ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಗೋವಾದಲ್ಲಿ ನಡೆದ 54 ನೇ ಐಎಫ್ಎಫ್ಐ ನಲ್ಲಿ “ಒನ್ ವರ್ಲ್ಸ್ ಸಿನೆಮಾಗೆ ಇದು ಸಮಯವೇ” ಎಂಬ ವಿಷಯ ಕುರಿತು  ಹಾಲಿವುಡ್ ದಂತಕಥೆ ಮೈಖೆಲ್ ಡೌಗ್ಲಾಸ್ ಹಾಗೂ ನಿರ್ಮಾಪಕ ಶೈಲೇಂದ್ರ ಸಿಂಗ್ ಸಂವಾದ


ಸಿನೆಮಾ ಆಧಾರಿತ ಅಸಲಿ ಕಥೆಯ ಚಿತ್ರ ಮತ್ತು ಸಾರ್ವತ್ರಿಕ ಸಂದೇಶದೊಂದಿಗೆ ಚಲನಚಿತ್ರ ಜಾಗತಿಕ ಪ್ರೇಕ್ಷಕರನ್ನು ತಲುಪಲಿದೆ : ಮೈಖೆಲ್ ಡೌಗ್ಲಾಸ್

ಗೋವಾ, ನವೆಂಬರ್ 28, 2023:

ಗೋವಾದಲ್ಲಿ ನಡೆದ 54 ನೇ ಐಎಫ್ಎಫ್ಐ ನಲ್ಲಿ ಸಿನೆಮಾದ ಸಾರ್ವತ್ರಿಕ ಭಾಷೆ ಕುರಿತು ಹಾಲಿವುಡ್ ನಟ ಮತ್ತು ಚಲನಚಿತ್ರ ನಿರ್ಮಾಪಕ ಮೈಖೆಲ್ ಡೌಗ್ಲಾಸ್ ಮತ್ತು ಚಲನಚಿತ್ರ ನಿರ್ಮಾಪಕ ಶೈಲೇಂದ್ರ ಸಿಂಗ್ ಅವರ ನಡುವೆ ಸಂವಾದ ನಡೆಯಿತು.

““ಒನ್ ವರ್ಲ್ಸ್ ಸಿನೆಮಾಗೆ ಇದು ಸಮಯವೇ” ಎಂಬ ವಿಷಯ ಕುರಿತು ಮಾತನಾಡಿ, ಭೌಗೋಳಿಕ ಗಡಿಗಳನ್ನು ದಾಟಲು ಪ್ರಯತ್ನಿಸುವ ಚಲನಚಿತ್ರಗಳ ಮೇಲೆ ಬೆಳಕು ಚೆಲ್ಲಿದರು. ಇದು ಚಿತ್ರನಿರ್ಮಾಣಕಾರರನ್ನು, ಕಥೆ ಹೇಳುವವರು ಮತ್ತು ಪ್ರೇಕ್ಷಕರನ್ನು ಜಗತ್ತಿನ ಪ್ರತಿಯೊಂದು ಮೂಲೆಗೆ ತಲುಪಿಸುತ್ತದೆ ಎಂದರು.

ಉತ್ಸಾಹಭರಿತ ಚಿತ್ರ ನಿರ್ಮಾಪಕರು ಮತ್ತು ಕೈಗಾರಿಕಾ ವೃತ್ತಿಪರರ ಜೊತೆ ಮಾತನಾಡಿದ ಮೈಖೆಲ್ ಡೌಗ್ಲಾಸ್, “ವಸ್ತುವಿನಿಂದ ಒಂದು ಉತ್ತಮ ಚಿತ್ರವನ್ನು ನಿರ್ಮಿಸಬಹುದು. ಕೆಲವೊಮ್ಮೆ ಅದು ವೈಯಕ್ತಿಕ ಮತ್ತು ತನ್ನ ದೇಶಕ್ಕೆ ಆಪ್ಯಾಯಮಾನವಾದ ವಿಷಯ ಮತ್ತು ಜಾಗತಿಕ ಸಾಮರ್ಥ್ಯದ ಸಂದೇಶ ಜಗತ್ತನ್ನು ಆಕರ್ಷಿಸಲಿದೆ.” ಎಂದರು.

