ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​ನ್ಯಾಷನಲ್‌ ಫಿಲ್ಮ್ ಹೆರಿಟೇಜ್ ಮಿಷನ್ ಅಡಿಯಲ್ಲಿ ಮರುಸ್ಥಾಪಿತ ಏಳು ಕ್ಲಾಸಿಕ್‌ ಸಿನಿಮಾಗಳ ಪ್ರದರ್ಶನದ ಮೂಲಕ ಸಂಭ್ರಮಿಸಿದ ಐಎಫ್‌ಎಫ್‌ಐ


ಎನ್ಎಫ್‌ಎಚ್‌ಎಂ: ನಮ್ಮ ಸಿನಿಮಾ ಪರಂಪರೆಯ ಕಾಲಾತೀತ ಸಂಪತ್ತನ್ನು ಸಂರಕ್ಷಿಸುವ ರಾಷ್ಟ್ರದ ಬದ್ಧತೆಗೆ ಸಾಕ್ಷಿಯಾಗಿದೆ

ನಿರ್ದೇಶಕ ಕೇತನ್ ಆನಂದ್ ಅವರಿಂದ "ಹಕೀಕತ್- 2" ಕ್ಲಾಸಿಕ್ ಹಕೀಕತ್‌ನ ಉತ್ತರಭಾಗ ಮುಂದಿನ ವರ್ಷ ನಿರ್ಮಾಣ ಘೋಷಣೆ

ಡಿಜಿಟಲ್‌ ವಲಯ ಪ್ರವೇಶಿಸುವುದು ಉತ್ತಮ, ಆದರೆ ನಾವು ಸೆಲ್ಯುಲಾಯ್ಡ್‌ ಸಿನಿಮಾದ ವೃತ್ತಿಗಳನ್ನು ಸಂರಕ್ಷಿಸಬೇಕಾದ ಅಗತ್ಯವೂ ಇದೆ: ವೈಭವ್ ಆನಂದ್

Posted On: 23 NOV 2023 4:32PM by PIB Bengaluru

ಕ್ಲಾಸಿಕ್‌ ಸಿನಿಮಾಗಳ ಮರುಸ್ಥಾಪನೆಯ ನಿಟ್ಟಿನಲ್ಲಿ ಭಾರತ ಸರಕಾರ ಹಾಗೂ ಎನ್‌ಎಫ್‌ಡಿಸಿಯ ಪ್ರಯತ್ನಗಳನ್ನು ನಿರ್ದೇಶಕ ಕೇತನ್‌ ಆನಂದ್‌ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. "ಮುದ್ರಣ ಆವೃತ್ತಿಯನ್ನು ತೆಗೆದುಕೊಂಡು ಅದನ್ನು ಮರುಸ್ಥಾಪಿಸಿರುವುದು ಉತ್ತಮವಾಗಿದ್ದು, ಇದು ಗಮನಾರ್ಹ ತಂತ್ರಜ್ಞಾನವಾಗಿದೆ. ಹಾಗೆಯೇ ಪ್ರತಿಯೊಂದು ಫ್ರೇಮ್‌ಗಳ ಮರುಸ್ಥಾಪನೆಯು ಪ್ರಯಾಸದಾಯಕ ಪ್ರಯತ್ನವಾಗಿದೆ,ʼʼ ಎಂದು ಹೇಳಿದರು. ಗೋವಾದಲ್ಲಿ ನಡೆಯುತ್ತಿರುವ 54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

