ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಅವರು ದಕ್ಷಿಣ ದೆಹಲಿಯಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


"ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಬೇಕು, ಭಾರತ ಪ್ರಗತಿ ಹೊಂದಬೇಕು, ಭಾರತವು ಮುಂದೆ ಸಾಗಬೇಕು ಮತ್ತು ನಮ್ಮ ಮಕ್ಕಳು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಸಂಕಲ್ಪ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ" ಎಂದು ರಾಜ್ಯ ಸಚಿವರು ಹೇಳಿದರು.

Posted On: 05 DEC 2023 5:34PM by PIB Bengaluru

ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಅವರು ಇಂದು ದಕ್ಷಿಣ ದೆಹಲಿಯ ಶಹಪುರ ಜಾಟ್ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಭಾಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ವಿಕಸಿತ ಭಾರತ ಪ್ರತಿಜ್ಞೆಯನ್ನು ಬೋಧಿಸಿದರು ಮತ್ತು ಈ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲ ನಾಯಕನಿಗಾಗಿ ದೇಶವು ಕಳೆದ 70-75 ವರ್ಷಗಳಿಂದ ಕಾಯುತ್ತಿದೆ ಮತ್ತು ಅದು 2014 ರಲ್ಲಿ ಸಂಭವಿಸಿತು ಎಂದು ಹೇಳಿದರು.  2014 ರ ಮೊದಲು, ಯಾವುದರ ಬಗ್ಗೆಯೂ ಯಾವುದೇ ಖಾತರಿ ಇರಲಿಲ್ಲ ಆದರೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಕಳ್ಳತನವಾಗುವುದಿಲ್ಲ ಎಂಬ ಖಾತರಿ ಇದೆ ಎಂದು ಅವರು ಹೇಳಿದರು. ಆಯುಷ್ಮಾನ ಆರೋಗ್ಯ ಯೋಜನೆಯಡಿ, ಪ್ರಧಾನ ಮಂತ್ರಿಯವರು ಇಡೀ ಕುಟುಂಬಕ್ಕೆ 5 ಲಕ್ಷ ರೂ.ಗಳವರೆಗೆ ಆರೋಗ್ಯ ಖಾತರಿಯನ್ನು ನೀಡಿದ್ದಾರೆ ಮತ್ತು 55 ಕೋಟಿಗೂ ಹೆಚ್ಚು ಜನರು ಈ ಯೋಜನೆಯ ವ್ಯಾಪ್ತಿಗೆ ಬರುತ್ತಾರೆ. ಆಯುಷ್ಮಾನ ಭಾರತ ಯೋಜನೆಯನ್ನು ದೆಹಲಿಯಲ್ಲಿ ಜಾರಿಗೆ ತರಲಾಗಿಲ್ಲ ಏಕೆಂದರೆ ದೆಹಲಿ ಸರ್ಕಾರವು ಅದರ ಪರವಾಗಿಲ್ಲ ಎಂದು ಲೇಖಿ ಹೇಳಿದರು.

ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ, ಇದರಿಂದ ಅವರು ಆ ಯೋಜನೆಗಳ ಲಾಭವನ್ನು ಪಡೆಯಬಹುದು ಎಂದು ಅವರು ಹೇಳಿದರು. ನಾವು ಹಾಗೆ ಮಾಡುವಲ್ಲಿ ಯಶಸ್ವಿಯಾದರೆ ನಮ್ಮ ಜೀವನವೂ ಯಶಸ್ವಿಯಾಗುತ್ತದೆ. ಭಾರತ ಸರ್ಕಾರವು ಮನೆ ಮನೆಗೆ ಹೋಗಿ ರೋಗಗಳನ್ನು ಹುಡುಕುತ್ತಿದೆ ಮತ್ತು ಮನೆಗಳ ಸುತ್ತಲೂ ಶಿಬಿರಗಳನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು. ಮೋದಿ ಜಿ ಅವರ ಖಾತರಿಯ ಪ್ರಯೋಜನವನ್ನು ಪಡೆಯದ ಎಲ್ಲ ಜನರನ್ನು ತಲುಪಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು.

