ವಾರ್ತಾ ಮತ್ತು ಪ್ರಸಾರ ಸಚಿವಾಲಯ
‘ಮಹಿಳೆಯರು ಮತ್ತು ಸಾಮಾಜಿಕ ಕಂದಕಗಳು (ಅಡೆತಡೆಗಳು)’ ಕುರಿತು ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರೊಂದಿಗೆ ಸಂವಾದ
ಸಮಾಜದಲ್ಲಿ ಮಹಿಳೆಯರು ಇದೀಗ ಕೇಂದ್ರ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಪುರುಷರೊಂದಿಗೆ ಹೊಂದಿರುವ ಸಂಬಂಧದಿಂದಲೇ ಮಹಿಳೆಯರ ಸ್ಥಾನಮಾನ ವ್ಯಾಖ್ಯಾನಕ್ಕೆ ಒಳಗಾಗುವುದಿಲ್ಲ: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ವಿದ್ಯಾ ಬಾಲನ್
ಗೋವಾ, 27 ನವೆಂಬರ್ 2023
"ಈ ಹಿಂದೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ನಟಿಯರು ನಿರ್ವಹಿಸಿದ ಎಲ್ಲಾ ಅಸಾಧಾರಣ ಪಾತ್ರಗಳು ಮತ್ತು ಇನ್ನಷ್ಟು ಹೆಚ್ಚಿನದನ್ನು ಮಾಡಬೇಕೆಂಬ ಅವರ ಉತ್ಕಟ ಬಯಕೆಯೇ ನಾವೀಗ ಚಲನಚಿತ್ರಗಳಲ್ಲಿ ಮಹಿಳಾ ಪ್ರಧಾನ ಕಥೆಗಳನ್ನು ಹೇಳುವ ಹಂತ ತಲುಪಲು ನಮ್ಮನ್ನು ಪ್ರೇರೇಪಿಸಿದೆ" ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಸಂದರ್ಶನದಲ್ಲಿ ಹೇಳಿದರು. ಗೋವಾದಲ್ಲಿ ನಡೆಯುತ್ತಿರುವ ಭಾರತದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನೇಪಥ್ಯದಲ್ಲಿ ನಡೆದ 'ಮಹಿಳೆಯರು ಮತ್ತು ಸಾಮಾಜಿಕ ಕಂದಕಗಳು' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮನದಾಳದ ಬಯಕೆ ಅಥವಾ ಇಚ್ಛೆಯನ್ನು ಹೊರಹಾಕಿದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ, ಪ್ರೇಕ್ಷಕರೊಂದಿಗೆ ಸಂಬಂಧ ಹೊಂದುವಂತಹ ಹೊಸ ಕಥೆಗಳು ಮತ್ತು ಪಾತ್ರಗಳನ್ನು ನಿರಂತರವಾಗಿ ಹುಡುಕುವುದು ಬಹಳ ಮುಖ್ಯ. "ಸಾಂಪ್ರದಾಯಿಕ ಪಾತ್ರಗಳು ಮತ್ತು ಆ ಪಾತ್ರಗಳನ್ನು ನಿರ್ವಹಿಸುವಾಗ ನಾವೇ ಆಗಿರುವುದು ನನಗೆ ಬಹಳ ಮುಖ್ಯವಾಗಿದೆ" ಎಂದು ಅವರು ಹೇಳಿದರು.
ಪ್ರತಿ ಚಿತ್ರದಲ್ಲೂ ಬಹುಮುಖ ಪಾತ್ರಗಳನ್ನು ಮಾಡಲು ಸ್ಫೂರ್ತಿ ಎಂಬ ಪ್ರಶ್ನೆಗೆ ಉತ್ತರಿಸಿದ ನಟ, ಊಹಿಸಲಾಗದ ಪಾತ್ರಗಳನ್ನು ಮಾಡುವ ಬಯಕೆ ಮತ್ತು ಭಾರತೀಯ ಚಿತ್ರರಂಗದಲ್ಲಿ ಸ್ತ್ರೀ ಪಾತ್ರಗಳ ಸ್ಟೀರಿಯೊಟೈಪಿಂಗ್ ಅನ್ನು ಮುರಿಯಲು ನನಗೆ ಪ್ರೇರಣೆಯಾಗಿದೆ ಎಂದು ಉತ್ತರಿಸಿದರು. "ನಾನು ಮಾಡುವ ಪ್ರತಿ ಚಿತ್ರದಲ್ಲಿ ಆರಾಮ ವಲಯದಿಂದ ಹೊರಬರುವ ಕಲ್ಪನೆಯನ್ನು ನಾನು ಇಷ್ಟಪಡುತ್ತೇನೆ ಮತ್ತು ಅದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ, ಅದು ನನಗೆ ಬಹಳ ವಿಮೋಚನೆ ನೀಡುತ್ತದೆ" ಎಂದು ಅವರು ಹೇಳಿದರು.
ಭಾರತೀಯ ಚಿತ್ರರಂಗದಲ್ಲಿ ಮಹಿಳೆಯ ಚಿತ್ರಣದ ಮಹತ್ವಕ್ಕೆ ಒತ್ತು ನೀಡಿದ ಅವರು, ನಮ್ಮ ಸಮಾಜದಲ್ಲಿ ಬೇರೂರಿರುವ ಮಹಿಳೆಯರ ಬಗೆಗಿನ ರೂಢಿಗತ ಮನೋಭಾವಗಳನ್ನು ನಾವೆಲ್ಲರೂ ತೊಡೆದುಹಾಕಬೇಕಾಗಿದೆ. "ಇಂದಿನ ಜಗತ್ತಿನಲ್ಲಿ ಮಹಿಳೆಯರು ಸಮಯಕ್ಕಿಂತ ಮುಂದಿದ್ದಾರೆ" ಎಂದು ನಟಿ ಪ್ರತಿಪಾದಿಸಿದರು.
3 ದಶಕಗಳ ವೃತ್ತಿಜೀವನದ ಅವಧಿಯಲ್ಲಿ, ನಟಿ ಪರಿಣೀತಾ, ಭೂಲ ಭುಲೈಯಾ, ಪಾ, ಕಹಾನಿ, ದಿ ಡರ್ಟಿ ಪಿಕ್ಚರ್, ಶಕುಂತಲಾ ದೇವಿ, ಶರೇನಿ ಮತ್ತು ಜಲ್ಸಾದಂತಹ ಚಿತ್ರಗಳಲ್ಲಿ ಅಸಾಂಪ್ರದಾಯಿಕ ಪಾತ್ರಗಳನ್ನು ಉತ್ತಮ ಕೌಶಲ್ಯದಿಂದ ನಟಿಸಿದ್ದೇನೆ. ನನ್ನ ಅಭಿನಯದ ಚಲನಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಸ್ತ್ರೀ ಪಾತ್ರಗಳ ಚಿತ್ರಣವನ್ನೇ ಬದಲಿಸಿದೆ ಎಂದು ಅವರು ತಿಳಿಸಿದರು.
* * *
(Release ID: 1980329)
Visitor Counter : 133