ಇತರೆ ಸ್ಥಳಗಳಿಗೆ ಹೋಲಿಸಿದರೆ ಸಿನೆಮಾ ವಿಷಯದಲ್ಲಿ ಭಾರತ ಭಿನ್ನವಾಗಿದೆ. ಏಕೆಂದರೆ ಭಾರತ ಅಸಾಧಾರಣವಾದ ದೊಡ್ಡ ಚಲನಚಿತ್ರೋದ್ಯಮವನ್ನು ಮತ್ತು ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಆದ್ದರಿಂದ ಇತರೆ ದೇಶಗಳಿಗೆ ಹೋಲಿಸಿದರೆ ದೇಶದ ಹೊರಗೆ ಹೋಗುವ ಅಗತ್ಯ ಮತ್ತು ಬಯಕೆ ಇಲ್ಲ ಎಂದರು.

https://static.pib.gov.in/WriteReadData/userfiles/image/28-3-12OYD.jpg

ಆರ್.ಆರ್.ಆರ್ ಸಿನೆಮಾ ಜಗತ್ತಿನ ಗಮನ ಸೆಳೆಯಿತು, ಖ್ಯಾತ ನಿರ್ಮಾಪಕ ಮತ್ತು ನಟನಿಂದಾಗಿ ಆರ್.ಆರ್.ಆರ್ ಭಾರತವಷ್ಟೇ ಅಲ್ಲದೇ ಜಗತ್ತಿನಾದ್ಯಂತ ದೊಡ್ಡ ಹಿಟ್ ಚಿತ್ರವಾಯಿತು. ಭಾರತದ ತನ್ನದೇ ಕಥೆಯನ್ನು ಆಧರಿಸಿದ ಸಿನೆಮಾದಲ್ಲಿ ಸಾರ್ವತ್ರಿಕ ಸಂದೇಶವಿದೆ ಎಂದರು.

ಸಿನೆಮಾ ಯಶಸ್ವಿಯಾಗಿದೆ. ಒಬ್ಬರು ತಮಗಾಗಿ ವಸ್ತುವನ್ನು ತಯಾರಿಸಬೇಕು ಮತ್ತು ಅದು ಜಗತ್ತಿನ ಉಳಿದ ಭಾಗಗಳನ್ನು ತಲುಪಲಿದೆಯೇ ಎಂದು ಯೋಚಿಸಬಾರದು ಎಂದು ಅಭಿಪ್ರಾಯಪಟ್ಟರು.

ದಶಕಗಳ ವೃತ್ತಿ ಜೀವನ ಮತ್ತು ಸಾಟಿಯಿಲ್ಲದ ಯಶಸ್ಸಿನಿಂದ ಗುರುತಿಸಲ್ಪಟ್ಟಿರುವ ಅವರು, ಭಾರತದ ಜನರಿಗೆ ನೀಡಿದ ಸಂದೇಶದಲ್ಲಿ “ತಮಗೆ ಯುವ ಸಮೂಹದ ಬಗ್ಗೆ ಹೆಚ್ಚಿನ ನಂಬಿಕೆ ಇದೆ. ಏಕೆಂದರೆ ಅವರ ಬಳಿ ಸಾಮಾಜಿಕ ಮಾಧ್ಯಮವಿದೆ ಮತ್ತು ಅವರು ಹವಾಮಾನ ಬದಲಾವಣೆಯಂತಹ ಸಮಸ್ಯೆ ನಿವಾರಣೆಗೆ ಅತ್ಯಂತ ನಿಕಟವಾಗಿ ಕೆಲಸ ಮಾಡಲು ಪ್ರಯತ್ನಿಸುವುದನ್ನು ನಂಬುತ್ತಾರೆ” ಎಂದರು.

