ಗಣಿ ಸಚಿವಾಲಯ
azadi ka amrit mahotsav

ಸೆಪ್ಟೆಂಬರ್ 2023 ರಲ್ಲಿ ಭಾರತದ ಖನಿಜ ಉತ್ಪಾದನೆಯು 11.5% ರಷ್ಟು ಹೆಚ್ಚಾಗಿದೆ


ಪ್ರಮುಖ ಖನಿಜಗಳು ಉತ್ಪಾದನೆಯಲ್ಲಿ ಧನಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತಿವೆ

Posted On: 05 DEC 2023 4:11PM by PIB Bengaluru

ಸೆಪ್ಟೆಂಬರ್, 2023 (ಆಧಾರ: 2011-12=100) ತಿಂಗಳಿನ ಗಣಿಗಾರಿಕೆ ಮತ್ತು ಕಲ್ಲಿದ್ದಲ್ಲು ಗಣಿಗಾರಿಕೆ ವಲಯದ ಖನಿಜ ಉತ್ಪಾದನೆಯ ಸೂಚ್ಯಂಕ 111.5 ರನ್ನು, ಸೆಪ್ಟೆಂಬರ್, 2022 ರ ಮಟ್ಟಕ್ಕೆ ಹೋಲಿಸಿದರೆ 11.5 % ರಷ್ಟು ಹೆಚ್ಚಾಗಿದೆ. ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (ಐ.ಬಿ.ಎಂ) ನ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಅಂಕಿಅಂಶಕ್ಕಿಂತ ಈ ಬಾರಿಯ ಏಪ್ರಿಲ್-ಸೆಪ್ಟೆಂಬರ್, 2023-24 ರ ಅವಧಿಯಲ್ಲಿ 8.7 ಶೇಕಡಾ ಸಂಚಿತ ಬೆಳವಣಿಗೆಯಾಗಿದೆ.

ಸೆಪ್ಟೆಂಬರ್, 2023 ರಲ್ಲಿ ಪ್ರಮುಖ ಖನಿಜಗಳ ಉತ್ಪಾದನೆ: ಕಲ್ಲಿದ್ದಲು 673 ಲಕ್ಷ ಟನ್, ಲಿಗ್ನೈಟ್ 29 ಲಕ್ಷ ಟನ್, ನೈಸರ್ಗಿಕ ಅನಿಲ (ಈಗಾಗಲೇ ಬಳಸಲಾಗಿದೆ) 2974 ಮಿಲಿಯನ್ ಕ್ಯೂ. ಮೀ., ಪೆಟ್ರೋಲಿಯಂ (ಕಚ್ಚಾ) 24 ಲಕ್ಷ ಟನ್, ಬಾಕ್ಸೈಟ್ 1726,000 ಟನ್, ಕ್ರೋಮೈಟ್ 117,000 ಟನ್, ಕಾಪರ್ ಕಾಂಕ್. 10,000 ಟನ್, ಚಿನ್ನ 113 ಕೆಜಿ, ಕಬ್ಬಿಣದ ಅದಿರು 195 ಲಕ್ಷ ಟನ್, ಲೀಡ್ ಕಾಂಕ್. 29,000 ಟನ್, ಮ್ಯಾಂಗನೀಸ್ ಅದಿರು 247,000 ಟನ್, ಜಿಂಕ್ ಕಾಂಕ್. 134,000 ಟನ್, ಸುಣ್ಣದ ಕಲ್ಲು 347 ಲಕ್ಷ ಟನ್, ಫಾಸ್ಫೊರೈಟ್ 88,000 ಟನ್, ಮ್ಯಾಗ್ನೆಸೈಟ್ 09,000 ಟನ್.

ಸೆಪ್ಟೆಂಬರ್, 2022 ರ ಅಂಕಿಅಂಶದ ಪ್ರಕಾರ ಸೆಪ್ಟೆಂಬರ್, 2023 ಲ್ಲಿ ಧನಾತ್ಮಕ ಬೆಳವಣಿಗೆಯನ್ನು ತೋರಿಸಿದ ಪ್ರಮುಖ ಖನಿಜಗಳು: ಮ್ಯಾಂಗನೀಸ್ ಅದಿರು (51.5%), ಚಿನ್ನ (22.8%), ಕಬ್ಬಿಣದ ಅದಿರು (17%), ಕಲ್ಲಿದ್ದಲು (16%), ಸುಣ್ಣದ ಕಲ್ಲು (13.7%), ನೈಸರ್ಗಿಕ ಅನಿಲ ( ಯು) (6.6%), ಲಿಗ್ನೈಟ್(6.2%) ಬಾಕ್ಸೈಟ್ (3.5%), ಜಿಂಕ್ ಕಾಂಕ್.(1.6%), ಕ್ರೋಮೈಟ್ (1.6%), ಕಾಪರ್ ಕಾಂಕ್.(0.2%) ಮತ್ತು ಅಂಕಿಅಂಶದ ಪ್ರಕಾರ ಋಣಾತ್ಮಕ ಬೆಳವಣಿಗೆಯನ್ನು ತೋರಿಸುವ ಇತರ ಪ್ರಮುಖ ಖನಿಜಗಳು: ಪೆಟ್ರೋಲಿಯಂ( ಕಚ್ಚಾ) (-0.3%), ಲೀಡ್ ಕಾಂಕ್.(-3.0%), ಮ್ಯಾಗ್ನೆಸೈಟ್ (-3.7%), ಮತ್ತು ಫಾಸ್ಫೊರೈಟ್ (-41.5%) 

 

****

 

 


(Release ID: 1982744) Visitor Counter : 99