1962ರ ಸಿನೋ-ಇಂಡಿಯನ್ ಯುದ್ಧದ ಪ್ರಮೇಯಕ್ಕೆ ವಿರುದ್ಧವಾಗಿ ಹೊಂದಿಸಲಾದ ʼಹಕೀಕತ್- 1ʼ ಚಿತ್ರದ ಮರುಸ್ಥಾಪನೆಯ ಬಗ್ಗೆ ಮಾತನಾಡುತ್ತಾ ಆನಂದ್ ಅವರು ಹಲವು ವಿಚಾರಗಳನ್ನು ಮೆಲುಕು ಹಾಕಿದರು. ಈ ಚಲನಚಿತ್ರವು ಯುದ್ಧದ ಮಾನವೀಯ ಮುಖವನ್ನು ಮತ್ತು ಸೈನಿಕರು ಎಲ್ಲಾ ವಿರೋಧಾಭಾಸಗಳ ವಿರುದ್ಧ ಸಹಿಷ್ಣುತೆಯನ್ನು ಅದ್ಧುತವಾಗಿ ಸೆರೆಹಿಡಿಯಲಾಗಿದೆ ಎಂದರು. ಮಾತು ಮುಂದುವರಿಸಿ, ಅವರು ತಮ್ಮ ತಂದೆಯ ಕಾರ್ಯವನ್ನು ತಿರುಚಿಲ್ಲ, ಹಾಗೆಂದು ಹಾಗೆಯೇ ಉಳಿಸಿಕೊಂಡಿಲ್ಲ. ಆ ಸಿನಿಮಾದ ವರ್ಣಮಯ ಆವೃತ್ತಿಯನ್ನು ಐಎಫ್‌ಎಫ್‌ಐ- 54ರಲ್ಲಿ ಪ್ರದರ್ಶಿಸಿದ್ದಾರೆ. "ಯಾರೊಬ್ಬರೂ ಕಪ್ಪು ಮತ್ತು ಬಿಳುಪಿನ ಪ್ರದರ್ಶನವನ್ನು ಕೊಂಡೊಯ್ಯಲಾಗದು. ಆದರೆ ಸಿನಿಮಾದ ಬಣ್ಣದ ಆವೃತ್ತಿಯು ಯುವ ಪೀಳಿಗೆಯನ್ನು ಆಕರ್ಷಿಸಲು ನೆರವಾಗಬಹುದು. ಮುಂದಿನ ವರ್ಷ 'ಹಕೀಕತ್- 2 'ಮತ್ತು ದಂತಕಥೆ ದೇವ್ ಆನಂದ್ ಅವರನ್ನು ವೈಭವೀಕರಿಸುವ ವೆಬ್‌ ಸರಣಿ ನಿರ್ಮಾಣ ಕಾರ್ಯ ನಡೆಯಲಿದೆ,ʼʼ ಎಂದು ಕೇತನ್‌ ಆನಂದ್‌ ಘೋಷಿಸಿದರು.

"ಸೂಕ್ತ ತಾಂತ್ರಿಕ ಕಾರ್ಯವಿಧಾನಗಳ ಕೊರತೆ ಕಾರಣಕ್ಕೆ ನಾವು ಹಿಂದಿನ ಹಲವು ಚಲನಚಿತ್ರಗಳ ಮುದ್ರಣಗಳನ್ನು ಕಳೆದುಕೊಂಡಿದ್ದೇವೆ" ಎಂದು ವೈಭವ್ ಆನಂದ್ ಹೇಳಿದರು. ಸೆಲ್ಯುಲಾಯ್ಡ್ ಆವೃತ್ತಿಗಳನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು ಅದು ಹೇಗೆ ದುಬಾರಿ ವೆಚ್ಚದಾಯಕ ಪ್ರಕ್ರಿಯೆಯಾಗಿದೆ ಎಂಬುದನ್ನು ವಿವರಿಸಿದರು. "ಕ್ಲಾಸಿಕ್ ಫಿಲ್ಮ್‌ಗಳ ಸೆಲ್ಯುಲಾಯ್ಡ್ ಆವೃತ್ತಿಯನ್ನು ಸಂರಕ್ಷಿಸುವ ಅಗತ್ಯವನ್ನು ಒಪ್ಪಿಕೊಳ್ಳುವ ಜತೆಗೆ ಡಿಜಿಟಲ್ ತಂತ್ರಜ್ಞಾನವು ನೀಡುವ ಸಾಧ್ಯತೆಗಳಿಗೂ ಒತ್ತು ನೀಡಬೇಕಿದೆ. ಡಿಜಿಟಲ್‌ಗೆ ಹೋಗುವುದು ಉತ್ತಮ ಎಂಬುದಲ್ಲಿ ಎರಡು ಮಾತಿಲ್ಲ. ಎನ್‌ಎಫ್‌ಎಐನ ಚಲನಚಿತ್ರಗಳ ಸಂರಕ್ಷಣೆಯ ಪ್ರಯತ್ನಗಳು ಉತ್ತಮವಾಗಿದ್ದು,  ಈ ಪ್ರಕ್ರಿಯೆಯಲ್ಲಿನ ಸಂಕೀರ್ಣತೆಗಳ ಬಗ್ಗೆಯೂ ಅರಿವಿದೆ. ಹಾಗೆಯೇ ಈ ಪ್ರಕ್ರಿಯೆಗೆ ವೃತ್ತಿಪರ ತಜ್ಞರ ಅಗತ್ಯವೂ ಇದೆ,ʼʼ ಎಂದು ವೈಭವ್‌ ಆನಂದ್‌ ಪ್ರತಿಪಾದಿಸಿದರು.