ಸಿನೆಮಾ ನಿರ್ಮಾಣ ಕ್ಷೇತ್ರದ ತಮ್ಮ ಆರಂಭಿಕ ದಿನಗಳನ್ನು ನೆನಪು ಮಾಡಿಕೊಂಡ ಅವರು, ತಮ್ಮ ತಂದೆ ಪ್ರಸಿದ್ಧ ನಟ, ನಿರ್ಮಾಪಕ ದಿವಂಗತ ಕಿರ್ಕ್ ಡೌಗ್ಲಾಸ್ ಅವರ ಪುಸ್ತಕವನ್ನು ಪಡೆದುಕೊಂಡು ನಾಟಕ ರೂಪಿಸಿದ್ದಾಗಿ ಹೇಳಿದರು. 23 ನೇ ವಯಸ್ಸಿನಲ್ಲಿ “ಒನ್ ಫ್ಲೈ ಓವರ್ ದಿ ಕುಕ್ಕೂಸ್ ನೆಸ್ಟ್ “ ನೊಂದಿಗೆ ತಮ್ಮ ಯಾನ ಆರಂಭವಾಯಿತು. ಈ ಮೈಖೆಲ್ ಡೌಗ್ಲಾಸ್ ರಂಗಕ್ಕಿಳಿದ ಮತ್ತು ಸಿನೆಮಾ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡ. ನಂತರ ಡ್ಯಾನಿ ಡಿ ವಿಟೋ ಅಭಿನಯಿಸಿದ, ಜಾನ್ ನಿಕೋಲಸ್ ನಿರ್ವಹಿಸಿದ ಸಿನೆಮಾ ಹಿಟ್ ಚಿತ್ರ ನಿರ್ಮಿಸಿದ ಎಂದರು.  

https://static.pib.gov.in/WriteReadData/userfiles/image/28-3-2G17G.jpg

ಸಿನೆಮಾಗಳ ಅನ್ವೇಷಣೆ ಮತ್ತು ಚಿತ್ರಕಥೆಯನ್ನು ಆಯ್ಕೆ ಮಾಡುವಲ್ಲಿ ನಟನಾಗಿ ಅವರ ಪ್ರೇರೇಪಣೆ ಕುರಿತು ಮಾತನಾಡಿ, “ಸಿನೆಮಾಗಳ ಪರಿಶೋಧನೆ ಮತ್ತು ನಾಯಕನಾಗಿ ಉತ್ತಮ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಬಯಕೆಯಾಗಿದೆ, ಅದು ಸಣ್ಣ ಪಾತ್ರವಾಗಿರಬಹುದು. ಅದು ಉತ್ತಮ ಚಿತ್ರದಲ್ಲಿ ಸಣ್ಣ ಪಾತ್ರವಿರಬಹುದು, ಇಲ್ಲವೆ ಕೆಟ್ಟ ಚಿತ್ರದಲ್ಲಿ ದೊಡ್ಡ ಪಾತ್ರವಿರಬಹದು.” ಎಂದರು.

ತನ್ನ ತಂದೆ ಕಿರ್ಕ್ ಡೌಗ್ಲಾಸ್ ಅವರು ಒಂದು ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ತಂದರೆ ಬುದ್ದಿವಂತ ಪದಗಳೆಂದರೆ ಒಬ್ಬ ನಟನಾಗಿ ಮಾಡಲು ಕಷ್ಟಕರ ವಿಷಯವೆಂದರೆ ನೀವೆ. ಸರಳವಾಗಿರುವುದು, ನಟನಾಗಿ ಅತ್ಯಂತ ತ್ರಾಸದಾಯಕ ವಿಚಾರವೆಂದರೆ ಆಲಿಸುವುದು, ನಟರು ಕೇವಲ ಮಾತನಾಡುತ್ತಾರೆ, ಕೇಳುವುದಿಲ್ಲ.” ಎಂದರು.

ನಾನು ನನ್ನ ತಂದೆಯ ಪರಂಪರೆಯನ್ನು ಮುಂದುವರೆಸುತ್ತಿದ್ದೇನೆ. ಮಗ ಡೈಲೆನ್ ಡೌಗ್ಲಾಸ್ ಇದೇ ರೀತಿ ಇರಬೇಕೆಂದು ಬಯಸುತ್ತಾನೆ ಎಂದು ಹೇಳಿದರು.

