ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಆರು ರಾಷ್ಟ್ರಗಳ ರಾಯಭಾರಿಗಳು ರುಜುವಾತುಗಳಿರುವ ಶಿಫಾರಸು ಪತ್ರಗಳನ್ನು ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಸಿದರು

Posted On: 28 NOV 2023 1:17PM by PIB Bengaluru

ರಾಷ್ಟ್ರಪತಿ ಭವನದಲ್ಲಿ ಇಂದು (ನವೆಂಬರ್ 28, 2023) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಐರ್ಲೆಂಡ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಅರ್ಮೇನಿಯಾ, ಮಲೇಷ್ಯಾ, ಮಾಲಿ ಮತ್ತು ಮಾರ್ಷಲ್ ದ್ವೀಪಗಳ ರಾಯಭಾರಿ / ಹೈ ಕಮಿಷನರ್ ಗಳಿಂದ  ರುಜುವಾತು ಜೊತೆಗೆ ಶಿಫಾರಸು ಪತ್ರಗಳನ್ನು ಸ್ವೀಕರಿಸಿದರು. 

ತಮ್ಮ ರುಜುವಾತು ಜೊತೆಗೆ ಶಿಫಾರಸು ಪತ್ರಗಳನ್ನು ಸಲ್ಲಿಸಿದ ರಾಯಭಾರಿಗಳ ಪಟ್ಟಿ  ಹೀಗಿದೆ:

1. ಘನತೆವೆತ್ತ ಶ್ರೀ ಕೆವಿನ್ ಕೆಲ್ಲಿ, ಐರ್ಲೆಂಡ್ ರಾಯಭಾರಿ

2. ಘನತೆವೆತ್ತ ಶ್ರೀ ಹ್ಯಾರಿಸ್ ಹ್ರ್ಲೆ, ಬೋಸ್ನಿಯಾ ಮತ್ತು ಹರ್ಜೆಗೋವಿನಾ ರಾಯಭಾರಿ

3. ಘನತೆವೆತ್ತ ಶ್ರೀ ವಹಾಗ್ನ್ ಅಫ್ಯಾನ್, ಅರ್ಮೇನಿಯಾ ಗಣರಾಜ್ಯದ ರಾಯಭಾರಿ

4. ಘನತೆವೆತ್ತ ಶ್ರೀ ಮುಜಾಫರ್ ಶಾ ಬಿನ್ ಮುಸ್ತಫಾ, ಮಲೇಷ್ಯಾ ಹೈ ಕಮಿಷನರ್

5. ಘನತೆವೆತ್ತ ಬ್ರಿಗೇಡಿಯರ್ ಜನರಲ್ ಫೆಲಿಕ್ಸ್ ಡಿಯಲ್ಲೊ, ಮಾಲಿ ಗಣರಾಜ್ಯದ ರಾಯಭಾರಿ

6. ಘನತೆವೆತ್ತ ಶ್ರೀ ಅಲೆಕ್ಸಾಂಡರ್ ಕಾರ್ಟರ್ ಬಿಂಗ್, ಮಾರ್ಷಲ್ ದ್ವೀಪಗಳ ಗಣರಾಜ್ಯದ ರಾಯಭಾರಿ
 

 
***


(Release ID: 1980413)