ಹಳೆಯ ಕ್ಲಾಸಿಕ್ ಚಿತ್ರಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಐಎಫ್‌ಎಫ್‌ಐ ಆಯೋಜಿಸುವಂತಹ ಚಿತ್ರೋತ್ಸವಗಳನ್ನು ಹೆಚ್ಚಾಗಿ ಆಯೋಜಿಸುವಂತಾಗಬೇಕು ಎಂದು ಶ್ರೀ ವೈಭವ್ ಅಭಿಪ್ರಾಯಪಟ್ಟರು. ಇಂತಹ ಚಿತ್ರೋತ್ಸವಗಳು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ದೇಶೀಯ ಹಾಗೂ ದೂರ ದೂರದ ಪ್ರದೇಶಗಳಲ್ಲಿನ ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಚಲನಚಿತ್ರೋದ್ಯಮದಲ್ಲಿ ಅವಕಾಶ ಪಡೆಯಲು ಸೂಕ್ತ ವೇದಿಕೆಯನ್ನು ಹೇಗೆ ಒದಗಿಸುತ್ತದೆ ಎಂಬುದನ್ನು ಅವರು ವಿವರಿಸಿದರು.

ಚಿತ್ರೋತ್ಸವದ ನಿರ್ದೇಶಕರಾದ ಮಾಹಿತಿ ಮತ್ತು ಪ್ರ,ಚಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಶ್ರೀ ಪೃಥುಲ್‌ ಕುಮಾರ್‌ ಮಾತನಾಡಿ, "54ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಸಾಮೂಹಿಕ ಪ್ರಯತ್ನದ ಪರಾಕಾಷ್ಠೆಯನ್ನು ಅನಾವರಣಗೊಳಿಸಲು ನಾವೆಲ್ಲಾ ಒಂದೆಡೆ ಒಟ್ಟುಗೂಡುವ ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗಿದೆ. ನ್ಯಾಷನಲ್‌ ಫಿಲ್ಮ್‌ ಹೆರಿಟೇಜ್‌ ಮಿಷನ್‌ ಸೂರಿನಡಿ ಮರುಸ್ಥಾಪಿಸಲಾದ ಏಳು ಕ್ಲಾಸಿಕ್‌ ಸಿನಿಮಾಗಳ ಪ್ರದರ್ಶನವಾಗಿದ್ದು,  ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಹಜವಾಗಿಯೇ ಉದಾರವಾಗಿ ಅನುದಾನ ನೀಡುತ್ತಿದೆ,ʼʼ ಎಂದು ಹೇಳಿದರು.

ನ್ಯಾಷನಲ್‌ ಫಿಲ್ಮ್‌ ಹೆರಿಟೇಜ್‌ ಮಿಷನ್‌ ನಮ್ಮ ಸಿನಿಮಾ ಪರಂಪರೆಯ ಅಮೂಲ್ಯ ಸಂಪತ್ತನ್ನು ಸಂರಕ್ಷಿಸುವ ರಾಷ್ಟ್ರದ ಬದ್ಧತೆಗೆ ಸಾಕ್ಷಿಯಾಗಿದೆ. ಇದು ನಮ್ಮ ಸಾಂಸ್ಕೃತಿಕ ಗುರುತನ್ನು ರೂಪಿಸುವಲ್ಲಿ, ಕಥೆ ನಿರೂಪಣೆ ಕಲೆಯ ಬಗ್ಗೆ ಆಳವಾದ ಮೆಚ್ಚುಗೆಯನ್ನು ಬೆಳೆಸುವಲ್ಲಿ ಹಾಗೂ ನಮ್ಮ ಸಿನಿಮಾ ಪರಂಪರೆಯ ಮಹತ್ವವನ್ನು ಗುರುತಿಸುವಲ್ಲಿನ ಮಹತ್ವದ ಪ್ರಯಣವಾಗಿದೆ. ಎನ್‌ಎಫ್‌ಡಿಸಿ- ಎನ್‌ಎಫ್‌ಎಐ ಕಳೆದ ಹಲವು ತಿಂಗಳಿನಿಂದ ಮರುಸ್ಥಾಪನೆ ಕಾರ್ಯವನ್ನು ಕೈಗೊಂಡಿದೆ. ಪ್ರತಿಯೊಂದು ಫ್ರೇಮ್‌ಗಳನ್ನು ಕರಾರುವಾಕ್ಕಾಗಿ  ಮರುಸ್ಥಾಪಿಸಲಾಗುತ್ತಿದೆ. ನಮ್ಮ ಸಿನಿಮಾ ಇತಿಹಾಸ ಮತ್ತು ನಾವು ಇಂದಿನ ಕಥಾ ಹಂದರ (ಕಂಟೆಂಟ್‌) ನೋಡುವ ರೀತಿ, ಅಂದರೆ 4ಕೆ ರೆಸಲ್ಯೂಶನ್‌ನಲ್ಲಿ ಸಂರಕ್ಷಿಸುವುದು ಇದರ ಮುಖ್ಯವಾಗಿ ಉದ್ದೇಶವಾಗಿದೆ.

 

*****



(Release ID: 1979454) Visitor Counter : 94