ಈ ಹಿಂದೆ 44 ರೀತಿಯ ತೆರಿಗೆಗಳು ಇದ್ದವು ಆದರೆ ಈಗ ಕೇವಲ ಒಂದು ಜಿ.ಎಸ್.ಟಿ ಇದೆ, ಇದರಿಂದಾಗಿ ಸರ್ಕಾರದ ತೆರಿಗೆ ಸಂಗ್ರಹವು ಹೆಚ್ಚುತ್ತಿದೆ ಮತ್ತು ಮುರಿದ ರಸ್ತೆಗಳನ್ನು ಸರಿಪಡಿಸುವ ಮೂಲಕ, ಜನರನ್ನು ಆರೋಗ್ಯವಾಗಿಡುವ ಮೂಲಕ ಸರ್ಕಾರವು ಸಾರ್ವಜನಿಕ ಕಲ್ಯಾಣಕ್ಕಾಗಿ ಹೂಡಿಕೆ ಮಾಡುತ್ತಿದೆ ಎಂದು ಅವರು ಹೇಳಿದರು. "ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಬೇಕು, ಭಾರತ ಪ್ರಗತಿ ಹೊಂದಬೇಕು, ಭಾರತವು ಮುಂದೆ ಸಾಗಬೇಕು ಮತ್ತು ನಮ್ಮ ಮಕ್ಕಳು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಸಂಕಲ್ಪ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮಲ್ಲಿ ಉತ್ತಮ ವೈದ್ಯರು ಮತ್ತು ಎಂಜಿನಿಯರ್ ಗಳು ಇರಬೇಕು, ಎಲ್ಲೆಡೆ ಸ್ವಚ್ಛತೆ ಇರಬೇಕು, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಕೊಡುಗೆ ನೀಡೋಣ" ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನದಿಂದಾಗಿ ನಮ್ಮ ದೇಶಕ್ಕೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿಷ್ಠೆ ದೊರೆತಿದೆ ಎಂದು ಶ್ರೀಮತಿ ಲೇಖಿ ಹೇಳಿದರು.

ಭಾರತ ಸರ್ಕಾರ ಪ್ರಾರಂಭಿಸಿದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಪರಿಪೂರ್ಣತೆಯನ್ನು ಸಾಧಿಸಲು ಔಟ್ರೀಚ್ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ದೇಶಾದ್ಯಂತ ಪ್ರಾರಂಭಿಸಲಾಗಿದೆ. ದೆಹಲಿಯಲ್ಲಿ, ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನವೆಂಬರ 28 ರಂದು ನಗರ ಐಇಸಿ ವ್ಯಾನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಅಭಿಯಾನದ ಭಾಗವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 5 ಐಇಸಿ (ಮಾಹಿತಿ, ಶಿಕ್ಷಣ, ಸಂವಹನ) ವ್ಯಾನಗಳು ದೆಹಲಿಯ 11 ಜಿಲ್ಲೆಗಳಲ್ಲಿ 600 ಕ್ಕೂ ಹೆಚ್ಚು ಸ್ಥಳಗಳನ್ನು ಒಳಗೊಂಡಿವೆ. ಪಿಎಂ ಸ್ವನಿಧಿ, ಮುದ್ರಾ ಸಾಲಗಳು, ಸ್ಟ್ಯಾಂಡ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಪಾವತಿ ಕ್ರಾಂತಿಯಂತಹ ಕೇಂದ್ರ ಸರ್ಕಾರದ ಸಂಬಂಧಿತ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ನಗರ ಅಭಿಯಾನ ಹೊಂದಿದೆ.  ಪಿಎಂ ಇಬಸ್ ಸೇವಾ, ಆಯುಷ್ಮಾನ ಭಾರತ, ಪಿಎಂ ಆವಾಸ್ (ನಗರ) ಪಿಎಂ ಉಜ್ವಲ ಯೋಜನೆ ಇತ್ಯಾದಿ.

ಅಭಿಯಾನದ ಭಾಗವಾಗಿ ಪಿಎಂ ಸ್ವನಿಧಿ ಶಿಬಿರ, ಆರೋಗ್ಯ ಶಿಬಿರ, ಆಯುಷ್ಮಾನ ಕಾರ್ಡ್ ಶಿಬಿರ, ಆಧಾರ್ ನವೀಕರಣ ಶಿಬಿರ, ದೆಹಲಿಯ ವಿವಿಧ ಸ್ಥಳಗಳಲ್ಲಿ ಪಿಎಂ ಉಜ್ವಲ ಶಿಬಿರವನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾಡಳಿತವು ವ್ಯಾನಗಳು ಭೇಟಿ ನೀಡಿದ ವಿವಿಧ ಸ್ಥಳಗಳಲ್ಲಿ ಆಯೋಜಿಸುತ್ತಿದೆ. ರಾಷ್ಟ್ರ ರಾಜಧಾನಿಯ ಜನರು ವಿಶೇಷವಾಗಿ ಮಹಿಳೆಯರು ವಿ.ಬಿ.ಎಸ್.ವ್ಯಾ ನಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

****


(Release ID: 1982903) Visitor Counter : 129


Read this release in: English , Urdu , Marathi , Hindi