರೂ. 10000 ಕ್ಕೂ ಹೆಚ್ಚು ಜನ ಔಷಧಿ ಕೇಂದ್ರಗಳಿಂದ ಮಾರಾಟ ಮಾಡಲಾಗಿದೆ.

ಸುವಿಧಾ ಸ್ಯಾನಿಟರಿ ಪ್ಯಾಡ್‌ಗಳು ಹೆಚ್ಚು ಕೈಗೆಟುಕುವ ಬೆಲೆಯಲ್ಲಿವೆ ಮತ್ತು ದೇಶದಾದ್ಯಂತ ಎಲ್ಲಾ ಜನೌಷಧಿ ಕೇಂದ್ರಗಳಲ್ಲಿ ರೂ. 1/-ಗೆ  ಪ್ಯಾಡ್ ದೊರೆಯುತ್ತಿದೆ. ಈ ಪ್ಯಾಡ್‌ಗಳು ಆಕ್ಸಿ-ಬಯೋಡಿಗ್ರೇಡಬಲ್ ಮತ್ತು ಉತ್ತಮ ಗುಣಮಟ್ಟವನ್ನು ಹೊಂದಿದೆ.

ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI), ಈ ಯೋಜನೆಯ ಅನುಷ್ಠಾನ ಸಂಸ್ಥೆಯು ಮಹಿಳೆಯರಲ್ಲಿ ನೈರ್ಮಲ್ಯದ ಬಗ್ಗೆ ಉತ್ತೇಜಿಸಲು, ಸಾಮಾಜಿಕ ಮಾಧ್ಯಮ ಮತ್ತು ಇತರ ಪ್ರಚಾರ ಮಾಧ್ಯಮಗಳ ಮೂಲಕ ಸುವಿಧಾ ಸ್ಯಾನಿಟರಿ ಪ್ಯಾಡ್‌ ಗಳಿಗೆ ಪ್ರಚಾರ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ.

ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

****



(Release ID: 1984000) Visitor Counter : 77


Read this release in: English , Urdu , Hindi , Telugu