ಪ್ರಧಾನ ಮಂತ್ರಿಯವರ ಕಛೇರಿ
ಡಿಸೆಂಬರ 9ರಂದು ಇನ್ಫಿನಿಟಿ ಫೋರಂ 2.0 ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಪ್ರಧಾನಿ
ಇನ್ಫಿನಿಟಿ ಫೋರಂ ಎಂಬುದು ಫಿನ್ಟೆಕ್ ನಲ್ಲಿ ಜಾಗತಿಕ ಚಿಂತನೆಯ ನಾಯಕತ್ವದ ವೇದಿಕೆಯಾಗಿದೆ
ಶೀರ್ಷಿಕೆ - 'ಗಿಫ್ಟ್-ಐಎಫ್ಎಸ್ಸಿ: ನರ್ವ್ ಸೆಂಟರ್ ಫಾರ್ ನ್ಯೂ ಏಜ್ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್'
Posted On:
07 DEC 2023 3:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಡಿಸೆಂಬರ 9ರಂದು ಬೆಳಿಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಫಿನ್ಟೆಕ್ನಲ್ಲಿ ಜಾಗತಿಕ ಚಿಂತನೆಯ ನಾಯಕತ್ವ ವೇದಿಕೆಯಾದ ಇನ್ಫಿನಿಟಿ ಫೋರಂನ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನು ಉದ್ದಶಿಸಿ ಭಾಷಣ ಮಾಡಲಿದ್ದಾರೆ.
ರೋಮಾಂಚಕ (ವೈಬ್ರೆಂಟ್) ಗುಜರಾತ್ ಜಾಗತಿಕ ಶೃಂಗಸಭೆ 2024 ರ ಪೂರ್ವಭಾವಿಯಾಗಿ ಭಾರತ ಸರ್ಕಾರದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ (ಐಎಫ್ಎಸ್ಸಿಎ) ಮತ್ತು ಗಿಫ್ಟ್ ಸಿಟಿ ಜಂಟಿಯಾಗಿ ಇನ್ಫಿನಿಟಿ ಫೋರಂನ 2 ನೇ ಆವೃತ್ತಿಯನ್ನು ಆಯೋಜಿಸಿವೆ. ಈ ವೇದಿಕೆಯು ಪ್ರಪಂಚದಾದ್ಯಂತದ ಪ್ರಗತಿಪರ ಆಲೋಚನೆಗಳು, ಜ್ವಲಂತ ಸಮಸ್ಯೆಗಳು, ನವೀನ ತಂತ್ರಜ್ಞಾನಗಳನ್ನು ಪರಿಚಯಿಸಿಕೊಳ್ಳುವುದಕ್ಕೆ ಚರ್ಚಿಸುವುದಕ್ಕೆ ಮತ್ತು ಪರಿಹಾರಗಳು ಹಾಗೂ ಅವಕಾಶಗಳಾಗಿ ಅಭಿವೃದ್ಧಿಪಡಿಸುವುದಕ್ಕೆ ಒಂದು ವೇದಿಕೆಯನ್ನು ಒದಗಿಸುತ್ತದೆ.
ಇನ್ಫಿನಿಟಿ ಫೋರಂನ 2 ನೇ ಆವೃತ್ತಿಯ ಶೀರ್ಷಿಕೆ 'ಗಿಫ್ಟ್-ಐಎಫ್ಎಸ್ಸಿ: ನರ್ವ್ ಸೆಂಟರ್ ಫಾರ್ ನ್ಯೂ ಏಜ್ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್” ಎಂಬುದಾಗಿದೆ ಮತ್ತು , ಇದನ್ನು ಈ ಕೆಳಗಿನ ಮೂರು ಟ್ರ್ಯಾಕಗಳ ಮೂಲಕ ಸಂಯೋಜಿಸಲಾಗುವುದು:
* ಸಮಗ್ರ ಪಟ್ಟಿ (ಟ್ರ್ಯಾಕ್): ಹೊಸ ಯುಗದ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರವನ್ನು ರೂಪಿಸುವುದು.
* ಹಸಿರು ಪಟ್ಟಿ (ಟ್ರ್ಯಾಕ್) : "ಗ್ರೀನ್ ಸ್ಟ್ಯಾಕ್" ಗಾಗಿ ಪ್ರಯತ್ನ
* ಸಿಲ್ವರ್ ಟ್ರ್ಯಾಕ್: ಗಿಫ್ಟ್ ಐಎಫ್ಎಸ್ಸಿಯಲ್ಲಿ ದೀರ್ಘಾಯುಷ್ಯದ ಹಣಕಾಸು ತಾಣ/ ಕೇಂದ್ರ
ಪ್ರತಿ ಪಟ್ಟಿಯಲ್ಲಿಯೂ (ಟ್ರ್ಯಾಕ್) ಉದ್ಯಮದ ಹಿರಿಯ ನಾಯಕರಿಂದ ಇನ್ಫಿನಿಟಿ ಟಾಕ್ (ಭಾಷಣ) ಮತ್ತು ಭಾರತ ಹಾಗೂ ಪ್ರಪಂಚದಾದ್ಯಂತದ ಹಣಕಾಸು ಕ್ಷೇತ್ರದ ಉದ್ಯಮ ತಜ್ಞರು ಮತ್ತು ವೃತ್ತಿಪರರ ಪ್ಯಾನೆಲ್ ಚರ್ಚೆಯನ್ನು ಒಳಗೊಂಡಿರುತ್ತದೆ, ಇದು ಪ್ರಾಯೋಗಿಕ ಒಳನೋಟಗಳು ಮತ್ತು ಕಾರ್ಯಗತಗೊಳಿಸಬಹುದಾದ ಪರಿಹಾರಗಳನ್ನು ಒದಗಿಸುತ್ತದೆ.
ಯುಎಸ್ಎ, ಯುಕೆ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಯುಎಇ, ಆಸ್ಟ್ರೇಲಿಯಾ ಮತ್ತು ಜರ್ಮನಿ ಸೇರಿದಂತೆ 20+ ದೇಶಗಳಲ್ಲಿ ಭಾರತ ಮತ್ತು ಜಾಗತಿಕ ಪ್ರೇಕ್ಷಕರ ಬಲವಾದ ಆನ್ಲೈನ್ ಭಾಗವಹಿಸುವಿಕೆಯೊಂದಿಗೆ 300+ ಸಿಎಕ್ಸ್ಒಗಳು ಈ ವೇದಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
*****
(Release ID: 1983606)
Visitor Counter : 89
Read this release in:
Bengali
,
Assamese
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam