ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಗುಜರಾತಿ ಚಲನಚಿತ್ರೋದ್ಯಮವು ನಿಧಾನವಾಗಿ ಆದರೆ ಸ್ಥಿರವಾಗಿ ಸಿನಿಮಾ ಜಗತ್ತಿನ ದೊಡ್ಡ ಟ್ರೆಂಡ್ ಅನ್ನು ಸೆರೆಹಿಡಿಯುತ್ತಿದೆ: ನಟ ಶ್ರೀ ಸಿದ್ಧಾರ್ಥ್ ರಾಂಡೇರಿಯಾ
ಪ್ರಾದೇಶಿಕ ಸಿನಿಮಾಗಳು ಸಮಕಾಲೀನ ಸಮಸ್ಯೆಗಳ ನೈಜ ಚಿತ್ರಣವನ್ನು ನೀಡುತ್ತವೆ: ‘ಹರ್ರಿ ಓಂ ಹರ್ರಿ’ ನಿರ್ದೇಶಕ ಶ್ರೀ ನಿಸರ್ಗ್ ವೈದ್ಯ
ಗೋವಾ, 23 ನವೆಂಬರ್ 2023
ಗುಜರಾತಿ ಚಿತ್ರರಂಗಕ್ಕೆ ನಮ್ಮ ದೇಶದ ಇತರ ಪ್ರದೇಶಗಳು ಮತ್ತು ಜನರನ್ನು ತಲುಪಲು ಐಎಫ್‌ಎಫ್‌ಐ ನಂತಹ ದೊಡ್ಡ ಹೆಚ್ಚುವರಿ ವೇದಿಕೆಗಳ ಅಗತ್ಯವಿದೆ. ಗೋವಾದಲ್ಲಿ ಇಂದು ನಡೆದ 54ನೇ ಐಎಫ್‌ಎಫ್‌ಐ ಸಮಾರಂಭದಲ್ಲಿ ಹರ್ರಿ ಓಂ ಹರ್ರಿ ಚಿತ್ರದ ಪ್ರೀಮಿಯರ್ ಪ್ರದರ್ಶನ ಸಂದರ್ಭದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಗುಜರಾತಿನ ಹಿರಿಯ ನಟ ಶ್ರೀ ಸಿದ್ಧಾರ್ಥ್ ರಾಂಡೇರಿಯಾ ಅವರು ಚಿತ್ರರಂಗಕ್ಕೆ ಇರುವ ಅಡೆತಡೆಗಳನ್ನು ಮುರಿದು ಹೆಚ್ಚಿನ ಪ್ರೇಕ್ಷಕರನ್ನು ತಲುಪುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
‘ಗುಜರಾತಿ ಚಲನಚಿತ್ರಗಳ ಸೌಂದರ್ಯ ಮತ್ತು ಅದರ ಮನಮೋಹಕ ಕಥಾನಕದ ಸಾರದ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ’ ಎಂದು ಶ್ರೀ ಸಿದ್ಧಾರ್ಥ್ ರಾಂಡೇರಿಯಾ ಅವರು ಹೇಳಿದರು.
ನಟ ಶ್ರೀ ರೌನಕ್ ಕಾಮ್ದಾರ್ ಅವರು 54 ನೇ ಐಎಫ್‌ಎಫ್‌ಐನಲ್ಲಿ ಹರ್ರಿ ಓಂ ಹರ್ರಿ ಚಲನಚಿತ್ರದ ಪ್ರೀಮಿಯರ್ ಪ್ರದರ್ಶನ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸುತ್ತಾ, ಇತ್ತೀಚಿನ ವರ್ಷಗಳಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಹಿಲ್ಲಾರೊದಂತಹ ಹಲವಾರು ಗುಜರಾತಿ ಚಲನಚಿತ್ರಗಳು ಐಎಫ್‌ಎಫ್‌ಐ ಮಾಧ್ಯಮದ ಮೂಲಕ ಹೆಚ್ಚುವರಿ ಪ್ರೇಕ್ಷಕರನ್ನು ತಲುಪುವ ಅವಕಾಶವನ್ನು ಪಡೆದಿವೆ.