https://static.pib.gov.in/WriteReadData/userfiles/image/28-3-3CEY4.jpg

ನಟನಾಗಿ ಎದುರಿಸುವ ಸವಾಲುಗಳು ಮತ್ತು ರಂಗದ ಮೇಲಿನ ಭಯದಿಂದ ಹೊರ ಬರುವ ಕುರಿತು ಮಾತನಾಡಿದ ಮೈಖೆಲ್ ಡೌಗ್ಲಾಸ್, “ಕ್ಯಾಮರಾ ಯಾವಾಗಲೂ ಸುಳ್ಳನ್ನು ಸೆರೆ ಹಿಡಿಯುತ್ತದೆ ಮತ್ತು ಮೊದಲ ಕೆಲ ವರ್ಷಗಳು ಇದು ಸವಾಲಾಗಿರುತ್ತದೆ. ನಟನೆಯ ಭಯದಿಂದ ಹೊರ ಬರಲು, ನಟನೆ ಎಂಬುದು ನಟಿಸುವುದು ಮತ್ತು ಇತರರಿಗೆ ಅರ್ಥ ಮಾಡಿಸುವುದು, ನಾವು ಪ್ರತಿದಿನ ಮಾಡುವ ಕೆಲಸ ಇದಾಗಿದೆ. ಇದರಿಂದ ಭಯಮುಕ್ತನಾಗಲು ನೆರವಾಯಿತು ಮತ್ತು ನಟನೆಯ ಕುಶಲತೆಯನ್ನು ಅರ್ಥಮಾಡಿಕೊಂಡೇ ಮತ್ತು ಅದನ್ನು ಆನಂದಿಸಲು ಪ್ರಾರಂಭಿಸಿದೆ.”

ಸಿನೆಮಾ ದೂರದೃಷ್ಟಿಗೆ ಮಾನ್ಯತೆ ಸಿಗುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಮೈಖೆಲ್ ಡೌಗ್ಲಾಸ್, ಮೊದಲು ಕೃತಜ್ಞತೆ ವ್ಯಕ್ತಪಡಿಸಿದರು. “ನಿರ್ಮಾಪಕನಾಗಿ 360 ಕೋನದಿಂದಲೂ ಜ್ಞಾನವಂತರಾಗಬೇಕು. ನಡೆಯುವ ಪ್ರತಿಯೊಂದು ತಿಳಿದುಕೊಂಡಿರಬೇಕು. ಅದು ನಮ್ಮನ್ನು ಮುನ್ನಡೆಸುತ್ತದೆ” ಎಂದು ಹೇಳಿದರು.

ತಮ್ಮ ತಂದೆ ಸದಾ ಕಾಲ ಹೇಳುತ್ತಿದ್ದುದ್ದನ್ನು ಶೈಲೇಂದ್ರ ಸಿಂಗ್ ಮೆಲಕು ಹಾಕಿದರು. “ನಾವೆಲ್ಲರೂ ಎಲ್ಲೋ ಹೋಗಲು ಪ್ರಯತ್ನಿಸುತ್ತೇವೆ, ವಿಶ್ವದ ಯಾವುದೇ ಭಾಗದಲ್ಲಿ ಚಲನಚಿತ್ರಗಳನ್ನು ತಯಾರಿಸಬಹುದು, ಜೀವನದ ಅತಿದೊಡ್ಡ ಬಹುಮಾನ ಮತ್ತು ಸಂಭ್ರಮವೆಂದರೆ ನೀವು ಉಸಿರಾಡುತ್ತೀದ್ದೀರಿ ಮತ್ತು ನಿಮ್ಮ ಹೃದಯ ಇನ್ನೂ ಬಡಿದುಕೊಳ್ಳುತ್ತಿದೆ. ಜೀವಂತವಾಗಿರುವುದೇ ಅತಿ ದೊಡ್ಡ ಸಂಭ್ರಮಾಚರಣೆ ಎಂಬುದನ್ನು ಮರೆಯಬೇಡಿ.” ಎಂದರು.

https://static.pib.gov.in/WriteReadData/userfiles/image/28-3-449JS.jpg

ಐಎಫ್ಎಫ್ಐ 54 ರ ಚಲನಚಿತ್ರೋತ್ಸವದ ನಿರ್ದೇಶಕರಾದ ಪೃಥುಲ್ ಕುಮಾರ್ ಅವರು ಶ್ರೇಷ್ಠ ಭಾಷಣಕಾರರನ್ನು ಗೌರವಿಸಿದರು.

ಐಎಫ್ಎಫ್ಐ 54 ನೇ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿಂದು ಮೈಖೆಲ್ ಡೌಗ್ಲಾಸ್ ಅವರಿಗೆ ಸತ್ಯಜೀತ್ ರೇ ಅವರ ಜೀವಮಾನದ ಸಾಧನೆ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.

 

* * *

 

 

iffi reel

(Release ID: 1980632) Visitor Counter : 90