ಹರ್ರಿ ಓಂ ಹರ್ರಿ ಚಿತ್ರದ ಕಥಾಹಂದರ ಕುರಿತು ಮಾತನಾಡಿದ ನಿರ್ದೇಶಕ ಶ್ರೀ ನಿಸರ್ಗ್ ವೈದ್ಯ, ಚಿತ್ರದಲ್ಲಿನ ಸೂಕ್ಷ್ಮ ವ್ಯತ್ಯಾಸಗಳು ಗುಜರಾತಿ ಸಮುದಾಯದ ಭಾವನೆಗಳಿಗೆ ಸಂಪರ್ಕ ಕಲ್ಪಿಸುತ್ತವೆ ಮತ್ತು ಅವರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. "ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಕಲ್ಪನೆಯ ಕಥೆಯೊಂದಿಗೆ ಸಾಧ್ಯವಾದಷ್ಟು ನೈಜವಾಗಿರುವುದು ಮುಖ್ಯವಾಗಿದೆ. ಪ್ರತಿಯೊಂದು ಪ್ರದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ, ಅದಕ್ಕಾಗಿಯೇ ಅದು ವಿಶಿಷ್ಟವಾಗಿದೆ. ಚಿತ್ರದ ಹಾಸ್ಯಮಯ ಮತ್ತು ಮೋಜಿನ ಭಾಗವು ಪ್ರೇಕ್ಷಕರನ್ನು ಖಂಡಿತವಾಗಿಯೂ ದೊಡ್ಡ ಪರದೆಯತ್ತ ಸೆಳೆಯುತ್ತದೆ” ಎಂದು ಶ್ರೀ ವೈದ್ಯ ಅವರು ಹೇಳಿದರು.
'ಹರ್ರಿ ಓಂ ಹರ್ರಿ' ಚಿತ್ರವು ಗೋವಾದ 54 ನೇ ಐಎಫ್‌ಎಫ್‌ಐನಲ್ಲಿ ಇಂದು ಪ್ರೀಮಿಯರ್ ವಿಭಾಗದಡಿಯಲ್ಲಿ ಪ್ರದರ್ಶನಗೊಳ್ಳಲಿದೆ.
'ಹರ್ರಿ ಓಂ ಹರ್ರಿ' ಚಲನಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ
'ಹರ್ರಿ ಓಂ ಹರ್ರಿ' ಚಲನಚಿತ್ರ
ಚಿತ್ರದ ಸಾರಾಂಶ: ಬಹುಕಾಲದ ಗೆಳೆಯರಾದ ಓಂ ಮತ್ತು ವಿನಿ ಅವರ ಜೀವನವು ಅನಿರೀಕ್ಷಿತ ತಿರುವು ಪಡೆಯುತ್ತದೆ. ಓಂಗೆ ಮದುವೆಯನ್ನು ಪ್ರಸ್ತಾಪಿಸಲು ವಿನಿ ನಿರ್ಧರಿಸಿದಾಗ ಸಂಭವಿಸಿದ ಅವರ ನಡುವಿನ ಘಟನಾವಳಿಗಳ ಕುರಿತಾದ ಚಲನಚಿತ್ರವಿದು. ಒಮ್ಮೊಮ್ಮೆ ಓಮ್ ದೂರ ಸರಿಯಲು ಪ್ರಾರಂಭಿಸಿದಾಗ ಪರಸ್ಪರ ಎಡವಟ್ಟುಗಳನ್ನು ಎದುರಿಸ ಬೇಕಾಗುತ್ತದೆ, ಎಲ್ಲಾ ಭರವಸೆ ಕಳೆದುಹೋದಂತೆ ತೋರುತ್ತಿರುವಾಗ, ಅನಿರೀಕ್ಷಿತ ಆಗುವ ಮುಖಾಮುಖಿಯು ಓಂನ ಜೀವನವನ್ನು ಅಲ್ಲಾಡಿಸುತ್ತದೆ, ಎಲ್ಲರ ಹಾದಿಯನ್ನು ಬದಲಾಯಿಸುವ ಸಕಾರಾತ್ಮಕ ಭರವಸೆ ಕೊನೆಗೆ ನೀಡುತ್ತದೆ.
ಈ ಸಂವಾದವನ್ನು ಇಲ್ಲಿ ವೀಕ್ಷಿಸಬಹುದು:
* * *
(Release ID: 1979328)
Visitor Counter : 124